Tuesday, September 30, 2014

ಜನ್ಮಭೂಮಿ

ಹೇಳಲಿಕ್ಕೆ ಎಲ್ಲವೂ ಇದೆ ನನ್ನತ್ತಿರ
ಆದರೆ ಪಡೆಯಲಾಗಲಿಲ್ಲ ಅದನ್ನು
ಹಿಂದೆ ಬಿಟ್ಟು ಬಂದಿದ್ದನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಮರದ ನೆರಳು
ಆ ಹಣ್ಣಿನ ಪರಿಮಳ
ಆ ಮಾವಿನ ಹಣ್ಣಿನ ರುಚಿ
ಆ ಎಲ್ಲ ಸುಂದರ ಪರಿಸರ
ಹೇಳಲಿಕ್ಕೆ ಅದೆಷ್ಟೋ ಹಣ್ಣುಗಳು ಸಿಗುತ್ತದೆ ಇಲ್ಲಿ
ಆದರೆ ಪಡೆಯಲಾಗಲಿಲ್ಲ ಆ ರುಚಿಯನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಗಲ್ಲಿಯ ಆಟ
ಆ ರಾತ್ರಿಗೆ ತಡವಾಗಿ ಕುಳಿತು
ಹರಟೆ ಹೊಡೆಯುವ ಚಟ
ಆ ನಕ್ಕು ಆ ನಲಿವು
ಹೇಳಲಿಕ್ಕೆ ಅದೆಷ್ಟೋ ವೈವಾಟ ನಡೆಯುತ್ತದೆ ಇಲ್ಲಿ
ಆದರೆ ಪಡೆಯಲಾಗಲಿಲ್ಲ ಆ ಖುಷಿಯನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಉತ್ಸವ ಆ ವೈಭವ
ಆ ಹಬ್ಬ ಆಚರಣೆ
ಆ ತಡ ತನಕ ಹಬ್ಬಕ್ಕಾಗಿ
ನಡೆಯುವ ತಯಾರಿ
ಹೇಳಲಿಕ್ಕೆ ಹಬ್ಬ ಇಲ್ಲಿಯೂ ಆಚರಿಸುತ್ತಾರೆ
ಆದರೆ ಪಡೆಯಲಾಗಲಿಲ್ಲ ಅಂತಹ ಆನಂದವನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಅದೇಕೋ
ಹುಟ್ಟುವುದಿಲ್ಲ ಇಲ್ಲಿ ಅಂತಹ ಅತ್ಯಾಸಕ್ತಿ
ಕಾಡುತ್ತದೆ ಏನೋ ಒಂದು ಕೊರತೆ
ನಗು ಮೊಗದಲಿ ಕಣ್ಣೀರು ಅವಿತುಕೊಂಡಿರುತ್ತದೆ
ಪದೇ ಪದೇ ಮನಸ್ಸಲ್ಲಿ
ಜೀವನದ ಅತಿ ದೊಡ್ಡ ತಪ್ಪು ಮಾಡಿದೆಯೆಂಬ
ವಿಚಾರ ಬರುತ್ತದೆ
ಸುಖ ಹಣದಿಂದ ಹುಟ್ಟುವುದಿಲ್ಲ
ದುಡ್ಡು ನೀಡಿ ಹರ್ಷ ಪಡೆಯಲಾಗುವುದಿಲ್ಲ
ಮಣ್ಣಿನ ಋಣ ಉಳಿಯುತ್ತದೆ ಬಾಕಿ
ಈ ಹೊನ್ನುಕ್ಕಿಂತ ಅದೆಷ್ಟೋ ಉತ್ತಮ ನನ್ನ ದೇಶದ ಮಣ್ಣು
ಸದಾ ಎಳೆಯುತ್ತಿರುತ್ತದೆ ನನ್ನ ನಾಡು ನನ್ನನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

by ಹರೀಶ್ ಶೆಟ್ಟಿ, ಶಿರ್ವ 

ಲೋಪ ದೋಷ

ಎಷ್ಟೇ ಒಳ್ಳೆ ಕವಿತೆ ಬರೆದರು ಏನು
ತಪ್ಪು ಹುಡುಕುವವರಿಗೆ
ಲೋಪ ಕಾಣುತ್ತದೆ
ಎಷ್ಟೇ ಒಳ್ಳೆ ನುಡಿ ನುಡಿದರು ಏನು
ಮಾತನ್ನು ಮುರಿಯುವವರಿಗೆ
ದೋಷ ಕಾಣುತ್ತದೆ
by ಹರೀಶ್ ಶೆಟ್ಟಿ, ಶಿರ್ವ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ ಲೋಪ, ದೋಷ ಹುಡುಕುವ ತವಕದಲ್ಲಿ ಇರುವ ಜನರನ್ನು ನೋಡಿ ಹೊಳೆದದ್ದು.

Monday, September 29, 2014

ನಾಳೆಯ ದಿನವಾದರೂ ಶುಚಿಯಾಗಲಿ

ದ್ವೇಷ ತುಂಬಿದ ಎದೆಯಲ್ಲಿ ಹೆಮ್ಮೆ ಹೇಗೆ ನೆಲೆಸುವುದು
ಕಲ್ಮಶ ತುಂಬಿದ ಮನಸ್ಸಿನಲ್ಲಿ ಪಾವನತೆ ಹೇಗೆ ನಿಲ್ಲುವುದು 
ಹರಿಯಲಿ ದ್ವೇಷ 
ಸ್ವಚ್ಚವಾಗಲಿ ಕಲ್ಮಶ 
ನಾಳೆಯ ದಿನವಾದರೂ ಶುಚಿಯಾಗಲಿ

by ಹರೀಶ್ ಶೆಟ್ಟಿ, ಶಿರ್ವ 

Saturday, September 27, 2014

ಬದುಕು

ಬದುಕು
ಸಿರಿವಂತರಿಗೆ
ಆಟ
ಬಡವರಿಗೆ
ಹೋರಾಟ
by ಹರೀಶ್ ಶೆಟ್ಟಿ, ಶಿರ್ವ

ಕಠಿಣ ಸಮಯ

ಕಠಿಣ
ಸಮಯ
ಇರಲಿ
ಸಂಯಮ
ಇರಲಿ
ಧೈರ್ಯ
ಇರಲಿ
ಭರವಸೆ
by ಹರೀಶ್ ಶೆಟ್ಟಿ, ಶಿರ್ವ

ಮಾತಲ್ಲಿ

ಮಾತಲ್ಲಿ
ನಮ್ರತೆ
ಮುತ್ತು
ಮಾತಲ್ಲಿ 
ಕಠೋರತೆ
ಆಪತ್ತು
by ಹರೀಶ್ ಶೆಟ್ಟಿ, ಶಿರ್ವ

ಸಹಾಯ ಹಸ್ತ

ನೀಡು
ಸಹಾಯ
ಹಸ್ತ
ಸಂತಸದ 
ಓಟ
ನಿನ್ನತ್ತ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ