Tuesday, March 19, 2013

ಗಣನೆ

ಇವನು ಅವರ ಗಣನೆಯಲ್ಲಿ ಇಲ್ಲ 
ಆದರೆ ಅವರಿಗಾಗಿ ಇವನು 
ಸುಖ ನೆಮ್ಮದಿ ಸಂತೋಷ 
ಕೂಡಿಸುತ ಇರುತ್ತಾನೆ!

ಅವರು ತನ್ನ ಜೀವನದಿಂದ 
ಇವನನ್ನು ಬಿಟ್ಟಿದ್ದಾರೆ ಕಳೆದು 
ಇವನ ತಪ್ಪನ್ನು ಗುಣಿಸಿ ಗುಣಿಸಿ 
ಇವನ ತಪ್ಪಿನ ಮೊತ್ತ ಏರಿಸಿದ್ದಾರೆ!

ಇವನೆಂದರೆ ಅವರಿಗೆ
ಒಂದು ಸಣ್ಣ ಸಂಖ್ಯೆ
ಬಹುಶಃ ಶೂನ್ಯ ಇರಬೇಕು
ಬೆಲೆ ಇಲ್ಲದವ ಎಂದು ಭಾವಿಸಿದ್ದಾರೆ!

ಇವನ ಗುಣಗಳನ್ನು
ಇವನ ತಪ್ಪಿನಿಂದ ಭಾಗಿಸಿ ಭಾಗಿಸಿ
ಇಂದು ಅದರ ಮೊತ್ತಕ್ಕೆ ಮೂಲ್ಯ ಇಲ್ಲದಾಗಿದೆ
ಇವನ ತಪ್ಪಿನ ಗಣನೆ ಕೇವಲ ಅವರ ಲೆಕ್ಕದಲ್ಲಿದೆ!

ಇಂದು ಇವನು ಶೂನ್ಯ
ಆದರೆ ಬೇಸರ ಇಲ್ಲ ಇವನಿಗೆ
ಜೀವನದ ಲೆಕ್ಕಚಾರದಲಿ
ಶೂನ್ಯವಾಗಿರುವುದೇ ಇಷ್ಟ ಇವನಿಗೆ !
by ಹರೀಶ್ ಶೆಟ್ಟಿ, ಶಿರ್ವ

ಅದೃಷ್ಟಶಾಲಿ

Rumi
"Who could be so lucky? Who comes to a lake for water and sees the reflection of moon.” 
― Rumi
ರೂಮಿ 
ಯಾರು ಹೆಚ್ಚು ಅದೃಷ್ಟಶಾಲಿ ಆಗಿರಬಹುದು ?
ಅವನು ,
ಸರೋವರದಲಿ ನೀರಿಗಾಗಿ ಬಂದವನು, ಚಂದ್ರನ ಪ್ರತಿಬಿಂಬವನ್ನು ಕಾಣುವವನು.
ಅನುವಾದ :ಹರೀಶ್ ಶೆಟ್ಟಿ,ಶಿರ್ವ 

ಬಾರೆ ಬಾ ಬಾ

!!ಬಾರೆ ಬಾ ಬಾ
ನಿದಿರೆ ನೀ ಕೊಂಡೊಯ್ಯು ಎಲ್ಲಿಯೂ
ಗಾಳಿತೇರಲ್ಲಿ
ದೂರ ದೂರ ಇಲ್ಲಿಂದ ದೂರ
ಬಾರೆ ಬಾ ಬಾ
ನಿದಿರೆ ನೀ ಕೊಂಡೊಯ್ಯು ಎಲ್ಲಿಯೂ
ಗಾಳಿತೇರಲ್ಲಿ
ದೂರ ದೂರ ಇಲ್ಲಿಂದ ದೂರ !!
ಬಾರೆ ಬಾ ಬಾ ......

!!ನನ್ನ ಈ ಜೀವನದಲಿ ಗೆಳೆಯ
ತುಂಬಾ ದುಃಖ ತುಂಬಿದೆ
ಆದರೆ ಜಗದಲಿ ನಿನ್ನ ರೂಪದಲಿ
ದೊಡ್ಡ ಸುಖ ಸಿಕ್ಕಿದೆ
ನಿನಗಾಗಿ ನನ್ನ ಪುಟ್ಟ 
ವಿಷ ಸಾವಿರ ಕುಡಿಯುವೆ
ತ್ಯಜಿಸುವೆ ಜಗವನ್ನು 

ನಿನ್ನೊಟ್ಟಿಗೆ ಜೀವಿಸುವೆ
ಓ ನನ್ನ ದೃಷ್ಟಿಯ ಬೆಳಕು!!
ಬಾರೆ ಬಾ ಬಾ .....

!!ಇದು ಸತ್ಯ 

ನಾನಿಂದು ನಿನಗೆ 
ಸುಖ ನೆಮ್ಮದಿ ನೀಡುತ್ತಿರುವೆ
ಆದರೆ ಯಾರಿಗೊತ್ತು 

ನಿನ್ನ ಜಗದಿಂದ 
ನಾನೆಲ್ಲಿಯೋ 
ನಿನ್ನಿಂದ ದೂರ ಹೋಗುವೆ!!

!!ಇಲ್ಲ ನನ್ನ ತಂದೆ 

ಹೀಗೆ ನೀನು ನುಡಿಯಬೇಡ ಎಂದೂ
ನೀನಿಲ್ಲದಿದ್ದರೆ
ಇಲ್ಲಿ
ಇರಲಿಕ್ಕಿಲ್ಲ ನನಗೂ
ಹೋಗಬೇಡ ನನ್ನಿಂದ ದೂರ!!
ಬಾರೆ ಬಾ ಬಾ  ......

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ , ಲತಾ ಮಂಗೇಶ್ಕರ್
ಸಂಗೀತ : ರಾಜೇಶ್ ರೋಶನ್
ಚಿತ್ರ: ಕುವಾರ ಬಾಪ್

hmm mm hmm mm mm mm.....
aa ree aa ja nindya too le chal kahee
udan khatole me dur dur dur yaha se dur

aa ree aa ja nindya too le chal kahee
udan khatole me dur dur dur yaha se dur

aa ree aa ja

meraa toh yeh jivan sama, mere yar bada dukh se
par mujhko jahan me mila, sukh kaun bada tujhase
tere liye meree jan jahar hajar mai pee lunga
taj duga duneeya ek tere sang jee lunga
khoo najar ke nur
aa ree aa ja nindya too le chal kahee
udan khatole me dur dur dur yaha se dur

aa ree aa ja

aa ree aa ja nindya too le chal kahee
udan khatole me dur dur dur yaha se dur

aa ree aa ja

yeh sach hai kee mai agar, sukh chain dilata hu
teree duneeya se mai phir kahee, kab dur chala jau

nahee mere daddy aisee bat phir se na kahana
rah jana jab too phir mujhako bhee nahee rahana
na ja too hamase dur

aa ree aa ja nindya too le chal kahee
udan khatole me dur dur dur yaha se dur

www.youtube.com/watch?v=3UMOSZrPZc8
See more

ಏಕೆ ಒಂದೇ ಜೀವನಕ್ಕೆ ಅಂಟಿಕೊಳ್ಳುವುದು

WHY CLING
Rumi
Why cling to one life
till it is soiled and ragged?

The sun dies and dies
squandering a hundred lived
every instant

God has decreed life for you
and He will give
another and another and another

ರೂಮಿ
ಏಕೆ ಒಂದೇ ಜೀವನಕ್ಕೆ ಅಂಟಿಕೊಳ್ಳುವುದು
ಇದು ಮಣ್ಣು ಹಾಗು ಚಿಂದಿ ಚಿಂದಿಯಾದ ಮೇಲೆ ?

ಸೂರ್ಯ ಸಾಯುತ್ತಾನೆ ಹಾಗು ಸಾಯುತ್ತಾನೆ
ಪ್ರತಿ ಕ್ಷಣ ನೂರಾರು ಜೀವನ ವ್ಯರ್ಥಗೊಳಿಸಿ

ದೇವರು ನಿನಗೆ ಜೀವನ ನೀಡಲು ನಿರ್ಧಾರಿಸಿದ್ದಾನೆ
ಹಾಗು ಅವನು ನೀಡುವನು
ಇನ್ನೊಂದು ಮತ್ತು ಇನ್ನೊಂದು ಮತ್ತು ಇನ್ನೊಂದು
ಅನುವಾದ : ಹರೀಶ್ ಶೆಟ್ಟಿ,ಶಿರ್ವ

ಕೊನೆ ಇಲ್ಲ, ಕೊನೆ ಇಲ್ಲ ಪ್ರಯಾಣಕ್ಕೆ

Rumi
No end, no end to the journey
no end, no end never
how can the heart in love
ever stop opening
if you love me,
you won't just die once
in every moment
you will die into me
to be reborn
...
Into this new love, die
your way begins
on the other side
become the sky
take an axe to the prison wall,
escape
walk out like someone
suddenly born into color
do it now

ರೂಮಿ
ಕೊನೆ ಇಲ್ಲ, ಕೊನೆ ಇಲ್ಲ ಪ್ರಯಾಣಕ್ಕೆ
ಕೊನೆ ಇಲ್ಲ ,ಎಂದಿಗೂ ಕೊನೆ ಇಲ್ಲ
ಪ್ರೀತಿಯಲ್ಲಿರುವ ಹೃದಯ
ಹೇಗೆ ನನ್ನನ್ನು ಪ್ರೀತಿಸುವಾಗ ತೆರೆಯದಿರದು,
ನೀನು ಒಂದು ಸಲ ಸಾಯುವುದಿಲ್ಲ,
ಪ್ರತಿ ಕ್ಷಣ ನೀನು ಸಾಯುವೆ ನನ್ನಲ್ಲಿ
ಪುನಃ ಜನ್ಮ ಪಡೆಯಲು

ಈ ಹೊಸ ಪ್ರೀತಿಯಲಿ, ಸಾಯು
ನಿನ್ನ ಹಾದಿ ಪ್ರಾರಂಭವಾಗುವುದು
ಇನ್ನೊಂದು ಬದಿಯಲಿ
ಆಕಾಶವಾಗು
ಸೆರೆಮನೆಯ ಗೋಡೆಗೆ ಒಂದು ಕೊಡಲಿ ತೆಗೆದುಕೊಂಡು ಹೋಗು
ಪಾರಾಗು
ನಿರ್ಗಮಿಸು ಈ ತರಹ
ಯಾರೋ ಅನಿರೀಕ್ಷಿತವಾಗಿ ಬಣ್ಣಗಳಲ್ಲಿ ಹುಟ್ಟಿದಂತೆ
ಈಗಲೇ ಮಾಡು
ಅನುವಾದ : ಹರೀಶ್ ಶೆಟ್ಟಿ,ಶಿರ್ವ

ನನ್ನ ಕನಸಿನ ರಾಣಿ

!!ನನ್ನ ಕನಸಿನ ರಾಣಿ 
ಯಾವಾಗ ಬರುವೆ ನೀನು ?
ಬಂದಿದೆ ಋತು ಸುಂದರ 

ಯಾವಾಗ ಬರುವೆ ನೀನು 
ಕಳೆಯುತ್ತಿದೆ ಜೀವನ 

ಯಾವಾಗ ಬರುವೆ ನೀನು?
ಬೇಗ ಬಾ ,ಬಾ.. ನೀ ಬೇಗ ಬಾ !!

!!ಪ್ರೀತಿಯ ಬೀದಿಗಳು
ಹೂದೋಟದ ಹೂಗಳು
ಎಲ್ಲ ಪರಿಸರ ಕೇಳುತ್ತಿದೆ-೨
ಹಾಡು ನದಿ ತಟದಲಿ ಯಾವಾಗ ಹಾಡುವೆ ನೀನು  !!
ನನ್ನ ಕನಸಿನ ರಾಣಿ ಯಾವಾಗ ಬರುವೆ ನೀನು  ...

!!ಹೂವಂತೆ ಅರಳಿ
ಬಾ ಹೃದಯದ ಬಳಿ
ನೆಮ್ಮದಿ ಇಲ್ಲ ದೂರದ ಮಿಲನದಲಿ-೨
ಇನ್ನು ಯಾವಾಗ ತನಕ ಸತಾಯಿಸುವೆ ನೀನು!!
ನನ್ನ ಕನಸಿನ ರಾಣಿ ಯಾವಾಗ ಬರುವೆ ನೀನು  ...

!!ನಂಬಿಕೆ ಏನು
ಈ ಮರುಳು ಹೃದಯದ
ಇನ್ಯಾರಿಗೋಸ್ಕರ ಇದು ಮಿಡಿದರೆ
ಮಿಡಿದರೆ ತುಂಬಾ ಪಶ್ಚಾತಾಪ ಪಡುವೆ ನೀನು !!

ನನ್ನ ಕನಸಿನ ರಾಣಿ ಯಾವಾಗ ಬರುವೆ ನೀನು  ...

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಎಸ್.ಡೀ.ಬರ್ಮನ್
ಚಿತ್ರ :ಆರಾಧನಾ

मेरे सपनों की रानी, कब आयेगी तू?
आयी रुत मस्तानी, कब आयेगी तू?
बीती जाए जिंदगानी, कब आयेगी तू?
चली आ, तू चली आ

प्यार की गालियाँ, बागों की कलियाँ
सब रंग रलियाँ, पूछ रही हैं
गीत पनघट पे किस दिन गायेगी तू?

फूल सी खिल के, पास आ दिल के
दूर से मिल के चैन ना आये
और कब तक मुझे तड़पायेगी तू?

क्या हैं भरोसा, आशिक दिल का
और किसी पे ये आ जाए
आ गया तो बहोत पछताएगी तू

www.youtube.com/watch?v=vo1MykK4u8U

ಸತ್ಯವಾದಿ

ಗೆಳತಿ
ನೀನು ಸತ್ಯವಾದಿ ಆದರೂ
ನಿನ್ನ ಮಾತನ್ನು ಎಲ್ಲರೂ
ಒಪ್ಪಲೆ ಬೇಕೆಂದೆನಿಲ್ಲ
ನಿನ್ನಷ್ಟಕ್ಕೆ ನಿನಗೆ ಇರಲಾಗದೆಂದೂ
ನನಗೆ ಗೊತ್ತು
ಆದರೆ ಸ್ವಲ್ಪ ತಾಳ್ಮೆ ಇಟ್ಟುಕೋ
ಎಲ್ಲರೂ ನಿನ್ನ ಹಾಗೆ
ಸ್ವಚ್ಚ ಮನಸ್ಸಿನವರಿಲ್ಲ ಇಲ್ಲಿ ,
ಈ ಜಗತ್ತಲ್ಲಿ ವಿವಿಧ ತರಹದ ಮನುಷ್ಯರಿದ್ದಾರೆ
ಇಂದಿನ ಜನರಿಗೆ ಸುಳ್ಳ ಲೋಕ
ಬಹು ಬೇಗ ಸೆಳೆಯುತ್ತದೆ
ಸತ್ಯ ಹೇಳುವವರನ್ನು ಯಾವುದೇ ಮೂಲೆಗೆ
ಸೇರಿಸುವುದೆಂದರೆ ಅವರಿಗೆ ಪರಮಾನಂದ
ಹೊಗಳು ಬಟ್ಟರಿಗೆ ಹೊಟ್ಟೆ ತುಂಬಾ ಭೋಜನ ಇಲ್ಲಿ
ಟೀಕಿಸುವವರಿಗೆ ಸನ್ಮಾನ ಎಲ್ಲಿದೆ ಇಲ್ಲಿ
ಆದರೂ ಒಂದು ವಿಷಯ
ನಿನಗ್ಯಾಕೆ ಅನ್ಯರ ವಿಷಯ ?
ಅವರು ಏನೂ ಮಾಡಿದರೂ ನಿನಗೇನೂ?
ಆದರೆ ನಿನ್ನ ಸ್ವಭಾವ ತಿಳಿದವ ನಾನು
ಯಾಕೆ ಇದೆಲ್ಲ ನಿನಗೆ ಹೇಳುತ್ತಿದೇನೆ
ಇರಲಿ ಬಿಡು
ಸ್ವಭಾವ ಬದಲಾಯಿಸೆಂದು
ನಿನಗೆ ಹೇಳುವಷ್ಟು ಮಟ್ಟಕ್ಕೆ ನಾನಿಲ್ಲ
ಆದರೆ ಎಲ್ಲರು ನಿನ್ನಂತೆ ಜಾಣರಲ್ಲ
ಹಾಗು ಎಲ್ಲರು ಇಲ್ಲಿ ಕೋಣರಲ್ಲ
ಇಷ್ಟೊಂದು ನಿನಗೆ ಹೇಳುವೆ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ