ಹೂವೇ, ತೆರೆ ನಿನ್ನ ದಳಗಳನ್ನು
ಮೆಲ್ಲ ಮೆಲ್ಲನೆ ಕರೆ ನಿಸರ್ಗದ ಸೌಂದರ್ಯವನ್ನು
ಮೆಲ್ಲ ಮೆಲ್ಲನೆ
ಸೆರೆ ಮಾಡು ಬ್ರಹ್ಮಾಂಡವನ್ನು
ಮೆಲ್ಲ ಮೆಲ್ಲನೆ
ನಿಜ ಮಾಡು ಕನಸಿನ ಭರವಸೆಯನ್ನು
ಮೆಲ್ಲ ಮೆಲ್ಲನೆಪಡೆ ನಿತ್ಯ ಹೊಸ ಬಾಳನ್ನು
ಮೆಲ್ಲ ಮೆಲ್ಲನೆ
ಉದುರಿಸು ಜೀವನದ ರಸವನ್ನು
ಮೆಲ್ಲ ಮೆಲ್ಲನೆ
ನೋಡು ಮುಂಜಾನೆಯ ಮಂಜು ಕರಗುವುದನ್ನು
ಮೆಲ್ಲ ಮೆಲ್ಲನೆ
ಇಬ್ಬನಿಯ ಹನಿಯಿಂದ ನಿನ್ನ ಮೈ ಬೆವರಿ ಚೆಲ್ಲು ಪರಿಮಳವನ್ನು
ಮೆಲ್ಲ ಮೆಲ್ಲನೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment