Sunday, November 17, 2013

ಈ ತಿರುವಿನಿಂದ ಹೋಗುತ್ತದೆ


!!ಈ ತಿರುವಿನಿಂದ ಹೋಗುತ್ತದೆ
ಕೆಲವು ಮಂದ ಗತಿಯ ರಸ್ತೆ
ಕೆಲವು ವೇಗ ಗತಿಯ ಮಾರ್ಗ
ಕಲ್ಲಿನ ಕೋಟೆಯತ್ತ
ಗಾಜಿನ ಮನೆಗೆ
ಒಣಹುಲ್ಲಿನ ನಿವಾಸ ತನಕ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....

!!ಬಿರುಗಾಳಿಯಂತೆ ಹಾರಿ ಬಂದು
ಒಂದು ಹಾದಿ ಹಾದು ಹೋಗುತ್ತದೆ
ಲಜ್ಜೆಯಿಂದ ಹೆಜ್ಜೆಯನಿಟ್ಟು
ನಮ್ರತೆಯಿಂದ ಇಳಿಯುತ್ತದೆ
ಈ ರೇಷ್ಮೆಯಂತಹ ಹಾದಿಯಲಿ
ಅದೊಂದು ಹಾದಿ ಇರಬಹುದು
ನಿನ್ನಲ್ಲಿಗೆ ಅದು ತಲುಪುತ್ತದೆ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....

!!ಒಂದು ದೂರದಿಂದ ಬರುತ್ತದೆ
ಬಳಿ ಬಂದು ತಿರುಗುತ್ತದೆ
ಒಂದು ಹಾದಿ ಏಕಾಂಗಿ
ನಿಲ್ಲುತ್ತದೆ ಅಲ್ಲದೆ ಚಲಿಸುತ್ತದೆ
ನಾನಿದನ್ನು ಯೋಚಿಸಿ ಕುಳಿತಿರುವೆ
ಅದೊಂದು ಹಾದಿ ಇರಬಹುದು
ನಿನ್ನಲ್ಲಿಗೆ ಅದು ತಲುಪುತ್ತದೆ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....
ಈ ತಿರುವಿನಿಂದ ಹೋಗುತ್ತದೆ ....

!!ಈ ತಿರುವಿನಿಂದ ಹೋಗುತ್ತದೆ
ಕೆಲವು ಮಂದ ಗತಿಯ ರಸ್ತೆ
ಕೆಲವು ವೇಗ ಗತಿಯ ಮಾರ್ಗ
ಕಲ್ಲಿನ ಕೋಟೆಯತ್ತ
ಗಾಜಿನ ಮನೆಗೆ
ಒಣಹುಲ್ಲಿನ ನಿವಾಸ ತನಕ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೆಶ್ಕರ್. ಕಿಶೋರ್ ಕುಮಾರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಆಂಧಿ
Is Mod Se Jaate Hain
Kuch Sust Kadam Raste Kuchh Tez Qadam Raahen
Patthar Ki Haveli Ko Shishe Ke Gharaundon Men
Tinakon Ke Nasheman Tak Is Mod Se Jaate Hain

Aandhi Ki Tarahu Dakar Ik Raah Guzarati Hai
Sharamaati Hui Koi Qadamon Se Utarati Hai
In Reshami Raahon Men Ik Raah To Vo Hogi
Tum Tak Jo Pahunchati Hai Is Mod Se Jaati Hai
Is Mod Se Jaate Hain

Ik Dur Se Aati Hai Paas Aake Palatati Hai
Ik Raah Akeli Si Rukati Hai Na Chalati Hai
Ye Sochake Baithi Hun Ik Raah To Vo Hogi
Tum Tak Jo Pahunchati Hai Is Mod Se Jaate Hain

Is Mod Se Jaate Hain
Kuchh Sust Qadam Raste Kuchh Tez Qadam Raahen
Patthar Ki Haveli Ko Shiishe Ke Gharondon Men
Tinakon Ke Nasheman Tak Is Mod Se Jaate Hain
Is Mod Se Jaate Hain
http://www.youtube.com/watch?v=VvJwj6Iml9I

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...