ನಿನ್ನ ಚಹರೆಯಲಿ ಆ ಜಾದೂ ಇದೆ
ಸತತ ನನ್ನನ್ನು ನಿನ್ನತ್ತ ಎಳೆಯುತ್ತದೆ
ಹೋಗಲಿರುತ್ತದೆ ಅದೆಲ್ಲಿಗೋ
ನಿನ್ನತ್ತಲೇ ಈ ಕಾಲು ಸಾಗುತ್ತದೆ
ನಿನ್ನ ಚಹರೆಯಲಿ...
ಸತತ ನನ್ನನ್ನು ನಿನ್ನತ್ತ ಎಳೆಯುತ್ತದೆ
ಹೋಗಲಿರುತ್ತದೆ ಅದೆಲ್ಲಿಗೋ
ನಿನ್ನತ್ತಲೇ ಈ ಕಾಲು ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನ ವಜ್ರದ ಹಾಗೆ ಕಂಗಳು
ಕಣ್ಣಲ್ಲಿ ಲಕ್ಷಗಟ್ಟಲೆ ಮಾತುಗಳು
ಮಾತಿನಲಿ ಸಿಹಿ ರಸದ ಹನಿಗಳು
ನನ್ನಲ್ಲಿ ಪ್ರೀತಿಯ ದಾಹ ಎಬ್ಬಿಸುತ್ತದೆ
ಕಣ್ಣಲ್ಲಿ ಲಕ್ಷಗಟ್ಟಲೆ ಮಾತುಗಳು
ಮಾತಿನಲಿ ಸಿಹಿ ರಸದ ಹನಿಗಳು
ನನ್ನಲ್ಲಿ ಪ್ರೀತಿಯ ದಾಹ ಎಬ್ಬಿಸುತ್ತದೆ
ಬಿದ್ದರೆ ನಿನ್ನ ಒಂದು ದೃಷ್ಟಿಯೂ
ಹೆಣವೂ ಜೀವವಾಗುತ್ತದೆ
ಅಮೃತ ಸೋರುವ ನಿನ್ನ ತುಟಿಯು
ಬದುಕುವ ಆಸೆ ಹುಟ್ಟಿಸುತ್ತದೆ
ಹೆಣವೂ ಜೀವವಾಗುತ್ತದೆ
ಅಮೃತ ಸೋರುವ ನಿನ್ನ ತುಟಿಯು
ಬದುಕುವ ಆಸೆ ಹುಟ್ಟಿಸುತ್ತದೆ
ನನಗೆ ತಡೆಯಲು ಸಾಧ್ಯವಾಗುವುದಿಲ್ಲ
ನಿನ್ನೊಟ್ಟಿಗೆ ನನ್ನೆಜ್ಜೆ ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನೊಟ್ಟಿಗೆ ನನ್ನೆಜ್ಜೆ ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನನ್ನು ನೋಡಿದ ಕ್ಷಣದಿಂದ
ನಾನು ದೇವರನು ನಂಬಲು ಆರಂಭಿಸಿದೆ
ಈ ಹೃದಯ ಪದೇ ಪದೇ ಹೇಳುತ್ತಿದೆ
ನನ್ನ ಖುಷಿಯ ಖಜಾನೆ ನಿನ್ನಲ್ಲಿಯೇ ಇದೆ
ನಾನು ದೇವರನು ನಂಬಲು ಆರಂಭಿಸಿದೆ
ಈ ಹೃದಯ ಪದೇ ಪದೇ ಹೇಳುತ್ತಿದೆ
ನನ್ನ ಖುಷಿಯ ಖಜಾನೆ ನಿನ್ನಲ್ಲಿಯೇ ಇದೆ
ಪ್ರೀತಿಯ ಒಪ್ಪಿಗೆ ನೀಡು ಇನ್ನು
ನನ್ನ ಕೊರತೆ ತೀರಿಸು ನೀನು
ನಿನ್ನಿಂದ ಸ್ವಲ್ಪವೂ ಅಂತರ ಇದ್ದರೆ
ನನಗೆ ಹುಚ್ಚು ಹಿಡಿದಂತೆ ಆಗುತ್ತದೆ
ನನ್ನ ಕೊರತೆ ತೀರಿಸು ನೀನು
ನಿನ್ನಿಂದ ಸ್ವಲ್ಪವೂ ಅಂತರ ಇದ್ದರೆ
ನನಗೆ ಹುಚ್ಚು ಹಿಡಿದಂತೆ ಆಗುತ್ತದೆ
ನಿನ್ನನ್ನು ಪಡೆಯುವುದು ಕಷ್ಟವೇ ಆಗಲಿ
ಆದರೂ ಹೃದಯ ಪಡೆಯಲು ಹಾತೊರೆಯುತ್ತದೆ
ನಿನ್ನ ಚಹರೆಯಲಿ...
ಆದರೂ ಹೃದಯ ಪಡೆಯಲು ಹಾತೊರೆಯುತ್ತದೆ
ನಿನ್ನ ಚಹರೆಯಲಿ...
ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಧರ್ಮಾತ್ಮ
तेरे चेहरे में वो जादू है, बिन डोर खिंचा जाता हूँ
जाना होता है और कही, तेरी ओर चला आता हूँ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಧರ್ಮಾತ್ಮ
तेरे चेहरे में वो जादू है, बिन डोर खिंचा जाता हूँ
जाना होता है और कही, तेरी ओर चला आता हूँ
तेरी हीरे जैसी आँखें, आँखों में हैं लाखों बातें
बातों में रस की बरसातें, मुझ में प्यार की प्यास जगाये
तू जो एक नज़र डालें, जी उठे मरनेवाले
लब तेरे अमृत के प्याले, दिल में जीने की आस बढ़ाये
चल पड़ते हैं तेरे साथ कदम मैं रोक नही पाता हूँ
बातों में रस की बरसातें, मुझ में प्यार की प्यास जगाये
तू जो एक नज़र डालें, जी उठे मरनेवाले
लब तेरे अमृत के प्याले, दिल में जीने की आस बढ़ाये
चल पड़ते हैं तेरे साथ कदम मैं रोक नही पाता हूँ
जब से तुझ को देखा है, देख के खुदा को माना है
मान के दिल ये कहता है, मेरी खुशियों का तू है खजाना
दे दे प्यार की मंज़ूरी, कर दे कमी मेरी पूरी
तुझ से थोड़ी भी दूरी, मुझ को करती है दीवाना
पाना तुझ को मुश्किल ही सही, पाने को मचल जाता हूँ
मान के दिल ये कहता है, मेरी खुशियों का तू है खजाना
दे दे प्यार की मंज़ूरी, कर दे कमी मेरी पूरी
तुझ से थोड़ी भी दूरी, मुझ को करती है दीवाना
पाना तुझ को मुश्किल ही सही, पाने को मचल जाता हूँ
ಇಂದಿವರ್ ಸಾಹೇಬರ ಸಾಹಿತ್ಯಕ್ಕೆ ಒಪ್ಪುವ ಭಾವಾನುವಾದ ಕೊಟ್ಟಿದ್ದೀರ.
ReplyDeleteಕಮಲ್ ಬೋಸ್ ಅವರ ಛಾಯಾಗ್ರಹಣವಿದ್ದ ಚಿತ್ರವಿದು.
ತುಂಬಾ ಧನ್ಯವಾದಗಳು ಬದರಿ ಸರ್.
ReplyDelete