Wednesday, July 4, 2012

ನಾನು ಕಂಡಿದ್ದೇನೆ

ನಾನು ಕಂಡಿದ್ದೇನೆ
ಆ ಕಣ್ಣಲ್ಲಿ ಮಿಂಚುವ ಹೊಳಪು
ಕೈಯಿಂದ ಸ್ಪರ್ಶಿಸಿ ಅದಕ್ಕೆ
ಸಂಬಂಧದ ಆರೋಪ ನೀಡಬೇಡ
ಕೇವಲ ಭಾವನೆ ಅದು
ಹೃದಯದಿಂದ ಅನುಭವಿಸು
ಪ್ರೀತಿಯನ್ನು ಪ್ರೀತಿಯೇ ಇರಲು ಬಿಡು
ಬೇರೆ ಹೆಸರಿಡಬೇಡ
ನಾನು ಕಂಡಿದ್ದೇನೆ ಆ ಕಣ್ಣಲ್ಲಿ ಮಿಂಚುವ ಹೊಳಪು....

ಪ್ರೀತಿ ಯಾವುದೇ ಮಾತಲ್ಲ  
ಪ್ರೀತಿ ಶಬ್ದ ಅಲ್ಲ
ಒಂದು ಮೌನ ಅದು 

ನುಡಿಯುತ್ತದೆ ಕೇಳುತ್ತದೆ
ಇದು ಅಪೇಕ್ಷಿಸುವುದಿಲ್ಲ 

ನೆಲೆಸುವುದಿಲ್ಲ 
ನಿಲ್ಲುವುದಿಲ್ಲ ಬೆಳಕಿನ ಹನಿ ಅದು
ಶತಮಾನದಿಂದಲೂ ಹರಿಯುತ್ತಲೇ ಇರುತ್ತದೆ
ಕೇವಲ ಭಾವನೆ ಅದು 

ಹೃದಯದಿಂದ ಅನುಭವಿಸು
ಪ್ರೀತಿಯನ್ನು ಪ್ರೀತಿಯೇ ಇರಲು ಬಿಡು 

ಬೇರೆ ಹೆಸರಿಡಬೇಡ
ನಾನು
ಕಂಡಿದ್ದೇನೆ ಆ ಕಣ್ಣಲ್ಲಿ ಮಿಂಚುವ ಹೊಳಪು..

ನಗುವಿನಲ್ಲಿಯೇ ಅರಳುತ ಇರುತ್ತದೆ 

ಎಲ್ಲಿಯೋ ಕಣ್ಣಲ್ಲಿ ಅದು
ಮತ್ತು ಕಣ್ರೆಪ್ಪೆ ಅದರ ಹೊಳಪಿನಿಂದ 

ಮುಚ್ಚಿ ತಗ್ಗುತ್ತದೆ ತುಟಿ ಏನು ಹೇಳುವುದಿಲ್ಲ
ಆದರೆ ಕಂಪಿತ ತುಟಿಯಲಿ
ಎಷ್ಟೋ ಮೌನ ಕಥೆಗಳು 

ನಿಲ್ಲುತಲೇ ಇರುತ್ತದೆ
ಕೇವಲ ಭಾವನೆ ಅದು 

ಹೃದಯದಿಂದ  ಅನುಭವಿಸು
ಪ್ರೀತಿಯನ್ನು ಪ್ರೀತಿಯೇ ಇರಲು ಬಿಡು 
ಬೇರೆ ಹೆಸರಿಡಬೇಡ
ನಾನು
ಕಂಡಿದ್ದೇನೆ ಆ ಕಣ್ಣಲ್ಲಿ ಮಿಂಚುವ ಹೊಳಪು....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಹೇಮಂತ್ ಕುಮಾರ್
humne dekhi hai
un aankhon ki mehakti khushboo
haath se chhoo ke
ise rishton ka ilzaam na do

sirf ehsaas hai ye
rooh se mehsoos karo
pyaar ko pyaar hi rehne do
koi naam na do

humne dekhi hai
un aankhon ki mehakti khushboo
haath se chhoo ke
ise rishton ka ilzaam na do
humne dekhi hai

pyaar koi bol nahi
pyaar awaaz nahi
ek khamoshi hai
sunti hai kaha karti hai
na ye bujhti hai na rukti hai
na thehri hai kahin

noor ki boond hai
sadiyon se baha karti hai
sirf ehsaas hai ye
rooh se mehsoos karo

pyaar ko pyaar hi rehne do
koi naam na do
humne dekhi hai
un aankhon ki mehakti khushboo

haath se chhoo ke
ise rishton ka ilzaam na do
humne dekhi hai

muskuraahat si khili rehti hai
aankhon mein kahin
aur palkon pe ujale se
jhuke rehte hain

honth kuchh kehte nahi
kaanpte honthon pe magar
kitne khaamosh se afsaane
ruke rehte hain
sirf ehsaas hai ye
rooh se mahsoos karo

pyaar ko pyaar hi rehne do
koi naam na do
humne dekhi hai
un aankhon ki mehakti khushboo
haath se chhoo ke
ise rishton ka ilzaam na do
humne dekhi hain

 www.youtube.com/watch?v=dLxM7smo4QQ

ಸಂಪತ್ತು

ಮನುಜ...
ಸಂಪತ್ತು ಅಂದರೆ ಏನು?
ಅದು ದುಂಬಿ ಅಡಗಿಸಿದ ಜೇನು
ಇಂದು ಇದೆ
ನಾಳೆ ಇಲ್ಲ
ನಿನ್ನ ಸಂಪತ್ತು ನಿನಗೆ ಆಗುವುದು ಬೇಡ ಭಾರ
ನೀ ಹೋದ ನಂತರ ಅದಕ್ಕೆ ಇಲ್ಲ ಯಾರು ವಾರಸುದಾರ
ತನ್ನ ಪರಿಶ್ರಮದ ಫಲವನ್ನು ಕೊಳೆಯಲು ಬಿಡ ಬೇಡ
ಲೋಕ ಕಲ್ಯಾಣಕ್ಕಾಗಿ ಅದನ್ನು ಉಪಯೋಗಿಸೆಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಕೋಪ

ನಿನ್ನ ಕೋಪ ಸೂರ್ಯನಂತೆ
ಕೇವಲ ಸಂಜೆಯ ತನಕ
ಸಂಜೆಗೆ ನಿನ್ನ ಮುಖದಲಿ ಅದ್ಭುತ ಹೊಳಪು
ಕ್ಷಮಿಸುವ ಈ ಪರಿ ಎಷ್ಟು ಸುಂದರ
ಶಾಂತತೆಯಿಂದ ನನ್ನನ್ನು ಬಿಗಿದಪ್ಪಿ
ನನ್ನ ಹೃದಯ ಕಡಲಲಿ ವಿಲೀನವಾಗುವೆ
by ಹರೀಶ್ ಶೆಟ್ಟಿ, ಶಿರ್ವ

Tuesday, July 3, 2012

ಮತ್ತದೇ ಸಂಜೆ

ಮತ್ತದೇ ಸಂಜೆ
ಅದೇ ದುಃಖ
ಅದೇ ಏಕಾಂತವಿದೆ 
ಹೃದಯ ಸಾವರಿಸಲು
ನಿನ್ನ ನೆನಪು ಪುನಃ ಬಂದಿದೆ -೨

ಮತ್ತೆ ಕಲ್ಪನೆ
ನಿನ್ನ ಮಡಿಲಲ್ಲಿ ಆವರಿಸುವುದು  -೨
ಮತ್ತೆ ಗತ ಸಮಯ
ಕ್ಷಣಕ್ಕಾಗಿ ಹಿಂತಿರುಗುವುದು
ಹೃದಯ ಅರಳುವುದು
ಕಡೆಗೆ ಅದು ಮರುಳಾಗಿದೆ
ಮತ್ತದೇ ಸಂಜೆ.....

ಇನ್ನು ನಿನ್ನ ಭೇಟಿ
ಆಗುವುದೋ ಇಲ್ಲವೋ-೨
ಹೇಳದೆ ಉಳಿದ ಮಾತುಗಳು
ಆಗುವುದೋ ಇಲ್ಲವೋ-೨
ನಿನ್ನ ಗಮ್ಯ ನನ್ನ ಗಮ್ಯದಿಂದ
ಪ್ರತ್ಯೇಕವಾಗುತ್ತಿದೆ 
ಮತ್ತದೇ ಸಂಜೆ.....

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ತಲತ್ ಮಹಮೂದ್
ಸಂಗೀತ : ಮದನ್ ಮೋಹನ್
phir vohi shaam vahi gam vahi tanahaai hai
dil ko samajhaane teri yaad chali aai hai

phir tasavvur tere pahalu me bithaa jaaegaa
phir gayaa vaqt ghadi bhar ko palat aaegaa
dil bahal jaaegaa aakhir ye to saudaai hai
phir vohi shaam

jaane ab tujh se mulaaqaat kabhi ho ke na ho
jo adhuri rahe vo baat kabhi ho ke na ho
meri mazil teri mazil se bichhad aai hai
phir vohi shaam


www.youtube.com/watch?v=R1Djdf3Niso

ಜ್ಞಾನ





ಮನುಜ ....
ಎಲ್ಲಿ ಅಲೆದಾಡುವೆ ಅತ್ತ ಇತ್ತ
ಗುರು ವಿನಃ ಜ್ಞಾನ ಸಿಗುವುದಿಲ್ಲ ಗೊತ್ತ
ಜ್ಞಾನ ಗಳಿಸಲು ಹೋಗು ಗುರುವಿನತ್ತ
ಈ ಭೂಮಿಯ ಮಣ್ಣು ಗುರು ಆದರೆ
ಜ್ಞಾನ ಅಂದರೆ ಮಣ್ಣಲ್ಲಿ ಆಗುವ ಬತ್ತ
ಮಣ್ಣ ಸೇವೆ ಮಾಡದೆ ಸಿಗುವುದಿಲ್ಲ ಬತ್ತ
ಸದಾ ಗುರು ಸೇವೆ ಮಾಡಿ ಗುರು ಕೃಪಾ ಗಳಿಸೆಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Monday, July 2, 2012

ಮನಸ್ಸಿನ ಕೊಳಕು

ಮನುಜ....
ಬಟ್ಟೆಯ ಹೊಲಸು ಒಗೆದು ಶುಚಿ ಮಾಡುವೆ
ಮನಸ್ಸಿನ ಕೊಳಕನ್ನು ಒಗೆಯುವುದಿಲ್ಲ
ಇತರರನ್ನು ಸರಿಪಡಿಸಲು ಹೋಗುವೆ
ನೀ ಸ್ವತಃ ಪರಿಪೂರ್ಣವಾಗಲು ಬಯಸುವುದಿಲ್ಲ
ಕನ್ನಡಿಯನ್ನು ಒರೆಸುವ ಬದಲು
ತನ್ನ ಮುಖವನ್ನು ಒರೆಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Sunday, July 1, 2012

ಕೈ ಗೊಂಬೆ

ಮನುಜ... 
ನೀನು ನೀನಲ್ಲ
ಅವನು ಅವನಲ್ಲ
ಮೇಲೆ ಆಟ ಆಡುತ್ತಿದ್ದಾನೆ ಆ ಪರಮೇಶ್ವರ
ಅವನ ಕೈ ಗೊಂಬೆ ನಾವೆಲ್ಲ
ಈ ಜಗ ಒಂದು ನಾಟಕದ ವೇದಿಕೆ 
ನಿನ್ನ ಪಾತ್ರ ಪ್ರಾಮಾಣಿಕತೆಯಿಂದ ನಿಭಾಯಿಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ