Wednesday, December 28, 2011

ನಿನ್ನದೆ

ನೀ ಬಿಟ್ಟು ಹೋಗಿ ಕಳೆದಿದೆ ಹಲವು ವರ್ಷಗಳು
ಆದರೆ ಹೃದಯದ ದ್ವಾರದಲಿ ಇಂದೂ ನಿನ್ನದೆ ಕಾವಲು

ಮಳೆಯಲ್ಲಿ ಒಟ್ಟಿಗೆ ನೆನೆದು ಉರುಳಿದವು ಬಹಳ ದಿನಗಳು 
ಆದರೆ ಮಳೆಯ ಹನಿಗಳಲ್ಲಿ ಇಂದೂ ನಿನ್ನದೆ ಪ್ರತಿಬಿಂಬಗಳು 

ನೀನಿಲ್ಲದೆ ಬಾಡಿದೆ ಇಂದು ಹೂದೋಟದ ಸುಮಗಳು
ಆದರೆ ಉದ್ಯಾನದಲ್ಲಿ ಇಂದೂ ನಿನ್ನದೆ ಸುಗಂಧಗಳು 

ಮಾಸಿ ಹೋಗಿದೆ ನಿದ್ದೆ ಇಲ್ಲದ ಆ ಅನೇಕ ರಾತ್ರಿಗಳು
ಆದರೆ ರಾತ್ರಿಯ ನಕ್ಷತ್ರಗಳಲ್ಲಿ ಇಂದೂ ನಿನ್ನದೆ ರೂಪಗಳು
by ಹರೀಶ್ ಶೆಟ್ಟಿ ,ಶಿರ್ವ 

3 comments:

  1. ಸುಂದರ ಹೀಗೊಂದು ಹಾಗೊಂದು ಸಾಲು...
    ಆ ಗಳು ಗಳನ್ನೂ ತೆಗೆದರೆ ಮತ್ತಷ್ಟೂ ಸುಂದರ ಎಂದು ನಮ್ಮ ಅನಿಸಿಕೆ.. :)

    ReplyDelete
  2. ತನುವು ನಿನ್ನದು ಮನವು ನಿನ್ನದು ಹಾಡು ನೆನಪಾಗ್ತಾ ಇದೆ..
    ನೈಸ್ ಒನ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...