Wednesday, November 13, 2013

ನೆನಪು ಅಳಿಸಲಾಗುವುದಿಲ್ಲ

ನೆನಪು ಅಳಿಸಲಾಗುವುದಿಲ್ಲ
ಕಳೆದೋದ ದಿನಗಳ
ಕಳೆದೋಗಿ
ಹಿಂತಿರುಗಿ ಬರದ
ಆ ದಿನಗಳನ್ನು,
ಹೃದಯ ಏಕೆ ಕರೆಯುತ್ತಿದೆ
ಹೃದಯ ಏಕೆ ಕರೆಯುತ್ತಿದೆ....

ದಿನವೊಂದು ಗಿಣಿಯಾಗಿದ್ದರೆ
ನಾನು ಪಂಜರದಲ್ಲಿಡುತ್ತಿದ್ದೆ -೨
ಆರೈಕೆಯಿಂದ ನೋಡಿಕೊಂಡು-೨
ಮುತ್ತಿನ ಆಹಾರ ನೀಡುತ್ತಿದ್ದೆ
ಎದೆಯಿಂದಪ್ಪಿಕೊಂಡಿರುತ್ತಿದ್ದೆ
ನೆನಪು ಅಳಿಸಲಾಗುವುದಿಲ್ಲ.....

ಭಾವಚಿತ್ರ ಅವಳ ಅಡಗಿಸಿ
ಎಲ್ಲಾದರೂ ಇಡುತ್ತಿದ್ದೆ-೨
ಮನದಲ್ಲಿ ನೆಲೆಸಿದ ಆ ರೂಪ -೨
ಆದರೆ ಅಳಿಸಿಯೂ ಅಳಿಸಲಾಗುವುದಿಲ್ಲ
ಹೇಳಲಿಕ್ಕೆ ಅವಳು ನನ್ನವಳಲ್ಲ
ನೆನಪು ಅಳಿಸಲಾಗುವುದಿಲ್ಲ.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ದಿಲ್ ಏಕ ಮಂದಿರ್

याद न जाए, बीते दिनों की
जा के न आये जो दिन
दिल क्यूँ बुलाए
उन्हें, दिल क्यों बुलाए

दिन जो पखेरू होते, पिंजरे में मैं रख लेता
पालता उनको जतन से, मोती के दाने देता
सीने से रहता लगाए
याद न जाए...

तस्वीर उनकी छुपा के, रख दूँ जहाँ जी चाहे
मन में बसी ये मूरत, लेकिन मिटी न मिटाए
कहने को हैं वो पराए
याद न जाए...
www.youtube.com/watch?v=2On9ix8wy9w

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...