Wednesday, January 11, 2012

ಸೋಲು ಗೆಲುವು

ರೇಸಲ್ಲಿ ಓಡುವುದಕ್ಕೆ ಹೊಸ ಯುವ ಕುದುರೆ ಬಂದಿತ್ತು.

ಕುದುರೆಯ ಒಡೆಯ ಅದರ ಹೆಸರು "ರೋಕಿ" ಅಂತ ಇಟ್ಟ ಹಾಗು ಕೆಲಸಗಾರರಿಗೆ ಕುದುರೆಯನ್ನು ಒಳ್ಳೆ ರೀತಿಯಲ್ಲಿ ನೋಡಲಿಕ್ಕೆ ಹೇಳಿದ.

ಕೆಲಸಗಾರರೆಲ್ಲ ರೋಕಿಯ ಬಹಳ ಒಳ್ಳೆ ರೀತಿಯಲಿ ಸೇವೆ ಮಾಡುತ್ತಿದ್ದರು.

ಅಲ್ಲಿಯೇ ಇನ್ನೊಂದು ಮುದಿ ಕುದುರೆ ಇತ್ತು, ಕೆಲಸಗಾರರೆಲ್ಲ ಅದರ ಕಡೆ ಗಮನನೆ ಕೊಡುತ್ತಿರಲಿಲ್ಲ.

ರೋಕಿಗೆ ಕೆಲಸಗಾರರ ಮಾತು ಕೇಳಿ ಗೊತ್ತಾಯಿತು, ಆ ಕುದುರೆಯ ಹೆಸರು "ಜಾನಿ" ಹಾಗು ಯುವ ವಯಸ್ಸಿನಲ್ಲಿ ಅದಕ್ಕೆ  ೫೦ ರಿಂದ ಹೆಚ್ಚು ರೇಸಲ್ಲಿ ಗೆಲುವು ಸಿಕ್ಕಿದೆ ಎಂದು.

ಒಂದು ದಿವಸ ರೋಕಿ ಜಾನಿಯ ಹತ್ತಿರ ಹೋಗಿ "ನೀನು ಇಷ್ಟು ರೇಸ್ ಜಯಿಸಿ  ಇಂದು ನಿನ್ನ ಅವಸ್ಥೆ ಹೀಗೆಯೇ?

ಜಾನಿ ಶಾಂತತೆಯಿಂದ ಕಿರು ನಗೆ ಬೀರಿ  "ರೇಸಲ್ಲಿ ಓಡಿದು ನನ್ನ ಯುವ ವಯಸ್ಸು ಹಾಗು ಜಯಿಸಿದ್ದು ನನ್ನ ಒಡೆಯ, ಈಗ  ಜಯಿಸುತ್ತಿದೆ ನನ್ನ ಮುದಿ ವಯಸ್ಸು ಸೋಲುತ್ತಿದ್ದಾನೆ ನನ್ನ ಒಡೆಯ " ಎಂದು ಉತ್ತರಿಸಿತು.

by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...