Saturday, March 7, 2015

ಹೋಳಿ

ಹೋಳಿಯ ಈ ದಿನ
ಪ್ರತಿಯೊಂದು  ರಂಗು
ಏನಾದರೂ ನುಡಿಯುತ್ತದೆ
ಕೆಂಪು ಗುಲಾಬಿ ನೀಲಿ ಹಳದಿ
ಎಲ್ಲವೂ ಒಂದೊಂದು ಕಥೆ ಹೇಳುತ್ತದೆ
ರಂಗು ರಂಗು ಸೇರಿ
ಒಂದು ಹೊಸ ರಂಗು ನೀಡುತ್ತದೆ
ಆ ರಂಗು
ಅದು ತನ್ನದೇ ಮೋಜು ತೋರಿಸುತ್ತದೆ
ಹೋಳಿಯ ಈ ದಿನ
ಪ್ರತಿಯೊಂದು ರಂಗು
ಏನಾದರೂ ನುಡಿಯುತ್ತದೆ
ರಂಗಿನ ಈ ಜಾದೂ
ವೈರಿಯ ಸಹ ಕೋಪ ಮುನಿಸು
ಮುಗಿಸುವಂತೆ ಮಾಡಿ
ಪ್ರೇಮದ ಪಾಠ ಕಲಿಸುತ್ತದೆ
ಹೋಳಿಯ ಈ ದಿನ
ಪ್ರತಿಯೊಂದು ರಂಗು
ಏನಾದರೂ ನುಡಿಯುತ್ತದೆ
ದಿನ ಇಡೀ
ಹರ್ಷ ಉಲ್ಲಾಸ
ಆಟ ಓಡಾಟ
ತಿಂಡಿ ತಿನಿಸು ಮಿಠಾಯಿ
ಹೋಳಿಯ ಈ ದಿನ
ಈ ರಂಗಿನಲ್ಲಿ
ವರುಷದ ಆಯಾಸ ಮುಗಿಯುತ್ತದೆ
by ಹರೀಶ್ ಶೆಟ್ಟಿ, ಶಿರ್ವ

2 comments:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...