Sunday, December 15, 2013

ಪತ್ರ ಬಂದಿದೆ

!!ಪತ್ರ ಬಂದಿದೆ ಬಂದಿದೆ
ಪತ್ರ ಬಂದಿದೆ
ಪತ್ರ ಬಂದಿದೆ
ಸ್ವದೇಶದಿಂದ ಪತ್ರ ಬಂದಿದೆ
ತುಂಬಾ ದಿವಸದ ನಂತರ
ನಮ್ಮಂತ ಪರದೇಶದವರಿಗೆ ನೆನಪು
ಸ್ವದೇಶದ ಮಣ್ಣು ಬಂದಿದೆ!!
ಪತ್ರ ಬಂದಿದೆ......

!!ಪತ್ರದ ಮೇಲೆ ನನ್ನೆಸರು ಬರೆದಿದೆ
ಒಳಗೆ ಈ ಸುದ್ದಿ ಬರೆದಿದೆ
ಓ ಪರದೇಶಕ್ಕೆ ಹೋದವನೆ
ಹಿಂತಿರುಗಿ ನಂತರ ಬರದವನೆ
ಏಳು ಸಮುದ್ರ ಆಚೆಗೆ ಹೋದೆ
ನಮ್ಮನ್ನು ಜೀವಂತ ಕೊಂದು ಹೋದೆ
ನೆತ್ತರು ನಂಟು ಮುರಿದು ಹೋದೆ
ಕಣ್ಣಲ್ಲಿ ಕಣ್ಣೀರು ಬಿಟ್ಟು ಹೋದೆ
ಸ್ವಲ್ಪ ತಿನ್ನುತ್ತೇವೆ
ಸ್ವಲ್ಪವೇ ಮಲಗುತ್ತೇವೆ
ಹೆಚ್ಚಾಗಿ ನಾವು ಅಳುತ್ತೇವೆ!!
ಪತ್ರ ಬಂದಿದೆ......

!!ನಿರ್ಜನವಾಗಿದೆ ಊರಿನ ಗಲ್ಲಿಗಳು
ಮುಳ್ಳಾಯಿತು ಉದ್ಯಾನದ ಹೂಗಳು
ಹೇಳುತ್ತಿದೆ ವಸಂತದ ಉಯ್ಯಾಲೆಯೂ
ಮರೆತೇ ನೀನು ಮರೆಯಲಿಲ್ಲ ನಾವು
ನೀನಿಲ್ಲದೆ  ಬಂದಾಗ ದೀಪಾವಳಿ
ದೀಪ ಉರಿಯಲಿಲ್ಲ
ಉರಿಯಿತು ಹೃದಯ ಖಾಲಿ
ನೀನಿಲ್ಲದೆ ಹಬ್ಬ ಬಂದಾಗ ಹೋಳಿ
ಪಿಚಕಾರಿಯಿಂದ ಹಾರಿತು ಗೋಲಿ
ಪೀಪಲ್ ಖಾಲಿ
ನದಿ ತೀರ ಖಾಲಿ
ಸ್ಮಶಾನದಂತೆ ಅವಸ್ಥೆ ಇಲ್ಲಿ
ಫ‌ಸಲು ಧಾನ್ಯ ಜಗಲಿಗೇರಿತು
ಬಂತು ಹಬ್ಬ ಸಂಕ್ರಾಂತಿ
ನಿನ್ನ ಬರುವುದಿನ್ನಿದೆ ಬಾಕಿ!!
ಪತ್ರ ಬಂದಿದೆ......

!!ನೀನು ಪತ್ರ ಬರೆಯುವಾಗ ಮೊದಲು
ಮುಖ ನಿನ್ನ  ಕಾಣುತ್ತಿತ್ತು ಕಾಗದದಲ್ಲೂ
ಈ ಮಿಲನವೂ ಇಲ್ಲ ಈಗ
ಈ ಆಟವೂ ಮುಗಿಯಿತೆಲ್ಲ ಈಗ
ತಂಗಿ ಕುಳಿತಾಗ ಪಾಲಕಿಯಲ್ಲಿ
ಕಣ್ಣಲ್ಲಿ ಅಶ್ರು ತುಂಬಿತು ನಿನ್ನ ನಿರೀಕ್ಷೆಯಲಿ
ನನ್ನದೇನು ನಾನು ತಂದೆ
ನಿನ್ನ ತಾಯಿಯ ಅವಸ್ಥೆ ಹಾಳಾಗಿದೆ
ನಿನ್ನ ಮಡದಿ ಮಾಡುತ್ತಿದ್ದಾಳೆ ಸೇವೆ
ಕೃಶವಾಗಿ ಕಾಣುತ್ತಿದ್ದಾಳೆ ವಿಧವೆ
ತುಂಬಾ ಹಣ ನೀನು ಸಂಪಾದಿಸಿದೆ
ಈ ಹಣ ನಿನ್ನಿಂದ ದೇಶವನ್ನು ಕಸಿದಿದೆ
ಹಕ್ಕಿಮರಿ ಪಂಜರ ಮುರಿದು ಬಾ ನೀನು
ಪರದೇಶ ಬಿಟ್ಟು ಬಾ ನೀನು
ಬಾ ನೀನು ಆಯುಷ್ಯ ಚಿಕ್ಕದಾಗಿದೆ
ನಮ್ಮ ಮನೆಯಲ್ಲೂ ಅನ್ನ ರೊಟ್ಟಿ ಇದೆ!!
ಪತ್ರ ಬಂದಿದೆ......

ಮೂಲ: ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಪಂಕಜ್ ಉದಾಸ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ನಾಮ್

chithi aai hai aai hai 
chithi aai hai 
chithi aai hai aai hai 
chithi aai hai 
chithi hai vatan se chithi aayi hai
bade dino ke bad, ham bevatano ko yad
bade dino ke bad, ham bevatano ko yad
vatan ki mitti aai hai, chithi aai hai 
chithi aai hai aai hai 
chithi aai hai 
chithi hai vatan se chithi aayi hai


upar mera nam likha hai, 
andar ye paigam likha hai
o parades ko jane vale, 
laut ke phir na ane vale
sat samudar paar gaya tu
hamko zinda mar gaya tu
khun ke rishte tod gaya tu 
ankh me aansu chod gaya tu
kam khaate hai kam sote hai 
bahut zyada ham rote hai  
chithi aai hai aai hai 
chithi aai hai 
chithi aai hai aai hai 
chithi aai hai 
chithi hai vatan se chithi aayi hai

suni ho gai shahar ki galiya
kante ban gai bag ki kaliya
kahate hai savan ke jhule 
bhul gaya tu ham nahi bhule
tere bin jab aai divali, 
dip nahi dil jale hai khali
tere bin jab aai holi, 
pichakari se chhuti goli
pipal suna panaghat suna ghar 
shamashan ka bana namuna
fasal kati aai baisakhi 
tera aana rah gaya baki
chithi aai hai aai hai 
chithi aai hai 
chithi aai hai aai hai 
chithi aai hai 
chithi hai vatan se chithi aayi hai

pahle jab tu khat likhta tha 
kaagaz me chehara dikhata tha
band hua ye mel bhi ab to
khatam hua ye khel bhi ab to
doli me jab baithi bahana 
rasta dekh rahe the naina
mai to bap hun mera kya hai 
teri maa ka hal bura hai
teri bivi karti hai seva 
surat se lagati hai beva
tune paisa bahut kamaya 
is paise ne desh chhudaya
desh paraya chhod ke aaja
panchi pinjara tod ke aaja 
desh paraya chhod ke aaja
panchi pinjara tod ke aaja 
aaja umar bahut hai choti
apane ghar me bhi hai roti

chithi aai hai aai hai 
chithi aai hai 
chithi aai hai aai hai 
chithi aai hai 
chithi hai vatan se chithi aayi hai
bade dino ke bad, ham bevatano ko yad
vatan ki mitti aai hai, chithi aai hai 
chithi aai hai aai hai 
chithi aai hai 
chithi hai vatan se chithi aayi hai
bade dino ke bad, ham bevatano ko yad
vatan ki mitti aai hai, chithi aai hai 

http://www.youtube.com/watch?v=D-lmR3FZcAo

ಅದೇನೋ ನೀ ಹೇಳಿದೆ

!!ಅದೇನೋ ನೀ ಹೇಳಿದೆ
ಅದೇನೋ ನಾ ಕೇಳಿದೆ
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

!!ಸಂವೇದನೆ ಮೂಡಿತು
ಉದ್ವೇಗ ಉಂಟಾಯಿತು
ಸ್ವಪ್ನಗಳು ಹುಟ್ಟಿತು
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

!!ನಯನ ಲಜ್ಜೆಯಿಂದ ತಗ್ಗಿತು
ಕಾಲು ಮೆಲ್ಲ ಮೆಲ್ಲನೆ ಸಾಗಿತು
ಹೊಸ ನಡಿಗೆ ಹುಟ್ಟಿತು
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

!!ಕೇಶ ಭುಜದಿಂದ ತಿರುಗಿತು
ಪರಿಮಳ ಹಬ್ಬಿತು
ಹಲವು ರಹಸ್ಯ ಬಯಲಾಯಿತು
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಗೀತ ದತ್
ಸಂಗೀತ : ಎಸ್ . ಡಿ. ಬರ್ಮನ್
ಚಿತ್ರ : ಪ್ಯಾಸಾ

(Jaane Kya Tune Kahi
Jaane Kya Maine Suni
Baat Kuchh Ban Hi Gayi)-2
Jaane Kya Tune Kahi 

(San-Sanaahat Si Hui
Thar-Tharaahat Si Hui)-2
Jaag Uthe Khvaab Kai
Baat Kuchh Ban Hi Gayi
Jaane Kya Tune Kahi ....

(Nain Jhuk-Jhuk Ke Uthe
Paanv Ruk-Ruk Ke Uthe)-2
Aa Gai Jaan Nai
Baat Kuchh Ban Hi Gayi
Jaane Kya Tune Kahi.....

(Zulf Shaane Pe Mude
Ek Khushboo Si Ude)-2
Khul Gaye Raaz Kai
Baat Kuchh Ban Hi Gayi
Jaane Kya Tune Kahi..... 

http://www.youtube.com/watch?v=aXWK1XafaVo

Saturday, December 14, 2013

ಶ್ಯಾಮಲ ಶ್ಯಾಮಲ ವರ್ಣ

!!ಶ್ಯಾಮಲ ಶ್ಯಾಮಲ ವರ್ಣ
ಕೋಮಲ ಕೋಮಲ ಚರಣ
ನಿನ್ನ ಮೊಗ ಗಗನದ ಚಂದಿರದಂತಿದೆ
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ!!

!!ನಿನ್ನ ಕೇಶದಲಿ ಹರಡಿದೆ
ವರ್ಷ ಮೇಘಗಳು
ನಿನ್ನ ಗಲ್ಲದಲಿ ಹರಡಿದೆ
ಹುಣ್ಣಿಮೆಯ ಬೆಳದಿಂಗಳು
ತೀಕ್ಷ್ಣ ತೀಕ್ಷ್ಣ ನಯನ
ಸಿಹಿ ಸಿಹಿ ಅಧರ
ನಿನ್ನ ಅಂಗ ಅಂಗದಲಿ
ಸಂಪಿಗೆಯ ಬಣ್ಣ ಏರಿದೆ!!
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ

!!ಈ ವಯಸ್ಸು
ಈ ನಡು ಬಲು ನಯವಾಗಿದೆ
ನಿನ್ನ ಕಣ್ಣ ಕುಡಿ ನೋಟದಿ
ಬಾಣ ಹೊರಡುತ್ತಿದೆ
ನಾಜೂಕು ನಾಜೂಕು ಶರೀರ
ಮೆದು ಮೆದು ನಡಿಗೆ
ನಿನ್ನ ಬಾಹುಗಳಲ್ಲಿ ಜಾದು ತುಂಬಿದೆ!!
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ

!!ಯಾವ ಪರುಶದಿಂದ
ಈ ಚಿನ್ನ ಸ್ಪರ್ಶಿಸಿದೆ
ನಿನ್ನನ್ನು ನಿರ್ಮಿಸಿ
ಸೃಷ್ಟಿಕರ್ತನ ಮನಸ್ಸೂ ಸೋತಿದೆ
ಅಲ್ಲೂ ಹೋಗಲಾಗಲಿಲ್ಲ
ಇಲ್ಲೂ ಹೋಗಲಾಗಲಿಲ್ಲ
ಕೇವಲ ನಿನ್ನಲ್ಲಿಯೇ ಅವನ ದೃಷ್ಟಿ ನಿಂತಿದೆ!!
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ

ಮೂಲ :ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ಸಿ. ರಾಮಚಂದ್ರ
ಚಿತ್ರ : ನವರಂಗ್

श्यामल श्यामल बरन
कोमल कोमल चरण
तेरे मुखड़े पे चंदा गगन का जड़ा
बड़े मन से विधाता ने तुझको गढ़ा

तेरे बालों में सिमटी सावन की घटा
तेरे गालों पे छिटकी पूनम की छटा
तीखे तीखे नयन
मीठे मीठे बयन
तेरे अंगों पे चम्पा का रंग चढ़ा
बड़े मन से विधाता ने...

ये उमर, ये कमर, सौ सौ बल खा रही
तेरी तिरछी नज़र तीर बरसा रही
नाज़ुक नाज़ुक बदन
धीमे धीमे चलन
तेरी बाँकी लटक में है जादू बड़ा
बड़े मन से विधाता ने...

किस पारस से सोना ये टकरा गया
तुझे रचकर चितेरा भी चकरा गया
न इधर जा सका
न उधर जा सका
रह गया देखता वो खड़ा ही खड़ा
बड़े मन से विधाता ने...
http://www.youtube.com/watch?v=4_pJdsw09Cc

ನನ್ನಿಂದೇನು ತಪ್ಪಾಯಿತು

!!ನನ್ನಿಂದೇನು ತಪ್ಪಾಯಿತು
ಅಂದರೆ ಈ ಸಜೆ ನನಗೆ ದಕ್ಕಿತು
ಈಗ ನಾಲ್ಕು ಕಡೆಯಿಂದಲೂ
ದ್ವಾರ ಮುಚ್ಚಿಕೊಂಡಿದ್ದಾರೆ ಈ ಜಗತ್ತು!!
ನನ್ನಿಂದೇನು.....

!!ಯಾರದ್ದೂ ಹೃದಯಕ್ಕೆ
ನೋವಾಗದಿರಲಿ
ನಾನು ಕೇವಲ ಇಷ್ಟೇ ಬಯಸಿದ್ದೆ
ಪಾಪದಿಂದ ದೂರವಿದ್ದು
ಸುಳ್ಳಿನಿಂದ ದೂರವಿರಲು ಬಯಸಿದ್ದೆ-೨
ಅದರ ಫಲವೇನು ಸಿಗಲಿಲ್ಲ
ಬದಲಿಗೆ ಚಾಕು ನನ್ನ ಮೇಲೆಯೇ ಬಿತ್ತು!!
ನನ್ನಿಂದೇನು.....

!!ನನ್ನ ಮೇಲೆ ಅಪವಾದ ಇದಿದೆ
ಕಳ್ಳನನ್ನು ಕಳ್ಳನೆಂದು ಕರೆದೆ
ಯಾಕೆ ಸತ್ಯವನ್ನೇ ನುಡಿದೆ
ಯಾಕೆ ಬೇರೇನೂ ನುಡಿಯಲಿಲ್ಲ-೨
ಇದೇ ನಿನ್ನ ನ್ಯಾಯವೇ
ವಾಹ್ ದೇವರೇ ನಿನ್ನ ಗಮತ್ತು!!
ನನ್ನಿಂದೇನು.....

!!ಈಗಂತೂ ನಿಷ್ಠೆ ಧರ್ಮದ
ಯಾವುದೇ ಬೆಲೆಯಿಲ್ಲ
ಅಂದರೆ ಸತ್ಯ ಹೇಳುವವರ
ಅಗತ್ಯವೇ ಇಲ್ಲ-೨
ಇಂತಹ ಜಗದಿಂದ
ಜಗವೇ ನಿನ್ನ ನಿರ್ಜನತೆಯೇ ಒಳಿತು!!
ನನ್ನಿಂದೇನು.....

!!ನೋವು ನನಗೊಪ್ಪಿಗೆ
ಯಾರಿಗಾದರೂ ಹಾದಿ ಸಿಗಲಿ
ನಾನು ಗಾಯಗೊಂಡರೆ ಏನಾಯಿತು
ಇನ್ನೊಬ್ಬರ ಹೃದಯ ಅರಳಲಿ-೨
ಮುಳ್ಳೆಲ್ಲ ನನಗೆ ಸಿಗಲಿ
ಪ್ರೀತಿಗೆ ಹೂವು ಸಿಗಲಿ-೨!!

!!ಜೀವನದ ದೀಪ
ನಂದಿ ಹೋದರೂ ಚಿಂತೆ ಇಲ್ಲ
ನಾನು ತಿಳಿಯುವೆ
ಯಾರದ್ದೋ ಕೆಲಸಕ್ಕೆ ಬಂದೆನಲ್ಲ-೨
ನನ್ನ ಜ್ಯೋತಿ ನಂದಿ ಹೋಗಲಿ 
ಪ್ರೀತಿಗೆ ಜೀವನ ಸಿಗಲಿ -೨!!

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಅನ್ವರ್
ಸಂಗೀತ : ರಾಜೇಶ್ ರೋಶನ್
ಚಿತ್ರ : ಜನತಾ ಹವಾಲ್ದಾರ್
hum se ka bhul huyi jo  ye saja humka mili

ab charo taraf band hai duniya ki gali
hum se ka bhul huyi jo  ye saja humka mili

dil kisi ka na dhuke humne bas itna chaha
paap se dhur rahe juth se abchna chaha
paap se dhur rahe juth se abchna chaha
uska badla na mila ulti churi hum pe chali
ab charo taraf band hai duniya ki ghali
hum se ka bhul huyi jo  ye saja humka mili

humko pe ilajaam ye hai
kyu chor ko chor kaha
kayu sahi baat kahi kahe na kuch aur kaha
kayu sahi baat kahi kahe na kuch aur kaha
ye hai insaf tera wah data ki gali

ab charo taraf band hai duniya ki gali
hum se ka bhul huyi jo  ye saja humka mili

ab to iman dharm ki kimmat hi nahi
jaise sach bolne walo ki jarurat hi nahi
aisi duniya se duniya teri veeran bali

ab charo taraf band hai duniya ki gali
hum se ka bhul huyi jo  ye saja humka mili
hum se ka bhul huyi jo  ye saja humka mili

tokhre hum ko kabul rah kisi ko mil jaye
hum huye jakmi to kya
duje ka dil san khil jaye
hum huye jakmi to kya
duje ka dil san khil jaye
daag sab hum ko mile yaar ko sab phul mile

daag sab hum ko mile yaar ko sab phul kali

jindgani ki samma bhuj agar rah jaye
ye samj lenge ki hum aaj kisi kaam aye
jyot jo apni bhuji yaar ke jeevan me jhale

jyot jo apni bhuji yaar ke jeevan me jhale
http://www.youtube.com/watch?v=ciOPA7dZ0HE

Thursday, December 12, 2013

ನಿನ್ನ ದೃಷ್ಟಿ ಅರಿತುಕೊಂಡಿದೆ

!!ನಿನ್ನ ದೃಷ್ಟಿ ಅರಿತುಕೊಂಡಿದೆ
ಪ್ರೀತಿಯ ಯೋಗ್ಯ ನಾನೆಂದು
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು!!

!!ಹೌದು ನನಗೆ ಒಪ್ಪಿಗೆಯಿದೆ
ನಿನ್ನ ಈ ನಿರ್ಧಾರ-೨
ಹೇಳುತ್ತಿದೆ ಪ್ರತಿಯೊಂದು ನೋಟ
ಧನ್ಯವಾದ ಸಾಹೇಬರ
ನಗುತ್ತಲೇ ತನ್ನ ಜೀವನದಲಿ
ಸೇರಿಸಿದೆ ನನ್ನನ್ನು ಬಂದು!!
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು
ನಿನ್ನ ದೃಷ್ಟಿ ಅರಿತುಕೊಂಡಿದೆ

!!ನಾನು ನಿನ್ನ ಗಮ್ಯವಾಗಿರುವೆ
ನನ್ನ ಗಮ್ಯ ನೀನಾಗಿರುವೆ-೨
ಯಾಕೆ ನಾನು ಬಿರುಗಾಳಿಗೆ ಹೆದರಲಿ
ನನ್ನ ಕಿನಾರೆ ನೀನಾಗಿರುವೆ
ಯಾರಾದರೂ ಬಿರುಗಾಳಿಗೆ ಹೇಳಲಿ
ನನಗೆ ಕಿನಾರೆ ಸಿಕ್ಕಿದೆಯೆಂದು!!
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು
ನಿನ್ನ ದೃಷ್ಟಿ ಅರಿತುಕೊಂಡಿದೆ

!!ನನ್ನ ಹೃದಯದಕ್ಕೆ ಸೋಕಿದೆ
ಛಾಯೆ ನಿನ್ನ ನೆರಳಿನ -೨
ಎಲ್ಲೆಡೆ ಕೇಳುತ್ತಿದೆ
ನೂರಾರು ಶಹನಾಯಿ ವಾದನ
ಎರಡು ಜಗತ್ತಿನ ಖುಷಿ
ಸಿಕ್ಕಿದೆ ನನಗಿಂದು!!
ನಿನ್ನ ದೃಷ್ಟಿ ಅರಿತುಕೊಂಡಿದೆ
ಪ್ರೀತಿಯ ಯೋಗ್ಯ ನಾನೆಂದು
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಅನ್ ಪಡ್
aapki nazro ne samjha, pyar ke kabil mujhe
dil ki ae dhadkan thaher ja, mil gayi manzil mujhe
aapki nazro ne samjha

ji hame manzoor hai, aapka ye faisla
ji hame manzoor hai, aapka ye faisla
kah rahi hai har nazar, banda-parvar shukriya
hanske apni zindagi me, kar liya shamil mujhe
dil ki ae dhadkan thaher ja, mil gayi manzil mujhe
aapki nazro ne samjha

aapki manzil hun mai, meri manzil aap hai
aapki manzil hun mai, meri manzil aap hai
kyon mai toofa se daru, mera sahil aap hai
koi tufano se kah de, mil gaya sahil mujhe
dil ki ae dhadkan thaher ja, mil gayi manzil mujhe
aapki nazro ne samjha

pad gai dil par mere, aapki parchhaiya
pad gai dil par mere, aapki parchhaiya
har taraf bajne lagi, saikdo shahnaiyaa
do jahaa ki aaj khushiyan, ho gayi haasil mujhe
aapki nazro ne samjha, pyar ke kabil mujhe
dil ki ae dhadkan thaher ja, mil gayi manzil mujhe
aapki nazro ne samjha
http://www.youtube.com/watch?v=5OFXheimGm4

ಒಹ್ ಕವಿಯೇ

ಬರೆಯಲು ಇನ್ನೇನು ವಿಷಯಗಳಿಲ್ಲವೇ ಕವಿಯೇ 
ಅಡುಗೆ ಮನೆಯ ಸಾಸಿವೆಗಳನ್ನೆಲ್ಲ ತಂದು ಇಲ್ಲಿ ಬಿತ್ತಿದಿ 
ಕವಿತೆ ಕವನವಾಗಿ ಮೊಳಕೆ ಹೊಡೆದದ್ದು ದ್ವೇಷ ಮಾತ್ರ 
ಹೌದು ಜ್ಞಾನಿ ನೀನು 
ಇತರರೆಲ್ಲ ಧರ್ಮಾಂಧರು
ಏನನ್ನು ಸಾಧಿಸುವುದರಲ್ಲಿದ್ದಿ
ಏನು ಇದರಿಂದ ಜ್ಞಾನಪೀಠ ಪುರಸ್ಕಾರ ಸಿಗುವುದು ಎಂದೆನ್ನುವೆಯಾ
ತನ್ನನ್ನು ಸಾಹಿತಿ ಎನ್ನುವೆ
ಯಾವ ರೀತಿಯ ಸಾಹಿತ್ಯ ಇದು 
ಪದಗಳ ಲಾಲಿತ್ಯ ಎಲ್ಲಿ ಮಾಯವಾಗಿದೆ 
ನಿಸರ್ಗದ ಸೌಂದರ್ಯ
ಪರಿಸರದ ನೋಟ
ಆಕಾಶದ ಅಂದ
ಇದೆಲ್ಲಾ ಇಂದು ನಿನಗೆ ಕಾಣುವುದಿಲ್ಲವೇ
ಕಟು ವಚನ
ಅರ್ಧ ಸತ್ಯ
ದ್ವೇಷ, ಅಹಂಕಾರದ ಬಾಣಗಳು
ಗಾಯಗೊಳ್ಳುವುದು ಓದುಗರು
ಕೊಲ್ಲಬೇಡ ಕವಿಯೇ ಕೊಲ್ಲಬೇಡ
ನಿನ್ನ ಓದುಗರನ್ನು ಕೊಲ್ಲಬೇಡ

by ಹರೀಶ್ ಶೆಟ್ಟಿ,ಶಿರ್ವ

Wednesday, December 11, 2013

ಒಂದು ಬೆಕ್ಕಿನ ದುರಂತ ಮರಣ

ಬೆಳಿಗ್ಗೆಯ ಸಮಯ, ಕೆಲಸಕ್ಕೆ ಹೋಗುವ ಗಡಿಬಿಡಿ, ನಾನು ರಸ್ತೆಯಲ್ಲಿ ಬೇಗ ಬೇಗ ನಡೆದುಕೊಂಡು ಹೋಗುತ್ತಿದ್ದೆ,  ಬಸ್ ಸ್ಟಾಪ್ ಸ್ವಲ್ಪ ದೂರದಲ್ಲೇ ಇತ್ತು, ಹೇಗೂ ಇವತ್ತು ಸುಮಾ ಟಿಫನ್ ತಡವಾಗಿ ಕೊಟ್ಟ ಕಾರಣ ಮೊದಲೇ ನಾನು ಲೇಟ್ ಆಗಿದ್ದೆ. 

ಆಗಲೇ ನನ್ನ ಮುಂದೆ ನಡೆಯುವ ಹುಡುಗಿ ಜೋರಾಗಿ "ಒಹ್ ಮೈ ಗಾಡ್ " ಎಂದು ಕಿರುಚಿದಳು . ನಾನು ಒಮ್ಮೆಲೇ ನಿಂತು ಅವಳ ಕಡೆ ನೋಡಿ ,ಅವಳು ನೋಡುವ ಕಡೆ  ನೋಡಿದೆ, ಅಲ್ಲಿ ರಸ್ತೆಯಲಿ ಕಾರ್ ಅಡಿಗೆ ಸಿಕ್ಕಿ ಒಂದು ಬೆಕ್ಕು ಸತ್ತು ಬಿದ್ದಿತು. ನನಗೂ "ಅಯ್ಯೋ" ಅನಿಸಿತು, ಹುಡುಗಿ ಒಂದು ಕೈಯಿಂದ ಆ ಕಡೆಯಿಂದ ಕಣ್ಣು ಮುಚ್ಚಿ ಬೇಗ ಬೇಗ ಅದನ್ನು ನಿರ್ಲಕ್ಷಿಸಿ ಬೇರೆ ಕಡೆ  ನಡೆಯಲಾರಂಭಿಸಿದಳು, ನಾನೂ ಅವಳ ಹಿಂದೆ ಹೆಜ್ಜೆ ಮುಂದೆ ಸಾಗಿಸಿದೆ, ಆದರೆ ನಾನು ಹೋಗುವ ಹಾದಿ ಅದೇ, ರಸ್ತೆಯಲ್ಲಿ ಓಡಾಡುವ ಕಾರ್ ಗಳಲ್ಲಿ ಕೆಲವರು ಬೆಕ್ಕು ಸತ್ತು ಬಿದ್ದಿದನ್ನು ನೋಡಿ ನಿಧಾನವಾಗಿ ಚಲಿಸುತ್ತಿದ್ದರು, ಕೆಲವರು ಅದರ ಬದಿಯಿಂದ ಚಲಿಸಿ ಹೋಗುತ್ತಿದರು. ಬೆಕ್ಕು ಈಗಲೂ ಅಲ್ಲೇ ಬಿದ್ದಿತು. 

ಆಗ ತಂದೆ ಮಗನ ಜೋಡಿ ಆ ಬೆಕ್ಕನ್ನು ನೋಡಿ ಇದ್ದಕ್ಕಿದಂತೆ ನಿಂತರು, ಮಗ ಶಾಲೆಯ ಗಣವೇಶದಲ್ಲಿದ್ದ, ಇಬ್ಬರು ಏನೋ ಮಾತನಾಡಿ, ಆ ಬೆಕ್ಕಿನ ಹತ್ತಿರ ಹೋದರು, ತಂದೆ ತಾನು ಧರಿಸಿದ ಶಾಲನ್ನು ತೆಗೆದ ಹಾಗು ಬೆಕ್ಕಿನ ಶವವನ್ನು ಅದರ ಮೇಲೆ ಇಟ್ಟು, ಅದನ್ನು ಮುಚ್ಚಿ ಅವರಿಬ್ಬರೂ ರಸ್ತೆಯಿಂದ ಫುಟ್ ಪಾತ್ 'ಗೆ ಬಂದರು, ಅವರು ಅಲ್ಲಿ ಬಂದ ಸಮಯ ಹಾಗು ನಾನು ಅಲ್ಲಿ ಮುಟ್ಟುವ ಸಮಯ ಸರಿ ಆಯಿತು, ನಾನು ಕುತೂಹಲದಿಂದ ಇವರು ಇದನ್ನು ಏನು ಮಾಡುತ್ತಾರೆ ಎಂದು ನೋಡುವ ಎಂದು ಅವರ ಬದಿಯಲ್ಲೇ ನಿಂತು ಅವರ ಸಂಭಾಷಣೆ ಕೇಳಲಾರಂಭಿಸಿದೆ.

ಮಗ : ಪಪ್ಪಾ , ಒಳ್ಳೇದಾಯಿತು ಇಲ್ಲಾದರೆ ಪಾಪ ಇದರ ಚಟ್ನಿ ಆಗುತಿತ್ತು. 
ತಂದೆ :   ಹೌದು , ಪಾಪ .
ಮಗ : ಪಪ್ಪಾ , ಅಲ್ಲಿ ಕಸದ ಡಬ್ಬಿ ಇದೆ , ಅದರಲ್ಲಿ ಹಾಕುವ ಬನ್ನಿ. ಶಾಲೆಗೆ ಸಹ ಲೇಟ್ ಆಗುತ್ತದೆ. 
ತಂದೆ : ಯಾಕೋ ಬೇಡ, ಕಸದ ಡಬ್ಬಿಯಲ್ಲಿ ಹಾಕಿ ಇದರ ದೇಹ ಯಾಕೆ ಹಾಳು ಮಾಡುವುದು, ಹೇಗೋ ರಸ್ತೆಯಿಂದ ಎತ್ತಿ ತಂದಿದ್ದೇವೆ, ಅಲ್ಲಿ ನೋಡು ಆ ಮೈದಾನದಲ್ಲಿ ಸ್ವಲ್ಪ ಮಣ್ಣು ಅಗೆದು ಇದನ್ನು ಹೂತು ಬಿಡುವ, ಇದರ ಆತ್ಮಕ್ಕೂ  ಶಾಂತಿ ನಮಗೂ ನೆಮ್ಮದಿ, ಬಾ.
ಮಗ :  ಒಹ್, ಇದು ಸರಿ , ಬನ್ನಿ ಹೋಗುವ.

ಅವರ ಈ ಸಂಭಾಷಣೆ ಕೇಳಿ ನನಗೆ ಅವರಿಗೆ ಒಂದು ಸಲ್ಯೂಟ್ ಹೊಡೆಯಬೇಕು ಎಂದಾಯಿತು. ಇಂಥ ತಿಳುವಳಿಕೆಯುಳ್ಳ ಕೆಲವು ಜನರೇ ಇರುವುದು ಈ ಜಗತ್ತಿನಲ್ಲಿ, ನಾವೆಲ್ಲಾ ಎಷ್ಟು ಸ್ವಾರ್ಥಿ, ಕೇವಲ ನಾವಾಯಿತು, ನಮ್ಮ ಸಂಸಾರ ಆಯಿತು, ಇದರ ಹೊರತು ಏನೂ ಯೋಚಿಸುವುದಿಲ್ಲ,ನನಗೆ ನನ್ನ ಮೇಲೆಯೇ ನಾಚಿಗೆ ಉಂಟಾಯಿತು, ರಸ್ತೆಯಲ್ಲಿ ಎಷ್ಟೋ ಪಕ್ಷಿ ಪ್ರಾಣಿಗಳು ಈ ದುರಂತ ಅವಸ್ಥೆಯಲ್ಲಿ ಸಿಕ್ಕಿ ಸತ್ತು ಬಿದ್ದಿರುತ್ತವೆ, ನಾವು ನಮ್ಮ ಸ್ವಲ್ಪ ಸಮಯ ತೊರೆದು ಈ ಪಕ್ಷಿ ಪ್ರಾಣಿಗಳಿಗೆ ಮಣ್ಣಲ್ಲಿ ಹೂತು ಅವುಗಳಿಗೆ ಮುಕ್ತಿ ನೀಡಬಹುದಲ್ಲವೇ.

ನನ್ನ ದೃಷ್ಟಿ ಆ ಮೈದಾನದ ಕಡೆ ಹೋಯಿತು, ತಂದೆ ಮಗ ಇಬ್ಬರು ಮಣ್ಣು ಅಗೆದು ಆ ಬೆಕ್ಕನ್ನು ಮಣ್ಣಲ್ಲಿ ಹೂತು ಬಿಟ್ಟಿದರು ಹಾಗು ನೆಮ್ಮದಿಯಿಂದ ಶಾಲೆಯತ್ತ ನಡೆಯುತ್ತಿದ್ದರು, ಯಾಕೋ ಕಣ್ಣಿಂದ ಕಣ್ಣೀರು ಜಾರಿತು, ಬಹುಶಃ ತಂದೆ  ಮಗನಿಗೆ ನೀಡುವ ಉತ್ತಮ  ನೋಡಿ.

by ಹರೀಶ್ ಶೆಟ್ಟಿ,ಶಿರ್ವ  

ಸಿದ್ಧಿದಾತ್ರಿ