Sunday, March 29, 2020

ಓ ನನ್ನೊಲವೆ, ಓ ನನ್ನೊಲವೆ

ಓ ನನ್ನೊಲವೆ, ಓ ನನ್ನೊಲವೆ

ನನ್ನೊಲವೆ ನನ್ನನ್ನು ಬಿಟ್ಟು ಹೋಗದಿರು
ನಿನ್ನ ವಿನಃ ಮನಸ್ಸಿಲ್ಲ ಯಾವುದರಲ್ಲೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ನನ್ನ ವಿನಃ ನೀನು ಬದುಕಲಾರೆ
ನಿನ್ನ ವಿನಃ ನಾನು ಬದುಕಲಾರೆ
ಬೇರೆ ಯಾವುದೇ ಭರವಸೆ ನಾನು ಕೇಳುವುದಿಲ್ಲ
ನಿನ್ನ ವಿನಃ ನನ್ನ ಅಸ್ತಿತ್ವ ಏನಿಲ್ಲ

ನಿನ್ನಂತಹ ಪ್ರೀತಿ
ನನಗೆ ಸಿಗದು ಬೇರೆ ಎಲ್ಲೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ನಿನ್ನ ಹೃದಯದಲ್ಲಿಡು ನೀನು ನನ್ನನ್ನು
ಮಾತಾಡುವ ನಾವು ಕಣ್ಣಿಂದ ಕಣ್ಣಿನಿಂದಲೂ
ಮಿಡಿತ ಹೃದಯದ ಗುರುತಿಸುವುದು ನಿನ್ನನ್ನು
ನೀನು ನನ್ನ ನಾನು ನಿನ್ನಯೆಂದು ತಿಳಿದಿದೆ ದೇವರಿಗೂ

ಒಬ್ಬರನೊಬ್ಬರು ಅಗಲಿ ನಮಗೆ ಬದುಕಲಾಗದು
ನಿನ್ನ ವಿನಃ ನಾನು ಯಾರನ್ನೂ ನೋಡುವುದಿಲ್ಲ
ನಿನ್ನ ವಿನಃ ನನ್ನ ಅಸ್ತಿತ್ವ ಏನಿಲ್ಲ

ನಿನ್ನ ಬಣ್ಣದಲ್ಲಿ ಮುಳುಗಿದೆ ನಂತರ,
ಹಿಡಿಯಲ್ಲ ಇನ್ನು ಬೇರೆ ಯಾವ ಬಣ್ಣವೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ನನ್ನೊಲವೆ ನನ್ನನ್ನು ಬಿಟ್ಟು ಹೋಗದಿರು
ನಿನ್ನ ವಿನಃ ಮನಸ್ಸಿಲ್ಲ ಯಾವುದರಲ್ಲೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ/ಸಂಗೀತ  : ತನಿಷ್ಕ್ ಬಾಗಚಿ
ಹಾಡಿದವರು : ಅರಿಜಿತ್ ಸಿಂಗ್, ಆಸೀಸ್ ಕೌರ್
ಚಿತ್ರ : ಕೇಸರಿ

ओ माहि वे, ओ माहि वे
माहि मेनू छडयो ना
के तेरे बिन दिल नैयो लगना
जिथे वे तू चलना ऐ
माहि मैं तेरे पीछे पीछे चलना
तू जी सकती नहीं
मैं जी सकता नहीं
कोई दूसरी मैं सरता रखता नहीं
क्या तेरे बाजो मेरा

सचियाँ मोहब्बत वे
ओ माहि किथे और नैयो मिलना
और नैयो मिलना
जिथे वे तू चलिया हाँ
माहि मैं तेरे पीछे पीछे चलना
पीछे पीछे चलना

ओ माहि वे, ओ माहि वे

दिल विच तेरे यारा मेनू रहने दे
आँखों से ये आँखों वाली गल कहने दे
दिल विच तेरे यारा मेनू रहने दे
आँखों से ये आँखों वाली गल कहने दे

धड़कन दिल दी ऐ तैनू पहचाने
तू मेरा है मैं हूँ तेरे रब भी ये जाने

तू रह सकती नहीं
मैं रह सकता नहीं
तेरे बिन यारा और किथे तकदा नहीं
क्या तेरे बाजो मेरा

रंग तेरा छड्या वे
के हुण कोई रंग नैयो चड़ना
रंग नैयो चड़ना
जिथे वे तू चलना हाँ
माहि मैं तेरे पीछे पीछे चलना
पीछे पीछे चलना

माहि मेनू छड़ियो ना
के तेरे बिन दिल नैयो लगना
जिथे वे तू चलना ऐ
माहि मैं तेरे पीछे पीछे चलना

माहि मेनू छड़ियो ना
के तेरे बिन दिल नैयो लगना
जिथे वे तू चलना ऐ
माहि मैं तेरे पीछे पीछे चलना

Thursday, March 26, 2020

ಓ ನನ್ನ ಭೂಮಿ

ಖಡ್ಗಕ್ಕೆ  ಈ ಶಿರವನ್ನು ಮಾಡಿ ಅರ್ಪಣ
ಜ್ವಾಲೆಯಲ್ಲಿ ದಹಿಸಿ ಈ ದೇಹವನ್ನ
ಅದರ ನಂತರವೇ ನಮ್ಮ ತಲೆಯ ಮೇಲೆ
ಅಲಂಕಾರವಾಯಿತು ಈ ಕೇಸರಿ ಬಣ್ಣ

ಓ ನನ್ನ ಭೂಮಿ, ವಿಷಾದವಿಲ್ಲ
ನಿನಗಾಗಿ ನೂರು ನೋವು  ಸಹಿಸಿದಕ್ಕೆ
ಎಂದಿಗೂ ನಿನ್ನ ಪ್ರತಿಷ್ಠೆ ಸುರಕ್ಷಿತವಾಗಿರಲಿ
ನನ್ನ ಪ್ರಾಣ ಉಳಿಯಲಿ ಉಳಿಯದಿರಲಿ

ಓ ನನ್ನ ಭೂಮಿ, ಪ್ರಿಯತಮೆ ನನ್ನ
ನನ್ನ ಧಮನಿ-ಧಮನಿಯಲಿ ನಿನ್ನ ಪ್ರೀತಿ ತುಂಬಿರಲಿ
"ಎಂದಿಗೂ ಮಸುಕಾಗದಿರಲಿ ನಿನ್ನ ಬಣ್ಣ"
ದೇಹದಿಂದ ಹೊರಬಂದು ಈ ನೆತ್ತರು ಹೇಳಲಿ

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ನಿನ್ನ ನದಿಯಲ್ಲಿ ತೇಲಲಿ
ನಿನ್ನ ಹೊಲದಲ್ಲಿ ಬೆಳೆಯಲಿ
ಕೇವಲ ಇಷ್ಟೇ ಹೃದಯದ ಬಯಕೆ

ಸಾಸಿವೆ ತುಂಬಿದ ನನ್ನ ಗದ್ದೆಗಳು
ಅಲ್ಲಿ ಸಂತಸದಿಂದ ಕುಣಿಯಲಾಗಲಿಲ್ಲ
ಎಂದಿಗೂ ನನ್ನ ಆ ಊರು ಸಮೃದ್ಧವಾಗಿರಲಿ 
ಅಲ್ಲಿ ಹಿಂತಿರುಗಿ ನನಗೆ ಹೋಗಲಾಗಲಿಲ್ಲ

ಓ ಮಾತೃಭೂಮಿಯೇ, ಓ ಮಾತೃಭೂಮಿಯೇ
ನಿನ್ನ ನನ್ನ ಪ್ರೀತಿ ಅದ್ವಿತೀಯವಾಗಿತ್ತು 
ಅರ್ಪಿಸಿದೆ ನನ್ನನ್ನು ನಿನ್ನ ಸೇವೆಯಲಿ 
ಅದೃಷ್ಟವಂತನಾಗಿದೆ ನಾನೆಷ್ಟು

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ಕೇಸರಿ

ಓ ನಲ್ಲೆ ನನ್ನ, ನೀ ನಗುತಿರು
ಕ್ಷಣಕ್ಕೂ ನಿನ್ನ ಕಣ್ಣಲ್ಲಿ ಕಣ್ಣೀರು ಬರದಿರಲಿ
ನಾನಾರಾಧಿಸಿದ ಆ ಮುಖದ 
ತೇಜಸ್ಸು ಎಂದಿಗೂ ಕಡಿಮೆಯಾಗದಿರಲಿ 

ಓ ಅಮ್ಮ ನನ್ನ, ನಿನಗೆ ವ್ಯಥೆ ಏಕೆ?
ಯಾಕೆ ಕಣ್ಣಿಂದ ಸಾಗರ ಹರಿಯುತ್ತಿದೆ
ನೀನು ಹೇಳುತ್ತಿದೆ ನಿನ್ನ ಚಂದಿರ ನಾನು
ಮತ್ತೆ ಚಂದಿರ ಎಂದಿಗೂ ಇರುತ್ತದೆ

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಮೂಲ : ಮನೋಜ್ ಮುಂತಶೀರ್ 
ಹಾಡಿದವರು :ಬಿ ಫ್ರಾಕ್ 
ಸಂಗೀತ :ಅರ್ಕೊ  ಪ್ರಾವೋ  ಮುಖರ್ಜಿ 
ಚಿತ್ರ : ಕೇಸರಿ  

Talvaron pe sar vaar diye
Angaaron mein jism jalaya hai
Tab jaake ke kahin humne sar pe
Yeh kesari rang sajaaya hai

Aye meri zameen afsoss nahi
Jo tere liye sau dard sahe
Mehfooz rahe teri aan sada
Chaahe jaan meri yeh rahe na rahe

Aye meri zameen mehboob meri
Meri nass nass mein tera ishq bahe
Pheeka na pade kabhi rang tera
Jismon se nikal ke khoon kahe

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

Wo o…

Sarson se bhare khalihaan mere
Jahaan jhoom ke bhagra paa na saka
Aabad rahe woh gaaon mera
Jahaan laut ke wapas jaa na saka

Ho watna ve, mere watna ve
Tera mera pyar nirala tha
Kurbaan hua teri asmat pe
Main kitna naseebon wala tha

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

O Heer meri tu hansti rahe
Teri aankh ghadi bhar nam na ho
Main marta tha jis mukhde pe
Kabhi uska ujaala kam na ho

O maai meri kya fiqr tujhe
Kyun aankh se dariya behta hai
Tu kehti thi tera chaand hoon main
Aur chaand hamesha rehta hai

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

Wednesday, March 25, 2020

ಯುಗಾದಿ ಹಬ್ಬದ ಶುಭಾಶಯಗಳು


ನೀವು ನಿಮ್ಮ ಮನೆಯಲಿ
ನಾವು ನಮ್ಮ ಮನೆಯಲಿ
ಪ್ರೀತಿ ಇರಲಿ

ನೀವು ನಮ್ಮ ಮನದಲಿ
ನಾವು ನಿಮ್ಮ ಮನದಲಿ
ಪ್ರೀತಿ ಇರಲಿ

ಈ ಆಪತ್ತು ಸಮಯದಲಿ
ಸಾಮಾಜಿಕ ಅಂತರವಿರಲಿ
ಪ್ರೀತಿ ಇರಲಿ

ಈ ಯುಗಾದಿ ಹಬ್ಬದಲಿ
ಹಾರೈಸಿ ದೂರದಿಂದಲಿ
ಪ್ರೀತಿ ಇರಲಿ

by ಹರೀಶ್ ಶೆಟ್ಟಿ, ಶಿರ್ವ

Tuesday, March 24, 2020

ಬೆರಳನ್ನು ಹಿಡಿದು ನೀನು

ಈ ಕುಟುಂಬದ ನಾ ಪ್ರೀತಿಯ ಮಗಳು
ಅಣ್ಣ ಪ್ರಯತ್ನಿಸು ನನಗೆ ವಿದಾಯ ನೀಡಲು
ಈ ಕುಟುಂಬದ ನಾ ಪ್ರೀತಿಯ ಮಗಳು

ಬೆರಳನ್ನು ಹಿಡಿದು ನೀನು
ನಡೆಯಲು ಕಲಿಸಿದೆಯಲ್ಲ 
ಹೊಸ್ತಿಲು ಎತ್ತರವಾಗಿದೆ, ಇದನ್ನು ದಾಟಿಸು
ಅಪ್ಪ ನಾನು ರಾಜಕುಮಾರಿ ನಿನ್ನ
ಹೃದಯದ ತುಂಡು ನಿನ್ನ
ಇನ್ನೊಂದು ಬಾರಿ ನನಗೆ ಹೊಸ್ತಿಲು ದಾಟಿಸು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ....

ಒಮ್ಮೆ ಕೊಯ್ದ ಪೈರು
ಪುನಃ ಬೆಳೆಯುವುದಿಲ್ಲ
ಮಗಳು ಮದುವೆಯಾದ ನಂತರ
ಪುನಃ ಹಿಂತಿರುಗುವುದಿಲ್ಲ

ಇಂತಹ ವಿದಾಯ ಇದ್ದರೆ
ದೀರ್ಘ ಅಗಲಿಕೆ ಇದ್ದರೆ
ಹೊಸ್ತಿಲು ಈ ನೋವಿನ ಸಹ ದಾಟಿಸು
ಅಪ್ಪ ನಾನು ರಾಜಕುಮಾರಿ ನಿನ್ನ
ಹೃದಯದ ತುಂಡು ನಿನ್ನ
ಇನ್ನೊಂದು ಬಾರಿ ನನಗೆ ಹೊಸ್ತಿಲು ದಾಟಿಸು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ....

ನನ್ನ ಪ್ರೀಯರೆ...

ಹಿಮ ಕರಗುವುದು ಪುನಃ
ನನ್ನ ಪ್ರೀಯರೆ
ಬೆಳೆ ಮಾಗಿಯುವುದು ಪುನಃ
ನಿಮ್ಮ ಪಾದದಡಿಯಲಿ
ನನ್ನ ಪ್ರಾರ್ಥನೆ ನಡೆಯಲಿ
ಪ್ರಾರ್ಥನೆ ನನ್ನ ನಡೆಯಲಿ

ಬೆರಳನ್ನು ಹಿಡಿದು ನೀನು
ನಡೆಯಲು ಕಲಿಸಿದೆಯಲ್ಲ 
ಹೊಸ್ತಿಲು ಎತ್ತರವಾಗಿದೆ, ಇದನ್ನು ದಾಟಿಸು 
ಅಪ್ಪ ನಾನು ರಾಜಕುಮಾರಿ ನಿನ್ನ
ಹೃದಯದ ತುಂಡು ನಿನ್ನ
ಇನ್ನೊಂದು ಬಾರಿ ನನಗೆ ಹೊಸ್ತಿಲು ದಾಟಿಸು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ....

ಈ ಕುಟುಂಬದ ನಾ ಪ್ರೀತಿಯ ಮಗಳು
ಅಣ್ಣ ಪ್ರಯತ್ನಿಸು ನನಗೆ ವಿದಾಯ ನೀಡಲು 
ಈ ಕುಟುಂಬದ ನಾ ಪ್ರೀತಿಯ ಮಗಳು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಗುಲ್ಜಾರ್
ಸಂಗೀತ : ಶಂಕರ್ ಎಹಸಾನ್ ಲೊಯ್
ಹಾಡಿದವರು : ಶಂಕರ್ ಮಹಾದೇವನ್, ಹರ್ಷದೀಪ್ ಕೌರ್  , ವಿಭಾ ಸರಾಫ್
ಚಿತ್ರ : ರಾಜಿ

ब छसे ख़ानमूज कूर
द्यु म रुखसात म्यान बोय जानो
ब छसे ख़ानमूज कूर
द्यु म रुखसात म्यान बोय जानो
ब छसे ख़ानमूज कूर

उंगली पकड़ के तूने
चलना सिखाया था ना
दहलीज़ ऊँची है ये पार करा दे
बाबा मैं तेरी मलिका
टुकड़ा हूँ तेरे दिल का
इक बार फिर से दहलीज़
पार करा दे

मुड़ के ना देखो दिलबरो दिलबरो
मुड़ के ना देखो दिलबरो
मुड़ के ना देखो दिलबरो दिलबरो
मुड़ के ना देखो दिलबरो

फसलें जो काटी जायें
उगती नहीं हैं
बेटियाँ जो ब्याही जाएँ
मुड़ती नहीं हैं

फसलें जो काटी जायें
उगती नहीं हैं
बेटियाँ जो ब्याही जाएँ
मुड़ती नहीं हैं

ऐसी बिदाई हो तो
लंबी जुदाई हो तो
दहलीज़ दर्द की भी पार करा दे
बाबा मैं तेरी मलिका
टुकड़ा हूँ तेरे दिल का
इक बार फिर से दहलीज़
पार करा दे

मुड़ के ना देखो दिलबरो दिलबरो
मुड़ के ना देखो दिलबरो दिलबरो
मुड़ के ना देखो दिलबरो दिलबरो
मुड़ के ना देखो दिलबरो

मेरे दिलबरो

बर्फें गलेंगी फिर से
मेरे दिलबरो
फसलें पकेंगी फिर से
तेरे पाँव के तले
मेरी दुआ चले
दुआ मेरी चले

उंगली पकड़ के तूने
चलना सिखाया था ना
दहलीज़ ऊँची है ये पार करा दे
बाबा मैं तेरी मलिका
टुकड़ा हूँ तेरे दिल का
इक बार फिर से दहलीज़
पार करा दे

मुड़ के ना देखो दिलबरो दिलबरो
मुड़ के ना देखो दिलबरो
मुड़ के ना देखो दिलबरो दिलबरो
मुड़ के ना देखो दिलबरो

ब छसे ख़ानमूज कूर
द्यु म रुखसात म्यान बोय जानो
ब छसे ख़ानमूज कूर
मुड़ के ना देखो दिलबरो दिलबरो
मुड़ के ना देखो दिलबरो
ಚಿತ್ರ ಕೃಪೆ : ಗೂಗಲ್ 

Monday, March 23, 2020

ಓ ದೇಶ, ದೇಶ ನನ್ನ

ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ
ಜೀವನ ದೀಪವಾಗಿ ಬೆಳಕಲಿ ದೇವರೇ ನನ್ನ 
ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ

ಓ ದೇಶ, ದೇಶ ನನ್ನ, ನೀನು ಅಮರವಾಗಿರು
ಓ ದೇಶ, ದೇಶ ನನ್ನ, ನೀನು ಅಮರವಾಗಿರು
ನಾನೆಲ್ಲಿಯೂ ಇರಲಿ, ನನ್ನ ಸ್ಮೃತಿಯಲ್ಲಿರು

ಓ ದೇಶ, ದೇಶ ನನ್ನ...

ನೀನೆ ನನ್ನ ಗೌರವ, ನಿನ್ನಿಂದಲೇ ನನ್ನ ಗುರುತು
ನೀನೆ ನನ್ನ ಗೌರವ, ನಿನ್ನಿಂದಲೇ ನನ್ನ ಗುರುತು
ನಾನೆಲ್ಲಿಯೂ ಹೋದರು, ನನ್ನ ಆಧಾರವಾಗಿರು

ಓ ದೇಶ, ದೇಶ ನನ್ನ...

ಬಿಡಲಾರೆ ನಾನು ನಿನಗೆ, ಯಾವುದೇ ದುಃಖ ತಾಪ ಬರಲು
ಬಿಡಲಾರೆ ನಾನು ನಿನಗೆ, ಯಾವುದೇ ದುಃಖ ತಾಪ ಬರಲು
ತ್ಯಜಿಸುವೆ ನನ್ನ ಜೀವ ನಿನಗಾಗಿ, ನೀನು ಶಾಶ್ವತವಾಗಿರು

ಓ ದೇಶ, ದೇಶ ನನ್ನ...

ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ
ಜೀವನ ದೀಪವಾಗಿ ಬೆಳಕಲಿ ದೇವರೇ ನನ್ನ 
ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಗುಲ್ಜಾರ್
ಹಾಡಿದವರು : ಸುನಿಧಿ ಚೌಹಾನ್, ಅರಿಜಿತ್ ಸಿಂಗ್
ಸಂಗೀತ : ಶಂಕರ್ ಎಹಸಾನ್ ಲೊಯ್
ಚಿತ್ರ : ರಾಜಿ

लब पे आती है दुआ बन के तमन्ना मेरी
ज़िंदगी शम्मा की सूरत हो खुदाया मेरी
लब पे आती है दुआ बन के तमन्ना मेरी

ऐ वतन, वतन मेरे आबाद रहे तू
ऐ वतन, वतन मेरे आबाद रहे तू
(ऐ वतन, वतन मेरे आबाद रहे तू)
मैं जहाँ रहूँ जहाँ में, याद रहे तू
(मैं जहाँ रहूँ जहाँ में, याद रहे तू)

ऐ वतन, मेरे वतन
(ऐ वतन, मेरे वतन)

तू ही मेरी मंज़िल है, पहचान तुझी से
(तू ही मेरी मंज़िल है, पहचान तुझी से)
पहुँचूँ मैं जहाँ भी, मेरी बुनियाद रहे तू
(पहुँचूँ मैं जहाँ भी, मेरी बुनियाद रहे तू)

ऐ वतन, मेरे वतन
(ऐ वतन, मेरे वतन)

तुझ पे कोई ग़म की आँच आने नहीं दूँ
(तुझ पे कोई ग़म की आँच आने नहीं दूँ)
कुरबान मेरी जान तुझ पे, शाद रहे तू
(कुरबान मेरी जान तुझ पे, शाद रहे तू)

लब पे आती है दुआ बन के तमन्ना मेरी
ज़िंदगी शम्मा की सूरत हो खुदाया मेरी
ज़िंदगी शम्मा की सूरत हो खुदाया मेरी

Sunday, March 22, 2020

ಕವಿತೆ ದಿನ


ಇಂದು ಕವಿತೆ ದಿನ ಎಂದು ನೆನಪಾಯಿತು, 
ತನ್ನಿಂತಾನೆ ಕೈ ಲೇಖನಿ ಕಡೆ ಹೋಯಿತು, 
ಎಲ್ಲಿಂದಲೋ ಮಲ್ಲಿಗೆಯ ಸುವಾಸನೆ ಬರಲಾರಂಭಿಸಿತು. 
ಹರೀಶ್ ಶೆಟ್ಟಿ, ಶಿರ್ವ


ಚಿತ್ರ ಕೃಪೆ : ಗೂಗಲ್ 

Thursday, March 19, 2020

ಕಣ್ಣ ಮುಂದೆ ಹೃದಯದ ಸನಿಹ

ಕಣ್ಣ ಮುಂದೆ
ಹೃದಯದ ಸನಿಹ
ಯಾರೋ ಇರುತ್ತಾರೆ,
ಅದು ನೀನು ..ನೀನು  ನೀನು
ಕಣ್ಣ ಮುಂದೆ.....

ನಿರಾಶೆ ಅಂದರೇನು
ಕೇಳು ನನ್ನ ಹೃದಯದಿಂದ
ಏಕಾಂಗಿ ಹಿಂತಿರುಗಿದೆ
ನಾನು ತುಂಬು ಸಭೆಯಿಂದ
ಸತ್ತೋಗುವೇನೋ ನಾನು .....
ಸತ್ತೋಗುವೇನೋ ನಾನು, ಅಗಲಿ ನಿನ್ನಿಂದ
ಕಣ್ಣ ಮುಂದೆ.....

ನೆಮ್ಮದಿ ಇಲ್ಲ ಮನ್ನಸ್ಸಿಗೆ,
ಏಕಾಂತ ಕಾಡುತ್ತದೆ
ನಿನ್ನನ್ನು ನೋಡದಿದ್ದರೆ,
ಹೃದಯ ಹೆದರುತ್ತದೆ
ಈಗ ನನ್ನನ್ನು ಬಿಟ್ಟು.....
ಈಗ ನನ್ನನ್ನು ಬಿಟ್ಟು, ದೂರ ಹೋಗದಿರು
ಕಣ್ಣ ಮುಂದೆ.....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಸಮೀರ್
ಸಂಗೀತ : ನದೀಮ್ ಶ್ರವಣ್
ಹಾಡಿದವರು : ಕುಮಾರ್ ಸಾನು, ಅನುರಾಧ ಪೌಡವಾಲ್
ಚಿತ್ರ : ಆಶಿಕಿ



नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
बेताबी क्या होती है पुछो मेरे दिल से
बेताबी क्या होती है पुछो मेरे दिल से
तन्हा-तन्हा लौटा हूँ मैं तो भरी महफ़िल से
मरना जाऊं कहीं
मरना जाऊं कहीं होके तुमसे जुदा

नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
तन्हाई जीने ना दे बैचैनी तडपाये
तन्हाई जीने ना दे बैचैनी तडपाये
तुमको मैं ना देखूं तो दिल मेरा घबराए
अब मुझे छोड़ के
अब मुझे छोड़ के दूर जाना नहीं

नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
नज़र के सामने जिगर के पास
कोई रहता है वो हो तुम

ಚಿತ್ರ ಕೃಪೆ : ಗೂಗಲ್ 

ಸಿದ್ಧಿದಾತ್ರಿ