ಚಿತ್ರಕೃಪೆ : Google
ಹಾಡಿನ ಕೊಂಡಿ : You Tube
!!ನಾನೊಂದು ಕನಸುಈ ಕನಸೊಂದಿಗೆ ನೀನು ಪ್ರೀತಿ ಮಾಡದಿರು
ಪ್ರೀತಿ ಆಗಿದ್ದರೆ ಈ ಪ್ರೀತಿಯನು ವ್ಯಕ್ತಪಡಿಸದಿರು!!
ನಾನೊಂದು ಕನಸು...
!!ಈ ಗಾಳಿಯೂ ಎಂದಾದರೂ ಸದ್ದಿಲ್ಲದೆ ತೆರಳುವುದು
ಮತ್ತೆಂದೂ ಅದು ಹಿಂತಿರುಗಿ ಎಂದಿಗೂ ಈ ಜಗಕ್ಕೆ ಬರಲಾರದು
ತನ್ನ ಕೈಯಲ್ಲಿ ಈ ಗಾಳಿಯನು ಬಂಧಿಸದಿರು!!
ನಾನೊಂದು ಕನಸು...
!!ನಿನ್ನ ಹೃದಯದಲ್ಲಿದೆ,ಪ್ರೀತಿಯ ಭುಗಿಲೇಳುವ ಜ್ವಾಲೆ
ತನ್ನ ಎದೆಯಲಿ ಅಡಗಿಸಿಡು ಈ ಸ್ಪಂದಿಸುವ ಜ್ವಾಲೆ
ಈ ರೀತಿ ಪ್ರೀತಿಯ ಅವಮಾನ ಎಲ್ಲೆಡೆ ಮಾಡದಿರು!!
ನಾನೊಂದು ಕನಸು...
!!ಶಾಖೆಯಿಂದ ಬಿದ್ದು ಹೂವು ಅರಳುತ್ತದೆಯೇನು?
ಹಗಲು ಮತ್ತು ರಾತ್ರಿಯ ಎಂದಾದರೂ ಜಗದಲಿ ಮಿಲನವಾಗುತ್ತದೆಯೇನು?
ಮರೆತು ಹೋಗು, ಹೋಗಲಿ ಬಿಡು, ವಿಧಿಯೊಂದಿಗೆ ವಾದ ಮಾಡದಿರು!!
ನಾನೊಂದು ಕನಸು...
ಮೂಲ : ಕಮರ್ ಜಲಲಾಬಾದಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಹಿಮಾಲಯ್ ಕಿ ಗೋದ್ ಮೇ
मैं तो एक ख्वाब हूँ, इस ख्वाब से तू प्यार ना कर
प्यार हो जाये तो फिर प्यार का इज़हार ना कर
ये हवायें कभी चुपचाप चली जायेंगी
लौट के फिर कभी गुलशन में नहीं आयेंगी
अपने हाथों में हवाओं को गिरफ्तार न कर
तेरे दिल में हैं, मोहब्बत के भड़कते शोले
अपने सीने में छुपा ले ये धड़कते शोले
इस तरह प्यार को रुसवा सर-ए-बाजार ना कर
शाख से टूट के गूंचे भी कही खिलते हैं
रात और दिन भी जमाने में कही मिलते हैं
भूल जा, जाने दे तकदीर से तकरार ना कर
https://www.youtube.com/watch?v=s_jJgXflpUg
ನಾನೊಂದು ಕನಸು... ಎನ್ನುವಂತೆಯೇ ಇದೆ ಸಾಹಿತ್ಯ. ಭಾವಾನುವಾದಕ್ಕೂ ಜೈ.
ReplyDeleteಮುಖೇಶರ ಮತ್ತೊಂದು ಉತ್ತಮ ಗಾಯನ.
ಪಂಜಾಬ್ ಮೂಲದವರಾದ ಕಮರ್ ಜಲಲಾಬಾದಿ ಉತ್ತಮ ಕವಿ.
ಈ ಚಿತ್ರಕ್ಕೆ ಪ್ರವೀಣ್ ಭಟ್ ಅವರ ಛಾಯಾಗ್ರಹಣವಿತ್ತು.