!!ನೆಮ್ಮದಿಯಿಂದ ನನಗೆಂದೂ
ನೀನು ಬದುಕಲು ಬಿಡಲಿಲ್ಲ
ವಿಷವೂ ಬಯಸಿದರೂ ಕುಡಿಯಲೆಂದು
ಕುಡಿಯಲು ಬಿಡಲಿಲ್ಲ!!
!!ಚಂದ್ರನ ರಥದಲಿ
ರಾತ್ರಿಯ ಮದುಮಗಳು
ಬರುವಳು ಯಾವಾಗ
ನೆನಪು ನನ್ನ
ನಿನ್ನ ಹೃದಯವನ್ನು
ಹಂಬಲಿಸಿ ಹೋಗುವುದು ಆವಾಗ
ನೀನು ನೀಡಿದನ್ನು
ಅದನ್ಯಾರು ನೀಡಲಿಲ್ಲ!!
ವಿಷವೂ ಬಯಸಿದರೂ ...
!!ನಿನ್ನ ದುಃಖ ಈ ಹೃದಯದಲಿ
ಒಂದು ವೇಳೆ ಇರುತ್ತಿದ್ದರೆ ರಾತ್ರಿ ದಿನ
ಯೋಚಿಸಿ ಇದನ್ನು ಉಸಿರುಗಟ್ಟುತ್ತದೆ
ಮತ್ತೇಗೆ ಸಾಗುತ್ತಿತ್ತೋ ಈ ಜೀವನ
ಅಯ್ಯೋ ಈ ಅಗಲಿಕೆ
ನಮಗೆ ಬರಬಾರದಿತ್ತು
ಸಾವೇ ಬಂದಿದ್ದರೂ ನಡೆಯುತ್ತಿತ್ತು
ಯಾವುದೇ ವಿಧದಿಂದ ನಮ್ಮ ನೆಮ್ಮದಿ
ತನ್ನ ಆತ್ಮವನ್ನು ಪಡೆಯುತ್ತಿತ್ತು
ಒಂದು ಕ್ಷಣ ನಗುವುದಾದರೂ
ಈ ಹೃದಯದ ವೇದನೆಯೂ ಬಿಡಲಿಲ್ಲ!!
ವಿಷವೂ ಬಯಸಿದರೂ....
ಮೂಲ : ಎಸ್ .ಎಚ್ .ಬಿಹಾರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಸ್ಲೆ
ಸಂಗೀತ : ಓ .ಪಿ .ನಯ್ಯರ್
ಚಿತ್ರ : ಪ್ರಾಣ್ ಜಾಯೆ ಪರ್ ವಚನ್ ನ ಜಾಯೆ
चैन से हम को कभी, आप ने जीने ना दिया
जहर भी चाहा अगर, पीना तो पीने ना दिया
चाँद के रथ में, रात की दुल्हन जब जब आयेगी
याद हमारी, आप के दिल को, तड़पा जायेगी
आप ने जो हैं दिया, वो तो किसी ने ना दिया
आप का गम जो, इस दिल में दिनरात अगर होगा
सोच के ये दम घुटता है, फिर कैसे गुजर होगा
काश न आती अपनी जुदाई, मौत ही आ जाती
कोइ बहाने चैन हमारी, रूह तो पा जाती
एक पल हसना कभी, दिल की लगी ने ना दिया
http://www.youtube.com/watch?v=Yc1MfFxpYEI
ಇಷ್ಟ ಆಯಿತು ಸಾರ್....
ReplyDelete