Saturday, April 27, 2013

Kabir Doha (ಕಬೀರ ದೋಹ )

ಕಬೀರ ದೋಹ
ಮಾಡುತ್ತಲಿದ್ದೆ ಏಕೆ ಮಾಡುತ್ತಲಿದ್ದೆ ,ಈಗ ಮಾಡಿದ ನಂತರ ಪಶ್ಚಾತಾಪ ಯಾಕೆ ಪಡುವೆ!
ಜಾಲಿಮರ ಬಿತ್ತಿದೆ, ಮಾವು ಎಲ್ಲಿಂದ ಪಡೆಯುವೆ!! 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
करता रहा सो क्यों रहा, अब करी क्यों पछताए |
बोये पेड़ बबूल का, अमुआ कहा से पाए ||

Thursday, April 25, 2013

ಹೃದಯ ಈ ರೀತಿ ಯಾರೋ ನನ್ನ ಮುರಿದರು


!!ಹೃದಯ ಈ ರೀತಿ
ಯಾರೋ ನನ್ನ ಮುರಿದರು
ವಿನಾಶದ ಮಾರ್ಗಕ್ಕೆ ದೂಡಿದರು-೨
ಒಬ್ಬ ಸಭ್ಯ ಮನುಷ್ಯನನ್ನು ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಸಾಗರ ಎಷ್ಟು ನನ್ನ ಬಳಿಯಲ್ಲಿದೆ
ನನ್ನ ಜೀವನದಲಿ ಆದರೂ ದಾಹವಿದೆ
ಇದೆ ದಾಹ ದೊಡ್ಡ
ಜೀವನ ಸಣ್ಣದು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಈ ಪ್ರಪಂಚದ ಪಥಗಳು ಹೇಳುತ್ತಿದೆ
ಗಮ್ಯವಿಲ್ಲ ಈಗ ನಿನಗೋಸ್ಕರ ಯಾವುದೇ
ಸೋಲಿನಿಂದ ನನ್ನ ಸಂಬಂಧ ಜೋಡಿಸಿದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಮುಳುಗಿದ ಸೂರ್ಯ ಪುನಃ ಉದಯವಾಗಲಿದೆ
ಕತ್ತಲು ಎಂದೂ ಉಳಿಯುವುದಿಲ್ಲ
ನನ್ನ ಸೂರ್ಯ ಹೀಗೆ ಮುನಿಸಿತು
ಮುಂಜಾನೆಯನ್ನು ನಾನೆಂದೂ ನೋಡಲಿಲ್ಲ
ಬೆಳಕೆಲ್ಲ ನನ್ನನ್ನು ತೊರೆದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

ಮೂಲ : ಇಂದೀವರ್
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಶ್ಯಾಮಲ್ ಮಿತ್ರ
ಚಿತ್ರ : ಅಮಾನುಶ್

dil aisa kisine mera toda, barbadi kee taraf aisa moda
dil aisa kisine mera toda, barbadi kee taraf aisa moda
yek bhale manush ko amanush bana ke chhoda
dil aisa kisine mera toda, barbadi kee taraf aisa moda

sagar kitna mere pas hai, mere jiwan me fir bhi pyas hai
hai pyas badi jiwan thoda, amanush bana ke chhoda
dil aisa kisine mera toda, barbadi kee taraf aisa moda

kehte hain yeh dooniya ke raste, koyi manjil nahee tere waste
nakamiyo se nata mera joda, amanush bana ke chhoda
dil aisa kisine mera toda, barbadi kee taraf aisa moda

duba suraj fir se nikale, rehta nahee hain andhera
mera suraj aisa ruthha, dekha na maine savere
ujalo ne sath mera chhoda, amanush bana ke chhoda
dil aisa kisine mera toda, barbadi kee taraf aisa moda

Kabir Doha (ಕಬೀರ ದೋಹ )

ಕಬೀರ ದೋಹ
ಜಪಿಸುವವ ಸಾಯುವನು , ಜಪಿಸದವ ಸಾಯುವನು, ಶ್ರೇಷ್ಠನೆನ್ನುವವನೂ ಸತ್ತು ಹೋಗುವನು!
ರಾಮ ಸ್ನೇಹಿ ಸಾಯುವುದಿಲ್ಲ , ಎಂದು ಕಬೀರ ತಿಳಿಸುವನು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा 
जाप मरे, अजापा मरे, अनहद हू मरी जाय |
राम स्नेही ना मरे, कहे कबीर समझाय ||

Kabir Doha (ಕಬೀರ ದೋಹ )

ಕಬೀರ ದೋಹ
ಮಿತಿಯಲ್ಲಿ ನಡೆಯುವವ ಮಾನವ, ಅಪರಿಮಿತ ನಡೆಯುವವ ಸಂತ! 
ಮಿತಿ ಅಪರಿಮಿತ ಎರಡನ್ನೂ ತ್ಯಜಿಸಿದವ, ಅವನ ಜ್ಞಾನ ಅಗಾಧ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
हद में चले सो मानव, बेहद चले सो साध |
हद बेहद दोनों तजे, ताको बता अगाध ||

Wednesday, April 24, 2013

Kabir Doha (ಕಬೀರ ದೋಹ )

ಕಬೀರ ದೋಹ
ಶ್ರಮದಿಂದಲೇ ಎಲ್ಲವೂ ಸಾಧ್ಯ, ಶ್ರಮವಿಲ್ಲದೆ ಏನೂ ಸಿಗದು!! 
ನೇರ ಬೆರಳಿನಿಂದ ಹೆಪ್ಪುಗಟ್ಟಿದ ಬೆಣ್ಣೆ, ಎಂದೂ ತೆಗೆಯಲು ಆಗದು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीरा दोहा 
श्रम से ही सब कुछ होत है, बिन श्रम मिले कुछ नाही |
सीधे ऊँगली घी जमो, कबसू निकसे नाही ||

Tuesday, April 23, 2013

Kabir Doha (ಕಬೀರ ದೋಹ )

ಕಬೀರ ದೋಹ
ಉಪ್ಪು ನೋಡಿ ಹೊರಟಿತು, ಅಳೆಯಲು ಸಮುದ್ರದ ಆಳವನ್ನು! 
ತಾನೇ ನೀರಲ್ಲಿ ಕರಗಿತು, ಯಾರು ಹೇಳಲು ಬರುವರು ಆಳವನ್ನು !! 
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
कबीर दोहा
चली जो पुतली लौन की, थाह सिंधु का लेन |
आपहू गली पानी भई, उलटी काहे को बैन ||

(ಭಗವಂತ ಸಮುದ್ರ ಸಮಾನ, ಭಕ್ತ ಅವನ ಆಳ ಅಳೆಯಲು ಹೋಗಿ ಅವನಲ್ಲಿ ಮರೆಯಾಗುತ್ತಾನೆ.
ಅಂದರೆ ಭಗವಂತನ ಇದ್ದಾನೆ, ಇಲ್ಲ ಎಂಬ ವರದಿ ನೀಡುವವರು ಅಸ್ತಿತ್ವದಲ್ಲಿಲ್ಲ )

Monday, April 22, 2013

Kabir Doha (ಕಬೀರ ದೋಹ ),

ಕಬೀರ ದೋಹ
ಮನಸ್ಸು ಕೆರಳಿದಾಗ ಪ್ರತಿಕ್ರಿಯಿಸದಿರಿ , ಮಾತನ್ನು ನುಡಿಯಿರಿ ಅಳೆದು !
ಮೂರ್ಖರಿಗೆ ಇದರ ಅರಿವಿಲ್ಲ, ಬೇಡದನ್ನು ನುಡಿಯುವರು ಸಂಯಮ ಕಳೆದು!! 
ಅನುವಾದ :ಹರೀಶ್ ಶೆಟ್ಟಿ, ಶಿರ್ವ 
कबीर दोहा 
मन उन्मना न तोलिये, शब्द के मोल न तोल |
मुर्ख लोग न जान्सी, आपा खोया बोल ||

ಸಿದ್ಧಿದಾತ್ರಿ