Saturday, February 7, 2015

ವಸಂತವೆ ನನ್ನ ಬದುಕನ್ನೂ ಸಿಂಗಾರಿಸು ನೀನು

                                                                ಚಿತ್ರಕೃಪೆ :Google



!!ವಸಂತವೆ ನನ್ನ ಬದುಕನ್ನೂ
ಸಿಂಗಾರಿಸು ನೀನು
ಯಾರೋ ಬರಲಿ ಎಲ್ಲಿಂದಲೂ-೨
ಹೀಗೆ ಕೂಗಿ ಕರೆ ನೀನು!!
ವಸಂತವೆ...

!!ನಿನ್ನಿಂದಲೇ ಹೃದಯ ಕಲಿತಿದೆ ಚಡಪಡಿಕೆಯನ್ನು-೨
ನಿನ್ನನ್ನೇ ದೂರುವೆ-೨
ನಿನ್ನನ್ನೇ ದೂರುವೆ
ಓ ಈ ಸುಂದರ ನೋಟಗಳನ್ನು!!
ವಸಂತವೆ...

!!ರಚಿಸು ಯಾವುದೇ ಕಜ್ಜಳ ತಾ ಹೂಮಾಲೆ-೨
ಬಳುಕುವ ಲತೆ ನೀನು
ಬಳುಕುವ ಲತೆ ನೀನು
ಅರಳಿದ ಹೂವನ್ನು ಚೆಲ್ಲು ನೀನು!!
ವಸಂತವೆ...

!!ಹಚ್ಚು ನನ್ನ ಈ ಕೈಗಳಿಗೆ ಮೆಹಂದಿ-೨
ಸಿಂಗರಿಸು ಕುಂಕುಮ ಹಣೆಗೆ
ಸಿಂಗರಿಸು ಕುಂಕುಮ ಹಣೆಗೆ
ಅಲ್ಲದೆ ಹೊರಟುಹೋಗು ನೀನು!!
ವಸಂತವೆ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ಆಖ್ರೀ ಖತ್

बहारों मेरा जीवन भी सवारों
कोई आये कही से, यूँ पुकारो

तुम ही से दिल ने सीखा हैं तड़पना
तुम ही को दोष देंगी , ऐ नज़ारों

रचाओ कोई कजरा, लाओ गजरा
लचकती डालियों तुम  फूल वारों

लगाओ मेरे इन हाथों में मेहंदी
सजाओ माँग मेरी, या सिधारो
http://www.dailymotion.com/video/xn2m3s_baharo-mera-jeevan-bhi-sanwaro-koi-aye-kahin-se-lata-mangeshkar-khayyam_music

2 comments:

  1. ಖಯ್ಯಾಮ್ ನನಗೆ ಪಂಚಪ್ರಾಣದಲ್ಲಿ ಒಂದು ಪ್ರಾಣ!
    ಶಬಾನಾ ಅಜ್ಮಿಯವರ ತಂದೆ ಕೈಫಿಯವರ ಸಾಹಿತ್ಯಕ್ಕೆ ದೂಸರಾ ಮಾತಿಲ್ಲ ಬಿಡಿ.
    ಈ ಚಿತ್ರಕ್ಕೆ ಜಾಲ್ ಮಿಸ್ತ್ರಿಯವರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್. This is one of my Favourite song.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...