Tuesday, March 20, 2012

ಅಪ್ಪ

ಅಪ್ಪ ಅಪ್ಪ ಯಾಕಪ್ಪ
ನನ್ನ ಬಿಟ್ಟು
ನೀನು ಏಕೆ ಹೋದೆ ಅಪ್ಪ !

ನಾ ಈ ಜಗದಲಿ ಬಂದಾಗ
ನೀನು ಊರೆಲ್ಲ ನಲಿದು
ಎಲ್ಲರಿಗೂ ಸಿಹಿ ತಿಂಡಿ ಹಂಚಿ
ನನ್ನನ್ನು ಸ್ವಾಗತಿಸಿದ ವಿಷಯ
ನನಗೆ ಅಮ್ಮ ತಿಳಿಸಿದಳು ಅಪ್ಪ
ನೀನು ನನ್ನ ಮೊದಲ
ಕನಸಿನ ನಾಯಕ ಅಪ್ಪ !

ನಾನು ಸೌಖ್ಯ ಇಲ್ಲದೆ ನರಳುತ್ತಿದ್ದಾಗ
ತನ್ನ ಹೆಗಲ ಮೇಲೆ
ಬಂಡಿಯಂತೆ ನನ್ನನ್ನು ಎತ್ತಿಕೊಂಡು
ದೇವಿ ಮಾತೆಯ ಮಡಿಲಲ್ಲಿ
ನನ್ನನ್ನು ರಕ್ಷಿಸು ಎಂದು ಕೋರಿ
ನಿನ್ನ ಮುಗ್ಧ ಭಕ್ತಿಯಿಂದ
ನನ್ನನ್ನು ನೀನು ಉಳಿಸಿದೆ ಅಪ್ಪ !

ಸೈಕಲ್ ಬೇಕೆಂದು ನಾನು ಅತ್ತಾಗ
ಸಾಧ್ಯವಿಲ್ಲದಿದ್ದರೂ ತಾನು
ಉಳಿಸಿದ ಹಣದಿಂದ
ನನ್ನ ಇಚ್ಚೆಯನ್ನು ಪೂರೈಸಿ
ಹೊಸ ಸೈಕಲ್ ತಂದು ಕೊಟ್ಟು
ನನ್ನ ಕಣ್ಣೀರು ಒರೆಸಿ
ನನ್ನನ್ನು ನಗಿಸಿ ನೀನು ಸಂತೋಷ ಪಡೆದೆ ಅಪ್ಪ !

ನನ್ನ ಮದುವೆ ಆದ ನಂತರ
ಸೊಸೆಯ ಸ್ವಭಾವ ಅರಿತು
ಅವಳ ಬಯಕೆಯಂತೆ
ನಮಗೆ ಬೇರೆ ಸಂಸಾರ ಮಾಡಿ ಕೊಟ್ಟು
ತನ್ನ ಮನಸ್ಸಿನ ವೇದನೆ ಬಚ್ಚಿಟ್ಟು
ಸ್ವತ ಅನಾಥನಾಗಿ ಇದ್ದು
ಕೇವಲ ನಮ್ಮ ಸುಖ ಕಂಡು ನೀನು ಆನಂದಿಸಿದೆ ಅಪ್ಪ !

ನಿನ್ನ ಅಂತ್ಯ ಸಮಯದಲ್ಲಿ
ದೂರವಿದ್ದ ನಾನು ಬರಲಾಗದೆ
ನಿನ್ನ ಶವವನ್ನು ಕಾಣಲು ಸಿಗದೆ
ನಾನು ಅತ್ತು ಅತ್ತು ಕಂಗಾಲಾಗಿ
ನೋವಿನಿಂದ ಬಳಲಿದೆ ಅಪ್ಪ
ನಿನ್ನ ಅಂತ್ಯ ಸಂಸ್ಕಾರ ಮಾಡಲು ಸಿಗದ
ನಾನೊಬ್ಬ ಮಹಾ ಪಾಪಿ ಅಪ್ಪ !

ಅಪ್ಪ ಅಪ್ಪ ಯಾಕಪ್ಪ
ನನ್ನ ಬಿಟ್ಟು
ನೀನು ಏಕೆ ಹೋದೆ ಅಪ್ಪ !
by ಹರೀಶ್ ಶೆಟ್ಟಿ, ಶಿರ್ವ







No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...