Thursday, February 26, 2015

ಇನಿಯ ವೈರಿಯಾಗಿದ್ದಾನೆ ನನ್ನ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಇನಿಯ ವೈರಿಯಾಗಿದ್ದಾನೆ ನನ್ನ
ಪತ್ರವಾದರೆ ಪ್ರತಿಯೊಬ್ಬರೂ ಓದಬಹುದು
ಭಾಗ್ಯ ಓದಲು ಯಾರಿಗೂ ಆಗದು
ವಿಧಿಯೂ ವೈರಿಯಾಗಿದೆ ನನ್ನ!!
ಇನಿಯ ವೈರಿಯಾಗಿದ್ದಾನೆ ನನ್ನ...

!!ಹೋಗಿ ನೆಲೆಸಿದ್ದಾನೆ
ಇನಿಯ ಪರದೇಶದಲಿ
ಪರ ಸ್ತ್ರೀಯ ಮೋಹದಲಿ
ಇಲ್ಲ ಸಂದೇಶ ಸುದ್ಧಿಯೂ ಇಲ್ಲದಾಗಿದೆ
ಋತು ಬರುತ್ತಿದೆ ಹೋಗುತ್ತಿದೆ
ಮುಳುಗುತ್ತಿದ್ದೇನೆ ನಾನು ಮಧ್ಯ ಸುಳಿಯಲಿ
ವಯಸ್ಸು ಮೀರಿ ಹೋಗುತ್ತಿದೆ ನನ್ನ!!
ಇನಿಯ ವೈರಿಯಾಗಿದ್ದಾನೆ ನನ್ನ...

!!ಖಾಲಿ ಶಯನ ಬಂಜೆ ತೊಟ್ಟಿಲು
ವೇದನೆ ಯಾರಿಗೂ ತಿಳಿಯದು
ಮುದ್ದು ಪ್ರೀತಿ ಹೊರಳಾಡುತ್ತಿದೆ
ಮಮತೆ ಕಣ್ಣೀರು ಸುರಿಸುತ್ತಿದೆ
ಯಾರಿಲ್ಲ ಈ ತೀರದಲಿ ನನ್ನ
ಯಾರಿಲ್ಲ ಆ ತೀರದಲ್ಲೂ!!
ಇನಿಯ ವೈರಿಯಾಗಿದ್ದಾನೆ ನನ್ನ...

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ತೀಸ್ರಿ ಕಸಮ್


सजनवा बैरी हो गये हमार
चिठियाँ हो तो, हर कोई बाचे, भाग ना बाचे कोई
करमवा बैरी हो गये हमार

जाये बसे परदेस सजनवा, सौतन के भरमाये
ना संदेस ना कोई खबरीया, रुत आये रुत जाये
डूब गये हम बीच भंवर में, कर के सोलाह पार
सजनवा बैरी हो गये हमार

सुनी सेज गोद मोरी सुनी, मरम ना जाने कोई
छटपट तड़पे प्रीत बिचारी, ममता आँसू रोये
ना कोई इस पार हमारा, ना कोई उस पार
सजनवा बैरी हो गये हमार
https://www.youtube.com/watch?v=HZfmdChsFnI

Wednesday, February 25, 2015

ಒಪ್ಪಿದೆ ನೀನು ಬಲು ಸುಂದರ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಒಪ್ಪಿದೆ ನೀನು ಬಲು ಸುಂದರ
ಅಷ್ಟೊಂದು ವಿರೂಪ ನಾನೂ ಅಲ್ಲ
ನೋಡು ಎಂದಾದರೂ ಪ್ರೀತಿಯಿಂದ
ಯಾಕೆ ಭಯ ಒಪ್ಪಿಗೆಯಿಂದ!!
ಒಪ್ಪಿದೆ ನೀನು...

!!ಅರಿವಾಗುವುದಿಲ್ಲ ಪ್ರಿಯೆ
ನೀ ನನ್ನಿಂದ ಖುಷಿಯಲ್ಲಿದೆಯೋ
ಅಥವಾ ಮುನಿಸಿಕೊಂಡಿದೆಯೋ
ತೀಕ್ಷ್ಣ ದೃಷ್ಟಿ, ಶೈಲಿ ಚಂದ
ಯಾಕೆ ಇರುವೆ ಬೇಸರದಿಂದ!!
ನೋಡು ಎಂದಾದರೂ...

!!ಒಂದೇ ವೇಳೆ ನಾಲ್ಕು ಹೆಜ್ಜೆ
ಜತೆ ನೀಡಿದರೆ ನೀನು ನನ್ನ
ಸುಲಭವಾಗುವುದು ಈ ಪಯಣ
ಬಿಟ್ಟು ಬಿಡು ಇನ್ನು ಜಗದ ಭಯ
ಮುರಿಯದಿರು ಹೃದಯ ತಿರಸ್ಕಾರದಿಂದ!!
ನೋಡು ಎಂದಾದರೂ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಟೂಟೆ ಖಿಲೋನೆ

माना हो तुम बेहद हसीं, ऐसे बुरे हम भी नही
देखो कभी तो प्यार से, डरते हो क्यो इकरार से

खुलता नहीं कुछ दिलरुबा, तुम हम से खुश हो या हो खफा
तिरछी नज़र, तीखी अदा, लगते हो क्यो बेजार से
देखो कभी तो प्यार से, डरते हो क्यो इकरार से

तुम दो कदम दो साथ अगर, आसान हो जाये सफ़र
छोड़ो भी ये दुनियाँ का ड़र, तोडो ना दिल इनकार से
देखो कभी तो प्यार से, डरते हो क्यो इकरार से
https://www.youtube.com/watch?v=Pu3c5WntSgo

Tuesday, February 24, 2015

ನಿನ್ನ ಸಣ್ಣದೊಂದು ತಪ್ಪಿನಿಂದಾಗಿ

ಚಿತ್ರಕೃಪೆ : Google 
ಹಾಡಿನ ಕೊಂಡಿ: You Tube 
ನಿನ್ನ ಸಣ್ಣದೊಂದು ತಪ್ಪಿನಿಂದಾಗಿ
ಎಲ್ಲಾ ಉದ್ಯಾನ ನಾಶವಾಯಿತು!
ಇನ್ನು ಮತ್ತೊಮ್ಮೆ ಘಮಘಮಿಸಬಹುದೇ ಹೂವು?
ಇನ್ನು ಮತ್ತೊಮ್ಮೆ ವಸಂತ ಬರಬಹುದೇ?
ನಿನ್ನ ಸಣ್ಣದೊಂದು...

ಎಂಥ ಪದ್ಧತಿ ಇದು?  
ಯಾರೋ ಮಾಡುವುದು
ಯಾರೋ ಅನುಭವಿಸುವುದು
ನ್ಯಾಯ ಅಲ್ಲ ಅನ್ಯಾಯ ಇದು
ದೋಷಿ ಬದುಕಿಕೊಂಡಿರುವುದು
ನಿರ್ದೋಷಿ ಸಾಯುವುದು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ಕತ್ತಲೆಯನ್ನು ನೀಡಿ
ನೀನು ಇವನಿಗೆ
ಕಸಿದುಕೊಂಡೆ ನಯನದ ನಗುವನ್ನು
ಸಂಧ್ಯಾ ಮುಂಜಾವು
ಹಗಲು ಇರುಳು
ಇವನಿಗೆ ಒಂದೇ ಸಮಾನ ಇನ್ನು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ನಿನ್ನ ಚಲನೆಯ
ಬಿರುಗಾಳಿಯಿಂದ
ನೋಡು ಎಷ್ಟು ಮನೆ ಕಸಿದೋಯಿತು
ಚೂರುಚೂರಾಯಿತು
ಸಂಬಂಧಗಳು
ಭಾಗಿ ಬದುಕಿನ ಬಿಟ್ಟೋಯಿತು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ಮೂಲ : ಗೌಹರ್ ಕಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಶಿಕ್ಷಾ
Teri Chhoti Si Ek Bhuul Ne Saaraa Gulshan Jalaa Diyaa
Kyaa MahakeNge Phir Phuul Kabhi, Kyaa Phir Se BahaareN AaeNgi
Jaane KahaaN Ki Rit Hai Ye, Koi Kare Aur Koi Bhare
Nyaaya NahiN Anyaaya Hai Ye, Doshi Ji_E, Nirdosh Mare
Sun Le Tuu Ai QaafilTujhase Kahe Teraa Dil
Teri Chhoti Si 
Tuune ANdhere De Ke Ise, Chhin Li NainoN Ki Muskaan
SaaNjh Savere, Raat Aur Din, Isake Lie Ek Samaan
Sun Le Tuu Ai Qaafil, Tujhase Kahe Teraa Dil
Teri Chhoti Si 
Tere Chalan Ki AaNdhi Ne, Dekh Le Kitane Ghar Luute
Bikhar Gae Rishte Naate, Jivan Ke Saathi Chhuute
Sun Le Tuu Ai Qaafil, Tujhase Kahe Teraa Dil
Teri Chhoti Si
https://www.youtube.com/watch?v=kwVlCrBGKKs

Monday, February 23, 2015

ಒಂದು ಮುದ್ದಾದ ಬಯಕೆ ಇದೆ ನನ್ನಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಹೃದಯದಲಿ ಪ್ರೀತಿಯ ಅಂಕುರ ಹುಟ್ಟಲಿ
ಮನಸ್ಸಲಿ ಒಲವಿನ ಸುಮಗಳು ಅರಳಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಸಮಯ ನನ್ನ ಮೋಹಕ ಕನಸಲಿ ಕಳೆಯಲಿ
ನಿನ್ನ ಕಂಗಳಲಿ ನನ್ನ ಚಿತ್ರ ಸದಾ ಹೊಳೆಯಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಮುಖದಲಿ ಲಜ್ಜೆ ಮಿಶ್ರಿತ ನಗು ತೇಲಿ ಬರಲಿ
ಅನುರಾಗದ ಹರ್ಷ ಧಾರೆ ಹಾಡಾಗಿ ಹರಿಯಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಭಾವನೆ ನನ್ನ ಕವಿತೆ ಬರೆಯಲು ಪ್ರೋತ್ಸಾಹಿಸಲಿ
ಭಾವಗಳ ಬೆಳಕು ಕಾಗದದ ಹಾಳೆಯಲಿ ಕಂಡು ಬರಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

by ಹರೀಶ್ ಶೆಟ್ಟಿ, ಶಿರ್ವ 

Thursday, February 19, 2015

ಮನಸ್ಸು ಬಂದಾಗ ಹೊಸ ಪ್ರಪಂಚ ನೆಲೆಸುತ್ತಾರೆ ಜನರು

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಮನಸ್ಸು ಬಂದಾಗ ಹೊಸ ಪ್ರಪಂಚ ನೆಲೆಸುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಯಾರಿಗೆ ನೆನಪಿರುತ್ತದೆ
ಕಳೆದು ಹೋದ ಜಗತ್ತಿನ ಆಟ
ಜಡಗೊಳ್ಳುತ್ತದೆ ಒಲವು
ಸೋಲುತ್ತದೆ ನಿಷ್ಠ
ಈಗ ಪ್ರೀತಿ ಅಂದರೆ ಏನು
ಕೇವಲ ಒಂದು ವೈವಾಟ
ಕಳೆದೋದ ನೆನಪ ಶವವನ್ನು ಹೊತ್ತುಕೊಂಡು ತಿರುಗಿಕೊಂಡೆವು
ಇದು ನಮ್ಮದೇ ಮರುಳಾಟ
ಇಲ್ಲದಿದ್ದರೆ ಜೀವಿಸಲು ಎಲ್ಲವನ್ನೂ ಮರೆತು ಹೋಗುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಹೀಗೆಯೂ ಜನರಿದ್ದರು
ನಿಷ್ಠೆ ಅವರ ಸೊತ್ತಾಗಿತ್ತು
ಅನ್ಯರ ಮನಸ್ಸಿಗೆ ಬೇಜಾರವಾಗಬಹುದೆಂಬ
ಅರಿವು ಅವರಿಗಿತ್ತು
ಈಗಂತೂ ಕಲ್ಲಿನ ಮೂರತಿ ಎಲ್ಲವೂ
ಭಾವನೆ ಇಲ್ಲ, ಇಲ್ಲ ದುಃಖದ ಅರಿವು
ಜಗ ಈಗ ಎಲ್ಲಿ ಅಂತಹ
ಈ ಹೃದಯ ಮೆಚ್ಚುವಂತಹ
ಈಗ ಕೇವಲ ತನ್ನ ಉದ್ದೇಶಗೋಸ್ಕರ ಸಮರ್ಪಣೆ ನೀಡುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಮೂಲ :ಸಾಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ದಾಗ್
jab bhi ji chahe nayi duniya basa lete hai log
jab bhi ji chahe nayi duniya basa lete hai log
ek chehre pe kayi chehre laga lete hai log
ek chehre pe kayi chehre laga lete hai log
jab bhi ji chahe nayi duniya basa lete hai log
yaad rahta hai kise guzre zamane ka chalan
ek chehre pe kayi chehre laga lete hai log
ek chehre pe kayi chehre laga lete hai log
varna jine ke liye sab kuchh bhula lete hai log
yaad rahta hai kise
sard pad jati hai chahat haar jati hai lagan
hum hi nadan the jo odha biti yaado ka kafan
ab mohabbat bhi hai kya ik tijarat ke siva
jane wo kya log the
varna jine ke liye sab kuchh bhula lete hai log ek chehre pe kayi chehre laga lete hai log jane wo kya log the jinko wafa ka paas tha dusre ke dil pe kya guzregi ye ehsaas tha
jab bhi ji chahe nayi duniya basa lete hai log
ab hai patthar ke sanam jinko ehsaas na ho wo zamana ab kaha jo ahal-e-dil ko raas tha ab to matlab ke liye naam-e-wafa lete hai log ab to matlab ke liye naam-e-wafa lete hai log
ek chehre pe kayi chehre laga lete hai log
ek chehre pe kayi chehre laga lete hai log

Tuesday, February 17, 2015

ಯಾರು ಇದನ್ನೇಗೆ ಹೇಳಲಿ ಅವನು ಏಕಾಂಗಿ ಯಾಕೆ ?

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಯಾರು ಇದನ್ನೇಗೆ ಹೇಳಲಿ ಅವನು ಏಕಾಂಗಿ ಯಾಕೆ ?
ನಮ್ಮದಾಗಿ ಇದ್ದವರು, ಅವರೇ ಇನ್ಯಾರ ಯಾಕೆ?
ಇದೇ ಪ್ರಪಂಚವೆಂದಾದರೆ ಹೀಗೆ ಈ ಪ್ರಪಂಚ ಯಾಕೆ ?
ಇದೇ ಆಗುತ್ತಿದೆಯೆಂದಾದರೆ ಇದೇ ಆಗುತ್ತಿದೆ ಯಾಕೆ ?

ಸ್ವಲ್ಪವೊಂದು ಕೈಯನ್ನು ನೀಡಿದರೆ, ಹಿಡಿಯುತ್ತಾರೆ ಸೆರಗನ್ನು
ಅವರ ಎದೆಯಲಿ ಸ್ಪಂದಿಸುತ್ತದೆ ಹೃದಯ ಮಿಡಿತ ನಮ್ಮದು
ಇಷ್ಟೊಂದು ನಂಟಿದ್ದರೆ ಈ ಅಂತರವಿದೆ ಯಾಕೆ?

ಪ್ರೀತಿಯ ಭಗ್ನತೆಯಿಂದ ಹೊರ ಬಂದಿಲ್ಲ ಈ ತನಕ ಯಾರೂ
ಒಂದು ಪಾಳು ಮನೆಯ ಕದ ತಟ್ಟುತ್ತಿರುತ್ತಾರೆ ಯಾರೋ
ಮುರಿದ ಆಸೆ ಪುನಃ ಜಾಗೃತವಾಗುತ್ತದೆ ಯಾಕೆ?

ನೀನು ಸುಖದ ಅಥವಾ ಇದನ್ನೇಳು ದುಃಖದ ನಂಟು
ಹೇಳುತ್ತಾರೆ ಪ್ರೀತಿಯ ನಂಟು ಅಂದರೆ ಅದು ಜನುಮದ ನಂಟು
ಜನುಮದ ನಂಟಾದರೆ ಇದು ಬದಲಾಗುವುದು ಯಾಕೆ ?

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಜಗಜಿತ್ ಸಿಂಗ್
ಸಂಗೀತ : ಕುಲ್ದಿಪ್ ಸಿಂಗ್
ಚಿತ್ರ : ಅರ್ಥ್

Koi Ye Kaise Bataaye Ke Wo Tanha KyooN Hai
Wo Jo Apna Thaa Wahi Aur Kisi Ka KyooN Hai
Yahi Duniya Hai To Phir Aisee Ye Duniya KyooN Hai
Yahi Hota Hai To Aakhir Yahi Hota KyooN Hai

Ik Zara Haath BaDha DeN To PakaD Le Daaman
Uske Seene MeiN Sama Jaaye Hamari DhaDkan
Itni Kurbat Hai To Phir Faaslaa Itna KyooN Hai

Dil-E-Barbaad Se Nikla NahiN Ab Tak Koi
Ik Loote Ghar Pe Diya Karta Hai Dastak Koi
Aas Jo TooT Gayee Phir Se Bandhaata KyooN Hai

Tum Asarrat Ka KahO Ya Ise Gham Ka Rishta
Kehte Hain Pyaar Ka Rishta Hai Janam Ka Rishta
Hai Janam Ka Jo Ye Rishta To Badalta KyooN Hai
https://www.youtube.com/watch?v=K-oUL81qe50

Saturday, February 14, 2015

ನನ್ನ ಪ್ರೀತಿಯೂ ಶಾಶ್ವತವಾಗಿರುವುದು

ಚಿತ್ರಕೃಪೆ:Google 
ಹಾಡಿನ ಕೊಂಡಿ : You Tube 
!!ನನ್ನ ಪ್ರೀತಿಯೂ ಶಾಶ್ವತವಾಗಿರುವುದು
ಸದಾ ಇತ್ತು ಸದಾ ಇರುವುದು
ಹಂಬಲಿಸಿ ಹಂಬಲಿಸಿ ಇದನ್ನೇ ನುಡಿಯುವುದು
ಸದಾ ಇತ್ತು ಸದಾ ಇರುವುದು!!

!!ನಿನ್ನಂತೆ ಯಾರಿಲ್ಲ ಇಡೀ ಜಗದಲೂ
ನಿನ್ನನ್ನೇ ಪ್ರೀತಿಸಿದೆ ನನ್ನ ಈ ದೃಷ್ಟಿಯೂ
ನಿನ್ನನ್ನು ಆರಿಸಿದೆ ನಿನ್ನನ್ನೇ ಆರಿಸುವುದು
ಸದಾ ಇತ್ತು ಸದಾ ಇರುವುದು!!

!!ಹೃದಯದಲಿ ಹತ್ತಿದ ಈ ಅಗ್ನಿಯೂ
ಇದುವೇ ಗಮ್ಯದ ಬೆಳಕಾಗಿರುವುದು
ಇದೆಂದೂ ಆರಲಿಲ್ಲ ಇದೆಂದೂ ಆರಲಾರದು
ಸದಾ ಇತ್ತು ಸದಾ ಇರುವುದು!!

!!ಒಂದು ವೇಳೆ ನಿನ್ನ ಮಡಿಲಲಿ ಜೀವ ಬಿಟ್ಟರೆ
ಆವಾಗ ಸಾವು ಎಷ್ಟು ಸುಂದರವಾಗಿರುವುದು
ಚಿತೆಯಲಿ ಉರಿದು ಸಹ ನಾಶವಾಗದು
ಸದಾ ಇತ್ತು ಸದಾ ಇರುವುದು!!

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಜಾನ್ವರ್

meri mohabbat jawan rahegi sada rahi hai sada rahegi meri mohabbat jawan rahegi sada rahi hai sada rahegi tadap tadap kar yahi kahegi sada rahi hai sada rahegi na tumsa koyi jamane bhar me o o o na tumsa koyi jamane bhar me tumhi ko chaha meri najar ne tumhi ko chaha meri najar ne tumhe chuna hai tumhe chunegi sada rahi hai sada rahegi meri mohabbat jawan rahegi sada rahi hai sada rahegi jo aag dil me lagi huyi hai o o o jo aag dil me lagi huyi hai yehi to manjil ki roshni hai yehi to manjil ki roshni hai na ye bujhi hai, na yeh bujhegi sada rahi hai sada rahegi meri mohabbat jawan rahegi sada rahi hai sada rahegi tumhare pahalu me gar mare ham ho o o tumhare pahalu me gar mare ham toh maut kitni hasin hogi toh maut kitni hasin hogi chitah me jal kar bhi na mitegi sada rahi hai sada rahegi meri mohabbat jawan rahegi sada rahi hai sada rahegi

Thursday, February 12, 2015

ನಲ್ಲ ಹೀಗೆ ನನ್ನ ಹೃದಯದಲಿ ನೆಲೆಸಿದ್ದಾರೆ ಅಂದರೆ

ಚಿತ್ರಕೃಪೆ ; Google
ಹಾಡಿನ ಕೊಂಡಿ : You Tube
!!ನಲ್ಲ ಹೀಗೆ ನನ್ನ ಹೃದಯದಲಿ ನೆಲೆಸಿದ್ದಾರೆ ಅಂದರೆ
ನಾ ನನ್ನ ಮೈ ಮನಸ್ಸಿನ ಅರಿವು ಕಳೆದುಕೊಂಡೆ
ಪ್ರತಿಯೊಂದು ಸದ್ದಿನಿಂದ ತಿಳಿದೆ ಅವರು ಬಂದರೆಂದು
ಬೇಗನೆ ಸೆರಗಿನಿಂದ ಮುಖವನ್ನು ಅಡಗಿಸಿಕೊಂಡೆ!!
ನಲ್ಲ ಹೀಗೆ ನನ್ನ...

!!ನನ್ನ ಅಂಗಳದಲಿ ಮೂಡಲ ಗಾಳಿ ಬೀಸಿದಾಗ
ನನ್ನ ಬಾಗಿಲ ಸಂಕಲೆ ತೆರೆದೋಯಿತು
ನಾನೆನಿಸಿದೆ ನನ್ನ ಇನಿಯ ಬಂದರೆಂದು
ಬೇಗನೆ ಹೂವಿನ ಹಾಸಿಗೆಯಲಿ ಕುಳಿತುಕೊಂಡೆ!!
ನಲ್ಲ ಹೀಗೆ ನನ್ನ...

!!ನಾ ಕುಂಕುಮದಿಂದ ನನ್ನ ಹಣೆ ತುಂಬಿಸಿಕೊಂಡೆ
ನಾ ಅವರಿಗೋಸ್ಕರ ಸಿಂಗಾರ ಮಾಡಿಕೊಂಡೆ
ಅವರ ದೃಷ್ಟಿ ಬೀಳುವುದೆಂಬ ಭಯದಿಂದ
ಬೇಗನೆ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡೆ!!
ನಲ್ಲ ಹೀಗೆ ನನ್ನ...

ಮೂಲ : ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗೀತಾ ದತ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಸಾಹಿಬ್ ಬಿವಿ ಔರ್ ಗುಲಾಮ್


पिया ऐसो जिया में समाय गयो रे
के मैं तन मन की सूद बूद गवाँ बैठी
हर आहट पे समझी वो आय गयो रे
झट घूँघट में मुखड़ा छुपा बैठी

मोरे अंगना में जब पूरवय्या चली
मोरे द्वारे की खूल गयी किवाड़ियाँ
मैने जाना के आ गये सावारियाँ मोरे
झट फूलन की सजीया पे जा बैठी

मैने सेंदूर से माँग अपनी भरी
रूप सैय्या के कारण सजाया
इस दर से के पी की नज़र ना लगे
झट नैनन में कजरा लगा बैठी
https://www.youtube.com/watch?v=IoCZJqHeJMk

ಬಾ, ಪ್ರಿಯತಮೆ ಬಾ

ಚಿತ್ರಕೃಪೆ: Google
ಹಾಡಿನ ಕೊಂಡಿ : You Tube 

ರಫಿ :
!!ಬಾ, ಪ್ರಿಯತಮೆ ಬಾ
ಚಂದ್ರದ ಆಚೆಗೆ ಬಾ
ಲತಾ :
ನಾನು ಸಿದ್ಧವಾಗಿರುವೆ, ಬಾ!!-೨

ಲತಾ :
!!ಬಾ, ಮರೆಯಾಗುವ
ತಾರೆಗಳಲಿ ಎಲ್ಲೋ ನಾವು-೨
ಬಿಟ್ಟು ಬಿಡುವ ಇಂದು
ಈ ಜಗತ್ತನು ಈ ಭೂಮಿಯನು ನಾವು!!
ರಫಿ:
ಬಾ, ಪ್ರಿಯತಮೆ ಬಾ...

ಲತಾ:
!!ನಾನು ನಶೆಯಲ್ಲಿದ್ದೇನೆ
ಹಿಡಿದಿಡು ನನ್ನನ್ನು ನೀನು-೨
ನಿದ್ರೆ ಬರುತ್ತಿದೆ
ಎಬ್ಬಿಸು ನನ್ನನ್ನು ನೀನು !!
ರಫಿ:
ಬಾ, ಪ್ರಿಯತಮೆ ಬಾ...

ಲತಾ:
!!ಜೀವನ ಮುಗಿದರೂ
ಒಂದು ವೇಳೆ ನಮ್ಮ-೨
ಎಂದೂ ಮುಗಿಯದಿರಲಿ
ಪಯಣ ಒಲವಿನ ನಮ್ಮ!!
ರಫಿ:
ಬಾ, ಪ್ರಿಯತಮೆ ಬಾ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ಪಾಕೀಜಾ

(chalo dildaar chalo, chaand ke paar chalo
ham hai tayyaar chalo) - (2)

aao kho jaaye sitaaro me kahee - (2)
chhod de aaj yeh duniya yeh jamin, duniya yeh jamin

chalo dildaar chalo, chaand ke paar chalo
ham hai tayyaar chalo
ham nashe me hai sambhaalo hame tum - (2)
nind aatee hai jaga lo hame tum, jaga lo hame tum

chalo dildaar chalo, chaand ke paar chalo
ham hai tayyaar chalo
oh oh, oh oh, oh oh, oh oh oh
jindagee khatm bhee ho jaaye agar - (2)
naa kabhee khatm ho ulfat kaa safar, ulfat kaa safar

(chalo dildaar chalo, chaand ke paar chalo
ham hai tayyaar chalo) - (3)
https://www.youtube.com/watch?v=OPlruJiaAIE

Wednesday, February 11, 2015

ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ

ಚಿತ್ರಕೃಪೆ : GOOGLE 
ಹಾಡಿನ ಕೊಂಡಿ :  YOU TUBE

!!ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ
ಅದೇನು ನಾನು ಕಕೇಳಿದ್ದೇನೋ
ನೀನಂತೂ ಏನನ್ನು ಹೇಳಲಿಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

!!ನಾನಿದು ಅರ್ಥೈಸಿದೆ ನನ್ನ ಮನಸ್ಸಿನ
ಯಾವುದೇ ಬಯಕೆ ಈಡೇರಿತೆಂದು
ನೀ ನನ್ನನೀಗೆ ನೋಡಿದೆ ಅಂದರೆ
ಮನಸ್ಸು ಚಂಚಲವಾಯಿತಂದು
ಅನ್ಯಥಾ ನಿನ್ನಾಣೆ
ನಾನಷ್ಟು ಕೆಟ್ಟ ಮನುಷ್ಯನಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

!!ಅಸಭ್ಯ ನಾನು ಮರುಳು
ಅದೆಷ್ಟು ನಿನಗೆ ಅಸಮಧಾನವಾಯಿತು
ಸ್ಪರ್ಶಿಸಿದೆ ನಿನ್ನ ಮೈಯನ್ನು
ಅಯ್ಯೋ ಇದೆಂಥ ತಪ್ಪಾಯಿತು
ಇಡೀ ಜಗತ್ತಲ್ಲಿ ಇದಕ್ಕೆ
ಯಾವುದೇ ಯೋಗ್ಯ ಶಿಕ್ಷೆಯಿಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

!!ಹುಣ್ಣಿಮೆ ರಾತ್ರಿಯಲಿ
ಗುಲಾಬಿ ಚಹರೆಯ ಮೇಲೆ
ಕಿರಣ ಬಿದ್ದಂತಾಯಿತು
ಕಾರಣವಿಲ್ಲದೆ ಮುನಿಸಿಕೊಂಡು
ನಿನ್ನ ಹಣೆಯ ಮೇಲೆ
ಹೀಗೆ ಸುಕ್ಕು ಮೂಡಿತು
ನನ್ನೊಲವೆ ಇದು ನಿನ್ನ
ತಿರಸ್ಕಾರವೇ ನಡತೆಯಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

ಮೂಲ : ಹರೀಶ್ ಶೆಟ್ಟಿ, ಶಿರ್ವ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಮೆಹಬೂಬ್ ಕಿ ಮೆಹಂದಿ

मेरे दीवानेपन की भी दवां नहीं
मैने जाने क्या सुन लिया, तू ने तो कुछ कहा नहीं

मैं ये समझा मेरे दिल की कोई हसरत निकल गई
तूने देखा मुझे ऐसे के तबियत मचल गई
वर्ना तेरे सर की कसम आदमी मैं बुरा नही

बेअदब हूँ मैं दीवाना इस कदर तू खफा हुई
छू लिया क्यो बदन तेरा, तोबा कैसी ख़ता हुई
सारी दुनिया में कोई मेरे लायक सज़ा नही

चाँदनी रात में जैसे रूख-ये-गुल पे किरण पड़ी
बेसबब रूठकर तेरे माथेपर यूँ शिकंद पड़ी
मेरे मेहबूब ये तेरी बेरूख़ी है अदा नही

https://www.youtube.com/watch?v=ReBkow2X9yQ

Tuesday, February 10, 2015

ಇದು ಇಳಿಜಾರು

ಇದು ಇಳಿಜಾರು
ಸ್ವಲ್ಪ ನಿಧಾನ
ಮೇಲೆ ಹೋದಂತೆ
ಹಿಂದಿನಿಂದ
ದೂಡುವವರ ಸಂಖ್ಯೆ ಹೆಚ್ಚು

ಇದು ಇಳಿಜಾರು
ಸ್ವಲ್ಪ ನಿಧಾನ
ಮೇಲ್ತುದಿ ಸೇರಿದ್ದು ನಿನ್ನ ಸಾಮರ್ಥ್ಯ ಇರಬಹುದು
ಅಥವಾ ಅದು ನಿನ್ನ ಅದೃಷ್ಟವೂ ಇರಬಹುದು
ಇನ್ನು ಈ ಸುಂದರ ಅವಕಾಶವನ್ನು ಕಳೆದುಕೊಳ್ಳದಿರು

ಇದು ಇಳಿಜಾರು
ಸ್ವಲ್ಪ ನಿಧಾನ
ಅವಸರ ಬೇಡ
ಗಡಿಬಿಡಿ ಬೇಡ
ಸಾವಕಾಶದಿಂದ ಮುಂದಿನ ಹೆಜ್ಜೆ ಇಡು

ಇದು ಇಳಿಜಾರು
ಸ್ವಲ್ಪ ನಿಧಾನ
ಜನರ ವಿಶ್ವಾಸದ ಏಣಿ
ಮೇಲೆ ಹತ್ತಲು ನಿನಗೆ ಸಹಾಯವಾಗಿದೆ
ಅವರ ನಂಬಿಕೆ ಕಳೆಯದಿರು

ಇದು ಇಳಿಜಾರು
ಸ್ವಲ್ಪ ನಿಧಾನ
ಮಾತು ಬೇಡ ಭರವಸೆ ಬೇಡ
ನಿನ್ನ ಕಾರ್ಯ ನುಡಿಯಲಿ
ಜನರ ನಂಬಿಕೆ ಫಲಿಸಲಿ

ಇದು ಇಳಿಜಾರು
ಸ್ವಲ್ಪ ನಿಧಾನ
ಸ್ವಲ್ಪ ನಿಧಾನ
ಸ್ವಲ್ಪ ನಿಧಾನ...

by ಹರೀಶ್ ಶೆಟ್ಟಿ,ಶಿರ್ವ 

Monday, February 9, 2015

ನಿನ್ನನ್ನು ಪಡೆದು

                                                      ಚಿತ್ರಕೃಪೆ/ಹಾಡಿನ ಕೊಂಡಿ : Google

ನಿನ್ನನ್ನು ಪಡೆದು
ಹೀಗೆ ಅನಿಸಿತು ನಿನ್ನನ್ನು ಪಡೆದು
ಬಯಕೆ ಈಡೇರಿತು ಹೃದಯದ್ದು
ಓ ನನ್ನ ಪ್ರೀತಿಯೇ,
ನಿನ್ನ ನನ್ನ ನನ್ನ ನಿನ್ನ ಒಂದೇ ಜೀವ
ನಿನ್ನ ಜೊತೆ ಇರುವೆ ಸದಾ
ಎಂದೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ನನ್ನೊಲವೆ ನಿನ್ನಾಣೆ
ಬಿಡಲಾರೆ ನಿನ್ನ ಈ ಕೈಯನ್ನು
ಈ ಜೀವನ ಕಳೆಯುವುದೀಗ
ಪ್ರಿಯತಮೆ ನಿನ್ನದೇ ಜೊತೆಯಲಿ ಇನ್ನು
ನೀಡುವೆ ವಚನದ ಬಂಧ
ಎಂದೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ನಾ ಮಾಡಿದೆ ಹಗಲು ರಾತ್ರಿ
ಕೇವಲ ನಿರೀಕ್ಷೆ ನಿನ್ನದೇ
ನೀನಲ್ಲದೆ ಸಿಗುವುದಿಲ್ಲ
ಒಂದು ಕ್ಷಣವೂ ನೆಮ್ಮದಿ ನನಗೆ
ನನ್ನೊಲವು ಸಿಕ್ಕಿದಾಗಿದೆ ನನ್ನಿಂದ
ಈಗಂತೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ಮೂಲ : ಖುರ್ಷಿದ್ ಹಾಲೌರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಆಶಾ ಭೋಂಸ್ಲೆ, ಸುರೇಶ ವಾಡ್ಕರ್
ಸಂಗೀತ : ಆರ್. ಡೀ. ಬರ್ಮನ್
ಚಿತ್ರ : ಪರಿಂದಾ


तुम से मिल के, ऐसा लगा, तुम से मिल के
अरमां हुए पुरे दिल के, ए मेरी जान-ए-वफ़ा
तेरी मेरी, मेरी तेरी, एक जान है
साथ तेरे रहेंगे सदा, तुम से ना होंगे जुदा

मेरे सनम, तेरी कसम, छोड़ेंगे अब ना ये हाथ
ये जिन्दगी, गुजरेगी अब, हमदम तुम्हारे ही साथ
अपना ये वादा रहा, तुम से ना होंगे जुदा

मैंने किया, हैं रातदिन, बस तेरा ही इंतज़ार
तेरे बीना, आता नहीं, एक पल मुझे अब करार
हमदम मेरा मिल गया, हम तुम ना होंगे जुदा
हमदम मेरा मिल गया, अब हम ना होंगे जुदा
https://www.youtube.com/watch?v=ivVikjr7hIM

ಮರಳ ಮೇಲೆ ನಿನ್ನ ಸುಂದರ ಚಿತ್ರ


                                                        ಚಿತ್ರಕೃಪೆ : Google

ನೀನು ಬಾರದೆ ಇದ್ದ ಆ ಸಂಜೆ
ನಿನ್ನನ್ನು ಕಾಯುತ್ತಾ ನಾನು
ಕಡಲ ಮರಳ ಮೇಲೆ
ನಿನ್ನ ಒಂದು
ಸುಂದರ ಚಿತ್ರ ಬರೆದಿದ್ದೆ

ಕತ್ತಲು ಕವಿದರೂ
ನೀನು ಬಾರದಿದ್ದಾಗ
ಮರಳ ಮೇಲೆ ಬರೆದ
ನಿನ್ನ ಚಿತ್ರವನ್ನು
ಹೀಗೆಯೇ ಬಿಟ್ಟು ಹೋಗಲು
ಮನಸ್ಸು ಒಪ್ಪಿರಲಿಲ್ಲ

ಆದರೆ ಅಂದು ಕಡಲು
ತನ್ನ ರೌದ್ರ ರೂಪ ತಾಳಿ
ತನ್ನ  ಪ್ರವಾಹದಿಂದ
ನಾ ಬರೆದ ನಿನ್ನ
ಚಿತ್ರವನ್ನು ಕೊಚ್ಚಿಹೋದವು

ನನಗಾದ
ತೀವ್ರ ವೇದನೆಯಿಂದ
ಆಗಸಕ್ಕೂ ಬೇಸರವಾಯಿತೇನೋ
ಅದೂ ತನ್ನ ಕಣ್ಣೀರು ಸುರಿಸಿ
ತನ್ನ ಸಂವೇದನೆ ಸೂಚಿಸಿದವು

ಆ ನಂತರ ಹೇಗೋ
ಭಾರ ಹೃದಯದಿಂದ
ಮೆಲ್ಲ ಮೆಲ್ಲನೆ
ಹೆಜ್ಜೆ ಇಟ್ಟು
ಮನೆಯತ್ತ ನಡೆದಿದ್ದೆ

ನಾನು
ಪೂರ್ಣ ಒದ್ದೆಯಾಗಿದ್ದರಿಂದ
ನನ್ನ ಕಣ್ಣೀರು
ಮನೆಯಲ್ಲಿ
ಯಾರಿಗೂ ಕಂಡು ಬಂದಿರಲಿಲ್ಲ

by ಹರೀಶ್ ಶೆಟ್ಟಿ, ಶಿರ್ವ 

Saturday, February 7, 2015

ವಸಂತವೆ ನನ್ನ ಬದುಕನ್ನೂ ಸಿಂಗಾರಿಸು ನೀನು

                                                                ಚಿತ್ರಕೃಪೆ :Google



!!ವಸಂತವೆ ನನ್ನ ಬದುಕನ್ನೂ
ಸಿಂಗಾರಿಸು ನೀನು
ಯಾರೋ ಬರಲಿ ಎಲ್ಲಿಂದಲೂ-೨
ಹೀಗೆ ಕೂಗಿ ಕರೆ ನೀನು!!
ವಸಂತವೆ...

!!ನಿನ್ನಿಂದಲೇ ಹೃದಯ ಕಲಿತಿದೆ ಚಡಪಡಿಕೆಯನ್ನು-೨
ನಿನ್ನನ್ನೇ ದೂರುವೆ-೨
ನಿನ್ನನ್ನೇ ದೂರುವೆ
ಓ ಈ ಸುಂದರ ನೋಟಗಳನ್ನು!!
ವಸಂತವೆ...

!!ರಚಿಸು ಯಾವುದೇ ಕಜ್ಜಳ ತಾ ಹೂಮಾಲೆ-೨
ಬಳುಕುವ ಲತೆ ನೀನು
ಬಳುಕುವ ಲತೆ ನೀನು
ಅರಳಿದ ಹೂವನ್ನು ಚೆಲ್ಲು ನೀನು!!
ವಸಂತವೆ...

!!ಹಚ್ಚು ನನ್ನ ಈ ಕೈಗಳಿಗೆ ಮೆಹಂದಿ-೨
ಸಿಂಗರಿಸು ಕುಂಕುಮ ಹಣೆಗೆ
ಸಿಂಗರಿಸು ಕುಂಕುಮ ಹಣೆಗೆ
ಅಲ್ಲದೆ ಹೊರಟುಹೋಗು ನೀನು!!
ವಸಂತವೆ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ಆಖ್ರೀ ಖತ್

बहारों मेरा जीवन भी सवारों
कोई आये कही से, यूँ पुकारो

तुम ही से दिल ने सीखा हैं तड़पना
तुम ही को दोष देंगी , ऐ नज़ारों

रचाओ कोई कजरा, लाओ गजरा
लचकती डालियों तुम  फूल वारों

लगाओ मेरे इन हाथों में मेहंदी
सजाओ माँग मेरी, या सिधारो
http://www.dailymotion.com/video/xn2m3s_baharo-mera-jeevan-bhi-sanwaro-koi-aye-kahin-se-lata-mangeshkar-khayyam_music

Thursday, February 5, 2015

ಹೆಸರು

ಆ ಸಮಯ ಕಳೆದೋಯಿತು
ಈಗ ನಾನು ನಾನಾಗಿ ಉಳಿಯಲಿಲ್ಲ
ನೀನು ನೀನಾಗಿ ಉಳಿಯಲಿಲ್ಲ
ಆದರೆ ಆ ಸವಿ ಕಹಿ ನೆನಪು ಅದೇಕೋ ಉಳಿದೋಯಿತು

ವಿರಹ ಅಗ್ನಿಯ ಜ್ವಾಲೆಯೂ
ನಂದಿ ಹೋಯಿತು
ಕಿಡಿ ಸಹ ಉಳಿಯಲಿಲ್ಲ
ಆದರೆ ಪ್ರೀತಿಯ ಅವಶೇಷ ಉಳಿದೋಯಿತು

ಪ್ರೀತಿಯ ಮರಳ ಮನೆ
ಸಾಗರದ ತರಂಗಗಳು ಕೊಚ್ಚಿ ಹೋದವು
ಆದರೆ ತೀರದಲ್ಲಿದ್ದ ಬಂಡೆಗಳ ಮೇಲೆ ಬರೆದ
ನಮ್ಮಿಬ್ಬರ ಹೆಸರು ಉಳಿದೋಯಿತು

by ಹರೀಶ್ ಶೆಟ್ಟಿ, ಶಿರ್ವ 

Wednesday, February 4, 2015

ಮೌನ-ಧ್ಯಾನ

ಹೂವಿನ ಪಕಳೆಗಳು
ಒಂದೊಂದಾಗಿ ಬೀಳುತ್ತಿವೆ
ದುಂಬಿ ರಸ ಸವಿಯುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

ಆಧಾರ

ಆ ತೋಟದ ಅಂದಕ್ಕೆ
ನಾವು ಕಾರಣ ಎಂದು
ಹೂಗಳು ಮೆರೆಯುತ್ತಿದ್ದವು
ಮಾಲಿ ಗಿಡಗಳಿಗೆ ನೀರೆರೆಯುವುದರಲಿ ಮಗ್ನ!
---
ಧಾನ್ಯದ ಪಾಲಿಗೋಸ್ಕರ
ರೈತನ ಕುಟುಂಬದ ಮಧ್ಯೆ ಜಗಳ
ರೈತ ಹೊಲದಲ್ಲಿ ಶ್ರಮಿಸುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

Sunday, February 1, 2015

ಸಾಮರ್ಥ್ಯ ದೇಶದ ನಿಮ್ಮಿಂದ ಇದೆ

!!ಸಾಮರ್ಥ್ಯ ದೇಶದ ನಿಮ್ಮಿಂದ ಇದೆ
ಶೌರ್ಯತೆ ದೇಶದ ನಿಮ್ಮಿಂದ ಇದೆ
ಘನತೆ ದೇಶದ ನಿಮ್ಮಿಂದ ಇದೆ
ಮಾನವ ಕುಲದ ನೀವು ರಕ್ಷಕರು!!

!!ಸಾಮರ್ಥ್ಯ ದೇಶದ ನಮ್ಮಿಂದ ಇದೆ
ಶೌರ್ಯತೆ ದೇಶದ ನಮ್ಮಿಂದ ಇದೆ
ಘನತೆ ದೇಶದ ನಮ್ಮಿಂದ ಇದೆ
ಮಾನವ ಕುಲದ ನಾವು ರಕ್ಷಕರು!!

!!ಕಾವಲುಗಾರರು ಹಿಮಾಲಯದ
ಬಿರುಸು ನಾವು ಬಿರುಗಾಳಿಯ
ಘರ್ಜನೆ ಕೇಳಿ ನಮ್ಮದು
ಸೀಳಾಗುತ್ತದೆ ಎದೆ ಬಂಡೆಯ!!
ಸಾಮರ್ಥ್ಯ ದೇಶದ...

!!ಉಕ್ಕಿನ ಎದೆ ನಮ್ಮದು
ಹೂವಿನಂತಹ ಹೃದಯ
ದೇಹದಲಿ ಬಲವಿದೆ ಪರ್ವತದ
ಮನಸ್ಸಲಿ ಸೌದರ್ಯವಿದೆ ನದಿಯ!!
ಸಾಮರ್ಥ್ಯ ದೇಶದ...

!!ನೀಡಿ ನಮ್ಮ ರಕ್ತವನ್ನು
ದೇಶದ ಹೂ ಉಪವನವನ್ನು ರಕ್ಷಿಸುವವರು ನಾವು
ಕೊಳಲಿಂದ ಬಂದೂಕು ಮಾಡುವಂತಹ
ಪ್ರೇಮ ಪೂಜಾರಿಗಳು ನಾವು!!
ಸಾಮರ್ಥ್ಯ ದೇಶದ...

!!ಬಂದು ಸಹೋದರಿಯ ರಾಖಿ
ಕೊಟ್ಟು ಹೋದವು ನಮಗೆ ಆಣೆಯನ್ನು
ನೀಡುವೆವು ತನ್ನ ಶಿರವನ್ನು
ನೀಡಲಾರೆವು ದೇಶದ ಮಣ್ಣನ್ನು!!
ಸಾಮರ್ಥ್ಯ ದೇಶದ...

!!ಅಪಾಯದಲ್ಲಿದೆ ದೇಶ
ಆಗಂತೂ ಹೋರಾಡುವುದೇ ಕೇವಲ ಧರ್ಮ
ಸಾವಂದರೆ ಏನು ವಸ್ತು
ಮಾನವ ಪಡೆಯುವನು ಹೊಸ ಜನುಮ!!
ಸಾಮರ್ಥ್ಯ ದೇಶದ...

!!ಒಂದೇ ಜೀವ, ಒಂದೇ ಪ್ರಾಣ
ನಮ್ಮ ಎಲ್ಲಾ ದೇಶದವರು
ನದಿಗಳು ಸೋತು ಹೋದವು
ಆದರೆ ನಿಲ್ಲಲಿಲ್ಲ ಗಂಗೆಯ ನೀರು!!
ಸಾಮರ್ಥ್ಯ ದೇಶದ...

ಮೂಲ: ನೀರಜ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ ಇತರರು
ಸಂಗೀತ : ಎಸ್. ಡೀ , ಬರ್ಮನ್

ताकत वतन की हमसे है
हिम्मत वतन की हमसे है
इज्ज़त वतन की हमसे है
इंसान के हम रखवाले

पहरेदार हिमालय के हम, झोंके हैं तूफ़ान के
सुनकर गरज हमारी सीने फट जाते चट्टान के
ताकत वतन की हमसे है...

सीना है फौलाद का अपना, फूलों जैसा दिल है
तन में विन्ध्याजल का बल है, मन में ताजमहल है
ताक़त वतन की हमसे है...

देकर अपना खून सींचते देश की हम फुलवारी
बंसी से बन्दूक बनाते हम वो प्रेम पुजारी
ताकत वतन की हमसे है...

आकर हमको कसम दे गई, राखी किसी बहन की
देंगे अपना शीश, न देंगे मिट्टी मगर वतन की
ताक़त वतन की हमसे है...

खतरे में हो देश अरे तब लड़ना सिर्फ धरम है
मरना है क्या चीज़ आदमी लेता नया जनम है
ताकत वतन की हमसे है...

एक जान है, एक प्राण है सारा देश हमारा
नदियाँ चल कर थकी रुकी पर कभी न गंगा धरा
ताक़त वतन की हमसे है...
https://www.youtube.com/watch?v=-a641b2vjKc

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...