ಚಿತ್ರಕೃಪೆ : GOOGLE
ಹಾಡಿನ ಕೊಂಡಿ : YOU TUBE
ಅದೇನು ನಾನು ಕಕೇಳಿದ್ದೇನೋ
ನೀನಂತೂ ಏನನ್ನು ಹೇಳಲಿಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...
!!ನಾನಿದು ಅರ್ಥೈಸಿದೆ ನನ್ನ ಮನಸ್ಸಿನ
ಯಾವುದೇ ಬಯಕೆ ಈಡೇರಿತೆಂದು
ನೀ ನನ್ನನೀಗೆ ನೋಡಿದೆ ಅಂದರೆ
ಮನಸ್ಸು ಚಂಚಲವಾಯಿತಂದು
ಅನ್ಯಥಾ ನಿನ್ನಾಣೆ
ನಾನಷ್ಟು ಕೆಟ್ಟ ಮನುಷ್ಯನಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...
!!ಅಸಭ್ಯ ನಾನು ಮರುಳು
ಅದೆಷ್ಟು ನಿನಗೆ ಅಸಮಧಾನವಾಯಿತು
ಸ್ಪರ್ಶಿಸಿದೆ ನಿನ್ನ ಮೈಯನ್ನು
ಅಯ್ಯೋ ಇದೆಂಥ ತಪ್ಪಾಯಿತು
ಇಡೀ ಜಗತ್ತಲ್ಲಿ ಇದಕ್ಕೆ
ಯಾವುದೇ ಯೋಗ್ಯ ಶಿಕ್ಷೆಯಿಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...
!!ಹುಣ್ಣಿಮೆ ರಾತ್ರಿಯಲಿ
ಗುಲಾಬಿ ಚಹರೆಯ ಮೇಲೆ
ಕಿರಣ ಬಿದ್ದಂತಾಯಿತು
ಕಾರಣವಿಲ್ಲದೆ ಮುನಿಸಿಕೊಂಡು
ನಿನ್ನ ಹಣೆಯ ಮೇಲೆ
ಹೀಗೆ ಸುಕ್ಕು ಮೂಡಿತು
ನನ್ನೊಲವೆ ಇದು ನಿನ್ನ
ತಿರಸ್ಕಾರವೇ ನಡತೆಯಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...
ಮೂಲ : ಹರೀಶ್ ಶೆಟ್ಟಿ, ಶಿರ್ವ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಮೆಹಬೂಬ್ ಕಿ ಮೆಹಂದಿ
मेरे दीवानेपन की भी दवां नहीं
मैने जाने क्या सुन लिया, तू ने तो कुछ कहा नहीं
मैं ये समझा मेरे दिल की कोई हसरत निकल गई
तूने देखा मुझे ऐसे के तबियत मचल गई
वर्ना तेरे सर की कसम आदमी मैं बुरा नही
बेअदब हूँ मैं दीवाना इस कदर तू खफा हुई
छू लिया क्यो बदन तेरा, तोबा कैसी ख़ता हुई
सारी दुनिया में कोई मेरे लायक सज़ा नही
चाँदनी रात में जैसे रूख-ये-गुल पे किरण पड़ी
बेसबब रूठकर तेरे माथेपर यूँ शिकंद पड़ी
मेरे मेहबूब ये तेरी बेरूख़ी है अदा नही
https://www.youtube.com/watch?v=ReBkow2X9yQ
ಕಿಶೋರ್ ದಾ once again ultimate.
ReplyDeleteತುಂಬಾ ಧನ್ಯವಾದಗಳು ಬದರಿ ಸರ್.
ReplyDelete