Tuesday, March 4, 2014

"ಮಳೆ" ಹಾಯ್ಕು

ಬಾಡಿದ ಬೆಳೆ
ವರುಣನ ಮುನಿಸು
ರೈತ ಕಂಗಾಲು

---

ಒಣ ಧರತಿ
ವಿಮುಖವಾದ ವರ್ಷ
ವರುಣ ಪೂಜೆ

---

ಬಾನಲ್ಲಿ ದೃಷ್ಟಿ
ಮೇಘಗಳ ಚೆಲ್ಲಾಟ
ಸೋತ ಕಂಗಳು

---

ಕಷ್ಟದ ಕಾಲ
ಏರುತ್ತಿರುವ ಸಾಲ
ವಿವಶ ರೈತ

---
ಖಾಲಿ ಬಾಣಲೆ
ಮನೆಯಲ್ಲಿಲ್ಲ ಧಾನ್ಯ
ಹಸಿದ ಹೊಟ್ಟೆ

---

ಬಂಜರು ಭೂಮಿ
ಹೃದಯ ಸೀಳು ಸೀಳು
ಚುಚ್ಚುವ ಮುಳ್ಳು

---

ಬರಿದು ಬಾವಿ
ಒಣ ನದಿ ಕಾಲುವೆ
ಕಣ್ಣೀರ ಗತಿ

by ಹರೀಶ್ ಶೆಟ್ಟಿ, ಶಿರ್ವ 

Monday, March 3, 2014

ನನ್ನ ಮುರಿದ ಹೃದಯದಿಂದ

ನನ್ನ ಮುರಿದ ಹೃದಯದಿಂದ 
ಯಾರಾದರು ಇಂದಿದು ಕೇಳಲಿ 
ನನ್ನ ಅವಸ್ಥೆ ಏನೆಂದು 
ನನ್ನ ಅವಸ್ಥೆ ಏನೆಂದು
ನನ್ನ ಮುರಿದ ಹೃದಯದಿಂದ......

ಭಾಗ್ಯ ನಿನ್ನ ಪದ್ಧತಿ ಅದ್ಭುತವಾದದ್ದು 
ಅದು ನಿಷ್ಕಪಟನನ್ನು ವಂಚಿಸುವಂತಹದ್ದು
ಹೂವು ಅರಳಿದರೆ ಶಾಖೆ ಮುರಿಯುವುದು
ಒಲವೆಂದು ತಿಳಿದದ್ದು 
ನನ್ನ ದೃಷ್ಟಿಯ ದೋಷವಾಗಿತ್ತು
ಯಾರದು ಏನು ತಪ್ಪು ಇದರಲಿ
ನನ್ನ ಮುರಿದ ಹೃದಯದಿಂದ
ಯಾರಾದರು ಇಂದಿದು ಕೇಳಲಿ.....

ಕೇಳಿದ್ದು ಒಲವು ಪಡೆದದ್ದು ವಿರಹದ ಬೇಗೆ
ಇಷ್ಟವಾಗಲಿಲ್ಲ ಈ ಜಗತ್ತು ನನಗೆ
ಪ್ರಥಮ ಹೆಜ್ಜೆಯಲ್ಲಿಯೇ ಉರುಳಿ ಬಿದ್ದೆ ಹೀಗೆ
ಸದಾ ಮುಕ್ತವಾಗಿ ಸಂಚರಿಸುತ್ತಿದ್ದೆ
ನನಗೆ ಗೊತ್ತೇ ಏನಿತ್ತು
ಪ್ರೀತಿ ಅಂದರೆ ಏನೆಂದು
ನನ್ನ ಮುರಿದ ಹೃದಯದಿಂದ
ಯಾರಾದರು ಇಂದಿದು ಕೇಳಲಿ.....

ಮೂಲ : ಕ಼ಮರ್ ಜಲಲಾಬಾದಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಚ್ಚಲಿಯ

Mere Toote Hue Dil Se Koi To Aaj Ye Puchhe
Ke Tera Haal Kya Hai, Ke Tera Haal Kya Hai
Mere Toote Hue Dil Se..................

Kismat Teri Reet Niraali,\-2
O Chhaliye Ko Chhalane Vaali
Phool Khila To Tooti Daali
Jise Ulafat Samajh Baitha,
Meri Nazaron Ka Dhokha Tha
Kisi Ki Kya Khata Hai \-2
Mere Toote Hue Dil Se..................

Maangi Muhabbat Paai Judaai, \-2
Duniya Mujh Ko Raas Na Aai
Pahale Qadam Par Thokar Khaai
Sada Aazaad Rahate The,
Hamen Maalum Hi Kya Tha
Muhabbat Kya Bala Hai \-2
Mere Toote Hue Dil Se..................

http://www.youtube.com/watch?v=u_RevIlDtMk

ಹಾಯ್ಕು

ಉಣ್ಣುವ ಮಗು 
ಹಸಿದಿದ್ದ ಅಮ್ಮನ 
ತೃಪ್ತಿಯ ನೋಟ 

---

ವೇಶ್ಯ ಬಜಾರ 
ನಿತ್ಯ ಸಾಯುವ ದೇಹ 
ಕನಸ ಶ್ರಾದ್ಧ 

by ಹರೀಶ್ ಶೆಟ್ಟಿ,ಶಿರ್ವ

ಕೆಲವು ಹಾಯ್ಕುಗಳು

ಸೋಲಿನ ಭಯ 
ಬಣ್ಣವ ಬಳಸಿದ್ದ 
ಚಹರೆಯಲಿ

---

ಪಾರಿತೋಷಕ
ಸತ್ಯ ತಿರುಚಿದಕ್ಕೆ 
ಪುರಾಣಗಳ 

---

ಕಲ್ಲುಗಳಂತೆ 
ಈ ಹೃದಯಗಳೆಲ್ಲ
ಮೌನ ವಿಮರ್ಶೆ 

---

ಸಿದ್ಧತೆಯಲಿ
ತೇಲುವ ಮೇಘಗಳು,
ಧರೆಯ ಹರ್ಷ 

---

ಮುಪ್ಪು ನಿರೀಕ್ಷೆ
ಅಂಚೆಯಲಿ ಬಂದದ್ದು
ಸಾವಿನ ಸುದ್ಧಿ 

---

ಕಜ್ಜಳಯುಕ್ತ
ಕಂಗಳಲ್ಲಿ ಅನೇಕ 
ಶ್ವೇತ ಕನಸು 

by ಹರೀಶ್ ಶೆಟ್ಟಿ,ಶಿರ್ವ

Saturday, March 1, 2014

ಹೇಗಿದೆ ಈ ಋತು ಅಂದರೆ


ಹೇಗಿದೆ ಈ ಋತು ಅಂದರೆ
ಹೂವಿನ ಹಾಗೆ ಹೃದಯ ಅರಳುತ್ತಿದೆ
ಬೆರೆಯುತ್ತಿದೆ ಬಣ್ಣಗಳೆಲ್ಲ
ಬೆರೆಯುತ್ತಿದೆ ಸುಗಂಧಗಳೆಲ್ಲ
ಚಂದಿರ ಜಲಪಾತ
ಮೇಘ ಗೀತೆ
ವರ್ಷ ಚಿಟ್ಟೆಗಳೆಲ್ಲ
ಎಲ್ಲವೂ ನಮಗೆ ನೆರವಾಗಿದೆ
ಹೇಗಿದೆ ಈ ಋತು ಅಂದರೆ....

ನೋಡು ನದಿಯ ತೀರದಲಿ
ಹಕ್ಕಿ ಕರೆಯುತ್ತಿದೆ ಯಾವುದೇ ಹಕ್ಕಿಗೆ
ನೋಡು ಈ ನದಿಯೂ
ಸಿಗಲು ಹೋಗುತ್ತಿದೆ ಸಾಗರಕ್ಕೆ
ಇದು ಪ್ರೀತಿಯದ್ದೇ ಎಲ್ಲ ತಂಡಗಳಾಗಿವೆ
ಹೇಗಿದೆ ಈ ಋತು ಅಂದರೆ ....

ಹೇಗೆ ಹೇಳಲಿ ಯಾರಿಗೂ
ಹೇಗೆ ವಿವರಿಸಲಿ ಪ್ರೀತಿ ಏನೆಂದು
ಇದರಲ್ಲಿ ಬಂಧನವಿಲ್ಲ
ಹಾಗು ಯಾವುದೇ ಗೋಡೆಗಳಿಲ್ಲ
ಕೇಳು ಪ್ರೀತಿಯ ಕತೆ ಅದ್ಭುತವಾಗಿದೆ
ಹೇಗಿದೆ ಈ ಋತು ಅಂದರೆ ....

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಶ್ರೀನಿವಾಸ್
ಸಂಗೀತ : ಶಂಕರ್ ಏಹಸಾನ್ ಲಾಯ್
ಚಿತ್ರ : ದಿಲ್ ಚಾಹತಾ ಹೈ

(Kaisi hai yeh rut ke jis mein phool banke dil khile
Ghul rahe hain rang saare, ghul rahi hai khushbuein)- 2
Chaandni, jharne, ghataayein, geet, baarish, titliyaan
Hum pe ho gaye hai sab maherbaan
Kaisi hai yeh rut ke jis mein phool banke dil khile

Dekho, nadi ke kinaare
Panchhi pukaare kisi panchhi ko
Dekho, yeh jo nadi hai
Milne chali hai saagar hi ko
Yeh pyaar ka hi saara hai caarvaan
Kaisi hai yeh rut ke jis mein phool banke dil khile

Oh, kaise kisi ko bataaye
Kaise yeh samjhaaye, kya pyaar hai
Is mein bandhan nahin hai
Aur na koi bhi deevaar hai
Suno pyaar ki niraali hai daastaan
Kaisi hai yeh rut ke jis mein phool banke dil khile
Ghul rahe hain rang saare, ghul rahi hai khushbuein
Chaandni, jharne, ghataayein, geet, baarish, titliyaan
Hum pe ho gaye hai sab maherbaan
Kaisi hai yeh rut ke jis mein phool banke dil khile
http://www.youtube.com/watch?v=eoyEI23f0SE

ನೀ ನನ್ನ ಸನಿಹದಲ್ಲಿರುವೆ


ನೀ ನನ್ನ ಸನಿಹದಲ್ಲಿರುವೆ
ನಿನ್ನ ಕೇಶ ತೆರೆದಿದೆ
ನಿನ್ನ ಸೆರಗು ಸರಿದಿದೆ
ನಾನು ಪ್ರಜ್ಞೆಯಲಿ ಹೇಗಿರಲಿ

ನಿನ್ನ ಕಂಗಳು
ಅಮಲೇರಿಸುವ ಮದ್ಯದ ಪ್ಯಾಲೆ
ಹಾಗು ನಿನ್ನ ಕಂಪಿಸುವ ಅಧರಗಳು
ಮಧುಶಾಲೆ
ನನ್ನೆಲ್ಲ ಬಯಕೆಗಳು
ಇದೆಲ್ಲದರ ಮರುಳು
ನಾನು ಪ್ರಜ್ಞೆಯಲಿ ಹೇಗಿರಲಿ....

ನೀನು ನಗುವಾಗ
ಮಿಂಚು ಬೆಳಗಿದಂತಾಗುತ್ತದೆ
ನಿನ್ನ ಉಸಿರಿನಿಂದ
ಗುಲಾಬಿಯ ಸುಗಂಧ ಬರುತ್ತದೆ
ನೀನು ನಡೆಯುವಾಗ
ಪ್ರಕೃತಿಯೂ ಮಂತ್ರಮುಗ್ಧಗೊಳುತ್ತದೆ
ನಾನು ಪ್ರಜ್ಞೆಯಲಿ ಹೇಗಿರಲಿ....

ನೀ ನನ್ನ ಸನಿಹದಲ್ಲಿರುವೆ
ನಿನ್ನ ಕೇಶ ತೆರೆದಿದೆ
ನಿನ್ನ ಸೆರಗು ಸರಿದಿದೆ
ನಾನು ಪ್ರಜ್ಞೆಯಲಿ ಹೇಗಿರಲಿ

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಸುಹಾಗನ್

Tu mere samane hai
Teri zulfe hai khuli
Tera aanchal hai dhala
Main bhale hosh mein kaise rahun

Tu mere samane hai
Teri zulfe hai khuli
Tera aanchal hai dhala
Main bhale hosh mein kaise rahun
Tu mere samane hai

Teri aankhe to
Chhalakate hue paimaane hai
Aur tere honth
Larajate hue maikhane hai
Mere armaan isi
Baat ke deewane hai
Main bhala hosh
Mein kaise rahun
Kaise rahun tu mere samane hai

Tu jo hansati hai to
Bijali si chamak jaati hai
Teri saanso se gulaabo ki
Mahak aati hai
Tu jo chalati hai to kudarat bhi
Bahak jaati hai
Main bhala hosh mein
Kaise rahun kaise rahun

Tu mere samane hai
Teri zulfe hai khuli
Tera aanchal hai dhala
Main bhale hosh mein kaise rahun
Tu mere samane hai.
http://www.youtube.com/watch?v=Zmw9NgluAlw

ಶಿವರಾತ್ರಿ

ಈಶ್ವರ ಲಿಂಗ 
ಬಿಲ್ವ ಎಲೆ ಅರ್ಪಣೆ 
ಸಂತುಷ್ಟ ಮನ 

------

ತಿರುಕನಿಗೆ 
ನಿತ್ಯದ ಜಾಗರಣೆ 
ತಿಂಡಿ ಇಲ್ಲದೆ 

-------

ಆರದಿರಲಿ 
ಭಕ್ತಿ ಭಾವದ ದೀಪ 
ಪ್ರಜ್ವಲಿಸಲಿ 

by ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ