Tuesday, March 13, 2012

ಪ್ರತಿಫಲ

ಕುಂಟ ಜೀವ ಶರೀರ ಊನ
ಬೆನ್ನಲ್ಲಿ ಉಬ್ಬು ದೊಡ್ಡ ಮುಖ
ದೇಹ ಕುರೂಪಿ ಹೃದಯ ಸುಂದರ
ಪರಿಶ್ರಮಿ ಹಠ ಧರ್ಮಿ
ಸರಳ ಜೀವನ ಬಂಗಾರ ಜನ !

ಅವಳು ಕುರುಡಿ ಅನಾಥೆ
ಬಲಿಷ್ಠ ದೇಹ ಸುಂದರಿ
ಬಡತನ ಬಟ್ಟೆ ಜರಿ ಜರಿ
ಜಗತ್ತೆಲ್ಲ ಅವಳಿಗೆ ಹಸಿರು
ಭಿಕ್ಷೆ ಸಿಕ್ಕಿದರೆ ಉಸಿರು !

ಕಂಡು ಅವಳ ದೀನ ಅವಸ್ಥೆ
ಕರೆದು ಕೊಂಡು ಬಂದ ತನ್ನ ಮನೆಗೆ
ಅವಳಲ್ಲಿ ಹುಟ್ಟಿತು
ಜೀವಿಸಲು ಹೊಸ ಭರವಸೆ
ಒಟ್ಟಿಗೆ ಸಾಗಿತು ಜೀವನ ರಸ್ತೆ !

ಪ್ರೇಮಾಂಕುರ ಹುಟ್ಟಿತು ಅವನಲ್ಲಿ
ಹೇಳಲು ಬೀತಿ ಅವಳಲ್ಲಿ
ಅವಳಿಗೆ ತನ್ನ ಕಣ್ಣಿಂದ
ಪ್ರಪಂಚವನ್ನು ನೋಡುವ ಭಯಕೆ
ಅವನಿಗೂ ತಿಳಿಯಿತು ಅವಳ ಇಚ್ಛೆ !

ತಾನು ಉಳಿಸಿದ ಹಣದಿಂದ
ಮಾಡಿಸಿದ ಅವಳ
ಕಣ್ಣಿನ ಶಸ್ತ್ರ ಚಿಕತ್ಸೆ
ಮರಳಿತು ಅವಳ ದೃಷ್ಟಿ
ಅವನನ್ನು ನೋಡಿಯೇ ಆಗುವುದೆಂದಲೂ ತೃಪ್ತಿ !

ಅವನನ್ನು ನೋಡಿ ಅವಳಿಗೆ ಆಯಿತು ಆಘಾತ
ಅವನಿಗೆ ಅಸೀಮ ಸಂತೋಷ
ಹೋದ ಹೊರಗೆ ಸಿಹಿ ತರಲೆಂದು
ಅವಳ ಮನಸ್ಸು ಕುದಿಯುತ್ತಿತ್ತು ಬೆಂದು
ಬಂದಳು ನಿರ್ಧಾರಕ್ಕೆ ಒಂದು !

ಅವನ ಒಳ್ಳೆತನವನ್ನು ಮರೆತು
ಅವನ ಭಾಗ್ಯವನ್ನು ಸುಟ್ಟು
ತಾನು ಹೋಗುತ್ತಿದ್ದೇನೆ ಎಂಬ ಪತ್ರ ಇಟ್ಟು
ಹೊರಟು ಹೋದಳು ಅವಳು
ಜಗತ್ತಿನ ಅಂಧಕಾರದಲ್ಲಿ ಅವನನ್ನು ಬಿಟ್ಟು!
by ಹರೀಶ್ ಶೆಟ್ಟಿ. ಶಿರ್ವ
(ಒಂದು ಕಥೆಯನ್ನು ಓದಿ ಬರೆದದ್ದು )

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...