ಮನೆ ಅಂದರೆ,
ನಾಲ್ಕು ಚಕ್ರದ ಮೇಲೆ ಮಾಡಿದ
ಆಧುನಿಕ ವಠಾರ ಅಲ್ಲ,
ಮನೆ ಅಂದರೆ,
ನಾಲ್ಕು ಗೋಡೆ ಚಪ್ಪರ ಇದ್ದ ವಸತಿ ಅಲ್ಲ,
ಮನೆ ಅಂದರೆ,
ಐಷಾರಾಮಿ ಕಟ್ಟಡ ಅಲ್ಲ,
ಮನೆ ಅಂದರೆ,
ವೃದ್ಧರನ್ನು ಬಲವಂತವಾಗಿ
ಅವರ ಅಸಹಾಯಕತೆ ನಿರ್ಲಕ್ಷಿಸಿ,
ಅವರನ್ನು ಇಷ್ಟವಿಲ್ಲದೇ
ಇಟ್ಟಿದ್ದ ಆಶ್ರಯ ಸ್ಥಾನ ಅಲ್ಲ,
ಮನೆ ಅಂದರೆ
ಒಂದು ಭಾವನೆ,
ಕುಟುಂಬದ ಮಧ್ಯೆ ಪರಸ್ಪರ ಪ್ರೀತಿ,
ತಿಳುವಳಿಕೆ, ನಂಬಿಕೆ, ತ್ಯಾಗ
ಇದ್ದ ಆವಾಸವೇ
ನಿಜವಾದ ಮನೆ.
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment