Friday, July 3, 2020
Saturday, June 27, 2020
ಗೆಲುವು ಸೋಲು
ಬದುಕಿನ ಸ್ಪರ್ಧೆಯಲಿ
ಗೆಲುವಾಗಲಿ ಸೋಲಾಗಲಿ
ಎರಡನ್ನು ಸ್ವೀಕರಿಸು
ಒಂದೇ ಮನೋಭಾವದಿಂದಲಿ
ಗೆಲುವಿನ ಸೊಕ್ಕಿನಲಿ
ನೋಡದಿರು ಎದುರಾಳಿಯನ್ನು ತಾತ್ಸಾರದಿಂದಲಿ
ಅಪ್ಪುಗೆ ನೀಡಿ ಪ್ರೇರಿಸು
ಹುರುಪು ತುಂಬಲಿ ಅವನಲಿ
ಪರಾಜಯದ ಅಳುಕಲಿ
ಖಿನ್ನತೆಗೆ ಒಳಗಾಗದೆ
ಮುಂದೆ ಮರು ಹೆಜ್ಜೆಯಿಡು ಸಾಹಸದಿಂದಲಿ
ತಲುಪುವೆ ನೀನು ಶೀಘ್ರವೇ ಜಯದ ಮಾರ್ಗದಲಿ
by ಹರೀಶ್ ಶೆಟ್ಟಿ, ಶಿರ್ವ
Photo : Google
ಬಾಳು
ಬಾಳೊಂದು ತೇಲುತ್ತಿರುವ ದೋಣಿ
ಸಂಸಾರದ ಕಡಲಲಿ ಸರಿಯುತ್ತಿರಲಿ
ಖಾಲಿ ಖಾಲಿ ಈ ಜೀವನದಲಿ
ಬಿಡಿಸಿ ಸುಂದರ ಕನಸಿನ ರಂಗೋಲಿ
ಒದಗಿದ ದೆಸೆಯ ಸ್ವೀಕರಿಸಿ
ಹೊಂದಿಸುತ ಹೋಗಿ ಅದೇ ಪಥದಲಿ
ಬರುವ ಸಂಕಟದ ಬಿರುಗಾಳಿಯಲಿ
ಧೈರ್ಯದ ಶಕ್ತಿ ತುಂಬಿರಲಿ
ಸುಖ ದುಃಖದ ಕಿನಾರೆಯಲಿ
ಬದುಕಿನ ಈ ದೋಣಿ ತೇಲುತ್ತಿರಲಿ
ಭರವಸೆಯ ಬೆಳಕಿನೆಡೆ
ಪ್ರಯಾಣ ಸಾಗುತ್ತಿರಲಿ
by ಹರೀಶ್ ಶೆಟ್ಟಿ, ಶಿರ್ವ
Photo : Google
Thursday, June 25, 2020
ವಯಸ್ಸಿನ ಆಟ
ಬಾಲ್ಯ
ಮುದ್ದು ಮುದ್ದು,
ಆರೈಕೆ ಪಾಲನೆ,
ಅಮ್ಮನ ಆಟಿಕೆ,
ಮುಗ್ದತೆ,
ಪರಿಶುದ್ದ ಮನಸ್ಸು ...
ಯೌವನ, ಬಿಸಿ ರಕ್ತ
ಕುದಿಯುತ್ತದೆ,
ತಾಳ್ಮೆ ಇರಲ್ಲ,
ಸಂಯಮ ಏನಂತ ಗೊತ್ತಿಲ್ಲ,
ಅನುಭವಿಸುತ್ತಾರೆ,
ಸಮಯ ಬೇಕು...
ವಯಸ್ಸಾದಂತೆ
ಸರಿ ತಪ್ಪು ತಿಳಿಯುತ್ತದೆ ,
ತಿಳುವಳಿಕೆ ಬೆಳೆಯುತ್ತದೆ ,
ಸಹನಶೀಲತೆ ನಿರ್ಮಾಣವಾಗುತ್ತದೆ,
ವ್ಯವಹಾರಜ್ಞಾನದ ಅರಿವಾಗುತ್ತದೆ,
ಸ್ವಭಾವ ಬದಲಾಗುತ್ತದೆ...
ಇಳಿವಯಸ್ಸಲ್ಲಿ
ನೆನಪು ಗತಕಾಲದ,
ದೈವ ಭಕ್ತಿ,
ನಾನೇ ಜ್ಞಾನಿಯೆಂಬ ಛಲ,
ಇತರರಿಗೆ ಪ್ರವಚನ,
ಸ್ವಭಾವದಲ್ಲಿ ಕಿರಿಕಿರಿ...
ಅಂತಿಮ ತಾಣ
ಆರೋಗ್ಯ ಪ್ರಜ್ಞೆ,
ಅನ್ಯರ ಗೋಚಾರವಿಲ್ಲ,
ತನ್ನದೇ ಧ್ಯಾನ,
ಆಸೆಯಲ್ಲಿ ಹೆಚ್ಚಳ,
ಕುಂದುತ್ತಿರುವ ವಯಸ್ಸು...
by ಹರೀಶ್ ಶೆಟ್ಟಿ, ಶಿರ್ವ
Wednesday, June 24, 2020
ಲೇಖಕ
ಎಲ್ಲಾ ಕಥೆಯೂ ಅಪೂರ್ಣ, ಬರೆಯುವವರ ಇಚ್ಛೆ, ಓದುಗಾರರು ವ್ಯಾಕುಲ
---- ಕಲ್ಪನೆಯ ಲೋಕ, ಲೇಖಕನ ಕಲ್ಪನೆ, ಹಾಳೆಯಲ್ಲಿ ಭಾವನೆ ----
ಅವನು ಬರೆದ ಕಥೆಯ ಅವನೇ ಓದುಗಾರ, ವಿಷಾದ!! ಕಾದಂಬರಿ ಬಿಕ್ರಿ ಆಗಿಲ್ಲ
----
ಲೇಖನಿ ಹರಿತವಾಗಿದೆ, ಭಾವನೆಯೂ ಮೂಡುತ್ತಿದೆ, ಹೊಸ ಬರಹಗಾರ, ಗದ್ಯ ಪದ್ಯದ ವ್ಯತ್ಯಾಸ ಗೊತ್ತಿಲ್ಲ ಅಷ್ಟೇ
----
ಬಡ ಲೇಖಕ ಪುಸ್ತಕ ಅಂಗಡಿಗೆ ಬಂದು
ಒಂದು ಕಾದಂಬರಿ ತೆರೆದು ನೋಡಿದ,
ಅದು ಅವನು ಬರೆದ ಕಾದಂಬರಿ,
ಕಾದಂಬರಿಯ ಮುಖಪುಟದಲ್ಲಿ
ಪ್ರಸಿದ್ಧ ಲೇಖಕನ ಹೆಸರು. by ಹರೀಶ್ ಶೆಟ್ಟಿ, ಶಿರ್ವ
Photo : Google
ಜೀವನ ಮರಣ
ಬದುಕಿದ್ದಾಗ ಯಾರೂ ಬಂದು
ಅವನ ಯೋಗಕ್ಷೇಮ ವಿಚಾರಿಸಲಿಲ್ಲ,
ಈಗ ಅವನ ಅಕಸ್ಮಾತ ಮರಣದ ನಂತರ
ಎಲ್ಲೆಡೆ ಅವನದ್ದೇ ಚರ್ಚೆ
---
ಇಡೀ ಜೀವನ ಅವನು
ದುರಭ್ಯಾಸದಲ್ಲಿ ಲೀನವಾಗಿದ್ದ,
ಸತ್ತ ನಂತರ
ಕುಟುಂಬದಲ್ಲಿ ನೆಮ್ಮದಿಯ ಉಸಿರು
---
ಕುಟುಂಬದಿಂದ ದೂರ ಅವನು
ಎಷ್ಟೋ ವರುಷದಿಂದ,
ಕುಟುಂಬದ ಪುರಾವೆ ಸಿಗದೇ
ರಸ್ತೆಯಲ್ಲಿ ಬಿದ್ದ ಅವನ ಶವವನ್ನು
ಪುರಸಭೆಯವರು ಅಂತ್ಯಸಂಸ್ಕಾರಕ್ಕೆ ಕಳಿಸಿದರು
----
ಸಂಸಾರ ಬಿಟ್ಟು ಅವನು
ದೈವ ಭಕ್ತಿಯಲ್ಲಿ ಲೀನವಾಗಿದ್ದ,
ಈಹಲೋಕ ತ್ಯಜಿಸಿದ ನಂತರ
ಕುಟುಂಬದವರು ಭಕ್ತಿ ಭಾವದಿಂದ
ಅವನ ಅಂತ್ಯ ಕ್ರಿಯೆ ಮುಗಿಸಿದರು
by ಹರೀಶ್ ಶೆಟ್ಟಿ, ಶಿರ್ವ
Photo : Google
Tuesday, June 23, 2020
ಹಳೆ
ನಾನು ಬರೆದ ಹಳೆ ಕವಿತೆಯ ಆ ಕಾಗದದ ಹಾಳೆ
ಮಳೆಯ ನೀರಿನಲ್ಲಿ ದೋಣಿಯಾಗಿ ಸಾಗಿ ಹೋಯಿತು
ಒಟ್ಟಿಗೆ ಅದೆಷ್ಟೋ ಭಾವನೆಗಳೂ ಸಾಗಿ ಹೋದವು
-----
ಕಪಾಟು ತೆರೆದಾಗ
ಬಟ್ಟೆಯ ಅಡಿಯಲ್ಲಿ ಒಂದು ಹಳೆ ಪತ್ರ ಸಿಕ್ಕಿತು,
ತೆರೆದು ನೋಡಿದೆ
ಖಾಲಿ ಹಾಳೆ,
ಅವಳ ಚಹರೆ ಕಣ್ಣ ಮುಂದೆ ಸಾಗಿ ಹೋಯಿತು
-----
ಅಪ್ಪ ತಂದು ಕೊಟ್ಟಿದ್ದ
ಆ ಹಳೆ ಅಂಗಿ ಧರಿಸಿದೆ,
ಅಮ್ಮನ ಕಣ್ಣಲ್ಲಿ ಕಣ್ಣೀರು ತುಂಬಿ ಬಂತು
-----
ಓದಲೆಂದು ಹಳೆ ಪುಸ್ತಕದ ಧೂಳು ಜಾಡಿಸಿದೆ
ಒಣಗಿದ ಗುಲಾಬಿ ಹೂವು ಕೆಳಗೆ ಬಿತ್ತು,
ನೆನಪಿನ ಯಾತ್ರೆ ಆರಂಭವಾಯಿತು
ಒಂದಕ್ಷರ ಸಹ ಓದಲಾಗಲಿಲ್ಲ
-----
ಬಾಲ್ಯ ಮಿತ್ರನೊಬ್ಬ ಹಳೆ ಫೋಟೋ
ವಾಟ್ಸಪ್ಪಲ್ಲಿ ಕಳಿಸಿದ,
ನನ್ನ ಕಣ್ಣು ಗುಂಪಲ್ಲಿ ಅವಳನ್ನು ಹುಡುಕುತ್ತಿತ್ತು
by ಹರೀಶ್ ಶೆಟ್ಟಿ, ಶಿರ್ವ
Subscribe to:
Posts (Atom)
-
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...






