Wednesday, 10 June, 2015

ಅಹಂ ಅನುರಾಗ

ಹೆಜ್ಜೆ ಆ ತಿರುವಿನಲ್ಲಿಯೇ ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು ನಿಂತಿದ್ದೇನೆ
ಅನುರಾಗ ನನ್ನನ್ನು ಒತ್ತಾಯಿಸುತ್ತಿದೆ ಹಿಂತಿರುಗಿ ನೋಡು ಎಂದು
ಅಹಂ ಹೇಳುತ್ತಿದೆ ತಿರುವು ದಾಟಿ ಬಿಡು ಎಂದು
ಆದರೆ ಅಂತರಂಗ ಹೇಳುತ್ತಿದೆ 
ತೆರೆದ ಕಿಟಕಿಯ ಹಿಂದೆ ಎರಡು ಕಣ್ಣು ಇಣುಕುತ್ತಿದೆ ಎಂದು
ಈಗಲೂ ನನ್ನ ನಿರೀಕ್ಷೆಯಲ್ಲಿ ಅವಳೂ ಎಚ್ಚರದಲ್ಲಿ ಇರುತ್ತಾಳೆ ಎಂದು
ಎಲ್ಲಿಯಾದರೂ ಅವಳ ಹೃದಯ ಮೂಲೆಯಲಿ ವೇದನೆ ಇರಬೇಕಲ್ಲವೇ
ಅವಳಿಗೆ ಹಠ ನಾನು ಕರೆಯಬೇಕೆಂದು
ನನ್ನ ಬೇಡಿಕೆ ಅವಳು ಕರೆಯಲೆಂದು
ಹೆಜ್ಜೆ ಆ ತಿರುವಿನಲ್ಲಿಯೇ ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು ನಿಂತಿದ್ದೇನೆ
ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
क़दम उसी मोड़ पर जमे हैं
नज़र समेटे हुए खड़ा हूँ
जुनूँ ये मजबूर कर रहा है पलट के देखूँ
ख़ुदी ये कहती है मोड़ मुड़ जा
अगरचे एहसास कह रहा है
खुले दरीचे के पीछे दो आँखें झाँकती हैं
अभी मेरे इंतज़ार में वो भी जागती है
कहीं तो उस के गोशा-ए-दिल में दर्द होगा
उसे ये ज़िद है कि मैं पुकारूँ
मुझे तक़ाज़ा है वो बुला ले
क़दम उसी मोड़ पर जमे हैं
नज़र समेटे हुए खड़ा हूँ

Tuesday, 2 June, 2015

ಶ್ಯಾಮಲ ಸುಂದರ ಶ್ರೀಧರ

ಶ್ಯಾಮಲ ಸುಂದರ ಶ್ರೀಧರ
ಆಯಿತು ಅರುಣೋದಯ
ಎದ್ದೇಳು ಬೇಗ ವನಮಾಲಿ
ಬಂದಿದ್ದಾನೆ ಸ್ನೇಹಿತ ಭಾಸ್ಕರ ಉದಯ

ನಂದನ ಕಂದ ಆಯಿತು ಸೂರ್ಯೋದಯ
ಮುಗಿಯಿತು ಆಟ ರಾತ್ರಿಯ
ಮೊಲೆಯಲಿ ತುಂಬಿ ಕ್ಷೀರವನ್ನು
ಹಸು ನೀಡುತ್ತಿದೆ ಕರೆಯ
ಸ್ತನಪಾನ ಮಾಡಲು ಹಂಬಲಿಸುತ್ತಿದೆ
ಹಸಿದ ಕರುಗಳು ಹರೆಯ

ಸಂಧ್ಯಾಕಾಲ ಮರದಲಿ ಪಡೆದು ಆಶ್ರಯವನ್ನು
ಅರುಣೋದಯ ಆದಂತೆ ಹಾರಿ ಹೋದವು ಪಕ್ಷಿಗಳೆಲ್ಲ
ಹುಡುಕಲು ಜೀವನೋಪಾಯವನ್ನು
ಮುಂಜಾವ ಹಿಡಿದು ನೇಗಿಲನು
ನಡೆದ ತನ್ನ ಗುರಿಯತ್ತ
ಹೊಲವೆಂಬ ತಿರ್ಥಸ್ಥಾನಕ್ಕೆ ರೈತನು
ಹರಟೆ ಹೊಡೆಯುತ ಗೋಪಿಯರು
ಹಿಡಿದು ಸೊಂಟಸುತ್ತ ಬಿಂದಿಗೆಯನ್ನು
ಯಮುನಾ ತೀರ ನಡೆದರು ನೀಡಲು ಮುಕುಂದನಿಗೆ ಮೊಸರನ್ನವನ್ನು

ತೇಜಸ್ಸು ನಿನ್ನಲ್ಲಿ ಕೋಟಿ ರವಿಯ
ಹೋನಾಜಿ ನಿನ್ನನ್ನು ನಮಿಸುವನು ಹೃದಯದಿಂದ ನಿತ್ಯ


ಮೂಲ : ಹೋನಾಜಿ ಬಾಳ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಪಂಡಿತರಾವ್ ನಾಗರ್ಕರ್ /ಲತಾ ಮಂಗೇಶ್ಕರ್
ಸಂಗೀತ : ವಸಂತ್ ದೇಸಾಯಿ
ಮರಾಠಿ ಚಿತ್ರ :ಅಮರ್ ಭೂಪಾಲಿ

घनश्याम सुंदरा श्रीधरा अरुणोदय झाला
उठिं लवकरि वनमाळी उदयाचळी मित्र आला

आनंदकंदा प्रभात झाली उठी सरली राती
काढी धार क्षीरपात्र घेउनी धेनु हंबरती
लक्षिताती वासुरें हरी धेनु स्तनपानाला

सायंकाळीं एके मेळीं द्विजगण अवघे वृक्षीं
अरुणोदय होताच उडाले चरावया पक्षी
प्रभातकाळी उठुनि कावडी तीर्थ पथ लक्षी
करुनि सडासंमार्जन गोपी कुंभ घेऊनी कुक्षीं
यमुनाजळासि जाति मुकुंदा दध्योदन भक्षी

कोटी रवीहून तेज आगळें तुझिया वदनाला
होनाजी हा नित्य ध्यातसे हृदयी नाम माला
https://www.youtube.com/watch?v=LQWSzQcOTGsSunday, 10 May, 2015

"ಅಮ್ಮ"

ಚಿತ್ರ ಕೃಪೆ : ಗೂಗಲ್ 
"ಅಮ್ಮ"

ಹಿಟ್ಟಿನ ಶುದ್ಧ ರೊಟ್ಟಿಯ ಮೇಲೆ, ಹುಳಿ ಚಟ್ನಿಯ ಹಾಗೆ ಅಮ್ಮ
ನೆನಪಾಗುತ್ತದೆ ಆ ಒಲೆ, ಪಾತ್ರೆ, ಚಿಮ್ಮಟ, ಊದುಕೊಳವೆಯ ಹಾಗೆ ಅಮ್ಮ

ಬಿದಿರಿನ ಮಂಚದ ಮೇಲೆ, ಪ್ರತಿಯೊಂದು ಧ್ವನಿಗೆ ಕಿವಿ ಕೊಟ್ಟು ಕೇಳುವ
ಅರ್ಧ ನಿದ್ರೆಯಲಿ ಅರ್ಧ ಎಚ್ಚರ, ದಣಿದ ಮಧ್ಯಾಹ್ನದ ಹಾಗೆ ಅಮ್ಮ

ಹಕ್ಕಿಗಳ ಕಳರವದಲಿ ಪ್ರತಿಧ್ವನಿಸುವ ರಾಧೆ ಮೋಹನ ಅಲಿ ಅಲಿ
ಕೋಳಿಯ ಕೂಗಿಗೆದ್ದು, ಮನೆಯ ಬಾಗಿಲ ಚಿಲಕದ ಹಾಗೆ ಅಮ್ಮ

ಮಡದಿ,ಮಗಳು,ಸೋದರಿ,ನೆರೆಯವಳು, ಸ್ವಲ್ಪ ಸ್ವಲ್ಪ ಎಲ್ಲರಲ್ಲೂ
ಇಡೀ ದಿನ ಒಂದು ಹಗ್ಗದ ಮೇಲೆ, ನಡೆಯುವ ಪ್ರಬುದ್ಧ ಕಲಾವಿದೆಯಂತೆ ಅಮ್ಮ

ಹಂಚಿಕೊಂಡು ತನ್ನ ಚಹರೆ, ಹಣೆ, ಕಣ್ಣನ್ನು ಅದೆಲ್ಲಿಗೆ ಹೋಗಿ ಬಿಟ್ಟಳು
ಹರಿದು ಹೋದ ಹಳೆ ಒಂದು ಚಿತ್ರ ಪುಸ್ತಕದಲ್ಲಿ ಚಂಚಲ ಹುಡುಗಿಯ ಹಾಗೆ ಅಮ್ಮ

ಮೂಲ : ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

" माँ "

बेसन की सोंधी रोटी पर, खट्टी चटनी जैसी माँ
याद आती है चौका, बासन, चिमटा, फूंकनी जैसी माँ

बांस की खुर्री खाट के ऊपर, हर आहट पर कान धरे
आधी सोई आधी जागी, थकी दोपहरी जैसी माँ

चिड़ियों के चहकार में गूंजे, राधा - मोहन  अली- अली
मुर्गी की आवाज़ से खुलती, घर की कुण्डी जैसी माँ

बीवी, बेटी, बहन, पड़ोसन, थोड़ी थोड़ी सब में
दिन भर इक रस्सी के ऊपर, चलती नटनी जैसी माँ

बाँट के अपना चेहरा, माथा, आँखें, जाने कहाँ गयी
फटे पुराने इक एलबम, में चंचल लड़की जैसी माँ...

निदा फ़ाज़ली 

Tuesday, 28 April, 2015

ಪ್ರಕೃತಿ

ನಾಶವಾಯಿತು ನಗರ
ಅಲ್ಲಲ್ಲಿ ನಡೆಯುತ್ತಿದೆ ಶವ ಸಂಸ್ಕಾರ
ಬೆಂಕಿಯ ಜ್ವಾಲೆ ಏರಿದೆ ಆಕಾಶ ಎತ್ತರ
ಭೂಮಿಗೆ ಇಂದು ಬೂದಿ ಸಿಂಗಾರ
---
ಭಾವರಹಿತ ಮುಖ
ಸೋತು ಹೋದ ಕಂಗಳು
ಜೀವರಹಿತ ದೇಹ
ಹೋದರು ನನ್ನವರೆನ್ನುವವರೆಲ್ಲ
ಅಯ್ಯೋ
ಆದರೆ ಬದುಕು ಬಾಕಿ ಇದೆಯಲ್ಲ
---
ಅನಾಥ ನಯನ
ಏನಾಯಿತು ಎಂದು ಅರಿವಿಲ್ಲ
ಅಮ್ಮ ಇಲ್ಲ ಅಪ್ಪನೂ ಇಲ್ಲ
ಅಲ್ಲಲ್ಲಿ ಓಡುತ್ತಿದ್ದಾರೆ ಎಲ್ಲ
ಯಾರಿಗೂ ಮುದ್ದು ಕೂಸಿನ ಗೋಚರವಿಲ್ಲ
---
ಪ್ರಕೃತಿ ಮೌನವಾಗಿದೆ
ಅಲ್ಲೆಲ್ಲೋ ಹಕ್ಕಿಯ ಕಲರವ ಕೇಳುತ್ತಿದೆ
ಗಗನ ಕೆಂಪೇರಿದೆ
ಪುನಃ ಹೊಸ ಸೂರ್ಯ ಮೂಡಿ ಬಂದಿದೆ
by ಹರೀಶ್ ಶೆಟ್ಟಿ, ಶಿರ್ವ

Monday, 27 April, 2015

ವಾಸ್ತವಿಕತೆ

ಮಂದಿರವೂ ಬಿತ್ತು
ಮಸೀದಿಯೂ ಬಿತ್ತು
ಆಚೆ ಈಚೆ ಶವಗಳು ಬಿದ್ದಿತ್ತು
ಎಲ್ಲೆಡೆ ಇಟ್ಟಿಗೆಯ ತುಂಡುಗಳ ರಾಶಿ ಇತ್ತು
ಮಂದಿರದ ಅವಶೇಷ  ಹಾಗು
ಮಸೀದಿಯ ಅವಶೇಷ ಒಟ್ಟಿಗೆ ಮಣ್ಣ ಪಾಲಾಯಿತು
ಪಂಡಿತ ಮೌಲವಿ ಇಬ್ಬರೂ
ಒಬ್ಬರನೊಬ್ಬರನ್ನು ಅಪ್ಪಿಕೊಂಡು ನಿಂತಿದ್ದರು ಅದರ ಮೇಲೆ
ಇಬ್ಬರ ಕಣ್ಣಿನಿಂದಲೂ ಧಾರಾಳವಾಗಿ ಅಶ್ರು ಹರಿಯುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ 

Sunday, 26 April, 2015

ಪ್ರಕೃತಿಯ ವಿಕೋಪ

ಮನೆ ಕಟ್ಟಿದರು
ಅರಮನೆ ಕಟ್ಟಿದರು
ಪ್ರೀತಿಗೋಸ್ಕರ ತಾಜಾ ಮಹಲ್ ಕಟ್ಟಿದರು
ಕನಸು ಕಟ್ಟಿದರು
ನನಸು ಮಾಡಿ ಮೆರೆದರು 
ಅಹಂ ನೆತ್ತಿಗೇರಿ ದೇವರನ್ನೂ ಮರೆದರು
ಮನುಜರೆ ಮಾನವೀಯತೆಯ ವೈರಿಯಾದರು
ಆದರೆ ಪ್ರಕೃತಿಯ ವಿಕೋಪದ ಮುಂದೆ ನಡೆಯದು ಈ ಎಲ್ಲ ಆಟ
ನಾಲ್ಕು ದಿನದ ಜೀವನ ನಾಲ್ಕು ದಿನದ ವೈವಾಟ
ನಮ್ಮ ಕೈಯಲ್ಲಿಯೇ ಇದೆ ನಮ್ಮ ಕರ್ಮ ಧರ್ಮ
ಎಂದೂ ಮರೆಯದಿರಿ ಈ ಜೀವನದ ಮರ್ಮ
ಕೇವಲ ಕೆಲವೇ ಸೆಕೆಂಡ್ ಬೇಕು ಎಲ್ಲವೂ ಮುಗಿಯಲು
ಉಸಿರು ಉಳಿಯದು ನಂತರ ಪಶ್ಚಾತಾಪ ಪಡೆಯಲು
by ಹರೀಶ್ ಶೆಟ್ಟಿ, ಶಿರ್ವ

ಈ ಹೃದಯ ಈ ಮರುಳು ಹೃದಯ ನನ್ನ

ಚಿತ್ರ ಕೃಪೆ : Google 
ಘಝಲ್ ಕೊಂಡಿ : Dailymotion
!!ಈ ಹೃದಯ ಈ ಮರುಳು ಹೃದಯ ನನ್ನ
ಯಾಕೆ ಬಾಡಿ ಹೋಯಿತು ಏಕಾಂಗಿತನ
ಈ ಮರುಭೂಮಿಯಲಿ ಒಂದು ಶಹರ ಇತ್ತು
ಅದೇನಾಯಿತು ಏಕಾಂಗಿತನ!!
ಈ ಹೃದಯ...

!!ನಿನ್ನೆ ಇರುಳಲ್ಲಿ ನನ್ನನ್ನು
ಗುಪ್ತ ಸ್ವರವೊಂದು ಚಕಿತಗೊಳಿಸಿತು
ನಾನು ಕೇಳಿದೆ ನೀನ್ಯಾರೆಂದು
ಅದು ಹೇಳಿತು ಏಕಾಂಗಿತನ!!
ಈ ಹೃದಯ...

!!ಒಂದು ನೀನು
ಶತಮಾನಗಳಿಂದ ನನ್ನ
ಸಹಯಾತ್ರಿ ಹಾಗು ಅಪ್ತ ಸ್ನೇಹಿತೆ
ಒಂದು ನಾನು
ನಿನ್ನ ಉಪಸ್ಥಿತಿಯಿಂದಲೇ ಅಜ್ಞಾನಿ ಏಕಾಂಗಿತನ!!
ಈ ಹೃದಯ...

!!ಒಂದು ಅಪರಿಚಿತ ತಂಗಾಳಿ
ನನ್ನಲ್ಲಿ ಕೇಳಿದಾಗ
ನನ್ನ ಅಳಲಿನ ಕಾರಣ
ಒದ್ದೆ ಮರುಳಲಿ ನಾನು ಬರೆದೆ ಏಕಾಂಗಿತನ!!
ಈ ಹೃದಯ...

!!ಈ ವೇದನೆಯ ಏಕಾಂತತೆ
ಈ ಮರುಭೂಮಿಯ ನೀರಸ ಪ್ರವಾಸ
ನಾನಂತೂ ಸೋತೋದೆ
ತನ್ನ ಹೇಳು ಏಕಾಂಗಿತನ!!
ಈ ಹೃದಯ..

!!ಜನರೇ ನಾನೇಗೆ
ಆ ಶಹರದಲಿ ಬದುಕಲಿ
ಮುಕ್ತವಾಗಿ ಯೋಚಿಸುವುದು
ಅಪರಾಧವೆಂದು ಪರಿಗಣಿಸಿದಲ್ಲಿ
ಆದರೆ ಅದರ ಸಜೆ ಏಕಾಂಗಿತನ!!
ಈ ಹೃದಯ...

!!ನಿನ್ನೆ ರಾತ್ರಿ
ಏಕಾಂಗಿ ಚಂದಿರನನ್ನು ನೋಡಿದೆ
ನಾನು ಸ್ವಪ್ನದಲಿ
ಬಹುಶಃ ಇದು ನನಗೆ
ಇಷ್ಟವಾಗಬಹುದು ಸದಾ ಏಕಾಂಗಿತನ!!
ಈ ಹೃದಯ...
(ಏಕಾಂಗಿತನ = ಅಲೆಮಾರಿತನ )

ಮೂಲ : ಮೊಹಸಿನ್ ನಕ್ವಿ
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗುಲಾಮ್ ಅಲಿ
ಆಲ್ಬಮ್ : ಮಾಟಿ ಮಾಂಗೆ ಖೂನ್  

Ye dil ye paagal dil mera, kyun bujh gayaa awaargi
is dasht mein ek sheher tha, woh kya hua aawaargi..

Kal shab mujhe beshakl ki awaaz ne chaunka diya,
Main ne kaha tu kaun hai, usne kaha aawaargi..

Ik tuu ki sadiyon se mere, hamraah bhi hamraaz bhi,
Ik main ki tere naam se naa aashnaa aawaargi..

Ek ajnabi jhaunke ne jab poocha mere gham ka sabab
sehera ki bheegi ret per, maine likha aawaargi..

Ye dard ki tanhaiyaan, ye dasht kaa viraan safar
hum log to ukta gaye apni suna, aawaargi..

Logon bhala us sheher mein kaise jiyenge hum jahaan
ho jurm tanhaa sochnaa, lekin sazaa aawaargi..

Kal raat tanha chaand ko dekha tha maine khwaab mein
“Mohsin” mujhe raas aayegii shaayad sada aawaargi..


Ye dil ye paagal dil mera, kyun bujh gayaa awaargi
is dasht mein ek sheher tha, woh kya hua aawaargi..
http://www.dailymotion.com/video/x193b8a_yeh-dil-yeh-pagal-dil-mera-by-ghulam-ali_music