Tuesday, 22 July, 2014

ಹಾಡುವೆ ನಾನಿಂದು ಗೀತೆವೊಂದು ಸುಂದರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ನಲಿಯುತ್ತಿದೆ ಖುಷಿಯಿಂದ
ಪುಲಕಿತ ಮನಸ್ಸಿಂದು
ಹೃದಯದ ದ್ವಾರದಲಿ
ನಿಂತಿರುವೆ ನೀ ಬಂದು
ಅಲಂಕೃತವಾಗಿದೆ ಇಂದು
ನನ್ನ ಹೃದಯ ಮಂದಿರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ಅದೆಷ್ಟೋ ಸಮಯದ ನಂತರ
ಬಂದಿದೆ ಸಂತಸದ ಕ್ಷಣ ಇದು
ಅಂತರಂಗದ ಸುಮಗಳಿಗೆ
ಬಂದಿದೆ ವಸಂತ ಇಂದು
ಅರಳುತ್ತಿದೆ ಬಯಕೆಗಳ
ಕುಸುಮಗಳು ತರಹ ತರಹ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

ಸಿಹಿ ಸಿಹಿ ಧ್ವನಿ ಹೊರಡುತ್ತಿದೆ
ಮನ ಕೋಗಿಲೆಯಿಂದ ಇಂದು
ಅಂಬರದ ಉತ್ತುಂಗಕ್ಕೆ ಏರಿದೆ
ನನ್ನ ಹುಮ್ಮಸ್ಸು ಉತ್ಸಾಹ ಇಂದು
ಅಪೇಕ್ಷೆ ಇಚ್ಚೆಯ ಹಕ್ಕಿಗಳು ಹಾರುತ್ತಿದೆ
ತೆರೆದು ಬಂಧನದ ಪಂಜರ

ಹಾಡುವೆ ನಾನಿಂದು
ಗೀತೆವೊಂದು ಸುಂದರ
ಹರ್ಷದ ಉಲ್ಲಾಸದ
ಗಾನ ಸುಮಧುರ

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ನಿಜವಾಗಲೂ ಸುಮಧುರ ಗೀತೆ ಇದು.

    ReplyDelete
  2. ತಮ್ಮ ನಿರಂತರ ಪ್ರೋತ್ಸಾಹಕ್ಕೆ ನಾನು ಚಿರಋಣಿ, ಧನ್ಯವಾದಗಳು ಬದರಿ ಸರ್.

    ReplyDelete