Wednesday, August 3, 2011

ಯಾರಿಗೆ ಬೇಕು ಈ ಜಗ

ಯಾರಿಗೆ ಬೇಕು ಈ ಜಗ
ಮನುಷ್ಯನಾಗಿದ್ದಾನೆ ಮೃಗ......!

ಕೊನೆ ಇಲ್ಲದ ಆಸೆ
ಎಲ್ಲದಲ್ಲೂ ದುರಾಸೆ
ಅಹಂಕಾರದ ಗುಲಾಮ
ಅವನು ಹೇಳಿದೆಲ್ಲ ಸಮ ಸಮ.....!

ಪರ ಕಷ್ಟದ ಇಲ್ಲ ಧ್ಯಾನ
ಅವನದೇ ಮಾನ
ಸ್ವತ ಅವನೇ ಜಾಣ
ಸ್ವಾರ್ಥ ಕೂಡಿದೆ ಕಣ ಕಣ.....!

ಅವನಿಲ್ಲ ತೃಪ್ತ
ಲಂಚ ಬೇಕು ಗುಪ್ತ
ಯಾರಿಲ್ಲ ಅವನ ಆಪ್ತ
ಅವನದೆಲ್ಲ ಸುಪ್ತ ಸುಪ್ತ.....! 
ಅವನಲ್ಲಿಲ್ಲ ಮಾನವ
ನೆಲೆಸಿದ್ದಾನೆ ದಾನವ
ಮಾಡುವುದೆಲ್ಲ ದುಷ್ಕರ್ಮ
ಅಧರ್ಮವೇ ಅವನ ಧರ್ಮ ಧರ್ಮ......!
ಯಾರಿಗೆ ಬೇಕು ಈ ಜಗ
ಮನುಷ್ಯನಾಗಿದ್ದಾನೆ ಮೃಗ......!
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha

Aasa Jive Jag Marey, Log Marey Mar Jayee
Soyee Sube Dhan Sanchate, So Ubrey Jey Khayee 

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಆಸೆ  ಜೀವಿಸುವುದು ಸತ್ತ ಜಗತ್ತಿನಲ್ಲಿ
ಜನರು ಸತ್ತೆ ಅದು ಸಾಯುವುದು
ಆದರೂ ಇನ್ನೂ ಹಾಳಾಗದಂತೆ ಸಂಪತ್ತು ಸಂಗ್ರಹಿಸುವೆ
ಅದು ಖರ್ಚು ಮತ್ತು ಸ್ವಾತಂತ್ರ್ಯ ಪಡೆಯಲು ಆಗದು

Tuesday, August 2, 2011

ನದಿಯ ಉದ್ದೇಶ

ಕೇಳಿದೆ ಹರಿಯುವ ನದಿಗೆ 
"ಸದಾ ಹರಿಯುವ ನೀನು,
ಕಲ್ಲನ್ನೂ ತುಂಡು ಮಾಡುವಿ
ಎಂಥ ನಿನ್ನ ಶಕ್ತಿ, 
ಏನು ನಿನ್ನ ಉದ್ದೇಶ "
ನದಿ ಹೇಳಿತು ನಕ್ಕು
"ಹರಿಯ ಬಿಡು ನನ್ನನ್ನು,
ಇದೇ ನನ್ನ  ಶಕ್ತಿ, 
ಇದೇ ನನ್ನ ಸ್ಥಿರತೆ,
ನನ್ನದೊಂದೇ ಉದ್ದೇಶ
ಪ್ರಯತ್ನಿಸುವುದನ್ನು ಬಿಡಬಾರದು 
ಬಿಡಬಾರದು ಯಾವಾಗಲು ಆಸೆ"
by ಹರೀಶ್ ಶೆಟ್ಟಿ ,ಶಿರ್ವ

ಇನ್ನೊಂದು ಜೀವನ

ಅವನ  ಮದುವೆ
ಸಂಸಾರದ ಪ್ರಾರಂಭ
ಸಂತೋಷ ಉಲ್ಲಾಸ
ಉತ್ಸವ ಆನಂದ

ಪತ್ರ ಒಂದರ ಆಗಮನ
ತುರ್ತು ಯುದ್ಧದ ಸೂಚನೆ
ದೇಶದ ಕರೆ
ಅವನು ಹೋಗಲು ಕೂಡಲೇ ಸಿದ್ದ

ಅವಳ ವೇದನೆ
ತಾಯಿಯ ಸಂಯಮ
ತಂದೆಯ ಧೈರ್ಯ
ಹೊರಟ ಹೋರಾಟಕ್ಕೆ

ಯುದ್ದದ ವಾತಾವರಣ
ಅವಳ ಏಕಾಂತ ಜೀವನ
ಕಾಯುತ್ತಿದ್ದಳು  ದಿನ ದಿನ
ಎಲ್ಲಿಯೂ ಇಲ್ಲ ಅವಳ ಮನ
ಯಾವಾಗ ಬರುವನು?
ಮುಗಿಯುತ್ತದೆಯೇ ಈ ಯುದ್ದ ?
ಇದೆಲ್ಲ ವಿಚಾರ.......

ಎಂತು ಬಂತು ಒಂದು ಪತ್ರ
ಬಂದರು ಕೆಲವರು ಒಟ್ಟಿಗೆ
ಜೊತೆಗೆ ಶವಪೆಟ್ಟಿಗೆ
ಕಣ್ಣಿರೊಂದು ಬಿತ್ತು
ದೇಶಕ್ಕಾಗಿ ಇನ್ನೊಂದು ಬಲಿದಾನ
ಅವಳ ಅಸೆ , ಆಕಾಂಕ್ಷೆಗಳ ಬಲಿದಾನ
ಕಂಪಿಸಿತು ಅವಳ ತನ
ಕ್ಷಣದಲ್ಲೇ ಮುಗಿದಿತ್ತು ಅವಳ ಜೀವನ
ಸಿಗುವುದೇ ಅವಳಿಗೆ ಇನ್ನೊಂದು ಜೀವನ?
by ಹರೀಶ್ ಶೆಟ್ಟಿ, ಶಿರ್ವ


Kabir Doha (ಕಬೀರ ದೋಹ )

Kabir Doha

Kabir So Dhan Sanchiye, Jo Aage Ko Hoye
Sees Charaye Potli, Le Jaat Na Dekhya Koye

ಅನುವಾದ :ಹರೀಶ್  ಶೆಟ್ಟಿ , ಶಿರ್ವ
ಕಬೀರ ಎನಿಸಿದ ಸಂಪತ್ತು ಉಳಿಸುವೆ, ಮುಂದಿನ ಸಮಯ ಆಗುವುದು ಪಾರು!
ಸತ್ತ  ನಂತರ ಕಿರೀಟ ಧರಿಸಿ ಸಂಪತ್ತನ್ನು ಒಟ್ಟಿಗೆ, ಕೊಂಡು ಹೋಗುವುದನ್ನು ನೋಡಲಿಲ್ಲ ಯಾರು!!

Monday, August 1, 2011

ನಿಸ್ವಾರ್ಥ ಸೇವೆ

ಕೇಳಿದೆ ಜೇನು ನೊಣಕ್ಕೆ
ಒಂದು ದಿನ
"ಅ ಹೂವಿಂದ ಈ ಹೂವಿಂದ
ಮಾಡುವೆ ನೀ ಸಿಹಿ ಒಟ್ಟು
ಜನರು ಅದನ್ನು ತಿನ್ನುವರು ಕದ್ದು
ಏಕೆ ನಿನಗೆ ಈ ಎಲ್ಲ ಕಷ್ಟ ,
ಹೋಗುದಿಲ್ಲವೇ ನೀ ಸೋತು"
ಜೇನು ನೊಣ ಹೇಳಿತು ನಕ್ಕು
"ಕಷ್ಟ ಪಟ್ಟರೆ ಇಷ್ಟ ಸಿಗುವುದು,
ಸಿಹಿ ಹಂಚಿದರೂ ಸಿಹಿ ಮುಗಿಯದು
ನನ್ನಿಂದಾಗಲಿ ಎಲ್ಲರ  ಸಿಹಿ ಬಾಯಿಯ
ನನ್ನಿಂದ ಕಲಿಯಲಿ ಪಾಠ ನಿಸ್ವಾರ್ಥ ಸೇವೆಯ "
ಹರೀಶ್ ಶೆಟ್ಟಿ ,ಶಿರ್ವ

ಬೇಜಾರ

ನನಗೆ ಈಗಲೂ
ನನ್ನ ತುಟಿಗಳ ಮೇಲೆ
ಕೋಪವಿದೆ.....
ಎಲ್ಲಿ ಮಾತನಾಡ ಬೇಕಿತ್ತೋ
ಆ  ಸಮಯ
ಇದು ಒಂದೇ ಒಂದು ಶಬ್ದ ನುಡಿಯಲಿಲ್ಲ...
_______________________

ಒಣಗಲಿಲ್ಲ ನಿನ್ನ ನೆನಪಿನ ಹೂವು
ನಾನು ಈಗಲೂ ಅದನ್ನು
ನನ್ನ ಕಣ್ಣಿರಿನಿಂದ
ಸುರಕ್ಷಿತವಾಗಿ ಇಟ್ಟಿದ್ದೇನೆ
ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ