Saturday, March 31, 2012

ಕಾವಲುಗಾರ

ರಾತ್ರಿ ಚಂದಿರ
ನಿದ್ದೆಯಲಿ ಸೂರ್ಯ
ಬೀಸುತ್ತಿರುವ ಗಾಳಿ
ನಾಯಿಗಳ ಬೊಗಳುವಿಕೆ
ಮೈ ಕಂಪಿಸುವ ನೀರವತೆ
ಕತ್ತಲ ಕಾವಲುಗಾರ ಯಾರು !

ಹರಿಯುತ್ತಿರುವ ಕಣ್ಣೀರು
ಗಾಬರಿಕೆಯ ಅಲೆಗಳು
ನಿರಂತರ ಕಾಯುವಿಕೆ
ಪುರುಷ ದಬ್ಬಾಳಿಕೆ
ಸಂಸಾರ ಪತನಕ್ಕೆ
ಕುಟುಂಬದ ಕಾವಲುಗಾರ ಯಾರು!

ಜೀವನದ ಪಯಣ
ಯೌವನ ಮುಪ್ಪು
ಶ್ವೇತ ಕಪ್ಪು
ಕರ್ಮದ ಪಲಿತಾಂಶ
ಸರಿ ತಪ್ಪು
ಜೀವನದ ಕಾವಲುಗಾರ ಯಾರು !

ಆತ್ಮ ಪರಮಾತ್ಮ
ಸತ್ಯ ಸುಳ್ಳು
ಧರ್ಮ ಅಧರ್ಮ
ಜಾತಿ ಸಂಸ್ಕೃತಿ
ಬೌತಿಕ ಆಧ್ಯಾತ್ಮಿಕ
ಒಳ ಜಗದ ಕಾವಲುಗಾರ ಯಾರು !
by ಹರೀಶ್ ಶೆಟ್ಟಿ, ಶಿರ್ವ




Friday, March 30, 2012

ಅವಳೇ

ಆಕಾಶದಲಿ ಒಂದು ನಕ್ಷತ್ರ ಮಿನುಗಿತು
ಅವಳೇ ನನ್ನನ್ನು ಮೋಡಗಳ ಮರೆಯಿಂದ ನೋಡುತ್ತಿದ್ದಂತೆ ಭಾಸವಾಯಿತು ..
ಶುಭ ರಾತ್ರಿ
by ಹರೀಶ್ ಶೆಟ್ಟಿ, ಶಿರ್ವ

ಸಮುದ್ರ ಹಾಗು ಅವಳು

ಸಮುದ್ರದ ತೀರದಲಿ
ನಡೆತ ನಡೆತ ಮರಳಲ್ಲಿ
ಅಲ್ಲೇ ಕುಳಿತು
ಮರಳಿಂದ ಕನಸ
ಮನೆ ಮಾಡುತ್ತಿದ್ದೆ
ಸಮುದ್ರದ ನೀರ ಅಲೆವೊಂದು
ಬಂದು ಮರಳ ಮನೆಯನ್ನು
ಮುರಿದಾಗ
ಮನದಲ್ಲಿ ಬಂತು ವಿಚಾರ
ಅವಳೂ ಈ ಸಮುದ್ರದ
ನೀರಿನ ಅಲೆಯಂತೆ ಅಲ್ಲವೇ
ಹೀಗೆಯೇ ನನ್ನ
ಜೀವನದಲ್ಲಿ ಬಂದು ನನ್ನ
ಮನೆ ಮುರಿದು ಹೋದಳಲ್ಲ
ನನ್ನ ಕನಸನ್ನು ಚೂರು ಚೂರು ಮಾಡಿದಳಲ್ಲ
ಹಾಗಾದರೆ ಈ ಸಮುದ್ರ
ಸಹ ಅವಳಂತೆ ಅಲ್ಲವೇ
ತನ್ನ ಎಲ್ಲದನ್ನು ಕೊಟ್ಟು
ಒಂದೇ ಕ್ಷಣದಲಿ
ಎಲ್ಲವನ್ನು ಕಸಿದು ಕೊಂಡಂತೆ
ಸಮುದ್ರ ಸಹ ಪರಮ ಉಪಯೋಗಿ ಆಗಿಯೂ
ಮುನಿದರೆ ಎಲ್ಲವನ್ನು ಕಸಿದು ಕೊಳ್ಳುತ್ತದೆ ಅಲ್ಲವೇ...
by ಹರೀಶ್ ಶೆಟ್ಟಿ, ಶಿರ್ವ

ಯಕ್ಷಿಣಿ

ಅವಳು ನನ್ನ ಹೃದಯ ಮಾರ್ಗದಿಂದ  ಬಂದು
ನನ್ನ ಮನಸ್ಸನ್ನು ಕದ್ದು
ಪ್ರೀತಿಯ ಮಾಯಾ ಜಾಲೆಯಿಂದ ನನ್ನನ್ನು ತನ್ನ ವಶ ಪಡಿಸಿದ ಯಕ್ಷಿಣಿ
by ಹರೀಶ್ ಶೆಟ್ಟಿ, ಶಿರ್ವ

Thursday, March 29, 2012

ಮಾರಾಟಕ್ಕೆ ಇದೆ

ರಕ್ತ ಮಾಂಸದಿಂದ
ತುಂಬಿದ ಬಡ ಶರೀರ
ಮುರಿದ ಆಸೆಯಿಂದ 
ತನ್ನ ಯೌವನವನ್ನು ನೀಡುತ
ಕೆಂಪು ಮನೆಯಲಿ
ಕಣ್ಣೀರಿಟ್ಟು ಜೀವಿಸುವ
ಹೆಣ್ಣ ಬಾಳು ಮಾರಾಟಕ್ಕೆ ಇದೆ !

ಮಗುವನ್ನು ಹೆತ್ತು
ಅಮ್ಮ ಎನ್ನುವ ದೈವ
ರಕ್ಕಸ ರೂಪ ತಾಳಿ
ಮೊಲೆ ಹಾಲು ನೀಡದೆ
ಹಸಿದ ಮಗುವನ್ನು
ಕಸದ ಬುಟ್ಟಿಯಲಿ ಬಿಟ್ಟಿದ
ತಾಯಿಯ ಮೊಲೆ ಹಾಲು ಮಾರಾಟಕ್ಕೆ ಇದೆ !

ತನ್ನನ್ನು ಪೋಷಿಸಿದ
ತಂದೆ ತಾಯಿಯ
ಉಪಕಾರವನ್ನು ಮರೆತು
ಅವರ ಸ್ವಪ್ನವನ್ನು ಮುರಿದು 
ಅಪಮಾನ ಮಾಡಿ 
ಮನೆಯಿಂದ ಹೊರ ದೂಡಿ 
ವೃದ್ಧಾಶ್ರಮ ಸೇರಿಸುವ
ಮಕ್ಕಳ ನೀಚ ಸಂಸ್ಕೃತಿ ಮಾರಾಟಕ್ಕೆಇದೆ !
by ಹರೀಶ್ ಶೆಟ್ಟಿ, ಶಿರ್ವ


Wednesday, March 28, 2012

ಬದುಕು

ಬದುಕು
ಜನ್ಮ
ಮತ್ತು 
ಮರಣದ
ಮಧ್ಯೆ
ಇರುವ
ಸೇತುವೆ.....
ನಿಷ್ಠೆಯಿಂದ
ಪ್ರೀತಿಯಿಂದ
ದೈರ್ಯದಿಂದ
ಜೀವನ ಸಾಗಿಸಿ
ಅನೇಕ ಹಾಗೂ
ಹೋಗುಗಳಿವೆ.....
by ಹರೀಶ್ ಶೆಟ್ಟಿ, ಶಿರ್ವ 

Tuesday, March 27, 2012

ಭಾಗ್ಯ

ಮನೆಯಲ್ಲಿ ಏರಿಸಿದ ಕಂದೀಲು
ಆಚೆ ಈಚೆ ಅಳಗಾಡುವ ತೊಟ್ಟಿಲು
ತೊಟ್ಟಿಲಲ್ಲಿ ಆಡುತಿದೆ ಮಗು ಎತ್ತಿ ಕೈ ಕಾಲು
ಹೊರಗೆ ಬಡ ಮಗುವೊಂದು ಅಳುತ್ತಿತ್ತು ಇಲ್ಲ ಹಾಲು !

ಮಗುವಿನ ನಾಮಕರಣ
ಭವ್ಯ ಉತ್ಸವ ವಾತಾವರಣ
ನೆಂಟ ಇಷ್ಟರ ಆಗಮನ
ಹೊರಗೆ ಬಡ ಅಳುವ ಮಗುವಿನ ಬದಿಯಲ್ಲಿ ಇಲ್ಲ ಜನ !

ಸಂಗೀತ ಸಮಾರಂಭ
ಗಾಯನ ವಾದನ
ಉತ್ತಮ ಔತಣ
ಕೇಳಲಿಲ್ಲ ಯಾರಿಗೂ ಹಾಲಿಗಾಗಿ ಅಳುವ ಮಗುವಿನ ರೋದನ !

ಅನೇಕ ಉಡುಗೊರೆ ಮಾನ ಅಭಿನಂದನ
ಐಶ್ವರ್ಯದ ಪ್ರದರ್ಶನ
ವೈಭವದ ಸಮಾಪನ
ಶಾಂತವಾಗಿತ್ತು ಹೊರಗೆ ಅಳುತ್ತಿದ್ದ ಮಗುವಿನ ಗಾನ !
by ಹರೀಶ್ ಶೆಟ್ಟಿ, ಶಿರ್ವ

ಕ್ಯಾನ್ಸರ್

ಆ ಹುಡುಗಿಗೆ ಕಾಯಿಲೆ
ಎಳೆ ವಯಸ್ಸಿನಲ್ಲಿ
ಕೂದಲಿಲ್ಲದೆ ಬೋಳು ತಲೆ
ತಂದೆ ತಾಯಿಯ ಒಲವಿನ ಬಾಲೆ !

ಕ್ಯಾನ್ಸರ್ ಕಾಯಿಲೆಯಿಂದ ಪೀಡಿತೆ
ಹೇಗೆ ಹೇಳಲಿ ಅವಳ ವ್ಯಥೆ
ಶಾಲೆಯಲ್ಲಿ ಕಡಿಮೆ
ಆಸ್ಪತ್ರೆಯ ಪ್ರವಾಸ ಪದೇ ಪದೇ!

ಆಡಿ ಓಡುವ ಪ್ರಾಯ
ದೇವರ ಕ್ರೂರ ಮಾಯಾ
ಮುಗಿಯಿತು ಅವಳ ಸಮಯ
ಸಾವಿನ ಆಯಿತು ವಿಜಯ !

ಏಕೆ ಈ ಸಜೆ ಹೆತ್ತ ತಾಯಿಗೆ
ಏಕೆ ಈ ಭಾರ ಬಡ ತಂದೆಗೆ
ಕರುಣೆ ಇಲ್ಲವೇ ದೇವರಿಗೆ
ಭಯ ಇಲ್ಲವೇ ಮೃತ್ಯುವಿಗೆ !
by ಹರೀಶ್ ಶೆಟ್ಟಿ, ಶಿರ್ವ

Monday, March 26, 2012

ನಿನ್ನ ಮೌನ

ನಿನ್ನ ಮೌನ....
ಮುಂಜಾನೆಯಲಿ
ಕರಗಿದ ಮಂಜಿನ
ಪಾರದರ್ಶಕ ಹನಿ ಮುತ್ತು
ನಿನ್ನ ಮಂದ ಭಾವ ವ್ಯಕ್ತಪಡಿಸುತ್ತದೆ !

ನಿನ್ನ ಮೌನ ....
ಉದ್ಯಾನದಲಿ
ಅರಳಿದ ಹೂವಿನೊಂದಿಗೆ
ಇದ್ದ ಚುಚ್ಚುವ ಮುಳ್ಳು
ನಿನ್ನ ವೇದನೆ ತಿಳಿಸುತ್ತದೆ !

ನಿನ್ನ ಮೌನ....
ರಾತ್ರಿಯಲಿ
ಅಸಂಖ್ಯ ನಕ್ಷತ್ರಗಳ ಮಧ್ಯೆ
ಪ್ರಯಾಣಿಸುವ ಏಕಾಂತ ಚಂದ್ರ
ನಿನ್ನ ಏಕಾಂಗಿತನ ದರ್ಶಿಸುತ್ತದೆ !
by ಹರೀಶ್ ಶೆಟ್ಟಿ, ಶಿರ್ವ

ತಪ್ಪು

ಬದುಕಿನ
ಪಯಣವನ್ನು
ಸುಗಮವಾಗಿ
ಕಳೆದೆ ಎಂಬ
ಹೆಮ್ಮೆ ನನಗಿತ್ತು ......
ಹಿಂತಿರುಗಿ
ನೋಡುವಾಗ
ಕಂಡು ಬಂತು
ತಪ್ಪೇ ತಪ್ಪು....
by ಹರೀಶ್ ಶೆಟ್ಟಿ, ಶಿರ್ವ

Sunday, March 25, 2012

ಹಸಿವು ಆಹಾರ

ಮೀನಿನ ಹಸಿವಿನ ಬಗ್ಗೆ  ಹದ್ದಿಗೆ ಅರಿವಿಲ್ಲ 
ಮೀನಿನ ಆಹಾರ ಏನೆಂದು ಹದ್ದಿಗೆ ಗೊತ್ತಿಲ್ಲ  
ಹದ್ದಿಗೆ ಹಸಿವಾದಾಗ ಸಿಕ್ಕಿದ ಮೀನೆ ಅದರ ಆಹಾರವಾಯಿತಲ್ಲ
by ಹರೀಶ್ ಶೆಟ್ಟಿ, ಶಿರ್ವ 

ಹೂವಿನ ಮೊಗ್ಗು

ಅಪಕ್ವ ಮನಸ್ಸು
ಎಳೆ ವಯಸ್ಸು
ಬೆಳೆದ ದೇಹ
ಸುಂದರ ರೂಪ
ಮುಗ್ಧ ಸ್ವಭಾವ 
ಲೋಕ ಪ್ರಪಂಚದ ಅರಿವಿಲ್ಲ !

ವಿದ್ಯಾಲಯದ ಸ್ನೇಹ
ಹೇಳಲು ಮಿತ್ರ
ಆಪ್ತ ಸ್ನೇಹಿತ
ಕ್ರೂರ ಚರಿತ್ರ
ಕಪಟ ವ್ಯಕ್ತಿತ್ವ
ಗೆಳೆತನ ಸಂಬಂಧದ ಗೌರವ ಇಲ್ಲ !

ವಿಶ್ವಾಸಘಾತಕತೆ
ಮೋಸ ವಂಚನೆ ಕಾಮುಕತೆ
ಬೀಸಿದ ಜಾಲ
ಬಲೆಯಲ್ಲಿ ಬಾಲಿಕೆ
ಬಲಾತ್ಕಾರ ಅತ್ಯಾಚಾರ
ಹೂವಿನ ಮೊಗ್ಗು ಅರಳುವ ಮುನ್ನವೇ ಬಾಡಿತಲ್ಲ  !
by ಹರೀಶ್ ಶೆಟ್ಟಿ, ಶಿರ್ವ

Thursday, March 22, 2012

ಶರಣ

ಬಾಲ್ಯ ಭ್ರಮಿತ
ಕೆಟ್ಟ ಸಂಗತ
ದೂರ ವಿದ್ಯೆ
ಗುರಿ ಇಲ್ಲದ ಜೀವನ

ಕಳ್ಳತನ ವ್ಯಭಿಚಾರ
ದರೋಡೆ ಕೊಲೆ
ಮಾದಕ ವ್ಯಸನ
ತಪ್ಪು ಮಾರ್ಗದಲಿ ಜೀವನ

ಅಸ್ಥಿರ ನಿವಾಸ
ಜೈಲು ಪ್ರವಾಸ
ದುಷ್ಟರ ಸಹವಾಸ
ವ್ಯರ್ಥ ಅಲೆಯುತ್ತಿದ್ದ ಜೀವನ

ಅವಳ ಸಾಮಿಪ್ಯ
ಬೇಟಿ ಪ್ರತಿನಿತ್ಯ
ಅರಿವಾಯಿತು ಅವಳ ಅಗತ್ಯ
ದಾರಿಗೆ ಬಂತು ಜೀವನ

ಪ್ರೇಮ ಪಾವನ
ತಿರುಗಿತು ಜೀವನ
ಬಾಳು ವೃಂದಾವನ
ಈಗ ಅವಳ ಶರಣ ಜೀವನ
by ಹರೀಶ್ ಶೆಟ್ಟಿ, ಶಿರ್ವ






Wednesday, March 21, 2012

ಸತ್ಯದ ಹಾದಿ

ಸತ್ಯದ ಹಾದಿ ಮುಳ್ಳ ಪಟ್ಟ
ಹರಿಯುವ ರಕ್ತ ಕೊಳೆತ ಗಾಯ
ಸಪಾಟ ಮುಖ ಅಪೇಕ್ಷಿಸುವ ನೋಟ
ತ್ರಾಣವಿಲ್ಲದೆ ಕಂಪಿಸುವ ಕಾಲುಗಳು !

ಅನೇಕ ಆಶ್ವಾಸನೆಗಳು
ಸುಳ್ಳು ಅಪವಾದಗಳು
ಕಪಟ ಸಾಂತ್ವನೆಗಳು
ಧೂಳಿನ ಹಾಸಿಗೆಯಲಿ ವಿಶ್ರಮಿಸುವ ಫೈಲುಗಳು !

ಕಚೇರಿ ಕಚೇರಿಯ ಓಟ
ಜಯ ಸಿಗದ ಹೋರಾಟ
ಅದರೂ ಸತ್ಯದ ಚಟ
ನಿದ್ರೆಯಲ್ಲಿ ಗೊರಕೆ ಹೊಡೆಯುವ ಕಾನೂನುಗಳು !

ರಾಕ್ಷಸ ರೂಪ ಭ್ರಷ್ಟಾಚಾರಗಳು
ಬಾಯಿ ಅಂಗಲಾಚಿ ಕೇಳುವ ಲಂಚಗಳು
ಕೆಸರಲ್ಲಿ ತೇಲುವ ಸತ್ಯ ಪತಾಕೆಗಳು
ಮರಣ ಶೈಯದಲ್ಲಿ ಕೊನೆ ಉಸಿರೆಳೆಯುವ ಹಕ್ಕುಗಳು!
by ಹರೀಶ್ ಶೆಟ್ಟಿ, ಶಿರ್ವ


Tuesday, March 20, 2012

ಗುಬ್ಬಚ್ಚಿ

ಗುಬ್ಬಚ್ಚಿ ಗುಬ್ಬಚ್ಚಿ
ಮುಂಜಾನೆ ಮುಂಜಾನೆ
ಕೇಳಿ ಬರುತ್ತದೆ ನಿನ್ನ ಚಿ ಚಿ

ಮೆಲ್ಲನೆ ಕಿಟಕಿಯಲ್ಲಿ ಬಂದು
ಅಕ್ಕಿ ಧಾನ್ಯವನ್ನು ತಿಂದು
ಆಕಾಶದಲ್ಲಿ ಹಾರಿ ಹೋಗುವೆ ಸಂತೋಷಗೊಂಡು

ಜೇಡರ ಬಲೆಯನ್ನು ತಂದು
ಹುಲ್ಲಿನ ಕಡ್ಡಿಗಳನ್ನು ಹೆಕ್ಕಿ ತಂದು
ಕನಸಿನ ಗೂಡನ್ನು ಕಟ್ಟುವೆ ಪರಿಶ್ರಮಗೊಂಡು

ನೀನೆಷ್ಟು ಬುದ್ದಿವಂತೆ ಗುಬ್ಬಚ್ಚಿ
ನಿನ್ನ ಗೂಡಿನ ಅಂದ ನೋಡಿ ಹೊಗಳುತ್ತೇನೆ ನಿನ್ನನ್ನು ಮೆಚ್ಚಿ 
ನಿನ್ನ ಜೀವನದಿಂದ ಮನುಷ್ಯನಿಗೂ ಕಲಿಯಲಿದೆ ಹೆಚ್ಚಿ
by ಹರೀಶ್ ಶೆಟ್ಟಿ, ಶಿರ್ವ

ಅಪ್ಪ

ಅಪ್ಪ ಅಪ್ಪ ಯಾಕಪ್ಪ
ನನ್ನ ಬಿಟ್ಟು
ನೀನು ಏಕೆ ಹೋದೆ ಅಪ್ಪ !

ನಾ ಈ ಜಗದಲಿ ಬಂದಾಗ
ನೀನು ಊರೆಲ್ಲ ನಲಿದು
ಎಲ್ಲರಿಗೂ ಸಿಹಿ ತಿಂಡಿ ಹಂಚಿ
ನನ್ನನ್ನು ಸ್ವಾಗತಿಸಿದ ವಿಷಯ
ನನಗೆ ಅಮ್ಮ ತಿಳಿಸಿದಳು ಅಪ್ಪ
ನೀನು ನನ್ನ ಮೊದಲ
ಕನಸಿನ ನಾಯಕ ಅಪ್ಪ !

ನಾನು ಸೌಖ್ಯ ಇಲ್ಲದೆ ನರಳುತ್ತಿದ್ದಾಗ
ತನ್ನ ಹೆಗಲ ಮೇಲೆ
ಬಂಡಿಯಂತೆ ನನ್ನನ್ನು ಎತ್ತಿಕೊಂಡು
ದೇವಿ ಮಾತೆಯ ಮಡಿಲಲ್ಲಿ
ನನ್ನನ್ನು ರಕ್ಷಿಸು ಎಂದು ಕೋರಿ
ನಿನ್ನ ಮುಗ್ಧ ಭಕ್ತಿಯಿಂದ
ನನ್ನನ್ನು ನೀನು ಉಳಿಸಿದೆ ಅಪ್ಪ !

ಸೈಕಲ್ ಬೇಕೆಂದು ನಾನು ಅತ್ತಾಗ
ಸಾಧ್ಯವಿಲ್ಲದಿದ್ದರೂ ತಾನು
ಉಳಿಸಿದ ಹಣದಿಂದ
ನನ್ನ ಇಚ್ಚೆಯನ್ನು ಪೂರೈಸಿ
ಹೊಸ ಸೈಕಲ್ ತಂದು ಕೊಟ್ಟು
ನನ್ನ ಕಣ್ಣೀರು ಒರೆಸಿ
ನನ್ನನ್ನು ನಗಿಸಿ ನೀನು ಸಂತೋಷ ಪಡೆದೆ ಅಪ್ಪ !

ನನ್ನ ಮದುವೆ ಆದ ನಂತರ
ಸೊಸೆಯ ಸ್ವಭಾವ ಅರಿತು
ಅವಳ ಬಯಕೆಯಂತೆ
ನಮಗೆ ಬೇರೆ ಸಂಸಾರ ಮಾಡಿ ಕೊಟ್ಟು
ತನ್ನ ಮನಸ್ಸಿನ ವೇದನೆ ಬಚ್ಚಿಟ್ಟು
ಸ್ವತ ಅನಾಥನಾಗಿ ಇದ್ದು
ಕೇವಲ ನಮ್ಮ ಸುಖ ಕಂಡು ನೀನು ಆನಂದಿಸಿದೆ ಅಪ್ಪ !

ನಿನ್ನ ಅಂತ್ಯ ಸಮಯದಲ್ಲಿ
ದೂರವಿದ್ದ ನಾನು ಬರಲಾಗದೆ
ನಿನ್ನ ಶವವನ್ನು ಕಾಣಲು ಸಿಗದೆ
ನಾನು ಅತ್ತು ಅತ್ತು ಕಂಗಾಲಾಗಿ
ನೋವಿನಿಂದ ಬಳಲಿದೆ ಅಪ್ಪ
ನಿನ್ನ ಅಂತ್ಯ ಸಂಸ್ಕಾರ ಮಾಡಲು ಸಿಗದ
ನಾನೊಬ್ಬ ಮಹಾ ಪಾಪಿ ಅಪ್ಪ !

ಅಪ್ಪ ಅಪ್ಪ ಯಾಕಪ್ಪ
ನನ್ನ ಬಿಟ್ಟು
ನೀನು ಏಕೆ ಹೋದೆ ಅಪ್ಪ !
by ಹರೀಶ್ ಶೆಟ್ಟಿ, ಶಿರ್ವ







Monday, March 19, 2012

ಬಣ್ಣರಹಿತ

ಈ ಕಣ್ಣೀರು
ಏಕೆ ಬಣ್ಣರಹಿತ
ಇಲ್ಲವಾದರೆ
ನನ್ನ ಕಣ್ಣೀರಿನಿಂದಲೇ
ನಿನ್ನ ಜೀವನದಲ್ಲಿ ಇನ್ನೂ ಬಣ್ಣ ತುಂಬುತ್ತಿದ್ದೆ
by ಹರೀಶ್ ಶೆಟ್ಟಿ, ಶಿರ್ವ

ಅಂಧಕಾರ

ಈಗ ಬೆಳಕಲ್ಲಿ ನನಗಿಲ್ಲ ಇಷ್ಟ
ಅವಳಿಲ್ಲದೆ ಜೀವನದಲ್ಲಿ ಕೇವಲ ಅಂಧಕಾರ
ಕತ್ತಲು ನನ್ನ ಅದೃಷ್ಟ
by ಹರೀಶ್ ಶೆಟ್ಟಿ, ಶಿರ್ವ

Saturday, March 17, 2012

ಏನು ಪ್ರಯೋಜನ

ಪ್ರೀತಿ ಕಾಳಜಿಯೆಂದು
ಮನಸ್ಸನ್ನು ಕೊಂದು
ಆರೈಕೆ ಮಾಡಿದರೆ
ಏನು ಪ್ರಯೋಜನ  !

ಇದ್ದ ಸೌಭಾಗ್ಯ ನಿರ್ಲಕ್ಷಿಸಿ
ಸಿಗದ ಮರೀಚಿಕೆಯ
ಹಿಂದೆ ಓಡಿದರೆ
ಏನು ಪ್ರಯೋಜನ !

ಅರ್ಥವಿಲ್ಲದ ಮಾತನ್ನಾಡಿ
ಆತ್ಮೀಯನೆಂದು 
ನಟಿಸಿದರೆ
ಏನು ಪ್ರಯೋಜನ !

ಅರಳಿದ ಹೂವನ್ನು ಮೆಟ್ಟಿ
ವ್ಯರ್ಥವಾದ ಅಸ್ವಾಭಾವಿಕ
ಸುವಾಸನೆ ಬೀರಿದರೆ
ಏನು ಪ್ರಯೋಜನ !

ಹಾಸಿಗೆಯನ್ನು ಮಡಿಕೆ ಮಾಡಿಟ್ಟು
ಬಂದ ಅತಿಥಿಗೆ
ನೆಲದ ಮೇಲೆ ಮಲಗು ಎಂದು ಹೇಳಿದರೆ
ಏನು ಪ್ರಯೋಜನ !

ಊರೆಲ್ಲ ಉಂಡಾಡಿ
ಸಜ್ಜನನೆಂದು ಸುಳ್ಳು ನೆಪ ಮಾಡಿ
ಸೋಮಾರಿಯಾಗಿ ತಿರುಗುತ್ತಿದ್ದರೆ
ಏನು ಪ್ರಯೋಜನ !
by ಹರೀಶ್ ಶೆಟ್ಟಿ, ಶಿರ್ವ

Thursday, March 15, 2012

ಉತ್ತರ

ಆ ಹರಿದ ಪುಸ್ತಕದ ಹಾಳೆಗಳು
ಈಗಲೂ ಹಲವು ಕಥೆಗಳನ್ನು ಹೇಳುತ್ತಿದೆ
ನಿನಗಾಗಿ ಬರೆದ ಕವನಗಳು
ಇಂದೂ ನನ್ನನ್ನು ಪ್ರಶ್ನಿಸುತ್ತಿದೆ
ಶೂನ್ಯ ಸೂಚಿಸುವ ನನ್ನ ಮುಖದಲ್ಲೆಲ್ಲಿದೆ ಉತ್ತರ  !

ಹೇಗೆ ಬದಲಾಯಿತ್ತಲ್ಲವೇ ಜೀವನ
ನೆನೆಸಿ ಮೈಯಲಾಗುತ್ತದೆ  ಕಂಪನ
ನಮ್ಮ ಪ್ರೀತಿಯಲ್ಲಿದ್ದ ಸಮರ್ಪಣ
ಪಾಲಕರ ಅನಾವಶ್ಯಕ ನಿರಾಕರಣ
ಅಂದು ನಡೆದ ಘಟನೆಗಳಲ್ಲಿ ಹುಡುಕುತ್ತಿದ್ದೇನೆ ಉತ್ತರ !

ಇಂದು ನಮ್ಮ ಬೇರೆ ಬೇರೆ ಸಂಸಾರ
ಈಗ ನಾವು ನಿರತ ನಮ್ಮ ಪ್ರತ್ಯೇಕ ಪರಿವಾರದಲಿ
ಹೃದಯದಲಿ ಆಗುವ ನೋವು ಅಡಗಿದೆ
ನಮ್ಮ ಸುಳ್ಳು ವ್ಯವಾರಿಕ ನಗು ಮುಖದಲಿ
ಈ ವೇದನೆ ಈಗಲೂ ಏಕೆ ಎಂದು ಕೇಳಿದರೂ ಸಿಗುದಿಲ್ಲ ಉತ್ತರ !
by ಹರೀಶ್ ಶೆಟ್ಟಿ, ಶಿರ್ವ

Wednesday, March 14, 2012

ಕಣ್ಣೀರಿಗೆ ಕೋಪ

ನನ್ನ ಕಣ್ಣೀರಿಗೆ ಸಹ ನನ್ನಿಂದ ಕೋಪ
ವ್ಯರ್ಥ ಅವಳಿಗಾಗಿ ಹರಿಸುತ್ತಿದ್ದೇನೆ ಎಂದು
by ಹರೀಶ್ ಶೆಟ್ಟಿ, ಶಿರ್ವ

ಕತ್ತಲೆಯ ಪ್ರಕಾಶ

ಅವನು ದೃಷ್ಟಿಹೀನ
ಮುಂಜಾನೆಯ ಬೆಳಕು ಅವನಿಗೆ ಅರ್ಥಹೀನ
ಆದರೆ ಅವನದ್ದು ಸ್ಥಿರ ಏಳುವ ಗಳಿಗೆ
ಕೆಲಸಕ್ಕೆ ಸರಿ ಹಾಜರಿಗೆ
ಅವನಲ್ಲಿ ಸಮಯ ಪ್ರಜ್ಞೆ

ನಿಸರ್ಗದ ಸೌಂದರ್ಯ ಅವನು ನೋಡಲಾರ
ಆದರೆ ಸ್ಪರ್ಶಿಸಿ ಅನುಭವಿಸಬಲ್ಲ
ನಾನು ಯಾರು ಅವನು ಯಾರು
ಸ್ಪರ್ಶಿಸಿ ಯಾರನ್ನು ಬೇಕಾದರೂ ಅವನು ಗುರುತಿಸಬಲ್ಲ
ಅವನಲ್ಲಿ ಅಸಾಧಾರಣ ಸ್ಪರ್ಶ ಶಕ್ತಿ

ದೂರದಿಂದ ಬರುವ ಹಕ್ಕಿಯ ಚಿಲಿಪಿಲಿ ಸ್ವರ
ಕೋಗಿಲೆಯ ಕುಹೂ ಕುಹೂ
ಎಲ್ಲಿಂದಲೂ ಮೆಲ್ಲ ಕರೆದ ದ್ವನಿ
ಅವನು ಕೇಳಬಲ್ಲ
ಅವನಲ್ಲಿ ಅದ್ಭುತ ಶ್ರವಣ ಶಕ್ತಿ

ಅನೇಕ ವರ್ಷ ನಂತರ ಸಿಕ್ಕಿದರು
ಅವರು ಅವನ ಜ್ನಾಪಕದಲಿ
ಯಾವುದೇ ವಿಳಾಸ ಅವನಲ್ಲಿ ಕೇಳಿದರು
ಅದು ಅವನ  ನೆನಪಿನಲಿ
ಅವನಲ್ಲಿ ಆಲೌಕಿಕ ಸ್ಮರಣೆ ಶಕ್ತಿ
by  ಹರೀಶ್ ಶೆಟ್ಟಿ, ಶಿರ್ವ

ವರದಕ್ಷಿಣೆ

ಸಂಪತ್ತು ಇಲ್ಲ
ಭೂಮಿಯು ಇಲ್ಲ
ಕೂಡಿಟ್ಟಿದ
ಮರ್ಯಾದೆಯನ್ನು ಹೊತ್ತು
ಹೊರಟೆ ಮಗಳ
ಮದುವೆ ಮಾಡಲು
ಮಾನ ಬಚ್ಚಿಟ್ಟು
ಆದರೆ ಅವರು ಕೇಳಿದರು
"ವರದಕ್ಷಿಣೆ" ಎಂಬ ಸೊತ್ತು
ವಿದ್ಯಾವಂತೆ ನನ್ನ ಮಗಳು
ಹೇಳಿದಳು ಅವರಿಗೆ
ನಿಮಗೆ ಬುದ್ದಿ
ಕಲಿಸಲು ನನಗೆ ಗೊತ್ತು
ಕರೆದಳು ಪೊಲೀಸರಿಗೆ
ಬಂಧಿಸಿದಳು ಅವರನ್ನು
ಬಂತು ಅವರಿಗೆ ವಿಪತ್ತು
by ಹರೀಶ್ ಶೆಟ್ಟಿ ಶಿರ್ವ

Tuesday, March 13, 2012

ನನ್ನ ಮನೆಯಲ್ಲಿ

ಅನೇಕ ಹಾದಿಗಳು
ನಿನ್ನ ಮನೆಗೆ ಹೋಗಲು
ನಿನ್ನ ಹೃದಯಕ್ಕೆ ಮುಟ್ಟುವ
ಹಾದಿ ಯಾವುದು ಪ್ರಿಯೆ !

ನೂರು ಕನಸುಗಳು
ಅದರಲ್ಲಿ ನಿನ್ನ ಪ್ರತಿರೂಪಗಳು
ಆ ಸಿಹಿ ಕನಸುಗಳು
ನನಸಾಗುವುದು ಯಾವಾಗ ಪ್ರಿಯೆ !

ಉದ್ಯಾನದಲಿ ಅನೇಕ
ಅರಳಿದ ಮಲ್ಲಿಗೆ ಹೂಗಳು
ನಿನ್ನ ಸುಂದರ ತಲೆ ಜುಟ್ಟಿನ
ಸಿಂಗಾರ ಆಗುವುದು ಯಾವಾಗ ಪ್ರಿಯೆ !

ನನ್ನ ಹೃದಯ ಮನಸ್ಸಲಿ
ನಿನ್ನದೆ ವಾಸವಿದೆ
ನನ್ನ ಮನೆಯಲ್ಲಿ
ನಿನ್ನ ವಾಸ ಯಾವಾಗ ಪ್ರಿಯೆ !
by ಹರೀಶ್ ಶೆಟ್ಟಿ, ಶಿರ್ವ

ಮನಸ್ಸಲಿ

ನಾನಲ್ಲಿ
ನೀನಲ್ಲಿ
ನಾ ನಿನ್ನ ಕನಸಲಿ
ನೀ ನನ್ನ ಕನಸಲಿ
ನಾನು ನಿನ್ನ
ನೀನು ನನ್ನ ಮನಸ್ಸಲಿ
by ಹರೀಶ್ ಶೆಟ್ಟಿ, ಶಿರ್ವ

ಪ್ರತಿಫಲ

ಕುಂಟ ಜೀವ ಶರೀರ ಊನ
ಬೆನ್ನಲ್ಲಿ ಉಬ್ಬು ದೊಡ್ಡ ಮುಖ
ದೇಹ ಕುರೂಪಿ ಹೃದಯ ಸುಂದರ
ಪರಿಶ್ರಮಿ ಹಠ ಧರ್ಮಿ
ಸರಳ ಜೀವನ ಬಂಗಾರ ಜನ !

ಅವಳು ಕುರುಡಿ ಅನಾಥೆ
ಬಲಿಷ್ಠ ದೇಹ ಸುಂದರಿ
ಬಡತನ ಬಟ್ಟೆ ಜರಿ ಜರಿ
ಜಗತ್ತೆಲ್ಲ ಅವಳಿಗೆ ಹಸಿರು
ಭಿಕ್ಷೆ ಸಿಕ್ಕಿದರೆ ಉಸಿರು !

ಕಂಡು ಅವಳ ದೀನ ಅವಸ್ಥೆ
ಕರೆದು ಕೊಂಡು ಬಂದ ತನ್ನ ಮನೆಗೆ
ಅವಳಲ್ಲಿ ಹುಟ್ಟಿತು
ಜೀವಿಸಲು ಹೊಸ ಭರವಸೆ
ಒಟ್ಟಿಗೆ ಸಾಗಿತು ಜೀವನ ರಸ್ತೆ !

ಪ್ರೇಮಾಂಕುರ ಹುಟ್ಟಿತು ಅವನಲ್ಲಿ
ಹೇಳಲು ಬೀತಿ ಅವಳಲ್ಲಿ
ಅವಳಿಗೆ ತನ್ನ ಕಣ್ಣಿಂದ
ಪ್ರಪಂಚವನ್ನು ನೋಡುವ ಭಯಕೆ
ಅವನಿಗೂ ತಿಳಿಯಿತು ಅವಳ ಇಚ್ಛೆ !

ತಾನು ಉಳಿಸಿದ ಹಣದಿಂದ
ಮಾಡಿಸಿದ ಅವಳ
ಕಣ್ಣಿನ ಶಸ್ತ್ರ ಚಿಕತ್ಸೆ
ಮರಳಿತು ಅವಳ ದೃಷ್ಟಿ
ಅವನನ್ನು ನೋಡಿಯೇ ಆಗುವುದೆಂದಲೂ ತೃಪ್ತಿ !

ಅವನನ್ನು ನೋಡಿ ಅವಳಿಗೆ ಆಯಿತು ಆಘಾತ
ಅವನಿಗೆ ಅಸೀಮ ಸಂತೋಷ
ಹೋದ ಹೊರಗೆ ಸಿಹಿ ತರಲೆಂದು
ಅವಳ ಮನಸ್ಸು ಕುದಿಯುತ್ತಿತ್ತು ಬೆಂದು
ಬಂದಳು ನಿರ್ಧಾರಕ್ಕೆ ಒಂದು !

ಅವನ ಒಳ್ಳೆತನವನ್ನು ಮರೆತು
ಅವನ ಭಾಗ್ಯವನ್ನು ಸುಟ್ಟು
ತಾನು ಹೋಗುತ್ತಿದ್ದೇನೆ ಎಂಬ ಪತ್ರ ಇಟ್ಟು
ಹೊರಟು ಹೋದಳು ಅವಳು
ಜಗತ್ತಿನ ಅಂಧಕಾರದಲ್ಲಿ ಅವನನ್ನು ಬಿಟ್ಟು!
by ಹರೀಶ್ ಶೆಟ್ಟಿ. ಶಿರ್ವ
(ಒಂದು ಕಥೆಯನ್ನು ಓದಿ ಬರೆದದ್ದು )

Sunday, March 11, 2012

ಪ್ರೀತಿಯ ಆ ಕ್ಷಣ

ನಿನ್ನ ಪ್ರೀತಿಯ
ಆ ಅಮೋಘ ಗಳಿಗೆ
ನಾನು ಹೇಗೆ ಮರೆಯಲಿ
ಹಗಲು ಇರುಳು ನಾ
ನಿನ್ನದೇ ಸ್ವಪ್ನ ನೋಡುತ್ತಿದ್ದೆ ?

ನಿನ್ನನ್ನು ಕಾಣಲು
ತಡವಾಗಿ ಏಳುವ ನಾ
ಮುಂಜಾನೆ ಬೇಗ ಎದ್ದು
ಉದ್ಯಾನದಿಂದ ಪುಷ್ಪವನ್ನು ಕಿತ್ತು
ನೀ ಬರುವ ಹಾದಿಯಲಿ ಕಾಯುತ್ತಿದೆ !

ಸಂಜೆಯ ಸಮಯ
ಕೆಲಸದಿಂದ ನೀನು ಹಿಂತಿತುಗಿ
ಬರುವ ಸಮಯ
ನಿನ್ನನ್ನೆ ಕಾಯುತ  ನಾ
ಸೂರ್ಯನಿಗೆ ವಿದಾಯ ನೀಡುತ್ತಿದ್ದೆ !

ಪ್ರೀತಿ ಆದ ನಂತರ
ನಮ್ಮ ಮಧ್ಯೆ ನಡೆದ
ಘಟನೆಗಳು ಇಂದೂ
ನನ್ನ ಸ್ಮೃತಿ ಪಟಲದಲಿ 
ಹಾಗೆಯೇ ತಾಜಾವಾಗಿ ಉಳಿದಿದೆ !

ಪರಿಸ್ಥಿತಿ ವಶ ನಾವು
ಪ್ರತ್ಯೇಕವಾದ ಆ ಕ್ಷಣ
ಇಂದೂ ನನ್ನ ಹೃದಯದಲಿ
ಅಸೀಮ ನೋವು ತಂದು
ಕಣ್ಣಿಂದ ಕಣ್ಣೀರು ಹರಿಸುತ್ತಿದೆ ! 
by ಹರೀಶ್ ಶೆಟ್ಟಿ, ಶಿರ್ವ

ಉಪಕಾರಕ್ಕೆ ಅಪಕಾರ

ನನ್ನ ಜೀವನ ನೀಡಿ
ಬದುಕು ಕೊಟ್ಟೆ ಅವಳಿಗೆ
ಈಗ ನನ್ನ ಜೀವನವೇ
ಜಿಗುಪ್ಸೆ ತಂದಿತು ಅವಳಿಗೆ!

ಸ್ವಂತ ರಕ್ತ ನೀಡಿ
ಉಳಿಸಿದೆ ಅವಳಿಗೆ
ಈಗ ನನ್ನ ರಕ್ತದಲ್ಲಿಯೇ
ರೋಗಾಣು ಕಂಡಿತು ಅವಳಿಗೆ !

ಮಾನ ಉಳಿಸಿ
ಆಶ್ರಯ ಕೊಟ್ಟೆ ಅವಳಿಗೆ
ಈಗ ನನ್ನನ್ನೆ ನಿರಾಶ್ರಿತ ಮಾಡುವುದರಲ್ಲಿ
ಅವಳ ಸುಖ ಕಂಡಿತು ಅವಳಿಗೆ !

ದೇವರಲ್ಲ ನಾನು
ಆದರೆ ರಕ್ಷಕನಾಗಿ ಕಾಪಾಡಿದೆ ಅವಳಿಗೆ
ನನ್ನನ್ನೆ ಅರಕ್ಷಿತ ಮಾಡುವುದರಲ್ಲಿ
ಅವಳ ಸುರಕ್ಷತೆ ಕಂಡಿತು ಅವಳಿಗೆ !
by ಹರೀಶ್ ಶೆಟ್ಟಿ, ಶಿರ್ವ

Saturday, March 10, 2012

ಹೆತ್ತವರ ನೋವು

ಅವನು ಹುಟ್ಟಿದಾಗ
ಅವನ ಸುಂದರ ಮುಖ
ನೋಡಿದಾಗ
ಆನಂದ ಬಾಷ್ಪ ಸುರಿದಾಗ
ಹೆಂಡತಿಯ ಮುಖದಲಿ 
ಹೆಮ್ಮೆಯ ಹೊಳಪು ಕಂಡಾಗ
ಭಾವನೆ ಮಿಡಿಯಿತು
ಒಂದು ಕವನ ಹೊಳೆಯಿತು !

ಅವನ ಬಾಲ್ಯದಲಿ
ಅವನು ಮುಗ್ಧ ನೋಟ
ಬೀರುವಾಗ,
ಆಟ ಆಡುವಾಗ
ಅವನ ತುಂಟತನ
ಕಂಡು ಮನ ತುಂಬಾ ನಕ್ಕಾಗ
ಭಾವನೆ ಮಿಡಿಯಿತು
ಒಂದು ಕವನ ಹೊಳೆಯಿತು !

ಮನಸ್ಸನ್ನು ಗಟ್ಟಿ ಮಾಡಿ
ಅವನನ್ನು
ಹಾಸ್ಟೆಲ್ ಕಳಿಸಲು
ಅವನ ದಾಖಲೆ ಮಾಡಿದಾಗ
ಕಣ್ಣೀರು ಹೊರ ತರದೇ
ಅವನ ಮುಂದೆ ಕಟುಕನಾಗಿ
ವರ್ತಿಸುವಾಗ
ಭಾವನೆ ಮಿಡಿಯಿತು
ಒಂದು ಕವನ ಹೊಳೆಯಿತು !

ಅವನನ್ನು ಪರದೇಶ
ಕಳಿಸುವಾಗ,
ಅವನ ಅಮ್ಮನ
ಕಣ್ಣೀರು ಕಂಡಾಗ
ನೋವನ್ನು ಮನಸ್ಸಲಿ
ಅಡಗಿಸಿದಾಗ
ಭಾವನೆ ಮಿಡಿಯಿತು
ಒಂದು ಕವನ ಹೊಳೆಯಿತು !
by ಹರೀಶ್ ಶೆಟ್ಟಿ, ಶಿರ್ವ

ಪರಿವರ್ತನ

ಹದಿನೆಂಟನೇ ವಯಸ್ಸಿನ
ತುಂಬಿದ ಯೌವನ
ವಿಲಾಸಿ ಜೀವನ
ಸೊಕ್ಕು ವರ್ತನ
ಲಗಾಮಿಲ್ಲದ ಕುದುರೆಯಂತೆ !

ಹಾಳು ಸಂಗತನ
ನಶೆಯ ವ್ಯಸನ
ಅನೇಕ ಅವಗುಣ
ದಿನ ಸಾಯುತ್ತಿದ್ದ ಪ್ರಾಣ
ಗಲ್ಲಿಯಲ್ಲಿ ಅಲೆಯುವ ನಾಯಿಯಂತೆ !

ಅನೈತಿಕ ಸಂಬಂಧದ ವರಣ
ಮಹಿಳೆಯ ಶೋಷಣ
ಸತ್ಯದ ಅನಾವರಣ
ಪಾಲಕರ ಧೋರಣ
ಕೋಪದಿಂದ ಮತಿಗೆಟ್ಟುವ ಗೂಳಿಯಂತೆ !

ಧೂಳಿಗೆ ಸಿಕ್ಕಿತು ಅಹಂಕಾರ ಮಾನ
ಕಂಡಿತು ದರ್ಪಣ
ಬಂತು ಪರಿವರ್ತನ
ಅವತಾರ ಹೊಸ ಮನುಷ್ಯನ
ಮಣ್ಣಿಗೆ ಸೇರಿ ಪುನಃ ಚಿಗುರಿದ ಸುಂದರ ಬಳ್ಳಿಯಂತೆ !
by ಹರೀಶ್ ಶೆಟ್ಟಿ, ಶಿರ್ವ

Friday, March 9, 2012

ಮುಂಜಾನೆ

ಮುಂಜಾನೆ
ಪರಿಮಳ ಹಸಿ ಮಣ್ಣಿನ
ಚಿಲಿಪಿಲಿ ಹಕ್ಕಿಗಳ ಗಾನ
ತಾಜಾ ಪ್ರಶಾಂತ ವಾತಾವರಣ
ನಿರ್ಮಲವಾಯಿತು ತನುಮನ
ಸರ್ವರಿಗೂ ಶುಭ ಮುಂಜಾನೆ .....
by ಹರೀಶ್ ಶೆಟ್ಟಿ, ಶಿರ್ವ

ನಕ್ಷತ್ರ

ಆಕಾಶದಲಿ ನಕ್ಷತ್ರಗಳು ಅನೇಕ
ತುಂಡಾಗಿ ಕೆಳ ಬೀಳುವುದು ಏಕ
ಮನಸ್ಸಲಿ ಭಾವನೆಗಳು ಅನೇಕ
ಕವನ ಆಗಿ ಹೊರ ಬರುವುದು ಏಕ
by ಹರೀಶ್ ಶೆಟ್ಟಿ, ಶಿರ್ವ

ಶೂನ್ಯ

ಶೂನ್ಯ
ಬೆಲೆಯಿಲ್ಲದ
ಬೆಲೆಬಾಳುವ

ಅವನು ಹಾಗೆ
ಮನೆಗೆ ಮಾರಿ
ಊರಿಗೆ ಉಪಕಾರಿ

ವಿಚಿತ್ರ ಅವನ ವರ್ತನ
ವ್ಯವಹಾರದಲ್ಲಿ ದುರ್ಜನ
ಉಪಕಾರದಲ್ಲಿ ಸಜ್ಜನ

ಅನಿರೀಕ್ಷಿತ ಅಭಿವ್ಯಕ್ತಿ ಅವನ
ಅಪರಾಧಿ ಕಾರ್ಯ ಕ್ರಮಣ
ಜನರಲ್ಲಿ ದೇವರ ಸ್ಥಾನ

ಅಲ್ಪಸಮಯದ ಜೀವನ
ಅನೇಕ ಅಪಮಾನ
ಲೆಕ್ಕ ಇಲ್ಲದ ಸನ್ಮಾನ

ಅಂತ ಭಯಂಕರ ಅವನ
ದೂರ ಎಲ್ಲ ಕುಟುಂಬ ಜನ
ಬಹು ದುರಂತ ಮರಣ
by ಹರೀಶ್ ಶೆಟ್ಟಿ, ಶಿರ್ವ

Wednesday, March 7, 2012

ಕೇವಲ ಪತ್ರ

ಕಣ್ಣಲ್ಲಿ
ನನ್ನ
ನಿನ್ನದೆ ಚಿತ್ರ!

ನಿನ್ನ ರೂಪ
ಅಡಗಿದೆ
ಹೃದಯದಲಿ
ಅಲ್ಲವೇ ಇದು ವಿಚಿತ್ರ!

ನಾನು ನಿನ್ನ
ನೀನು ನನ್ನ
ಮನಸ್ಸಲಿ ಪ್ರೇಮದ ಮಂತ್ರ!

ನೀನಿಲ್ಲ
ನನ್ನ ಹತ್ತಿರ
ನಾನಿಲ್ಲ ನಿನ್ನ ಹತ್ತಿರ
ಪ್ರೀತಿಯ ಆಧಾರ ಕೇವಲ ಪತ್ರ !
by ಹರೀಶ್ ಶೆಟ್ಟಿ, ಶಿರ್ವ

Monday, March 5, 2012

ಅಪ್ಸರೆ

ಸುಂದರ ಸುಕನ್ಯೆ
ಸುಕೋಮಲೆ
ಆಚೆ ಈಚೆ ಅಲ್ಲಾಡುವ
ಉಯ್ಯಾಲೆ !

ಅದ್ಭುತ ರೂಪ
ನಯನ ತಾರೆ
ಆಕಾಶದಿಂದ ಇಳಿದ
ಅಪ್ಸರೆ ಬಾಲೆ !

ಧರಿಸಿ ಕೊರಳಲಿ
ಚಿನ್ನದ  ಸಂಕೋಲೆ
ಹೆಣೆದ ಜಡೆಯಲಿ
ಮಲ್ಲಿಗೆಯ ಹೂ ಮಾಲೆ !

ಕನಸಿನ ರಾಣಿ
ಲಾವಣ್ಯ ರೂಪಿಣಿ
ಬುಗ್ಗೆಂದು ಎದ್ದಿತು
ಪ್ರೀತಿಯ ಜ್ವಾಲೆ !
by ಹರೀಶ್ ಶೆಟ್ಟಿ, ಶಿರ್ವ

Sunday, March 4, 2012

ತಿರುವು

ಮುಚ್ಚಿದ ಕಮಲ ಅರಳಿತು
ಸೂರ್ಯನ ಕಿರಣ ದೊರಕಿದ ನಂತರ !
ನಿಸರ್ಗ ಸೌಂದರ್ಯ ಪಸರಿಸಿತು
ಮಂಜಿನ ಹನಿ ಕರಗಿದ ನಂತರ !
ನವಿಲು ತನ್ನ ಗರಿ ತೆರೆಯಿತು
ಮಳೆಯ ಹನಿ ಭೂಮಿಯ ಮೇಲೆ ಬಿದ್ದ ನಂತರ !
ಜೀವನದಲಿ ಒಂದು ತಿರುವು ಬಂತು
ಅವಳ ಪ್ರೀತಿಯ ಆಗಮನದ ನಂತರ !
by  ಹರೀಶ್ ಶೆಟ್ಟಿ,ಶಿರ್ವ

Saturday, March 3, 2012

ನಾನು ಕನ್ನಡ

ನಾನು ಕನ್ನಡ..........
ಅರೆ ಬೆತ್ತಲೆ
ಒಂದು ಗುಂಪು ಬಂದು
ಹರಿದ ಸೀರೆಯ ಹೊದಿಸಿದರು
ಸಾವರಿಸುವಾಗ ತನ್ನ ಮೈಯ ಮುಚ್ಚಿ
ಅವರೇ ನಗ್ನ ಮಾಡಲು ಪ್ರಯತ್ನಿಸಿದರು ನನ್ನ ಕಣ್ಣ ಮುಚ್ಚಿ

ಬೇರೊಂದು ಗುಂಪು ಬಂದು
ತನ್ನ ಶಾಲನ್ನು ಹೊದಿಸಿದರು  
ಮೈ ಮೆರೆತರು ನನಗೆ ಹೊಸ ರೂಪವ ಕೊಟ್ಟು
ಆನಂದಿಸುವಾಗ ನಾ ಪುನಃ ವಸ್ತ್ರ ತೊಟ್ಟು
ಅವರೇ ಶಾಲನ್ನು ಎಳೆಯಲು ಆರಂಬಿಸಿದರು ಹಿಡಿದು ನನ್ನ ಜೊಟ್ಟು

ಇನ್ನೊಂದು ಗುಂಪು ಬಂತು
ನಾ ಪುನಃ ವಸ್ತ್ರ ಅಲಂಕೃತವಾದೆ
ತನ್ನ ಭಾಗ್ಯಕ್ಕೆ ಹೆಮ್ಮೆ ಪಡೆದೆ
ಆದರೆ ಪುನಃ ಅವರ ದುರಹಂಕಾರಕ್ಕೆ ಬಲಿಯಾದೆ
ನಾ ಪೂರ್ಣ ಬೆತ್ತಲೆಯಾಗಿಯೇ ಉಳಿದೆ
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...