ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ,
ನೀನು ಪ್ರೀತಿಸುವವನು ಭಾವಶೂನ್ಯ,
ಅವನಿಗೆ ಭಾವನೆ ತಿಳಿದಿಲ್ಲ,
ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ
ಈ ಜೀವನದ ಏರು ಪೇರುವ ಬಿಸಿಲನ್ನು
ಯಾರಿಗೂ ಬಂಧಿಸಲು ಸಾಧ್ಯವಿಲ್ಲ,
ವರ್ಣಕ್ಕೆ ಯಾರಿಗೂ ಪಹರೆ ನೀಡಲು ಸಾಧ್ಯವಿಲ್ಲ,
ರೂಪವನ್ನು ಯಾರಿಗೂ ಬಂಧಿಸಲು ಸಾಧ್ಯವಿಲ್ಲ,
ಯಾಕೆ ಉಳಿಸಲು ಪ್ರಯತ್ನಿಸುತ್ತಿರುವೆ ಇಷ್ಟೆಲ್ಲಾ
ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ
ಅಷ್ಟೇ ಉಪಕಾರ ಎಂದು ತಿಳಿದುಕೋ,
ಜೊತೆ ನೀಡಿದಷ್ಟು,
ಜನ್ಮ ಮರಣದ ಜೊತೆ ಒಂದು ಕನಸು,
ಈ ಕನಸನ್ನು ಮರೆತು ಬಿಡು,
ಯಾರೂ ಜೊತೆಯಲ್ಲಿ ಸಾಯುವುದಿಲ್ಲ
ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಮೂಲ:ಸಾಹಿರ್ ಲ್ಯೂದ್ಯ ನವಿ
ಸಂಗೀತ: ರೋಷನ್
ಚಿತ್ರ :ಚಿತ್ರಲೇಖಾ
मन रे तू काहे ना धीर धरे
वो निर्मोही मोह ना जाने, जिनका मोह करे
मन रे ...
इस जीवन की चढ़ती ढलती
धूप को किसने बांधा
रंग पे किसने पहरे डाले
रुप को किसने बांधा
काहे ये जतन करे
मन रे ...
उतना ही उपकार समझ कोई
जितना साथ निभा दे
जनम मरण का मेल है सपना
ये सपना बिसरा दे
कोई न संग मरे
मन रे ...