Thursday, January 9, 2020

ಹೃದಯದ ಮಾತನ್ನು

ಚಿತ್ರ ಕೃಪೆ : ಗೂಗಲ್ 
ವಿಡಿಯೋ ಕೊಂಡಿ : ಯು ಟ್ಯೂಬ್

ನಾಜೂಕು ಬಂಧನ ಬಂಧನದಲ್ಲಿ ನನ್ನನ್ನು ಕಟ್ಟಿಕೊಳ್ಳು
ನನ್ನನ್ನು ಕಟ್ಟಿಕೊಳ್ಳು
ನಿಜ ಗೆಳೆತನ ಗೆಳೆತನದಲ್ಲಿರುವುದಿಲ್ಲ ಅಂತರ ತಿಳಿದುಕೊಳ್ಳು
ಅಂತರ ತಿಳಿದುಕೊಳ್ಳು
ಈ ಕೋಪ ನಿನ್ನ ಕೇವಲ ಸುಳ್ಳು ಸುಳ್ಳು
ನನ್ನೊಲವೆ ಕೇಳು ನೀ ನನ್ನ
ಹೃದಯದ ಮಾತನ್ನು
ಆಡುವ ನಾವು
ಜೊತೆಯಲಿ  ಕಣ್ಣಲ್ಲಿ ಕಣ್ಣು ಬೆರೆಸಿ
ಹೃದಯದ ಮಾತನ್ನು
ಆಡುವ ನಾವು ಪ್ರತಿದಿನ ನಿಜ ಪ್ರೀತಿ ನಿಭಾಯಿಸಿ
ಸತಾಯಿಸುವೆ ನನ್ನನ್ಯಾಕೆ
ತೋರಿಸುವೆ ನನಗ್ಯಾಕೆ
ಹೀಗೆ ಸುಳ್ಳು ಸುಳ್ಳು ಮುನಿಸಿ, ಅಯ್ಯೋ
ಹೃದಯದ ಮಾತನ್ನು
ಆಡುವ ನಾವು....

ನಿನ್ನನ್ನು ಎಲ್ಲರಿಂದ  ಅಡಗಿಸಿಟ್ಟೆ
ಸಿಂಗರಿಸಿ  ನನ್ನ ಕಣ್ಣಲ್ಲಿ
ನೀನು ನನ್ನ ನಂಬಿಕೆ
ಇಡು ನನ್ನನ್ನು ಮಾಡಿ ನಿನ್ನಲ್ಲಿ
ನಾನು ನಿನ್ನ , ನಾನು ಕೇವಲ ನಿನ್ನ ಒಲವೇ
ಅಂತರ ಎಂದೂ ಬಾರದಿರಲಿ
ನಾನು ಜೀವನ ನಿನ್ನ
ನೀನು ಜೀವನ ನನ್ನ
ಹೇಳು ನೀನೇನು ಸಾಬೀತಿಸುವೆ ಹೀಗೆ ನಾಟಕ ಮಾಡಿ
ಹೃದಯದ ಮಾತನ್ನು
ಆಡುವ ನಾವು....

ಈ ರಾತ್ರಿ ಕಪ್ಪು,ಕಪ್ಪು, ಕಪ್ಪಾದರೆ
ಶ್ಯಾಮಲ ನನ್ನ ಹೃದಯ ತಾರೆ
ನನ್ನ ಜೊತೆಗಾರ್ತಿ,  ಜೊತೆಗಾರ್ತಿ,  ಜೊತೆಗಾರ್ತಿಯೇ
ಒಂದುವೇಳೆ ನೀನು ನನ್ನನ್ನು ಆಲಂಗಿಸದಿದ್ದರೆ
ನನ್ನ ಗಗನ ಈ ವಾತಾವರಣದ ಕೇಳುವುದಿಲ್ಲ
ಯಾವುದೇ ಕನಸು ಪೂರ್ಣ ನನಸಾಗುವುದಿಲ್ಲ
ಹೃದಯದ ಮಾತನ್ನು
ಆಡುವ ನಾವು....
ಗೊತ್ತಿದೆ ಯಾಕೆ
ನೀ ಅಡಗಿ ನೋಡುವೆ  ನನಗೆ
ನನ್ನ ಹೆಸರಲ್ಲಿ ನಿನ್ನ ಹೆಸರು ಸೇರಿಸಿ
ಹೃದಯದ ಮಾತನ್ನು
ಆಡುವ ನಾವು....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಇರ್ಷಾದ್ ಕಾಮಿಲ್
ಹಾಡಿದವರು : ಅತಿಫ್ ಅಸ್ಲಾಂ
ಚಿತ್ರ : ಟೈಗರ್ ಝಿ೦ದ  ಹೈ

Kacchi doriyon, doriyon, doriyon se
Mainu tu baandh le
Pakki yaariyon, yaariyon, yaariyon mein
Honde na faasley
Eh naraazgi kaagzi saari teri
Mere sohneya sunn le meri

Dil diyan gallan
Karaange naal naal beh ke
Akh naale akh nu milaa ke
Dil diyan gallan haaye
Karaange roz roz beh ke
Sacchiyan mohabbataan nibha ke

Sataaye mainu kyun
Dikhaaye mainu kyun
Aiven jhuthi mutthi russ ke rusaake
Dil diyan gallan haaye
Karaange naal naal beh ke
Akh naale akh nu mila ke

Tenu lakhan ton chhupa ke rakhaan
Akkhaan te sajaa ke tu ae meri wafaa
Rakh apna bana ke
Main tere layi aan
Tere layi aan yaaran
Naa paavin kade dooriyan
[x2]

Main jeena haan tera...
Main jeena haan tera
Tu jeena hai mera
Dass lena ki nakhra dikha ke

Dil diyan gallan
Karaange naal naal beh ke
Akh naale akh nu mila ke
Dil diyan gallan...

Raatan kaaliyan, kaaliyan, kaaliyan ne
Mere dil saanwle
Mere haaniyan, haaniyan, haaniyan je
Lagge tu na gale

Mera aasmaan mausamaan di na sune
Koi khwaab na poora bune
Dil diyan gallan
Karange naal naal beh ke
Akh naale akh nu mila ke

Pataa hai mainu kyun chupa ke dekhe tu
Mere naam se naam mila ke
Dil diyan gallan
Karange naal naal beh ke
Akh naale akh nu mila ke
Dil diyan gallan...

https://www.youtube.com/watch?v=SAcpESN_Fk4

Wednesday, January 8, 2020

ಗೋಡೆಗಳೊಂದಿಗೆ ಭೇಟಿ ಮಾಡಿ ಅಳಲು

ಗೋಡೆಗಳೊಂದಿಗೆ ಭೇಟಿ ಮಾಡಿ ಅಳಲು
ಇಷ್ಟಾವಾಗುತ್ತದೆ
ಮರುಳಾಗುವೆನೋ ಏನೋ ನಾನು
ಹಾಗೆ ಅನಿಸುತ್ತದೆ
ಗೋಡೆಗಳೊಂದಿಗೆ...

ಜಗದೆಲ್ಲ ನೆನಪು
ನನಗೆ ಸಿಗಲು ಬರುತ್ತದೆ
ಸಂಜೆ ಆದಂತೆ
ಈ ಏಕಾಂತ ಮನೆಯಲಿ
ಜಾತ್ರೆ ಕೂಡಿ ಬರುತ್ತದೆ 
ಮರುಳಾಗುವೆನೋ....

ಎಷ್ಟು ದಿನದ ದಾಹದಿಂದ
ತಳಮಳಿಸುತ್ತಿದ್ದರೋ
ಗೆಳೆಯರೇ ಯೋಚಿಸಿ
ಇಬ್ಬನಿಯ ಹನಿ ಸಹ ಅವರಿಗೆ
ಕಡಲಾಗಿ ಕಂಡು ಬರುತ್ತದೆ
ಮರುಳಾಗುವೆನೋ....

ಯಾರಿಗೆ ಕಲ್ಲು ಹೊಡೆಯಲಿ
ಯಾರು ಪರಕೀಯರು
ಗಾಜಿನ ಅರಮನೆಯಲಿ
ಪ್ರತಿಯೊಂದು ಚಹರೆ
ನಮ್ಮವೆರೆಂದು ಕಂಡು ಬರುತ್ತದೆ
ಮರುಳಾಗುವೆನೋ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಕೈಸರ್ ಉಲ್ ಜಾಫ್ರಿ
ಹಾಡಿದವರು : ಪಂಕಜ್ ಉಧಾಸ್

दीवारों से मिलकर रोना
अच्छा लगता है
हम भी पागल हो जाएंगे
ऐसा लगता है
दीवारों से मिलकर रोना
अच्छा लगता है
हम भी पागल हो जाएंगे
ऐसा लगता है
दीवारों से

दुनिया भर की यादें

हमसे मिलने आती हैं
दुनिया भर की यादें
हमसे मिलने आती हैं
शाम ढले इस सूने घर में
मेला लगता है
शाम ढले इस सूने घर में
मेला लगता है
हम भी पागल हो जाएंगे
ऐसा लगता है
दीवारों से

कितने दिनों के प्यासे

होंगे यारों सोचो तोह
कितने दिनों के प्यासे
होंगे यारों सोचो तोह
शभनम का कतरा भी जिनको
दरिया लगता है
शभनम का कतरा भी जिनको
रिया लगता है
हम भी पागल हो जाएंगे
ऐसा लगता है
दीवारों से

किसको कैसर पत्थर मरू

कौन पराया है
किसको कैसर पत्थर मरू
कौन पराया है
शीश महल में एक एक चेहरा
अपना लगता है
शीश महल में एक एक चेहरा
अपना लगता है
हम भी पागल हो जाएंगे
ऐसा लगता है

दीवारों से मिलकर रोना

अच्छा लगता है
हम भी पागल हो जाएंगे
ऐसा लगता है
दीवारों से

ಘಜಲ್ ಕೊಂಡಿ : YOU TUBE
https://www.youtube.com/watch?v=nGuHxXOKATE

ಹೀಗೊಂದು ನನ್ನ ಪತ್ರಕ್ಕೆ

ಹೀಗೊಂದು ನನ್ನ ಪತ್ರಕ್ಕೆ
ಉತ್ತರ ಬಂತು
ಕವರಲ್ಲಿ ಒಂದು ಗುಲಾಬಿ ಬಂತು

ಪರಿಸರದಲ್ಲಿ ಹರಡಿದೆ ಅವಳ ಸುಗಂಧ
ಅವಳ ಸುಗಂಧ
ನಿಶ್ಚಿತವಾಗಿ ಅವಳ ಸಂದೇಶ ಬಂತು
ಹೀಗೊಂದು...

ಮರುಳಾಗದೆ ಇರಲಿ ಈ ನನ್ನ ಹೃದಯ
ನನ್ನ ಹೃದಯ
ಯೌವನ ಅದರಲ್ಲಿ ಉಕ್ಕಿ ಬಂತು
ಹೀಗೊಂದು...

ಯಾರು ಈ ಜಗದಲಿ ಅತಿ ಚೆಲುವೆ
ಅತಿ ಚೆಲುವೆ
ಅವಳ ಹೆಸರು ಆರಿಸಿ ಬಂತು
ಹೀಗೊಂದು...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಪಂಕಜ್ ಉಧಾಸ್
ಆಲ್ಬಮ್ :  ಮೆಹೆಕ್
Yun mere khat ka jawaab aaya
Yun mere khat ka jawaab aaya
Lifaafe mein ik gulaab aaya
Yun mere khat ka jawaab aaya
Lifaafe mein ik gulaab aaya
Yun mere khat ka jawaab aaya
Hawa mein bikhari hain uski khusboo
Hawa mein bikhari hain uski khusboo
Hain uski khusboo
Jurur uska aadab aaya
Jurur uska aadab aaya
Yun mere khat ka jawaab aaya
Bahek na jaaye ye dil hamara
Bahek na jaaye ye dil hamara
Ye dil hamara
Ghazab ka uspe shabaab aaya
Ghazab ka uspe shabaab aaya
Yun mere khat ka jawaab aaya
Hasee hain duniya mein kaun sabse
Hasee hain duniya mein kaun sabse
Hain kaun sabse
Woh naam uska janaab aaya
Woh naam uska janaab aaya
Yun mere khat ka jawaab aaya
Lifaafe mein ik gulaab aaya
Yun mere khat ka jawaab aaya
Yun mere khat ka jawaab aaya.
ಘಝಲ್ ಕೊಂಡಿ : YOU TUBE

Tuesday, January 7, 2020

ಕೆಂಪು ಬೀದಿ

ಕೆಂಪು ಬೀದಿ
ರಸಹೀನ ಅಧರ
ಶುಷ್ಕ ನಗು
ಬಾಡಿದ ಮುಖ
ಕೃತ್ರಿಮ ಸೌಂದರ್ಯ
ಹೊಲಸು ಮಂಚ
ಸುಳ್ಳು ಪ್ರೀತಿಗೆ ಕರೆ

ಹಣ ಖರ್ಚು ಮಾಡಿ
ಪ್ರೀತಿ ಕೊಳ್ಳುವೀರೋ  ?
ಅನುಮತಿ ಬೇಡ, ನಿಮ್ಮಿಚ್ಛೆ

ಅಭ್ಯಾಸ ಇದೆ ಅವರಿಗೆ
ಇದೇ ಅವರ ವ್ಯವಸಾಯ
ಇದರಲ್ಲಿಯೇ ಅವರ ಆದಾಯ
ಇದು ಅವರ ಅಸಹಾಯಕತೆ
ಹಲವು ಕಣ್ಣೀರ ಕಥೆ
ಕೇಳಬೇಕಾಗಬಹದು ಅವರ ವ್ಯಥೆ
ಸಿದ್ಧರಿದ್ದೀರಾ?

ಹಣ ಖರ್ಚು ಮಾಡಿ
ವಿಶ್ರಾಂತಿ ಪಡೆದುಕೊಳ್ಳುವೀರೋ?
ಅನುಮತಿ ಬೇಡ, ನಿಮ್ಮಿಚ್ಛೆ

ಪ್ರೀತಿ ಆಗಬಹುದು ನಿಮಗೆ
ಕ್ಷಣಿಕ ಸುಖ ಸಿಗಬಹುದು ನಿಮಗೆ
ಇದೇ ಸ್ವರ್ಗವೆಂಬ ಭಾವನೆ ಮೂಡಬಹುದು ನಿಮ್ಮಲ್ಲಿ
ಆದರೆ ಜಾಗೃತೆ,
ಭಾವನಾತ್ಮಕ ಬಂಧನದಲ್ಲಿ ಸಿಕ್ಕಿಬೀಳಬಹುದು ನೀವು
ನಿಮ್ಮ ಮನೆತನವನ್ನೂ ಮರೆಯಬಹುದು ನೀವು
ನಿಮ್ಮನ್ನೂ ನೀವು ಮರೆಯಬಹುದು
ಏನಂತೀರಿ?

ಹಣ ಖರ್ಚು ಮಾಡಿ
ಕೆಂಪು ದಾರಿಯಲಿ ಹೋಗುವೀರೋ ?
ಅನುಮತಿ ಬೇಡ, ನಿಮ್ಮಿಚ್ಛೆ

by ಹರೀಶ್ ಶೆಟ್ಟಿ, ಶಿರ್ವ

Sunday, January 5, 2020

ಕನ್ನಡಿ

ಮನಸ್ಸಲ್ಲಿದ್ದದ್ದು
ತೋರಿಸುವಿಕೆ ಇಲ್ಲ
ಮುಖಸ್ತುತಿ ಮಾಡಬೇಕೆನ್ನುವೆಯಾ
ಕ್ಷಮಿಸು ಅಭ್ಯಾಸವಿಲ್ಲ
ನೇರ ನುಡಿ
ಇಷ್ಟವಾದರೆ
ಸೈ
ಇಷ್ಟವಾಗದಿದ್ದರೆ
ಇರಲಿ,
ನಿನ್ನನ್ನು ಸುಧಾರಿಸಿಕೊಳ್ಳು
ಒರಟು
ಕಠೋರ ಹೃದಯ
ನಿಷ್ಕರುಣಿ
ಏನೆಲ್ಲ ಹೆಸರಿಡುವೆ ಗೊತ್ತು
ಬಿಡು
ಬೇರೇನು ಗೊತ್ತಿಲ್ಲ ನನಗೆ
ಇದೇ ನನ್ನ ಸಹಜ ಸ್ವಭಾವ
ಕ್ಷಮಿಸು
ಸುಳ್ಳು ಹೇಳಲಾರೆ
ತೋರಿಸುವೆ
ನಿನ್ನ ಸ್ಥಿತಿ
ನಿನ್ನದೇ ಆಕೃತಿ
ನಿನ್ನ ನೈಜತನ ತೋರಿಸುವುದೇ
ನನ್ನ ಪ್ರಕೃತಿ

by ಹರೀಶ್ ಶೆಟ್ಟಿ, ಶಿರ್ವ 

Saturday, January 4, 2020

ಇಪ್ಪತ್ತು, ಇಪ್ಪತ್ತು

ಹೊಸ ವರ್ಷ
ಇಪ್ಪತ್ತು, ಇಪ್ಪತ್ತು
ಹಳೆ ಅನುಭವಗಳು
ಅಷ್ಟು, ಇಷ್ಟು
ನವ ನಡಿಗೆ
ಜಾಗರೂಕು,ಜಾಗರೂಕು
ಜವಾಬ್ದಾರಿ
ಬಹಳಷ್ಟು, ಬಹಳಷ್ಟು
ಹೊಸ ಸವಾಲುಗಳು
ಎದುರಿಸು,ಎದುರಿಸು
ಆಮೇಲೆ ನಿನ್ನದೇ
ಯಶಸ್ಸು,ಯಶಸ್ಸು

by ಹರೀಶ್ ಶೆಟ್ಟಿ ,ಶಿರ್ವ

ಕಾವ್ಯ ಲೋಕ

ಮರಳಿ ಬರುತ್ತಿರುವೆ
ಕಾವ್ಯ ಲೋಕದ ಭೂಮಿಗೆ
ಪುನಃ ಬೀಜ ಬಿತ್ತಲು
ಅದು ಗಿಡವಾಗಿ
ಬೆಳೆದು ಹಸಿರು ಹಸಿರಾಗಿ
ಅರಳುತ್ತಿರಲಿ ನನ್ನಲ್ಲಿ ನವ ನಿತ್ಯ ಬರಹದ ಹೂಗಳಾಗಿ
ಮೆರೆಯಲಿ ನಿಮ್ಮಲ್ಲಿ ನನ್ನಲ್ಲಿ ಸಂತಸದ  ಉಸಿರಾಗಿ

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ