Sunday, December 13, 2020

ಒಂದು ವೇಳೆ ಮರೆಯದಿದ್ದರೆ ನೀನು



ಒಂದು ವೇಳೆ ಮರೆಯದಿದ್ದರೆ ನೀನು, 

ಕನಸಿದು ನನಸಾಗುವುದು ನಮ್ಮದು, 

ನಾನು ನೀನು ಅಗಲಲಾರೆವು,

ನಾನು ನೀನು ಅಗಲಲಾರೆವು,

ಒಂದು ವೇಳೆ....


ದೇವರು ತನ್ನ ಕೈಯಿಂದ ನಮ್ಮನ್ನು ಸೃಷ್ಟಿಸಿದ, 

ಹಾಕಿದ ಹೃದಯದಲಿ ಮಿಡಿತ,

ಹೃದಯದಿಂದ ಹೃದಯ ಸೇರಿಸಿದ, 

ಮತ್ತೆ ಪ್ರೀತಿಯ ದೇವದೂತನನ್ನು ಜಗತ್ತಿಗೆ ಕೊಂಡುಬಂದ,

ಒಂದು ವೇಳೆ....


ಮಾಸದಂತಹದ್ದು ಒಲವ ನಂಬಿಕೆ ನಮ್ಮದು,

ನಾಶವಾಗದು ಎಂದೂ ಅಸ್ತಿತ್ವ ನಮ್ಮದು, 

ಬಯಕೆಯ ಗಮ್ಯದಲ್ಲಿ ಕರೆಯುತ್ತದೆ ಪ್ರತಿ ಉಸಿರು ನಮ್ಮದು, 

ಒಂದು ವೇಳೆ.....


ಜೀವನದ ಪ್ರತಿ ಪ್ರಯಾಣದಲ್ಲಿ ನಾವು ಜೊತೆಯಲ್ಲಿಯೇ ಇರುವೆವು,

ಜಗತ್ತಿನ ಪ್ರತಿ ಪಥದಲಿ ನಾವು ಜೊತೆಯಲ್ಲಿಯೇ ನಡೆಯುವೆವು,

ಜೊತೆಯಲ್ಲಿಯೇ ಬದುಕುವೆವು ನಾವು, 

ಜೊತೆಯಲ್ಲಿಯೇ ಸಾಯುವೆವು ನಾವು,


ಅನುವಾದ: ಹರೀಶ್ ಶೆಟ್ಟಿ, ಶಿರ್ವ

ಮೂಲ: ಹಸ್ರತ್ ಜೈಪುರಿ

ಸಂಗೀತ:ಶಂಕರ್ ಜೈಕಿಶನ್

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ: ಯಾಕೀನ್गर तुम भुला न दोगे

सपने ये सच ही होंगे

हम-तुम जुदा न हों

हम-तुम जुदा न होंगे

गर तुम भुला न दोगे.


मालिक ने अपने हाथों, जिस दम हमें बना

डाली दिलों में धड़कन, और दिल से दिल मिलाया

फिर प्यार का फ़रिश्ता, दुनिया में ले के आ

गर तुम भुला न दोगे..


जीवन के हर सफ़र में, हम साथ ही रहें

दुनिया की हर डगर पर, हम साथ ही चलेंगे

हम साथ ही जीयेंगे, हम साथ ही मरें

गर तुम भुला न दोगे..


पत्थर की है लकीरें अहद-ए-वफ़ा हमा

हरगिज़ ना मिट सकेंगे, नाम-ओ-निशाँ हमारी

चाहत की मंज़िलों पर हर साँस ये पुका

गर तुम भुला न दोगे...रेरी.गेगे.याया..गे



Saturday, December 12, 2020

ಹೋಗಲೆಲ್ಲಿ ಹೇಳು ಹೃದಯ



ಹೋಗಲೆಲ್ಲಿ ಹೇಳು ಹೃದಯ,

ಪ್ರಪಂಚ ಈ ತುಂಬಾ ನಿರ್ದಯ, 

ಮನೆ ಸುಡಲೆಂದು ಬಂದಿದೆ ಹುಣ್ಣಿಮೆಯ ಚಂದಿರ, 

ಅರಿವಾಗದು ಯಾವುದೇ ಗಮ್ಯ,

ಹೋಗಲೆಲ್ಲಿ ಹೇಳು ಹೃದಯ....


ಕಟ್ಟಿ ಮುರಿದೋಗುತ್ತದೆ ಇಲ್ಲಿ ಬಯಕೆಯ ಅರಮನೆ,

ಈ ಭೂಮಿ ಅಂಬರದಲ್ಲೂ ಆಗಿದೆ ಬದಲಾವಣೆ,

ಹೇಳುತ್ತಿದೆ ಜೀವನ ಈ ಜಗದಿಂದ ಹೊರಟುಹೋಗಯ್ಯ,

ಹೋಗಲೆಲ್ಲಿ ಹೇಳು ಹೃದಯ.....


ಅಯ್ಯೋ ಈ ತೀರದಲಂತೂ ದುಃಖದ ಪಥಗಲ್ಲೆಲ್ಲ, 

ಆ ತೀರದಲಿ ಏನೋ ಯಾರಿಗೂ ತಿಳಿದಿಲ್ಲ, 

ಮುಗ್ಗರಿಸಿ ಬೀಳುತ್ತಿದೆ ಪ್ರತಿ ಹೆಜ್ಜೆಯಲ್ಲಿ ನೋಟವ,

ಹೋಗಲೆಲ್ಲಿ ಹೇಳು ಹೃದಯ.....


ಅನುವಾದ:ಹರೀಶ್ ಶೆಟ್ಟಿ, ಶಿರ್ವ 

ಚಿತ್ರ: ಚೋಟಿ ಬಹೆನ್ 

ಹಾಡಿದವರು: ಮುಕೇಶ್ 

ಮೂಲ: ಹಸ್ರತ್ ರೋಮನಿ 

ಸಂಗೀತ :ಶಂಕರ್ ಜೈಕಿಶನ್


Jaoon kahan bata ae dil

Duniya badi hai sangdil

Chaandni aayi ghar jalane

Soojhe na koi manzil

Jaoon kahan bata ae dil

Duniya badi hai sangdil

Chandni aayi ghar jalane

Soojhe na koi manzil

Jaoon kahan bata ae dil


Banke toote yahaan aarzoo ke mahal

Ye zameen aasmaan bhi gaye hain badal

Kahti hai zindagi is jahaan se nikal

Kahti hai zindagi is jahaan se nikal

Jaoon kahan bata ae dil

Duniya badi hai sangdil

Chandni aayi ghar jalane

Soojhe na koi manzil

Jaoon kahan bata ae dil


Haay is paar to aansuon ki dagar

Jaane us paar kyaa ho kise hai khabar

Thokaren kha rahi har kadam par nazar

Thokaren kha rahi har kadam par nazar

Jaoon kahan bata ae dil

Duniya badi hai sangdil

Chandni aayi ghar jalane

Soojhe na koi manzil

Jaoon kahan bata ae dil.

Friday, December 11, 2020

ನೀ ನನ್ನನ್ನು ನೋಡಿದೆ

 


ನೀ ನನ್ನನ್ನು ನೋಡಿದೆ,

ಉದಾರ ಮನಸ್ಸಿನಿಂದ, 

ಈ ಧರೆ ನಿಲ್ಲಿತು, 

ಅಂಬರ ನಿಂತೊಯೀತು,

ರೂಪಸಿಯೇ, ಪ್ರೇಯಸಿಯೇ,

ನೀ.....

-

ಎಲ್ಲಿ ವೇದನೆಯ ಮರುಭೂಮಿಯಲಿ ನಿಂತು ನಡೆಯುತ್ತಿರುತ್ತಿದ್ದೆ, 

ಈ ತುಟಿಗಳ ಹಂಬಲದಲಿ ಜ್ವಲಿಸಿ ಉರಿಯುತ್ತಿರುತ್ತಿದ್ದೆ,

ಅನುಕಂಪ ತೋರಿತು ಕೇಶದ ಮೇಘಗಳು,

ರೂಪಸಿಯೇ, ಪ್ರೇಯಸಿಯೇ, 

ನೀ.....

-

ಈ ಮೋಹಕ ಭಂಗಿಗಳೊಂದಿಗೆ ನೀ ಬಂದೆಲ್ಲಿಗೆ ತಲುಪಿದೆ,

ಕೊನೆಯಲ್ಲಿ ನನ್ನ ಹೃದಯ ತನಕ ನಿನ್ನ ಪಾದಗಳ ಚಿನ್ಹೆ ಮುಟ್ಟಿದೆ,

ಮುಗಿದಂತಾಗಿದೆ ಎಲ್ಲ ಪಥಗಳಿಲ್ಲಿ,

ರೂಪಸಿಯೇ, ಪ್ರೇಯಸಿಯೇ, 

ನೀ.....


ಅನುವಾದ :ಹರೀಶ್ ಶೆಟ್ಟಿ, ಶಿರ್ವ 

ಹಾಡಿದವರು: ಮೊಹಮ್ಮದ್ ರಫಿ

ಮೂಲ: ಮಜರೂಹ್ ಸುಲ್ತಾನ್ಪುರಿ, 

ಸಂಗೀತ : ರಾಹುಲ್ ದೇವ್ ಬರ್ಮನ್ 

ಚಿತ್ರ : ತೀಸರೀ ಮಂಝಿಲ್


तुमने मुझे देखा, हो कर मेहरबान

रुक गयी ये ज़मीं, थम गया आसमां

जाने मन, जाने जाँ

तुमने मुझे...


कहीं दर्द के सहरा में, रुकते चलते होते

इन होंठों की हसरत में, तपते जलते होते

मेहरबान हो गयी, ज़ुल्फ़ की बदलियाँ

जानेमन, जाने जाँ...


लेकर ये हसीं जलवे, तुम भी न कहाँ पहुंचे

आखिर को मेरे दिल तक, क़दमों के निशाँ पहुंचे

ख़त्म से हो गए, रास्ते सब यहाँ

जानेमन, जाने जाँ...

Monday, December 7, 2020

ಹೃದಯದಲ್ಲಿ



ಹೃದಯದಲ್ಲಿ ಯಾರದ್ದೋ ಪ್ರೀತಿಯ ಬೆಳಕುತ್ತಿರುವ ದೀಪವ, 

ಜಗದ ಬಿರುಗಾಳಿಯಿಂದ ಇದೇನು ನಂದಿಸಿ ಹೋಗುತ್ತದೆಯೇ? 

-

ಉಸಿರಿನ ತಾಪದಿಂದ ಜ್ವಲಿಸುತ್ತಿರುತ್ತದೆ ಇದು,

ಎದೆಯಲ್ಲಿ ಹೃದಯದ ಜೊತೆ ಮಿಡಿಯುತ್ತಿರುತ್ತದೆ ಇದು,

ಮಿಡಿಯುತ್ತಿರುತ್ತದೆ ಇದು...

ಅದೆಂತಹ ಅನುರಾಗ ಅಳಿಸಿದರೆ ಅಳಿಸುವಂತಹದು, 

ಅದೆಂತಹ ನೋವು ಅಡಗಿಸಿದರೆ ಅಡಗಿಸುವಂತಹದು, 

ಹೃದಯದಲ್ಲಿ.........

-

ಈ ಜೀವನ ಸಹ ಏನು? ಕೊಡುಗೆ ಅವರದ್ದೇ, 

ಈ ಕವನ ಸಹ ಏನು? ಕರುಣೆ ಅವರದ್ದೇ, 

ಕರುಣೆ ಅವರದ್ದೇ...

ಈಗ ಹರಸಲಿ ಅಲ್ಲವೇ ಪೀಡಿಸಲಿ ಇದು ಅವರ ನಿರ್ಧಾರ, 

ನಾನಂತೂ ಹೃದಯದಲ್ಲಿ ಹಚ್ಚಿದ್ದೇನೆ ಹಣತೆ ಪ್ರೀತಿಯ, 

ಹೃದಯದಲ್ಲಿ...


ಅನುವಾದ :by ಹರೀಶ್ ಶೆಟ್ಟಿ, ಶಿರ್ವ

ಮೂಲ: ಸಾಹಿರ್ ಲುಧ್ಯಾನವಿ 

ಸಂಗೀತ: ರವಿ 

ಹಾಡಿದವರು: ಲತಾ ಮಂಗೇಶ್ಕರ್ 

ಚಿತ್ರ :ಏಕ್ ಮಹಲ್ ಹೊ ಸಪನೋ ಕ


दिल में किसी के प्यार का जलता हुआ दिया

दुनिया की आँधियों से भला ये बुझेगा क्या


साँसों की आँच पा के भड़कता रहेगा

सीने में दिल के साथ धड़कता रहेगा ये

धड़कता रहेगा 

वो नक़्श क्या हुआ जो मिटाये से मिट गया

वो दर्द क्या हुआ जो दबाये से दब ग

दिल में किसी के प्यार का ..


ये ज़िंदगी भी क्या है अमानत उन्हीं की 

ये शायरी भी क्या है इनायत उन्हीं की है

इनायत उन्हीं की 

अब वो करम करें कि सितम उन का फ़ैसला

हम ने तो दिल में प्यार का शोला जला लि

दिल में किसी के प्यार का ...

Video link: https://youtu.be/Y56hu3j-Xmw









ನಿಂದನೆ ಸಹಿಸು ನೀನು



ನಿಂದನೆ ಸಹಿಸು ನೀನು, 

ನಿಂದನೆ ಸ್ವೀಕರಿಸು ನೀನು, 


ನಿರ್ಮಲ ನೀರಿಗೆ ಕಲ್ಲು ಎಸೆದರೆ, 

ಕೊಂಚ ತಳಮಳ ಉಂಟಾಗುವುದು ಸಹಜ, 

ಆದರೆ ಕ್ಷಣಕ್ಕೆ ಶಾಂತತೆ ಆವರಿಸುತ್ತದೆ,

ಇದೂ ನಿಜ,

ಕೋಪವನ್ನು ನಿಯಂತ್ರಿಸು ನೀನು, 

ತನ್ನನ್ನು ತಾನೇ ಗೆಲ್ಲು ನೀನು,

ನಿಂದನೆ ಸಹಿಸು ನೀನು....


ಅಪಮಾನ ಮಾಡುವವರು ನಿನ್ನ ಹಿತೈಷಿಗಳೆಂದು ತಿಳಿ ನೀನು, 

ತಾಳ್ಮೆಯಿಂದ ನಿಂದನೆ ನುಂಗು ನೀನು, 

ನಿನ್ನ ದೋಷವಿದ್ದಲ್ಲಿ ತಿದ್ದಿಕೊಳ್ಳು ನೀನು,

ನಗು ಮುಖ ತೋರಿ ಧನ್ಯವಾದ ಸಲ್ಲಿಸು ನೀನು,  

ನಿಂದನೆ ಸಹಿಸು ನೀನು.....


ಕುಂಬಾರನ ಹೊಡೆತಕ್ಕೆ ಮಣ್ಣು ಮೌನ ಇರುವಂತೆ, 

ಮೌನ ಇದ್ದು ನಿನ್ನ ಸಹನೆ ಶಕ್ತಿಯನ್ನು ಏರಿಸು ನೀನು, 

ಕುಂಬಾರ ಮಾಡಿದ ಸುಂದರ ಮಡಕೆಯಂತೆ ಆಕಾರ ಪಡುವೆ ನೀನು,

ನಿಂದನೆಯ ತಾಪ ಸಹಿಸಿಕೊಳ್ಳು ನೀನು,

ನಿಂದನೆ ಸಹಿಸು ನೀನು.....


ನಿಂದಿಸುವವರ ಕ್ರೋಧ ಅವರ ರಕ್ತವನ್ನೇ ಹೀರುತ್ತದೆ, 

ಅನ್ಯರನ್ನು ನಿಂದಿಸುವಾಗ ಇದು ಅವರ ವ್ಯಕ್ತಿತ್ವವನ್ನೇ ದರ್ಶಿಸುತ್ತದೆ, 

ಮೌನವಿದ್ದು ನಿನ್ನ ಒಳ್ಳೆ ಗುಣ ಕಾಪಾಡು ನೀನು,

ನಿನ್ನ ಶಾಂತತೆ ಕಾಪಾಡಿಕೊಳ್ಳು ನೀನು,

ನಿಂದನೆ ಸಹಿಸು ನೀನು.....


by ಹರೀಶ್ ಶೆಟ್ಟಿ, ಶಿರ್ವ

Saturday, December 5, 2020

ಮನ ಶುದ್ಧ


Photo: google


ಮನ ಶುದ್ಧ, 

ಆತ್ಮ ಶುದ್ಧ, 


ಆತ್ಮ ಶುದ್ಧ, 

ವಿಚಾರ ಶುದ್ಧ, 


ವಿಚಾರ ಶುದ್ಧ, 

ಆಚಾರ ಶುದ್ಧ, 


ಆಚಾರ ಶುದ್ಧ,

ಸಂಕಲ್ಪ ಶುದ್ಧ, 


ಸಂಕಲ್ಪ ಶುದ್ಧ, 

ಕರ್ಮ ಶುದ್ಧ, 


ಕರ್ಮ ಶುದ್ಧ, 

ನಿರ್ಣಯ ಶುದ್ಧ, 


ನಿರ್ಣಯ ಶುದ್ಧ, 

ಕಾರ್ಯ ಶುದ್ಧ, 


ಕಾರ್ಯ ಶುದ್ಧ,

ವ್ಯವಹಾರ ಶುದ್ಧ, 


ವ್ಯವಹಾರ ಶುದ್ಧ, 

ಫಲ ಶುದ್ಧ,


ಫಲ ಶುದ್ಧ, 

ಜೀವನ ಪರಿಶುದ್ಧ 


by ಹರೀಶ್ ಶೆಟ್ಟಿ, ಶಿರ್ವ

Friday, December 4, 2020

ಏಕಾಂಗಿ ಜೀವನ



ಏಕಾಂಗಿ ಜೀವನ,

ನೆನಪು ಸದಾ ನಿನ್ನ, 

ಏಕಾಂಗಿ ಜೀವನ.....


ಏರು ಪೇರು ಸಾಗರದ ಅಲೆಯಲ್ಲಿ, 

ತಳಮಳ ಯಾಕೋ ಮನಸ್ಸಲ್ಲಿ, 

ನೀನೇ ಇರುವೆ ಸ್ಮೃತಿಯಲ್ಲಿ,

ತುಂಬಿರುವೆ ಕಣ್ಣೀರಾಗಿ ನೀನೇ ಕಣ್ಣಲ್ಲಿ, 

ಅಳುತ್ತಿದೆ ಈ ಮನ, 

ಏಕಾಂಗಿ ಜೀವನ.....


ಖಾಲಿ ಖಾಲಿ ಈ ಹಾದಿಯಲಿ,

ಅಪರಿಚಿತ ಈ ಪಥದಲ್ಲಿ, 

ನಡೆಯುತ್ತಿರುವೆ ನಾನು ಹಗಲಲಿ ರಾತ್ರಿಯಲಿ, 

ಹೋಗುತ್ತಿರುವೆ ನನ್ನದೇ ಗುಂಗಿನಲ್ಲಿ, 

ಗೊತ್ತಿಲ್ಲ ಯಾವುದು ತಾಣ ನನ್ನ,

ಏಕಾಂಗಿ ಜೀವನ.....


ಅದೇಕೆ ನೀನು ನನ್ನನ್ನು ಬಿಟ್ಟು ಹೋದೆ, 

ಗಾಜಿನಂತೆ ಹೃದಯ ಮುರಿದು ಹೋದೆ, 

ನೀನಿಲ್ಲದೆ ಜೀವನದಲಿ ಏನಿದೆ?

ಬದುಕು ಅಶ್ರುವಿನ ಸಾಗರದಲ್ಲಿ ತೇಲಿದೆ, 

ಚಡಪಡಿಕೆಯಲ್ಲಿ ನನ್ನ ಪ್ರಾಣ,

ಏಕಾಂಗಿ ಜೀವನ.....


by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ