Monday, August 6, 2012

ದುಃಖ

ಮನುಜ...
ದುಃಖ ನೀನು ಮಾಡಿದ ತಪ್ಪಿನ ಪರಿಣಾಮ
ಇದನ್ನು ಪ್ರತಿ ಮನುಷ್ಯನಿಗೆ ಸಹಿಸ ಬೇಕಾಗುತ್ತದೆ
ನಿನ್ನ ದುಃಖ ಬೇರೆ ಯಾರು ಹಂಚಲಾರರು
ನಿನ್ನ ಆಪ್ತ ಮಿತ್ರನಾಗಲಿ ,ಸಂಭಂದಿಕರಾಗಲಿ, ಕುಟುಂಬಿಯರಾಗಲಿ
ಇವರೆಲ್ಲ ನಿನಗೆ ಸಾಂತ್ವನೆ ಕೊಡಬಲ್ಲರು
ಸಹಾಯ ಮಾಡಬಲ್ಲರು
ಆದರೆ ನಿನ್ನ ದುಃಖ ಕಸಿದು ಕೊಳ್ಳಲಾರರು
ನಿನ್ನ ದುಃಖ ಕೇವಲ ನಿನ್ನದೇ
ನಿನ್ನ ದುಃಖದ ನೀನೆ ವಾರಸುದಾರ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸ್ನೇಹ

ಚಾರಿತ್ರ್ಯ

Thursday, August 2, 2012

ದಾರಿ ದೀಪ

ಮನುಜ...
ದೀಪದ ಗುಣ ನೋಡು
ಸ್ವತಃ ಉರಿದು ಅನ್ಯರಿಗೆ ಬೆಳಕು ನೀಡುತ್ತದೆ 
ನಿನ್ನ ಜೀವನವೂ ಹೀಗೆಯೇ ಇರಲಿ
ಸನ್ಮಾರ್ಗದ ಹಾದಿ ನಿನ್ನದಾಗಲಿ
ನಿನ್ನ ಜೀವನ ಅನ್ಯರ ಬದುಕಿನ ದಾರಿ ದೀಪ ಆಗಲಿ
ಅನ್ಯರ ಕಷ್ಟವನ್ನು ತನ್ನದೆಂದು ತಿಳಿದು
ಅದರಲ್ಲಿ ನೀನು ಬೆಂದು
ನಿನ್ನ ಜೀವನ ಕಂಚನವಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಗುಲಾಬಿ ಹೂ

ಗೆಳತಿ...
ನೀನು ಕೊಟ್ಟ ಗುಲಾಬಿ ಹೂ
ಇಂದು ಒಣಗಿದೆ
ಆದರೆ ಅದರಲ್ಲಿ ನಿನ್ನ
ನೆನಪ ಪರಿಮಳ ಇಂದೂ
ಘಮ ಘಮಿಸುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

ವಾಣಿ

ಗೆಲುವು

ಸಿದ್ಧಿದಾತ್ರಿ