Monday, November 3, 2014

ಧಿಕ್ಕಾರ

ಏನೆಲ್ಲಾ ನಡೆಯುತ್ತಿದೆ ಈ ದೇಶದಲಿ
ಮಾನವ ಕಾಣುತ್ತಿದ್ದಾನೆ ವಿಧ ವಿಧದ ವೇಷದಲಿ
ಪುಟ್ಟ ಬಾಲಕಿಯರು ಬಲಿಯಾಗುತ್ತಿದ್ದಾರೆ
ಕಾಮ ಕುರುಡರ ಈ ಹೀನ ವಿಕೃತಿಯಲಿ
ಜನಸಾಮಾನ್ಯರು ಭಯದಲಿ
ಪೋಷಕರು ಆಘಾತದಲಿ
ವಿದೂಷಕರು ಕುಳಿತ್ತಿದ್ದಾರೆ ಅಧಿಕಾರದಲಿ
ಭಕ್ಷಕರಾಗಿದ್ದಾರೆ ರಕ್ಷಕರು ಇಲ್ಲಿ
ಕಪ್ಪು ಪಟ್ಟಿ ನ್ಯಾಯ ದೇವಿಯ ಕಣ್ಣಲ್ಲಿ
ಎಲ್ಲಿ ಕಳೆದುಕೊಂಡಿದ್ದಾರೆ ಮಾನವೀಯತೆಯನ್ನು ಇವರು
ಹೇಗೆ ಮರೆಯುತ್ತಾರೆ ತನ್ನ ಕರ್ತವ್ಯವನ್ನು ಇವರು
ನನ್ನ ಲೇಖನಿಯೂ ಕಂಪಿಸುತ್ತಿದೆ
ಇಂತಹ ನತದೃಷ್ಟರಿಗೆ ನನ್ನ  
ಧಿಕ್ಕಾರ ಧಿಕ್ಕಾರ ಧಿಕ್ಕಾರ
ಎಂದು ಕಣ್ಣೀರು ಹಾಕುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ 

1 comment:

  1. ಒಂದು ಅಸಹ್ಯಕರ ಸಾಮಾಜ ನಿರ್ಮಾಣವಾಗುವ ಮುನ್ನವೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ.
    ಮುಂದೊಂದು ದಿನ ನರ ಭಕ್ಷಕ ದಿನಗಳ ಆಗಮನಕಿದು ಆರಂಭವಾದೀತು. ಎಚ್ಚರ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...