Thursday, 26 January, 2012

ನಾನೊಬ್ಬನೇ !

ನಾನೊಬ್ಬನೇ !
ನಡೆಯುತ್ತಿದ್ದೇನೆ, ಹಾದಿ ಗೊತ್ತಿಲ್ಲ
ಹಿಂದೆ ಮುಂದೆ ಯಾರೂ ಇಲ್ಲ
ಎಲ್ಲಿ ಹೋಗುತ್ತಿದ್ದೇನೆ ತಿಳಿದಿಲ್ಲ 
ನಾನೊಬ್ಬನೇ !
ಅವರು ನನ್ನನ್ನು ಬಿಟ್ಟು ಬಿಟ್ಟರು
ಸಣ್ಣ ಮನಸ್ತಾಪ
ಅಪವಾದ ನನಗಿಟ್ಟರು
ನಾನೊಬ್ಬನೇ !
ತಾಣದ ಅರಿವಿಲ್ಲ
ಗುರಿಯ ಗೋಚರವಿಲ್ಲ
ಸಹಯಾತ್ರಿಯರಲ್ಲಿ ಯಾರೂ ನನ್ನವರಿಲ್ಲ
ನಾನೊಬ್ಬನೇ !
ಕಣ್ಣಿನ ಕಣ್ಣೀರು ಒಣಗಿದ
ದುರ್ಬಲ ಹೃದಯ ಸೊರಗಿದೆ
ಶರೀರದಲ್ಲಿ ತ್ರಾಣ ಇಲ್ಲದಾಗಿದೆ
ನಾನೊಬ್ಬನೇ !
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಯಾರಿಗೆ ಯಾರೂ ಇಲ್ಲ.....ಒಂಟಿಯಾಗಿ ದಿಟ್ಟತನದಿಂದ ಜೀವನದ ಸವಾಲುಗಳನ್ನು ಎದುರಿಸಬೇಕು....
    ಒಂಟಿಯೇನ್ನುವುದು ಆತ್ಮದೈರ್ಯವ ಕುಗ್ಗಿಸಬಾರದು....ಛಲ ಹುಟ್ಟಿಸಬೇಕು

    Gud one

    ReplyDelete