Thursday, January 28, 2021

ನಿರೀಕ್ಷೆ

 


Photo:Google


ಹೇಳಿಬಿಡಲೇ, 

ಮನಸ್ಸಿನ ಭಾರ ಇಳಿಸಿಬಿಡಲೇ, 

ಶಿಶಿರದ ಒಣ ಬಿಸಿಲಿನಂತೆ ಸುಡುತ್ತಿದೆ ಈ ಹೃದಯ,

 ತಿಳಿಸಿಬಿಡಲೇ, 

ನನ್ನ ನೋವನ್ನು, 

ಇರಲಿ!! 

ವಸಂತದ ಆಗಮನ ಆಗಲಿದೆ ಇನ್ನು!!!

-

ಪ್ರತಿ ಕ್ಷಣ ಅವನ ಹೆಜ್ಜೆಯ ಧ್ವನಿ ಕೇಳುತ್ತದೆ, 

ಬೀಸುವ ಗಾಳಿಯಲ್ಲಿ ಅವನ ಮೈಯ ಕಂಪು ಬರುತ್ತದೆ,

ಎಲ್ಲಿಂದಲೋ ಹಾರಿಬಂದ ಒಣ ಎಳೆಯ ಸ್ಪರ್ಶದಲಿ ಅವನ ಸ್ಪರ್ಶದ ಅನುಭವ ಆಗುತ್ತದೆ, 

ಹೇಳಿಬಿಡಲೇ, 

ನನ್ನ ಭಾವನೆಗಳನ್ನು, 

ಇರಲಿ!! 

ಅವನ ಆಗಮನ ಆಗಲಿದೆ ಇನ್ನು!!!

-

ಮುಂಜಾನೆ ಬೀಸುವ ಗಾಳಿಯ ಸಂಗೀತದಿಂದ ನನ್ನ ಚಡಪಡಿಕೆ ಹೆಚ್ಚಾಗುತ್ತಿದೆ, 

ದಿನ ಮಾತಾಡಿ ಸಾಂತ್ವನ ನೀಡುವ ಪಾರಿವಾಳ ಇಂದು ನನ್ನ ಕೀಟಲೆ ಮಾಡುತ್ತಿದೆ,

ಕನ್ನಡಿ ನನ್ನ ಸಿಂಗಾರ ನೋಡಿ ಮಂದಹಾಸ ಬೀರುತ್ತಿದೆ,

ಹೇಳಿಬಿಡಲೇ, 

ನನ್ನ ಆತುರತೆಯನ್ನು, 

ಇರಲಿ!! 

ನೋಡ ಬೇಕು ನನಗೆ ಅವನ ಉತ್ಸಾಹವನ್ನೂ!!!

-

ನಿರೀಕ್ಷೆ ಮುಗಿಯಿತು ಇನ್ನು, 

ಮೊರೆ ಕೊಡುವೆ ಅವನಲ್ಲಿ ನಾನು, 

ಎಲ್ಲಾ ವ್ಯಥೆಯನ್ನು ಅವನ ಪ್ರೀತಿಯಿಂದ ಮಾಯಗೊಳಿಸುವೆ ನಾನು, 

ಹೇಳಿಬಿಡುವೆ ಎಲ್ಲವನ್ನೂ, 

ಬರಲಿ ಅವನು!! 

ಬದುಕಲಿ ಹೊಸ ಚೈತನ್ಯ ತುಂಬಲಿದೆ ಇನ್ನು!!!

-

by ಹರೀಶ್ ಶೆಟ್ಟಿ, ಶಿರ್ವ

Wednesday, January 27, 2021

ಕೇಳಬೇಡ


Photo :Google



ಕೇಳಬೇಡ ಯಾಕೆ ಅವಳನ್ನು ಇನ್ನೂ ಸ್ಮೃತಿಯಲ್ಲಿ ಇರುಸುವೆ ಎಂದು, 

ಕೇಳಬೇಡ ಅವಳನ್ನು ನೆನೆದು ಯಾಕೆ ಮೌನದಲಿ ಅಳುವೆಯೆಂದು,

ಕೇಳಬೇಡ ಬಂಜರು ಭೂಮಿಯಂತಹ ಈ ಹೃದಯ ಉದ್ಯಾನದಲ್ಲಿ ಯಾಕೆ ಬಯಕೆಯ ಹೂ ಅರಳಿಸಲು ಪ್ರಯತ್ನಿಸುವೆ ಎಂದು!!!

-

ಕೇಳಬೇಡ ಯಾಕೆ ಹಾಗು ಹೇಗೆ ನಾನು ಕವಿಯಾದೆ ಎಂದು, 

ಕೇಳಬೇಡ ಅಪ್ಪಳಿಸಿ ಮುರಿದ ಈ ಎದೆಯಿಂದ ರಕ್ತದ ಬದಲು ಹೇಗೆ ಪದಗಳು ಹುಟ್ಟಿತೆಂದು,

ಕೇಳಬೇಡ ಈ ಪದಗಳು ಹೇಗೆ ಕವಿತೆಯಾಗಿ ಮೂಡಿತೆಂದು!!!

-

ಕೇಳಬೇಡ ಯಾಕೆ ನಾನು ಸಂಧ್ಯಾ ಸೂರ್ಯನನ್ನು ನೋಡುತ್ತಿರುತ್ತೇನೆ ಎಂದು, 

ಕೇಳಬೇಡ ಯಾಕೆ ನಾನು ಸಾಗರದ ಬಂಡೆಯ ಮೇಲೆ ಅವಳ ಹೆಸರು ಕೆತ್ತುತ್ತಿರುತ್ತೇನೆ ಎಂದು,

ಕೇಳಬೇಡ ಯಾಕೆ ಮರಳ ಮನೆ ಮಾಡಿ ಅದನ್ನು ಸಾಗರದ ಅಲೆಗಳು ಕೊಚ್ಚಿ ಹೋಗುವುದನ್ನು ನೋಡಿ ಕಣ್ಣೀರು ಹಾಕುತ್ತೇನೆ ಎಂದು!!!

-

ಕೇಳಬೇಡ ಇರುಳಲ್ಲಿ ಏಕಾಂತ ಕೂತು ಯಾಕೆ ಆ ಚಂದ್ರ ತಾರೆಗಳನ್ನು ನೋಡುತ್ತಿರುತ್ತೇನೆ ಎಂದು, 

ಕೇಳಬೇಡ ನಿದ್ದೆ ಇಲ್ಲದೆ ಯಾಕೆ ಹಾಸಿಗೆಯಲಿ ಹೊರಳಾಡುತ್ತಿರುತ್ತೇನೆ ಎಂದು,

ಕೇಳಬೇಡ ಮುಂಜಾನೆ ಒದ್ದೆ ಒದ್ದೆ ತಲೆದಿಂಬು ಹೇಗೆ ನನ್ನ ಕಥೆ ನುಡಿಯುತ್ತದೆ ಎಂದು!!!

-

by ಹರೀಶ್ ಶೆಟ್ಟಿ, ಶಿರ್ವ

Tuesday, January 26, 2021

ಅಷ್ಟು ಸುಲಭ ಅಲ್ಲ ಬದುಕು,

ಅಷ್ಟು ಸುಲಭ ಅಲ್ಲ ಬದುಕು, 

ಹೌದು, 

ಅನಂತ ಕಠಿಣ ತಿರುವುಗಳು, 

ಆದರೆ ಹೆದರಿಕೆ ಯಾಕೆ ಬೇಕಿತ್ತು, 

ಚರ್ಚಿಸಬೇಕಿತ್ತು, 

ಹೇಳಿ ಬಿಡಬೇಕಿತ್ತು ಮನಸ್ಸಲ್ಲಿದ್ದುದನ್ನು,

ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಗಬಹುದಿತ್ತು, 

ಇನ್ನೆಷ್ಟೋ ಪರೀಕ್ಷೆ ಇತ್ತು ಬಾಕಿ!!

-

ಈಗ ತಾನೇ ಬುದ್ಧಿ ಬೆಳೆದಿತ್ತು, 

ಈಗ ತಾನೇ ಸ್ವಲ್ಪ ಸ್ವಲ್ಪ ಬದುಕು ತಿಳಿಯುತ್ತಿತ್ತು, 

ಆದರೆ ಕಲಿತದ್ದು ಪೂರ್ಣ ಪಾಠ ಅಲ್ಲ,

ಬದುಕೆಂಬ ಗುರುವಿನ ಜ್ಞಾನ ತುಂಬಾ ಮಹತ್ವವಾದದ್ದು,

ಇನ್ನೆಷ್ಟೋ ಜೀವನದ ಪಾಠ ಕಲಿಯಲಿತ್ತು ಬಾಕಿ!!

-

ಜೀವನ ಅಂದರೆ ನೂರಾರು ಸವಾಲುಗಳು, 

ಧೈರ್ಯವಾಗಿ ಎದುರಿಸಬೇಕಿತ್ತು, 

ಬದುಕಿನ ಆಟದಲ್ಲಿ ಸೋಲು ಗೆಲುವು, 

ಅದಕ್ಕೇನು, 

ಇಂದಲ್ಲ ನಾಳೆ, 

ಸತತ ಪ್ರಯತ್ನಿಸಬೇಕಿತ್ತು,

ಇನ್ನೆಷ್ಟೋ ಅವಕಾಶ ಸಿಗಲ್ಲಿತ್ತು ಬಾಕಿ!!

-

ಹೋರಾಡಬೇಕಿತ್ತು ಪ್ರತಿಯೊಂದು ಕಷ್ಟದಿಂದ, 

ತೇಲಿ ಬರಬೇಕಿತ್ತು ಈ ಸಾಗರದ ಬಿರುಗಾಳಿಯಿಂದ, 

ಅಸಂಭವ ಕಾಣುತ್ತದೆ ಅಷ್ಟೇ, 

ಆದರೆ ಅಸಂಭವ ಏನಿಲ್ಲ ಈ ಜಗತ್ತಲ್ಲಿ,

ಅದೆಷ್ಟೋ ಕಾರ್ಯ ಸಂಭವವಾಗಲಿಕ್ಕಿತ್ತು ಬಾಕಿ!!

-

ತುಂಬಾ ಶಕ್ತಿ ಇರುತ್ತದೆ ಪಾಲಕರ ಪ್ರೀತಿಯಲಿ, 

ನಂಬಿಕೆ ಇಡಬೇಕಿತ್ತು, 

ಮನಸ್ಸು ಬಿಚ್ಚಿ ಬಿಡಬೇಕಿತ್ತು, 

ಸ್ವಲ್ಪ ತಾಳ್ಮೆ ಇಡುತ್ತಿದ್ದರೆ, 

ಈ ಧರೆ ಅಂಬರ ಎಲ್ಲ ನಿನ್ನದಾಗುತ್ತಿತ್ತು,

ಇನ್ನು ಸ್ವಚ್ಚಂದ ಆಕಾಶದಲ್ಲಿ ಹಾರಲಿಕ್ಕಿತ್ತು ಬಾಕಿ!!

-

by ಹರೀಶ್ ಶೆಟ್ಟಿ ಶಿರ್ವ

Monday, January 25, 2021

ಸಮಯ

ಸಮಯ ಬದಲಾಗುತ್ತಾ ಇರುತ್ತದೆ, 

ಇಂದಿನ ಸಮಯ ನಾಳೆಗಿರುವುದಿಲ್ಲ, 

ನಾಳೆಯ ಸಮಯದಲಿ ಇಂದಿನ ಕೇವಲ ನೆನಪು, ಸಂತಸ ಅಥವಾ ಪಶ್ಚಾತಾಪ ಅಷ್ಟೇ,

ನಾಳೆಯ ಸಮಯ ತನ್ನ ಹೊಸ ಹೂವು ಅರಳಿಸುತ್ತದೆ, 

ಆ ಕಂಪನ್ನು ತನ್ನೊಳಗೆ ಸುಹಾಸಿಸಿ ಮುಂದೆ ಸಾಗುವುದೇ ಜೀವನ!!


by ಹರೀಶ್ ಶೆಟ್ಟಿ, ಶಿರ್ವ

Thursday, January 21, 2021

ಆಟಿಕೆಯೆಂದು ತಿಳಿದು


Photo :Google

ಹಾಡಿನ ಕೊಂಡಿ: https://youtu.be/xFUYO0CI6xc

ಆಟಿಕೆಯೆಂದು ತಿಳಿದು ನೀನು ನನ್ನ ಹೃದಯ ಮುರಿದು ಹೋಗುತ್ತಿರುವೆ, 

ನನ್ನನ್ನು ಈ ಸ್ಥಿತಿಯಲ್ಲಿ ಯಾರ ಆಸರೆಯಲಿ ಬಿಟ್ಟು ಹೋಗುತ್ತಿರುವೆ, 

ಆಟಿಕೆಯೆಂದು.....


ನನ್ನ ಹೃದಯವನ್ನು ದ್ವೇಷಿಸದಿರು, ಲೋಕದ ಕೇಳಿ ಮಾತನ್ನು, 

ನಿಲ್ಲು ನೀನು, ನಾನಾಗಿದ್ದೇನೆ ಅತಿಥಿ ಕೆಲವೇ ರಾತ್ರಿಯ ಇನ್ನು, 

ಹೋಗಬೇಕೆಂದರೆ ಹೋಗು ನೀನು, ಈಗಿಂದಲೇ ಯಾಕೆ ಮುಖ ತಿರುಗಿಸಿ ಬಿಟ್ಟು ಹೋಗುತ್ತಿರುವೆ,

ಆಟಿಕೆಯೆಂದು....


ಬೇಸರ ಏನಿಲ್ಲ ನಿನ್ನಿಂದ, ಆದರೆ ವಿಷಾದ ಸ್ವಲ್ಪವೇ, 

ಅಂದರೆ ಯಾವ ದುಃಖ ತುಂಬಾ ಕಷ್ಟದಿಂದ ನನ್ನ ಬೆನ್ನು ಬಿಟ್ಟುಹೋಗಿವೆ, 

ಅದೇ ದುಃಖದೊಂದಿಗೆ ನೀನು ನನ್ನ ಸಂಬಂಧ ಜೋಡಿಸಿ ಹೋಗುತ್ತಿರುವೆ,

ಆಟಿಕೆಯೆಂದು....


ದೇವರಾಣೆ ಕೊಟ್ಟು ಮನವೊಲಿಸುವೆ, ಆದರೆ ದೂರ ನಾನಿರುವೆ, 

ನಿನ್ನ ದಾರಿ ತಡೆಯುವೆ, ಆದರೆ ಅಸಹಾಯಕ ನಾನಾಗಿರುವೆ,

ಅಂದರೆ ನಾನು ನಡೆಯಲು ಅಸಮರ್ಥ, ನೀನಂತೂ ಓಡಿಹೋಗುತ್ತಿರುವೆ,

ಆಟಿಕೆಯೆಂದು....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ : ಖಿಲೋನಾ

हो ...

खिलौना, जानकर तुम तो, मेरा दिल तोड़ जाते हो 

मुझे इस, हाल में किसके सहारे छोड़ जाते हो 

खिलौना ...


मेरे दिल से ना लो बदला ज़माने भर की बातों का 

ठहर जाओ सुनो मेहमान हूँ मैं चँद रातों का 

चले जाना अभी से किस लिये मुह मोड़ जाते हो 

खिलौना ...


गिला तुमसे नहीं कोई, मगर अफ़सोस थोड़ा है 

के जिस ग़म ने मेरा दामन बड़ी मुश्किल से छोड़ा है 

उसी ग़म से मेरा फिर आज रिश्ता जोड़ जाते हो 

खिलौना ...


खुदा का वास्ता देकर मनालूँ दूर हूँ लेकिन 

तुम्हारा रास्ता मैं रोक लूँ मजबूर हूँ लेकिन 

के मैं चल भी नहीं सकता हूँ और तुम दौड़ जाते हो 

हो, खिलौना ...

ಖುಷಿಯಲ್ಲಿರು ನೀನೆಂದಿಗೂ


Photo :Google

ಹಾಡಿದ ಕೊಂಡಿ: https://youtu.be/ayGc5A6X9Go

(ನಿನ್ನ ಮದುವೆಗೆ ಏನು  ಉಡುಗೊರೆ ನೀಡಲಿ ನಾನು, ಪ್ರಸ್ತುತಿಸುವೆ ಈ ನನ್ನ ಮುರಿದ ಹೃದಯವನ್ನು)


ಖುಷಿಯಲ್ಲಿರು ನೀನೆಂದಿಗೂ 

ಇದು ಬೇಡಿಕೆ ನನ್ನ, 

ನಿಷ್ಠೆ ಮುರಿದರೇನು, 

ಹೃದಯರಾಣಿ ನೀನು ನನ್ನ, ಖುಷಿಯಲ್ಲಿರು....


ಹೋಗು ನಾನು ಏಕಾಂಗಿಯಾಗಿರುವೆ, 

ನಿನಗೆ ಜೊತೆ ಸಿಗಲಿ, 

ಮುಳುಗುವೆ ನಾನು ನಿನಗೆ ಕಿನಾರೆ ಸಿಗಲಿ, 

ಇಂದು ಇಚ್ಛೆ ಇದೇ, 

ಕೇಳು ನಾವಿಕನೇ ನನ್ನ, ಖುಷಿಯಲ್ಲಿರು....


ಜೀವನಪರ್ಯಂತ ನನ್ನ ಹೃದಯಕ್ಕೆ 

ಇದು ನೋವು ನೀಡುವುದು, 

ಈ ವೇದನೆ ಈಗಂತೂ ನನ್ನೊಟ್ಟಿಗೇನೇ ಹೋಗುವುದು, 

ಮರಣವೇ ಕೇವಲ ಮದ್ದಾಗಿದೆ ನನ್ನ, 

ಖುಷಿಯಲ್ಲಿರು....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ : ಖಿಲೋನಾ


तेरी शादी पे दूँ तुझको तोहफ़ा मैं क्या

पेश करता हूँ दिल एक टूटा हुआ


खुश रहे तू सदा, ये दुआ है मेरी

बेवफ़ा ही सही, दिलरुबा है मेरी

खुश रहे ...


जा मैं तनहा रहूँ, तुझको महफ़िल मिले

डूबने दे मुझे, तुझको साहिल मिले

आज मरज़ी यही, नाख़ुदा है मेरी


उम्र भर ये मेरे दिल को तड़पाएगा

दर्द-ए-दिल अब मेरे साथ ही जाएग

मौत ही आख़िरी बस दवा है मेरी

Wednesday, January 20, 2021

ಒಂದು ಸ್ವಲ್ಪ ನನಗೆ ಬದುಕಲು ಕೊಡಿ

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ, 

ನೀರಸ ಜೀವನದಲಿ ಸ್ವಲ್ಪ ಉಲ್ಲಾಸ ತರಲು ಬಿಡಿ, 


ಏಕಾಂಗಿ ಬಿಟ್ಟು ಹೋದಳು ಅವಳು ನಡು ದಾರಿಯಲಿ, 

ಒಂಟಿ ಜೀವನದ ಕಷ್ಟ ಹೇಗೆ ತಿಳಿಸಲಿ, 

ಹರಿ ಬರುವ ಕಣ್ಣೀರು ಕುಡಿಯಲು ಕೊಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


ಈ ಐಷಾರಾಮಿಯ ಸುಖ ಈಗ ಹಿತ ನೀಡದು,

ಯಾವುದೇ ಸುಖ ಸೌಲಭ್ಯ ಈಗ ನೆಮ್ಮದಿ ಕೊಡದು,

ಮುಷ್ಠಿ ಅನ್ನ ತಿಂದು ನನಗೆ ತೃಪ್ತಿ ಪಡೆಯಲು ಕೊಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ


ನ್ಯಾಯ ಅನ್ಯಾಯ ಬಯಸುವುದು ಯಾರಿಂದ, 

ಇನ್ನು ಯಾವುದೇ ನಿರೀಕ್ಷೆ ಉಳಿಯಲಿಲ್ಲ ಆ ದೇವರಿಂದ, 

ನನಗೆ ನನ್ನದೇ ಸ್ಥಿತಿಯಲ್ಲಿ ಇರಲು ಬಿಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


ಈ ಶರಾಬಿನಿಂದ ಸ್ಮೃತಿ ಅಳಿಸಲಾಗದು, 

ಹಾದು ಹೋದ ಸಮಯ ಹಿಂತಿರುಗಿ ಬರದು, 

ಸುಂಸುಮ್ಮನೆಯ ಸಾಂತ್ವನೆ ಬೇಡ ಬಿಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ