ಚಿತ್ರಕೃಪೆ : Google
ಹಾಡಿನ ಕೊಂಡಿ : You Tube
ಇಂದು ಶಹೀದ್ ದಿವಸ, ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗು ದೇಶಕ್ಕಾಗಿ ಹುತಾತ್ಮರಾದ ಅನೇಕ ವೀರರಿಗೆ ಕೋಟಿ ಕೋಟಿ ನಮನ.------------------------------------------------------------------------------
ಒಬ್ಬರಿಂದ ಯಾಕೆ ಇನ್ನೊಬ್ಬರು ಮಾತಾಡುವುದಿಲ್ಲ
ಯಾರಿಗೂ ನೋಡಿದರೂ ಅವನು ಮೌನವಾಗಿದ್ದಾನೆ ನಿನ್ನ ಈ ಸಭೆಯಲಿ
ಅವನು ಮೌನವಾಗಿದ್ದಾನೆ ನಿನ್ನ ಈ ಸಭೆಯಲಿ
ತ್ಯಾಗದ ಬಯಕೆ ಈಗ ನಮ್ಮ ಮನಸ್ಸಲ್ಲಿದೆ
ನೋಡ ಬೇಕಾಗಿದೆ ಎಷ್ಟು ಶಕ್ತಿ ಎದುರಾಳಿಯ ಬಾಹುಗಳಲ್ಲಿದೆ
ತ್ಯಾಗದ ಬಯಕೆ...
ಸಮಯ ಬಂದಾಗ ತಿಳಿಸುವೆ ನಿನಗೆ ಓ ಆಕಾಶವೆ
ಈಗಿಂದಲೇ ಏನನ್ನು ತಿಳಿಸಲಿ ಏನು ನಮ್ಮ ಮನಸ್ಸಲ್ಲಿದೆ
ತ್ಯಾಗದ ಬಯಕೆ...
ಎಳೆದು ತಂದಿದೆ ನಮ್ಮನ್ನು ಮಾತೃಭೂಮಿಗೋಸ್ಕರ ಹುತಾತ್ಮರಾಗುವ ಬಯಕೆ
ಹುತಾತ್ಮರಾಗಲು ದೇಶಪ್ರೇಮಿಯರ ಗುಂಪು ಎದುರಾಳಿಯ ಮನೆಯಲಿ ಸೇರಿದೆ
ತ್ಯಾಗದ ಬಯಕೆ...
ಮೂಲ : ರಾಮಪ್ರಸಾದ್ ಬಿಸ್ಮಿಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ, ರಾಜೇಂದ್ರ ಮೆಹತಾ
ಸಂಗೀತ : ಪ್ರೇಮ್ ಧವನ್
ಚಿತ್ರ : ಶಹೀದ್
ek se karta nahi kyo dusra kuchh baat chit
dekhta hu mai jise vo chup teri mehfil me hai
vo chup teri mehfil me hai
sarfaroshi ki tamanna ab hamare dil me hai
dekhna hai zor kitna bazu-e-qatil me hai
sarfaroshi ki tamanna ab hamare dil me hai
vaqt aane par bata dege tujhe o aasman
vaqt aane par bata dege tujhe o aasman
ham abhi se kya bataye kya hamare dil me hai
kya hamare dil me hai
sarfaroshi ki tamanna ab hamare dil me hai
khaich kar layi hai qatal hone ki ummid
khaich kar layi hai qatal hone ki ummid
aashiqo ka aaj jamaghat kucha-e-qatil me hai
kucha-e-qatil me hai
sarfaroshi ki tamanna ab hamare dil me hai
https://www.youtube.com/watch?v=_txCgY4c69g
ಶಹೀದ್ ದಿವಸವೆಂದೇ ಸರ್ಕಾರಗಳು ಮರೆತುಬಿಡುತ್ತವೆ.
ReplyDeleteತಾವು ಅಧಿಕಾರ ಅನುಭವಿಸಲು ಕಾರಣವಾದ ಸ್ವಾತಂತ್ರ್ಯ ಹೋರಾಟದ ಹಿಂಸೆ ಮತ್ತು ಅಹಿಂಸೆಯ ಮಗ್ಗುಲುಗಳಲ್ಲಿ ಆತ್ಮಾರ್ಪಣೆ ಮಾಡಿದ ಆ ಅಮಿತ ದೇಶ ಭಕ್ತರನ್ನು ತಮ್ಮಂತಹ ದೇಶ ಭಕ್ತರಾದರೂ ನೆನೆಯುತ್ತಿರುವುದಷ್ಟೇ ಈಗ ಸಮಾಧಾನದ ನಿಟ್ಟುಸಿರಿನ ಮೂಲ!
ಶಹೀದ್ ಚಿತ್ರದ ಈ ಗೀತೆ ರೋಮಾಂಚನವನ್ನು ಉಂಟುಮಾಡುತ್ತದೆ ನನಗೆ ಕೇಳಿದಾಗಲೆಲ್ಲ.
ಮೊಹಮ್ಮದ್ ರಫಿ, ಮನ್ನಾ ಡೇ, ರಾಜೇಂದ್ರ ಮೆಹತಾ ಎಂತಹ ಸಮ್ಮಿಲ ಮತ್ತು ಉತ್ತಮ ಸಂಗೀತ.
'ಎಳೆದು ತಂದಿದೆ ನಮ್ಮನ್ನು ಮಾತೃಭೂಮಿಗೋಸ್ಕರ ಹುತಾತ್ಮರಾಗುವ ಬಯಕೆ'
ಉತ್ತಮ ಭಾವಾನುವಾದ.
ತಮಗಿದೋ _/\_