Thursday, February 19, 2015

ಮನಸ್ಸು ಬಂದಾಗ ಹೊಸ ಪ್ರಪಂಚ ನೆಲೆಸುತ್ತಾರೆ ಜನರು

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಮನಸ್ಸು ಬಂದಾಗ ಹೊಸ ಪ್ರಪಂಚ ನೆಲೆಸುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಯಾರಿಗೆ ನೆನಪಿರುತ್ತದೆ
ಕಳೆದು ಹೋದ ಜಗತ್ತಿನ ಆಟ
ಜಡಗೊಳ್ಳುತ್ತದೆ ಒಲವು
ಸೋಲುತ್ತದೆ ನಿಷ್ಠ
ಈಗ ಪ್ರೀತಿ ಅಂದರೆ ಏನು
ಕೇವಲ ಒಂದು ವೈವಾಟ
ಕಳೆದೋದ ನೆನಪ ಶವವನ್ನು ಹೊತ್ತುಕೊಂಡು ತಿರುಗಿಕೊಂಡೆವು
ಇದು ನಮ್ಮದೇ ಮರುಳಾಟ
ಇಲ್ಲದಿದ್ದರೆ ಜೀವಿಸಲು ಎಲ್ಲವನ್ನೂ ಮರೆತು ಹೋಗುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಹೀಗೆಯೂ ಜನರಿದ್ದರು
ನಿಷ್ಠೆ ಅವರ ಸೊತ್ತಾಗಿತ್ತು
ಅನ್ಯರ ಮನಸ್ಸಿಗೆ ಬೇಜಾರವಾಗಬಹುದೆಂಬ
ಅರಿವು ಅವರಿಗಿತ್ತು
ಈಗಂತೂ ಕಲ್ಲಿನ ಮೂರತಿ ಎಲ್ಲವೂ
ಭಾವನೆ ಇಲ್ಲ, ಇಲ್ಲ ದುಃಖದ ಅರಿವು
ಜಗ ಈಗ ಎಲ್ಲಿ ಅಂತಹ
ಈ ಹೃದಯ ಮೆಚ್ಚುವಂತಹ
ಈಗ ಕೇವಲ ತನ್ನ ಉದ್ದೇಶಗೋಸ್ಕರ ಸಮರ್ಪಣೆ ನೀಡುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಮೂಲ :ಸಾಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ದಾಗ್
jab bhi ji chahe nayi duniya basa lete hai log
jab bhi ji chahe nayi duniya basa lete hai log
ek chehre pe kayi chehre laga lete hai log
ek chehre pe kayi chehre laga lete hai log
jab bhi ji chahe nayi duniya basa lete hai log
yaad rahta hai kise guzre zamane ka chalan
ek chehre pe kayi chehre laga lete hai log
ek chehre pe kayi chehre laga lete hai log
varna jine ke liye sab kuchh bhula lete hai log
yaad rahta hai kise
sard pad jati hai chahat haar jati hai lagan
hum hi nadan the jo odha biti yaado ka kafan
ab mohabbat bhi hai kya ik tijarat ke siva
jane wo kya log the
varna jine ke liye sab kuchh bhula lete hai log ek chehre pe kayi chehre laga lete hai log jane wo kya log the jinko wafa ka paas tha dusre ke dil pe kya guzregi ye ehsaas tha
jab bhi ji chahe nayi duniya basa lete hai log
ab hai patthar ke sanam jinko ehsaas na ho wo zamana ab kaha jo ahal-e-dil ko raas tha ab to matlab ke liye naam-e-wafa lete hai log ab to matlab ke liye naam-e-wafa lete hai log
ek chehre pe kayi chehre laga lete hai log
ek chehre pe kayi chehre laga lete hai log

1 comment:

  1. ಲತಾಜೀ ಜಹಳ ಚೆನ್ನಾಗಿ ಹಾಡಿದ್ದಾರೆ.

    'ಈಗಂತೂ ಕಲ್ಲಿನ ಮೂರತಿ ಎಲ್ಲವೂ
    ಭಾವನೆ ಇಲ್ಲ, ಇಲ್ಲ ದುಃಖದ ಅರಿವು'
    ಉತ್ತಮ ಭಾವಾನುವಾದ.

    ದಾಗ್ ಚಿತ್ರಕ್ಕೆ ವಿ. ಬಾಬಾಸಾಹೇಬರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...