Monday, January 11, 2021

ಈ ಹೃದಯ ಮರುಳು


Photo: google

ಹಾಡಿನ ಕೊಂಡಿ: https://youtu.be/ap9UZoeUHW8


ಈ ಹೃದಯ ಮರುಳು, 

ಹೃದಯ ಮರುಳು ಈ, 

ಮರುಳು ಹೃದಯ ಈ, 

ಹೃದಯ ಮರುಳು,

-

ಎಷ್ಟು ನಿಷ್ಠುರ, ಆಶಯ ಅದರ, 

ಯೌವನ ಇರೋ ತನಕ, ಸಮಯ ಇರುತ್ತದೆ ಮೋಹಕ, 

ಕಂಗಳು ಪ್ರತ್ಯೇಕವಾಗದಿರಲಿ, ಬಯಕೆ ಮುನಿಸದಿರಲಿ, 

ಮಧುರ ವಸಂತದಲ್ಲಿ, ಗುಟ್ಟಾಗಿ ವನದಲ್ಲಿ,

ಹೀಗೆಯೇ ನಾನು ನೀನು, ಕುಳಿತುಕೊಂಡು ಮೌನದಲಿ, 

ನಿಷ್ಠಾವಂತರಲ್ಲ  ಅವರು ಹೋಗುವೆಯೆಂದು ಹೇಳುವವರು, 

ಈ ಹೃದಯ

ಈ ಹೃದಯ.....

-

ಕಳವಳದಲ್ಲಿರುವುದು, ಮೆಲ್ಲನೆ ನುಡಿಯುವುದು, 

ನನಗೆ ಮಿಡಿಯಲು ಕೊಡಿಯೆಂದು, ಜ್ವಾಲೆ ಧಗಧಗಿಸಲಿ ಎಂದು, 

ಮುಳ್ಳಳ್ಳಿ ಹೂಗಳಲ್ಲಿ, ಪ್ರೇಮಿಯ ಗಲ್ಲಿಯಲ್ಲಿ, 

ಸುತ್ತಾಡಲು ಬಿಡು, ಹೋಗಲಿ ಬಿಟ್ಟು ಬಿಡು, 

ಮರೆಯಾಗುವೆನೋ ಏನು, ಹಿಂತಿರುಗಿ ಬರುವೆ ನಾನು, 

ನೋಡಿದೆ, ಕೇಳಿದೆ, ಅರ್ಥಿಸಿದೆ, ಒಳ್ಳೆ ನೆಪ ಇದು, ಈ ಹೃದಯ

ಈ ಹೃದಯ.....

-

ಮಳೆಗಾಲ ಬಂದಾಗ, ಮೋಡ ಹಬ್ಬಿದಾಗ, 

ಹೂವಿನ ಋತುವಿನಲ್ಲಿ, ಹೂವಿನ ಋತುವಿನಲ್ಲಿ, 

ಹೂಗಾಳಿ ಬೀಸಿದಾಗ, ಏಕಾಂತ ಸಿಕ್ಕಿದಾಗ, 

ಸಿಲುಕಿಸಿ ಮಾತಲ್ಲಿ, ಹೇಳುತ್ತದೆ ರಾತ್ರಿಯಲ್ಲಿ, 

ನೆನಪಲ್ಲಿ ಮರೆಯಾಗುವೆ, ಬೇಗನೆ ಮಲಗುವೆ, 

ಏಕೆಂದರೆ ಕನಸಲ್ಲಿ ಇನಿಯನಿಗೆ ಬರಲಿದೆ ಇಂದು, ಈ ಹೃದಯ

ಈ ಹೃದಯ...

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಸಂಗೀತ: ಎಸ್. ಡಿ. ಬರ್ಮನ್ 

ಹಾಡಿದವರು: ಲತಾ ಮಂಗೇಶ್ಕರ್, ಮುಹಮ್ಮದ್ ರಫಿ 

ಚಿತ್ರ: ಇಷ್ಕ್ ಪರ್ ಜೋರ್ ನಹೀ

-

ये दिल दीवाना है, दिल तो दीवाना है

दीवाना दिल है ये दिल दीवाना

-

कैसा बेदर्दी है, इसकी तो मर्ज़ी है

जब तक जवानी है, ये रुत सुहानी है

नज़रें जुदा ना हों, अरमां खफ़ा ना हों

दिलकश बहारों में, छुपके चनारों में

यूं ही सदा हम तुम, बैठे रहें गुमसुम

वो बेवफ़ा जो कहे हमको जाना है ये दिल, 

ये दिल दिवाना है ...

-

बेचैन रहता है, चुपके से कहता है

मुझको धड़कने दो, शोला भड़कने दो

काँटों में कलियों में, साजन की गलियों में

फ़ेरा लगाने दो, छोड़ो भी जाने दो

खो तो न जाऊंगा, मैं लौट आऊंगा

देखा सुने समझे अच्छा बहाना है ये दिल, 

ये दिल दिवाना है ...

-

सावन के आते ही, बादल के छाते ही

फूलों के मौसम में, फूलों के मौसम में

चलते ही पुरवाई, मिलते ही तन्हाई

उलझाके बातों में, कहता है रातों में

यादों में खो जाऊं, जल्दी से सो जाऊं

क्योंके साँवरिया को सपनों में आना है ये दिल, 

ये दिल दिवाना है ...

Friday, January 8, 2021

ಬನ್ನಿ ಯಜಮಾನರೇ

photo: Google

https://youtu.be/x11QNC9aA70

ಬನ್ನಿ ಯಜಮಾನರೇ ನಿಮ್ಮನ್ನು ತಾರೆಗೆ ಕೊಂಡೋಗುವೆ, 

ಹೃದಯ ನಲಿಯುವಂತಹ ವಸಂತಕ್ಕೆ ಕೊಂಡೋಗುವೆ, 

ಬನ್ನಿ ಯಜಮಾನರೇ ಬನ್ನಿ,

-

ನಮ್ಮ ಗೌಪ್ಯ, ವಿಚಾರ ಒಂದೆಯಾದರೆ, ಅಭಿಪ್ರಾಯ ಒಂದೆಯಾಗಲಿ, 

ಬಾಳ ಪ್ರಯಾಣ ನಿಶ್ಚಿತವಾದರೆ, ನಮ್ಮ ಯಾತ್ರೆ ಒಂದೆಯಾಗಲಿ, 

ಆ ಆ ಆ ಆ ಆ ಆ ಆ ಓ ಓ ಓ ಓ ಓ.....

ಪ್ರೇಮದ ಪ್ರಕಾಶಮಯ ಪರಿಸರಕ್ಕೆ ಕೊಂಡೋಗುವೆ,

ಹೃದಯ ನಲಿಯುವಂತಹ ವಸಂತಕ್ಕೆ ಕೊಂಡೋಗುವೆ, 

ಬನ್ನಿ ಯಜಮಾನರೇ ಬನ್ನಿ,

-

ಬರೆಯಿರಿ....ಅಯ್ಯೋ... 

ಬರೆಯಿರಿ ಹೃದಯದ ಪುಸ್ತಕ ಹೃದಯದಲಿ, ಅಂತಹದೊಂದು ಕಥೆಯು, 

ಅದರ ಉದಾಹರಣೆ ನೀಡಲಾರದು, ಏಳು ಲೋಕವು,

ಆ ಆ ಆ ಆ ಆ ಆ ಆ ಓ ಓ ಓ ಓ ಓ.....

ಬಾಹುಗಳಲ್ಲಿ ಅಪ್ಪಿಕೊಂಡು ಸಾವಿರಾರು ಜನರ ಮಧ್ಯೆ ಕೊಂಡೋಗುವೆ,

ಹೃದಯ ನಲಿಯುವಂತಹ ವಸಂತಕ್ಕೆ ಕೊಂಡೋಗುವೆ, ಬನ್ನಿ ಯಜಮಾನರೇ ಬನ್ನಿ,

-

ಅನುವಾದ - ಹರೀಶ್ ಶೆಟ್ಟಿ, ಶಿರ್ವ 

ಮೂಲ: ನೂರ್ ದೇವಾಸಿ 

ಸಂಗೀತ : ಓ ಪಿ ನಯ್ಯರ್ 

ಹಾಡಿದವರು ಆಶಾ ಭೋಸ್ಲೆ 

ಚಿತ್ರ: ಕಿಸ್ಮತ್-

[आओ हुज़ूर तुमको, सितारों में ले चलूँ 

दिल झूम जाए ऐसी, बहारों में ले चलूँ]x २ 

आओ हुज़ूर आओ


[हमराज़ हमख़याल तो हो, हमनज़र बनो 

तय होगा ज़िंदगी का सफ़र, हमसफ़र बनो]x २ आ हा आ.. 

चाहत के उजले-उजले नज़ारों में ले चलूँ 

दिल झूम जाए ऐसी, बहारों में ले चलूँ 

आओ हुज़ूर आओ 


लिख दो अह.. 

[लिख दो किताब-ए-दिल पे कोई, ऐसी दास्तां 

जिसकी मिसाल दे न सकें, सातों आसमां]x २ 

आ हा आ.. 

बाहों में बाहें डाले, हज़ारों में ले चलूँ 

हाय दिल झूम जाए ऐसी, 

बहारों में ले चलूँ आओ हुज़ूर तुमको, 

सितारों में ले चलूँ दिल झूम जाए ऐसी, बहारों में ले चलूँ 

आओ हुज़ूर आओ





Thursday, January 7, 2021

ಈ ಜಗತ್ತಲ್ಲಿ ಬದುಕಬೇಕೆಂದರೆ


Photo: Google

ಹಾಡಿನ ಕೊಂಡಿ: https://youtu.be/pZox7N7uCAc

ಈ ಜಗತ್ತಲ್ಲಿ ಬದುಕಬೇಕೆಂದರೆ ಕೇಳಿ ನನ್ನ ಮಾತನ್ನು, 

ದುಃಖ ಮರೆತು ಮಾಡಿ ಮೋಜನ್ನು, 

ಮತ್ತೆ ಒಪ್ಪಿಕೊಳ್ಳಿ ನಾನೇಳಿದನ್ನು,

ಈ ಜಗತ್ತಲ್ಲಿ

-

ಬದುಕು ಸುಂದರ ಅವರ ನಕ್ಕು ನಲಿದು ಬದುಕುವವರು, 

ಕೇಶರಾಶಿಯ ಮುಗಿಲ ಮಧ್ಯೆ ಕಂಗಳ ರಸ ಹೀರಿದವರು, 

ಮೋಜಿನ ಜನರೇ ಮೋಜು ಮಾಡಿ, 

ತೊರೆಯಿರಿ ಈ ಮೌನವನ್ನು,

ಬಂದಿದೆ ವರ್ಣಮಯ ವಸಂತ, ತಂದಿದೆ ವರ್ಣರಂಜಿತ ದಿವಸವನ್ನು, 

ಈ ಜಗತ್ತಲ್ಲಿ....

-

ನಾನು ಸುಂದರ ಅಪ್ಸರೆಯೊಂದು ನಲಿಯುವೆ ತರಂಗುತ್ತಿರುವೆ, 

ಎಲ್ಲೆಡೆ ಹೂವು ಅರಳಿಸುವೆ ಹಾಗು ಹರ್ಷ ಸುರಿಸುತ್ತಿರುವೆ, 

ಲೋಕದವರೇ ನಿಮಗೇನು ಗೊತ್ತು ಬದುಕುವ ಈ ಮಾತು,

ಬನ್ನಿ ನನ್ನ ದ್ವಾರಕ್ಕೆ, ತಿಳಿಸುವೆ ಈ ಎರಡು ಮಾತನ್ನು, 

ಈ ಜಗತ್ತಲ್ಲಿ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ ಸಂಗೀತ: ಶಂಕರ್ ಜೈ ಕಿಷನ್ ಹಾಡಿದವರು: ಲತಾ ಮಂಗೇಶ್ಕರ್ 

ಚಿತ್ರ: ಗುಂನಾಮ್

-

इस दुनिया में जीना हो तो सुन लो मेरी बात

ग़म छोड़ के मना लो रंग रेली

और मान लो जो कहे किट्टी केली

-

जीना उसक जीना है जो हँसते गाते जीले

ज़ुल्फ़ों की घनघोर घटा में नैन के बादल पीले

ऐश के बंदों ऐश करों तुम छोड़ो ये ख़ामोशी

आई हैं रंगीन बहारें लेकर दिन रंगीले

-

मैं अलबेली चिंगारी हूँ नाचूँ और लहराऊँ

दामन दामन फूल खिलाऊँ और ख़ुशियाँ बरसाऊँ

दुनिया वालों तुम क्या जानो जीने की ये बातें

आओ मेरी महफ़िल में मैं ये दो बातें समझाऊँ

-

Wednesday, January 6, 2021

ಏನೂ ಬೇಡ ಅನಿಸುತ್ತದೆ

ಕೆಲವೊಮ್ಮೆ ಅಳಬೇಕನಿಸುತ್ತದೆ, 

ಲೋಕದ ತರಹ ತರಹದ ಹೇಳಿಕೆ ಕೇಳಿ, 

ಏನೂ ಬೇಡ ಅನಿಸುತ್ತದೆ!


ಈ ಬದುಕಿನ ಹೋರಾಟ ಕಷ್ಟವೇನಲ್ಲ, 

ಪ್ರೀತಿ ವಿಶ್ವಾಸ ಪರಸ್ಪರ ಇದ್ದರೆ, 

ಆದರೆ ಭಾವನೆ ಮುರಿದ ಪೀಡೆಯಿಂದ ತಾಕತ್ತು ಮುಗಿದು ಹೋರಾಟ ಕಷ್ಟವಾಗುತ್ತದೆ, 

ಏನೂ ಬೇಡ ಅನಿಸುತ್ತದೆ!


ಬೆಸೆದು ಜೀವನ ಸಾಗಿಸುವುದು ಒಳ್ಳೆಯದ್ದು, 

ಹೌದು, 

ಆದರೆ ಭಿನ್ನ ಮತ ದಿಂದ ಅಡಚಣೆ ಉಂಟಾಗುವುದೂ ಸ್ವಾಭಾವಿಕ, 

ಮಾತಿನಿಂದ ಮಾತು ಬೆಳೆದು ಕಲಹ ಉಂಟಾಗುತ್ತದೆ,

ಏನೂ ಬೇಡ ಅನಿಸುತ್ತದೆ!


ವಂಶ ಬೆಳೆದು ಸಂಸಾರ ವ್ಯಾಪಕ, 

ಭಿನ್ನ ಭಿನ್ನ ವಿಚಾರಗಳಿಗಿಲ್ಲ ಮಾಪಕ, 

ಪ್ರತ್ಯಕ್ಷ ಅಪ್ರತ್ಯಕ್ಷ ವಾದದಿಂದ ಸಂಬಂಧ ಹಾಳಾಗುತ್ತದೆ,

ಏನೂ ಬೇಡ ಅನಿಸುತ್ತದೆ!


ಐದು ಬೆರಳಿಗೆ ಎಲ್ಲಿದೆ ಸಮಾನತೆ, 

ಅಳೆದು ಮಾತಾಡುವ ಪೀಳಿಗೆ ಮುಗಿದಿದೆ, 

ಇಂದಿನ ಪೀಳಿಗೆ ಹಿರಿಯರ ಮಾತಲ್ಲಿ ಆಸಕ್ತಿ ಇಲ್ಲದಂತಾಗಿದೆ, 

ಸುಮ್ಮನೆ ಕೂತುಕೊಳ್ಳುವುದು ಒಳ್ಳೆ ಅನಿಸುತ್ತದೆ,

ಏನೂ ಬೇಡ ಅನಿಸುತ್ತದೆ!


by ಹರೀಶ್ ಶೆಟ್ಟಿ, ಶಿರ್ವ

ನನಗೆ ಪ್ರೀತಿ ನಿನ್ನಿಂದಲೇ


Photo-google

ಹಾಡಿನ ಕೊಂಡಿ: https://youtu.be/bwzvL_fDSbI


ನನಗೆ ಪ್ರೀತಿ ನಿನ್ನಿಂದಲೇ, 

ಓ ಪ್ರಾಣ ಪ್ರೇಯಸಿಯೇ, 

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

ನನಗೆ ಪ್ರೀತಿ ನಿನ್ನಿಂದಲೇ....

-

ನನ್ನ ಜೀವನದಲಿ ನೀನಿರುವೆ, 

ನನ್ನಲೇನಿದೆ ಕೊರತೆ, 

ಶಿಶಿರದ ದುಃಖ ಬರದಂತ, 

ವಸಂತ ನೀ ನೀಡಿರುವೆ,

ನನ್ನ ಮೇಲೆ ನಿನ್ನ, 

ವಿಶೇಷ ಇದೆ ಸೌಮ್ಯತೆ,

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

-

ನಿನ್ನ ರೂಪ ತೋರಿಸಿದೆ, 

ನನಗೆ ತಿಳಿಗೇಡಿತನದ ದಾರಿಯು, 

ಈ ಮೋಹಕ ತುಟಿ ಅಮಲೇರಿಸುವ, 

ಈ ತಗ್ಗಿದ ನಯನದ ಕಾಂತಿಯು, 

ನಿನ್ನ ಕೇಶರಾಶಿಯಿಂದ ಹುಟ್ಟಿದೆ, 

ಈ ಮುಗಿಲ ತಾರುಣ್ಯತೆ,

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

-

ನನಗೆ ದುಃಖವಿಲ್ಲ ಭಾಗ್ಯದ, 

ನನಗೆ ದುಃಖವಿಲ್ಲ ಪ್ರಪಂಚದ, 

ನಿನ್ನ ಕೃಪೆಯಿಂದಲೇ ಸುರಕ್ಷಿತ, 

ನನ್ನ ನೆಲೆ ಹೃದಯದ,

ಬಾಳಲ್ಲಿ ನನ್ನ ಮಾತಲ್ಲಿರಲಿ,

ನಿನ್ನ ಒಲವಿನದ್ದೇ ಕಥೆ,

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಶಕೀಲ್ ಬದಾಯುನಿ 

ಸಂಗೀತ: ರವಿ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ: ಉಮ್ಮೀದ್-

-

मुझे इश्क है तुझी से

मेरी जान-ए-ज़िन्दगानी

तेरे पास मेरा दिल है

मेरे प्यार की निशानी

मुझे इश्क है तुझी से...


मेरी ज़िन्दगी में तू है

मेरे पास क्या कमी है

जिसे ग़म नहीं खिज़ा का

वो बहार तूने दी है

मेरे हाल पर हुई है

तेरी ख़ास महरबानी

तेरे पास मेरा दिल...


तेरे हुस्न ने दिखाई

मुझे बेखुदी की राहें

ये हसीन लब नशीले

ये झुकी झुकी निगाहें

तेरी ज़ुल्फ़ से उठी है

ये घटाओं की जवानी

तेरे पास मेरा दिल...


न मुझे गम-ए-मुकद्दर

न मुझे गम-ए-ज़माना

तेरे दम से है सलामत

मेरे दिल का आशियाना

रहे उम्र भर जुबां पर

तेरे प्यार की कहानी

तेरे पास मेरा दिल...


Tuesday, January 5, 2021

ನಿನ್ನ ನಗುವ ಅಂದ

 

Photo: Google

ಹಾಡಿನ ಕೊಂಡಿ:

https://youtu.be/jjlFiCD1Vgc

....ನಿನ್ನ ನಗುವ ಅಂದ, 

ನನ್ನನ್ನು ನೋಡಿ ನಿನ್ನ ನಗುವ ಅಂದ, 

ಒಲವಲ್ಲದೆ ಮತ್ತೆ ಬೇರೆ ಏನು, 

ಓ...ನನ್ನನ್ನು....

-

ನನಗೆ ನೀನು ಅಪರಿಚಿತ ಕರೆ ಅಲ್ಲದೆ ಕರೆ ಮರುಳು, 

ಆದರೆ ಈ ಮರುಳನಿಗೆ ತಿಳಿದಿದೆ ಹೃದಯದ ಕಥೆಗಳು, 

ಸುಂಸುಮ್ಮನೆ ಅಡಗಿಸುವುದು ಹೃದಯದ ಮಾತನ್ನು,

ಒಲವಲ್ಲದೆ ಮತ್ತೆ ಬೇರೆ ಏನು, 

ಓ...ನನ್ನನ್ನು...

-

ಯೋಚನೆಯಲಿ ಮುಳುಗಿರುವೆ ನೀನು ಹೀಗೆ, 

ಚಿತ್ರಕಾರನ ನಡೆದಾಡುವ ಚಿತ್ರದ ಹಾಗೆ, 

ನಟನೆ ಪ್ರೇಮದ ಕಾವ್ಯಾತ್ಮಕ ನಿನ್ನ,

ಒಲವಲ್ಲದೆ ಅಲ್ಲದೆ ಮತ್ತೆ ಬೇರೆ ಏನು, 

ಓ...ನನ್ನನ್ನು....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ರಾಜ ಮೆಹದಿ ಅಲಿ ಖಾನ್, 

ಸಂಗೀತ: ಓ ಪಿ ನಯ್ಯರ್ 

ಹಾಡಿದವರು : ಮುಹಮ್ಮದ್ ರಫಿ 

ಚಿತ್ರ: ಏಕ್ ಮುಸಾಫಿರ್ ಏಕ್ ಹಸೀನಾ

-

... आपका मुस्कराना

मुझे देख कर आपका मुस्कराना

मुहब्बत नहीं है तो फिर और क्या है

हो ... मुझे देख कर आपका मुस्कराना


ओ हो हो ...

मुझे तुम बेगाना कह लो या के दीवाना

मगर ये दीवाना जाने दिल का फ़साना

बनावट में दिल की हक़ीक़त चुपाना

मुहब्बत नहीं है तो फिर और क्या है

हो ... मुझे देख कर आपका मुस्कराना


ओ हो हो ...

खयालों में खोयी खोयी रहती हो ऐसे

मुसव्विर की चलती फिरती तसवीर जैसे

अदा आशिक़ी की नज़र शायराना

मुहब्बत नहीं है तो फिर और क्या है

हो ... मुझे देख कर आपका मुस्कराना


Friday, January 1, 2021

ಈ ಹೃದಯ ನಿನ್ನ ಹೊರತು


Photo: google

ಹಾಡಿನ ಕೊಂಡಿ: 

https://youtu.be/UbrJ0QmAxiQ


 ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

ನಾನೇನು ಮಾಡಲಿ, 

ಕಲ್ಪನೆಯಲ್ಲಿ ಯಾರೂ ನೆಲೆಸುವುದಿಲ್ಲ,

ನಾನೇನು ಮಾಡಲಿ, 

ನೀನೆ ಹೇಳು, ಈಗ ಓ ನನ್ನ ಇನಿಯ, ನಾನೇನು ಮಾಡಲಿ,


ರಫಿ:

ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ, 

ನಾನೇನು ಮಾಡಲಿ, 

ನೀನೆ ಹೇಳು, ಓ ನನ್ನ ಪ್ರೀಯೆ, ನಾನೇನು ಮಾಡಲಿ,

ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

-

ಲತಾ:

ಯಾರದ್ದೋ ಹೃದಯದಲಿ ನೆಲೆಸಿ ಹೃದಯವನ್ನು ಪೀಡಿಸುವುದು ಒಳ್ಳೆಯದಲ್ಲ, 

ಪದೇಪದೇ ಕಣ್ಣಿಂದ ಕಣ್ಣು ಸೇರಿಸಿ ಅಡಗುವುದು ಒಳ್ಳೆಯದಲ್ಲ,

ಬಯಕೆಯ ಅರಳಿದ ಭಾಗೀಚೆಯನ್ನು ಸುಡುವುದು ಒಳ್ಳೆಯದಲ್ಲ, 

ನನಗೆ ನಿನ್ನ ಹೊರತು ಯಾರೂ ಇಷ್ಟವಾಗುವುದಿಲ್ಲ, ನಾನೇನು ಮಾಡಲಿ,

ನೀನೆ ಹೇಳು, ಓ ನನ್ನ ಇನಿಯ, ನಾನೇನು ಮಾಡಲಿ,

ರಫಿ:

ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ, 

ನಾನೇನು ಮಾಡಲಿ, 

-

ರಫಿ:

ಪ್ರೀತಿ ಮಾಡಬಹುದು ಆದರೆ  ರುಚಿಸಬೇಕಲ್ಲವೇ ಅದು,

ಹೃದಯಕ್ಕೇ ಭಾರವಾಗುವುದು  ನೆರಳೂ ಕೇಶರಾಶಿಯದ್ದು,

ಸಾವಿರಾರೂ ದುಃಖಗಳಿವೆ ಪ್ರಪಂಚದಲ್ಲಿ, ನಮ್ಮದ್ದು ಅನ್ಯರದ್ದು, 

ಪ್ರೀತಿಯ ದುಃಖವೇ ಕೇವಲ ಒಂದಲ್ಲ,, ನಾನೇನು ಮಾಡಲಿ, 

ನೀನೆ ಹೇಳು, ಈಗ , ಓ ನನ್ನ ಪ್ರೀಯೆ, ನಾನೇನು ಮಾಡಲಿ,

ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

-

ಲತಾ:

ತಣಿಸು ಹೃದಯದ ಜ್ವಾಲೆಯನು, 

ಅಲ್ಲದೆ ಇದಕ್ಕೆ ನಿರಾಳವಾಗಿ ಗಾಳಿ ನೀಡು, 

ಯಾರು ಇದರ ಮೌಲ್ಯ ಅರಿಯುವರೋ, ಅವರಿಗೆ ತನ್ನ ನಿಷ್ಠೆ ನೀಡು, 

ನಿನ್ನ ಮನಸ್ಸಲ್ಲೇನಿದೆ ಕೇವಲ ಇಷ್ಟೇ ಹೇಳಿ ಬಿಡು, 

ಈ ಬದುಕಿನ್ನು ಏಕಾಂಗಿ ಸಾಗುವುದಿಲ್ಲ, ನಾನೇನು ಮಾಡಲಿ,

ರಫಿ:

ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ, 

ನಾನೇನು ಮಾಡಲಿ, 

ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಸಾಹಿರ್ ಲುಧಿಯಾನ್ವಿ, 

ಸಂಗೀತ: ಲಕ್ಷ್ಮಿಕಾಂತ್ ಪ್ಯಾರೇಲಾಲ್

ಹಾಡಿದವರು : ಲತಾ ಮಂಗೇಶ್ಕರ್, ಮುಹಮ್ಮದ್ ರಫಿ 

ಚಿತ್ರ: ಈಜ್ಜತ್


लता:: ये दिल तुम बिन, कहीं लगता नहीं, हम क्या करें

ये दिल तुम बिन, कहीं लगता नहीं, हम क्या करें

तसव्वुर में कोई बसता नहीं, हम क्या करें

तुम्ही कह दो, अब ऐ जानेवफ़ा, हम क्या क


रफ़ी: लुटे दिल में दिया जलता नहीं, हम क्या करें

तुम्ही कह दो, अब ऐ जाने-अदा, हम क्या क


लता: ये दिल तुम बिन, कहीं लगता नहीं, हम क्या करें


किसी के दिल में बस के दिल को, तड़पाना नहीं अच्छा

निगाहों को छलकते देख के छुप जाना नहीं अच्छा

उम्मीदों के खिले गुलशन को, झुलसाना नहीं अच्छा

हमें तुम बिन, कोई जंचता नहीं, हम क्या करें

तुम्ही कह दो, अब ऐ जानेवफ़ा, हम क्या करें


रफ़ी: लुटे दिल में दिया जलता नहीं, हम क्या 


मुहब्बत कर तो लें लेकिन, मुहब्बत रास आये भी -

दिलों को बोझ लगते हैं, कभी ज़ुल्फ़ों के साये भी

हज़ारों ग़म हैं इस दुनिया में, अपने भी पराये 

मुहब्बत ही का ग़म तन्हा नहीं, हम क्या करें

तुम्ही कह दो, अब ऐ जाने-अदा, हम क्या करें


लता: ये दिल तुम बिन, कहीं लगता नहीं, हम क्या 


बुझा दो आग दिल की, या इसे खुल कर हवा दे दो -

रफ़ी: जो इसका मोल दे पाये, उसे अपनी वफ़ा दे दो

लता: तुम्हारे दिल में क्या है बस, हमें इतना पता दे दो

के अब तन्हा सफ़र कटता नहीं, हम क्या करें

रफ़ी: लुटे दिल में दिया जलता नहीं, हम क्या क

लता: ये दिल तुम बिन, कहीं लगता नहीं, हम क्या करेंरें, २करेंभी २करें,, - २रेंरें





ಸಿದ್ಧಿದಾತ್ರಿ