Tuesday, July 31, 2012

ಮೊಗ್ಗು ಕುಸುಮ

ಮೊಗ್ಗು ಕುಸುಮ
ಅರಳುವ ಮುನ್ನವೇ
ಪರಿಮಳ ಘಮ ಘಮ

ಅವರ ಕಣ್ಣಿಗೆ ಬಿತ್ತು
ಮಾಡಲೆಂದು ಗಮ್ಮತ್ತು
ಕೀಳಲು ಪ್ರಯತ್ನಿಸಿದ್ದರು

ಮೊಗ್ಗು ಕೋಮಲ
ಕೇವಲ ಆದರ ಮುಳ್ಳು ಅದಕ್ಕೆ ಆಧಾರ
ಮುಳ್ಳು ಪ್ರತಿಕ್ರಿಯಿಸಿತು

ರಕ್ತ ಸೋರಿತು ಅವರ 
ಅವರು ಕುಪಿತರಾದರು
ಮೊಗ್ಗನ್ನು ಕಿತ್ತು ಬಿಸಾಕಿದರು

ಮೊಗ್ಗು ಕುಸುಮ ಕಂಗಾಲು
ಕಣ್ಣೀರಿಡುತ ಆಯಿತು ಮಣ್ಣು ಪಾಲು
ಮುಗಿಯಿತು ಅದರ ಬಾಳು
by ಹರೀಶ್ ಶೆಟ್ಟಿ, ಶಿರ್ವ







ದೃಡ ಸಂಕಲ್ಪ

ಮನುಜ...
ದೃಡ ಸಂಕಲ್ಪ ಇಡುವ ವ್ಯಕ್ತಿ ಧೈರ್ಯವಂತ
ಅವನಿಗೆ ಈ ಪ್ರಪಂಚ ಒಂದು ಉದ್ಯಾನ ಸಮಾನ
ಯಾವಾಗ ಬೇಕಾದಾಗ ತಿರುಗಿ ಮನ ಉಲ್ಲಾಸಗೊಳಿಸುವನು
ಸಮುದ್ರ ನದಿಯ ಸಮಾನ
ಯಾವಾಗ ಬೇಕಾದಾಗ ಈಜಿಕೊಂಡು ದಾಟಿ ಹೋಗುವನು
ಪಾತಾಳ ಲೋಕ ಒಂದು ಪರ್ಯಟನ ಸ್ಥಳ
ಯಾವಾಗ ಬೇಕಾದಾಗ ತಿರುಗಿ ಬರುವನು
ಪರ್ವತ ಒಂದು ಇರುವೆ ಸಮಾನ
ಯಾವಾಗ ಬೇಕಾದಾಗ ಸುಲಭವಾಗಿ ಏರುವನು
ನಿನ್ನ ಜೀವನ ದೋಣಿ ಧೈರ್ಯದಿಂದ ಸಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿ

Monday, July 30, 2012

ಜೀವನ ರಸ

ಮನುಜ...
ಜೀವನ ಇರುವುದು
ಜನ್ಮ ಹಾಗು ಮೃತ್ಯು ಇದರ ಮಧ್ಯೆ
ಜೀವನ ನಿನಗೆ ಸಿಕ್ಕಿದ ಅಮೂಲ್ಯ ಕೊಡುಗೆ
ಜೀವನ ಕಪಟ ವಂಚನೆಯ ಬೀಜ ಬಿತ್ತುವುದಿಲ್ಲ
ವಿನಾಶ ಬಯಸುವುದಿಲ್ಲ
ಜೀವನದ ಅರ್ಥ ತಿಳಿದುಕೊಳ್ಳು
ಅರ್ಥದ ಅನರ್ಥ ಮಾಡಬೇಡ
ಸ್ವಾರ್ಥ ಅಹಂಕಾರದ ಕಹಿ ಕಷಾಯ ಕುಡಿಯಬೇಡ
ಜೀವನದ ಸಿಹಿ ರಸವನ್ನು ಹೀರುತ ಇರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಹೇ ಮುಗಿಲೇ

ಹೇ ಮುಗಿಲೇ
ಮಳೆಯನ್ನು ಸುರಿಸು
ಬೇಗ ಬಾ ನನ್ನ ಊರಿಗೆ
ಬುವಿಯನ್ನು ತಣಿಸಲು
ರೈತರ ನಗು ಹಿಂತಿರುಗಿಸಲು

ಹೇ ಮುಗಿಲೇ
ಮಳೆಯನ್ನು ಸುರಿಸು
ಎಲ್ಲರನ್ನು ತನ್ನ ಧಾರೆಯಲ್ಲಿ ಮೀಯಿಸು
ಎಲ್ಲರ ದಾಹ ತೀರಲಿ
ಈ ಭೂಮಿ ಹಸಿರ ವಸ್ತ್ರ ಧರಿಸಲಿ
by ಹರೀಶ್ ಶೆಟ್ಟಿ, ಶಿರ್ವ

Sunday, July 29, 2012

ದಾನ

ಮನುಜ...
ದಾನ ಒಂದು ಉತ್ತಮ ಕಾರ್ಯ
ದಾನದ ಮಹತ್ವ ಶ್ರೇಷ್ಠ
ಸ್ನಾನ ಮಾಡಿದ ನಂತರ ಮೈ ಶುದ್ಧ ಆಗುವ ಹಾಗೆ
ದಾನ ಮಾಡಿದರೆ ಧನ ಶುದ್ಧ ಆಗುತ್ತದೆ
ಕಪಟ ಮನಸ್ಸಿಂದ ಮಾಡಿದ ದಾನ ದಾನ ಅಲ್ಲ
ನಿಷ್ಕಪಟ ಮನಸ್ಸಿಂದ ಮಾಡಿದ ದಾನವೇ ನಿಜ ದಾನ
ದಾನ ಅಂದರೆ ತ್ಯಾಗ
ದಾನ ಮನಸ್ಸು ಪವಿತ್ರ ಮಾಡುವ ಯೋಗ
ದಾನ ದೇವರ ಪೂಜೆ ಸಮಾನ
ಕೈಲಾದಷ್ಟು ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸಾವಿರ ಕನಸು

ಗೆಳತಿ
ಅಂದು ನಾವು ಕಂಡ
ಸಾವಿರ ಕನಸುಗಳು
ಇಂದು ಅಳುತ್ತಿದೆ
ನನಸಾಗಲಿಲ್ಲವೆಂದು
by ಹರೀಶ್ ಶೆಟ್ಟಿ, ಶಿರ್ವ

ಗಲಾಟೆ

ಗೆಳತಿ..
ನೀನು
ಒಂದು ಶಬ್ದ ನುಡಿಯಲಿಲ್ಲ
ನಾನು
ಒಂದು ಶಬ್ದ ಹೇಳಲಿಲ್ಲ
ಆದರೂ ಇಷ್ಟು ಗಲಾಟೆ ಯಾಕೆ ಇದೆ?
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ