Tuesday, February 10, 2015

ಇದು ಇಳಿಜಾರು

ಇದು ಇಳಿಜಾರು
ಸ್ವಲ್ಪ ನಿಧಾನ
ಮೇಲೆ ಹೋದಂತೆ
ಹಿಂದಿನಿಂದ
ದೂಡುವವರ ಸಂಖ್ಯೆ ಹೆಚ್ಚು

ಇದು ಇಳಿಜಾರು
ಸ್ವಲ್ಪ ನಿಧಾನ
ಮೇಲ್ತುದಿ ಸೇರಿದ್ದು ನಿನ್ನ ಸಾಮರ್ಥ್ಯ ಇರಬಹುದು
ಅಥವಾ ಅದು ನಿನ್ನ ಅದೃಷ್ಟವೂ ಇರಬಹುದು
ಇನ್ನು ಈ ಸುಂದರ ಅವಕಾಶವನ್ನು ಕಳೆದುಕೊಳ್ಳದಿರು

ಇದು ಇಳಿಜಾರು
ಸ್ವಲ್ಪ ನಿಧಾನ
ಅವಸರ ಬೇಡ
ಗಡಿಬಿಡಿ ಬೇಡ
ಸಾವಕಾಶದಿಂದ ಮುಂದಿನ ಹೆಜ್ಜೆ ಇಡು

ಇದು ಇಳಿಜಾರು
ಸ್ವಲ್ಪ ನಿಧಾನ
ಜನರ ವಿಶ್ವಾಸದ ಏಣಿ
ಮೇಲೆ ಹತ್ತಲು ನಿನಗೆ ಸಹಾಯವಾಗಿದೆ
ಅವರ ನಂಬಿಕೆ ಕಳೆಯದಿರು

ಇದು ಇಳಿಜಾರು
ಸ್ವಲ್ಪ ನಿಧಾನ
ಮಾತು ಬೇಡ ಭರವಸೆ ಬೇಡ
ನಿನ್ನ ಕಾರ್ಯ ನುಡಿಯಲಿ
ಜನರ ನಂಬಿಕೆ ಫಲಿಸಲಿ

ಇದು ಇಳಿಜಾರು
ಸ್ವಲ್ಪ ನಿಧಾನ
ಸ್ವಲ್ಪ ನಿಧಾನ
ಸ್ವಲ್ಪ ನಿಧಾನ...

by ಹರೀಶ್ ಶೆಟ್ಟಿ,ಶಿರ್ವ 

1 comment:

  1. ನಾಯಕರಿಗೆ ಕಿವಿ ಮಾತಿನಂತಿದೆ.
    ರಾಮ ಲೀಲಾ ಮೈದಾನದಲ್ಲಿ ಪ್ರಮಾಣವಚನಕ್ಕೆ ಅಣಿಯಾದ
    ಆಮ್ ಆದ್ಮಿ ಇದನ್ನು ಮನನ ಮಾಡಿಕೊಳ್ಲಿ ಸದಾ...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...