Saturday, December 15, 2012

ಆತ್ಮಿಯ ಸಂಬಂಧ

ಗೆಳತಿ 
ನಮ್ಮಲ್ಲಿ 
ಈಗ ಸಂಭಾಷಣೆ 
ಇಲ್ಲದಿದ್ದರೂ 
ಹೇಗೆ 
ನಿನಗೆ ನನ್ನ 
ನನಗೆ ನಿನ್ನ 
ಹೃದಯದ ಮಾತು 
ತಿಳಿಯುತ್ತದೆ! 

 
ಮೌನ ಆತ್ಮಿಯ 
ಸಂಬಂಧಕ್ಕೆ 
ನಾನು
ಯಾವ ಹೆಸರು 
ನೀಡಲಿ !

ನನ್ನ ವೇದನೆ 
ತಿಳಿದು 
ನಿನ್ನ ಕಣ್ಣು 
ಯಾಕೆ 
ಕಣ್ಣೀರಿಂದ ತುಂಬುತ್ತದೆ!

ಪವಿತ್ರ ಪ್ರೀತಿ 
ಅಂದರೆ 
ಇದೇ ಬಹುಶ 
ನಾವು ದೂರವಾಗಿದ್ದರೂ 
ಎಷ್ಟು 
ಹತ್ತಿರವಾಗಿದ್ದೇವೆ !

ಆದರೆ 
ಯಾಕೆ ನೀನು
ಯಾಕೆ ನಾನು 
ಒಬ್ಬರನೊಬ್ಬರನ್ನು 
ನಿರ್ಲಕ್ಷಿಸುತ್ತಿದ್ದೇವೆ ! 
by ಹರೀಶ್ ಶೆಟ್ಟಿ, ಶಿರ್ವ

ಕಾವಲುಗಾರ

ಗೆಳತಿ 
ಪ್ರತಿ ದಿನ 
ನಿನ್ನನ್ನು ಕಾಯುವುದನ್ನು 
ಕಂಡು 
ಜನರು ನನ್ನನ್ನು 
ಈ ಜಾಗದ 
ಕಾವಲುಗಾರನೆಂದು ತಿಳಿದಿದ್ದಾರೆ
by ಹರೀಶ್ ಶೆಟ್ಟಿ, ಶಿರ್ವ

Thursday, December 13, 2012

ಪ್ರೀತಿಯ ದೋಣಿ

ಗೆಳತಿ 
ಅನ್ಯರ ಮಾತು ಕೇಳಿ 
ನೀನು 
ನನ್ನಿಂದ 
ಕೋಪಿಸಿಕೊಂಡು
ನಿರ್ಲಕ್ಷಿಸುವುದು ಸರಿಯೇ ?

ನಾನು ಈಗಲೂ ನಿನ್ನನ್ನು 
ಪ್ರೀತಿಸುವೆಯೆಂದು 
ಸಾಬೀತು ಮಾಡಲು 
ಪದೇ ಪದೇ
ನನ್ನಿಂದ ಪುರಾವೆ 
ಕೇಳುವುದು ಸರಿಯೇ ?

ನಿನ್ನನ್ನು 
ನನ್ನ ಹೃದಯದಿಂದ 
ಹೊರ ದೂಡಲು 
ಇದು ಬಾಡಿಗೆಯ ಮನೆ ಅಲ್ಲ 
ಕಾಯಂ ಆಗಿ ನಿನ್ನ 
ಪ್ರೇಮಮೂರ್ತಿ 
ಸ್ಥಾಪಿಸಿದ ಮಂದಿರ ಇದು 
ನನ್ನ ಭಕ್ತಿಯನ್ನು 
ಶಂಕಿಸುವುದು ಸರಿಯೇ ?

ನೀನು ಹೇಳಿದರೆ 
ನಾ ಹೋಗುವೆ ನಿನ್ನಿಂದ ದೂರ 
ಆದರೆ ನಮ್ಮ 
ಪವಿತ್ರ ಪ್ರೀತಿ ದೋಣಿಯನ್ನು 
ಅಭಿಮಾನ ಅನುಮಾನದ ಸಾಗರದಲ್ಲಿ 
ಮುಳುಗಿಸುವುದು ಸರಿಯೇ ?
by ಹರೀಶ್ ಶೆಟ್ಟಿ, ಶಿರ್ವ

ವಿಶೇಷ ತಾರೆ

ಗೆಳತಿ....
ದಿನ ನಿತ್ಯ 
ಬಾನಲ್ಲಿ ಕಾಣುವ 
ಆ ಒಂದು 
ವಿಶೇಷ ತಾರೆ
ನನಗೆ ಬಹಳ ಇಷ್ಟ 
ಮಿನುಗುವಾಗ ನೀನು 
ನಗುತ್ತಿದ್ದಂತೆ ಭಾಸವಾಗುತ್ತದೆ 
by ಹರೀಶ್ ಶೆಟ್ಟಿ, ಶಿರ್ವ

Wednesday, December 12, 2012

ಕಾವ್ಯ ಸೃಷ್ಟಿ

ಕಪಟ ಭಾವನೆ 
ಕವಿ ಹೃದಯದಲ್ಲಿರದು 
ಪರ ನಿಂದನೆ
ಕವನವಾಗದು 
ಕಾವ್ಯ ಸೃಷ್ಟಿಕಾರರು ಸಾವಿರಾರು ಇಲ್ಲಿ 
ಪ್ರತಿಯೊಬ್ಬರಿಗೆ ಅವರವರ ಓದುಗಾರರು ಸಿಗದೇ ಇರದು 
ಕಾಗದದ ಹಾಳೆಯಲ್ಲಿ ಸುಂದರ ಭಾವ ಚೆಲ್ಲುವಾಗ ಕವನವಾಗುವುದು 
ಕಾಗದದ ಹಾಳೆಯಲ್ಲಿ ಅಸೂಯೆಯ ಭಾವ ಚೆಲ್ಲಿದರೆ ಕಸವಾಗುವುದು 
by ಹರೀಶ್ ಶೆಟ್ಟಿ, ಶಿರ್ವ

ಕಾವ್ಯ ಸಸಿ

ಗೆಳತಿ 
ನೀ ನನ್ನಲ್ಲಿ 
ಬೆಳೆಸಿದ ಕಾವ್ಯ ಸಸಿ 
ಮರವಾಗಿ ಬೆಳೆದು 
ಇಂದು ಫಲ ನೀಡುತ್ತಿದ್ದರೂ
ನೀನಿಲ್ಲದೆ 
ಇಂದು 
ಅದನ್ನು ಸವಿಯುವವರು 
ಯಾರೂ ಇಲ್ಲ 
by ಹರೀಶ್ ಶೆಟ್ಟಿ, ಶಿರ್ವ

ಪರಾಟ ಪುರಾಣ

ಸಂಜೆ ೬ ಗಂಟೆ ಆದ ಕೂಡಲೇ ಕಚೇರಿಯಿಂದ ಹೊರ ಬಂದೆ. 

ಸಂಜೆಗೆ ಹಿಂತಿರುಗುವಾಗ ನಾನು ದಿನ ನಡೆದುಕೊಂಡೇ ಹೋಗುವುದು, ಹೆಂಡತಿ ಸುಮಾ ದಿನ ಬೆಳ್ಳಿಗೆ ಜಾಗಿಂಗ್ ಮಾಡಲು ಹೋಗಿ ಎಂದು ಹೇಳುವುದನ್ನು ತಪ್ಪಿಸಲಿಕ್ಕೆ ಇದೊಂದು ನನ್ನ ಉಪಾಯವಾಗಿತ್ತು.

ಇಂದು ಏನೋ ಸ್ವಲ್ಪ ಹಸಿವು, ಮಧ್ಯಾಹ್ನ ಸುಮಾ ಕೊಟ್ಟ ಟಿಫನ್ ಲ್ಲಿ ಉಪ್ಪು ಮಸಾಲೆ  ಇಲ್ಲದ ಅಡುಗೆ ಹೇಗೋ ತಿಂದಿದೆ, ಆ ಡಾಕ್ಟರ ನನಗೆ ಬ್ಲಡ್ ಪ್ರೆಶರ್ ಇದೆ ಎಂದು ಹೇಳಿದ ದಿನದಿಂದಲೇ ಸುಮಾ ನನ್ನ ಆಹಾರದಲ್ಲಿ ವ್ಯಾಪಕ ಬದಲಾವಣೆ ಮಾಡಿದ್ದಳು, ದಿನ ನಿತ್ಯ ಉಪ್ಪು ಮಸಾಲೆ ಕಡಿಮೆ ಎಣ್ಣೆ ಬಳಸಿದ ಆಹಾರ, ಈಗ ಎಣ್ಣೆಯ ಹಾಗು ರುಚಿಕಾರ ವಸ್ತು ಅಂದರೆ ನನಗೆ ಕನಸು. ಈ ವಿಷಯದಲ್ಲಿ ದಿನ ಜಗಳ ಸಹ ಆಗುತಿತ್ತು, ಎಷ್ಟೋ ಸಲ ಊಟ ಮಾಡದೆ ಕುಳಿತರೂ ಪ್ರಯೋಜನ ಆಗಲಿಲ್ಲ.

ಈಗ ನಿನ್ನೆಯ ವಿಷಯ ನೋಡಿ, ನನ್ನ ಮಗನಿಗೆ ಪರಾಟ ಅಂದರೆ ತುಂಬಾ ಇಷ್ಟ, ಬೆಣ್ಣೆ ಸುರಿದ ಪರಾಟ ಅಂದರೆ ನನಗೂ ತುಂಬಾ ಇಷ್ಟ, ನಾನು ಮನೆಗೆ ಬಂದಾಗ ಮಗ ಪರಾಟ ತಿನ್ನುತ್ತಿದ್ದ, ನನಗೂ ಖುಷಿ ಆಯಿತು ಚಲೋ ಇಂದು ಆದರೂ ಒಳ್ಳೆ ಊಟ ತಿನ್ನುವೆ ಎಂದು.

ಆದರೆ ಊಟದ ಸಮಯ ಅದೇ ಉಪ್ಪು ಮೆಣಸು ಇಲ್ಲದ ಪಲ್ಯ ಹಾಗು ಚಪಾತಿ, ಅದರ ಮೇಲೆ ಮಗ ಪರಾಟ ತೋರಿಸಿ ನನಗೆ ಚುಡಾಯಿಸುತ್ತಿದ್ದ, ನನ್ನ ತಲೆ ಬಿಸಿ ಆಯಿತು, ಸುಮಾಳಿಗೆ ಬಾಯಿಗೆ ಬಂದದ್ದು ಹೇಳಿ ಆಯಿತು, ಆದರೆ ಅವಳು ಕೇಳಿಯೂ ಕೇಳದ ಹಾಗೆ ತನ್ನದೇ ಕೆಲಸದಲ್ಲಿ ಮಗ್ನಳಾಗಿದ್ದಳು, ಅವಳ ಈ ವರ್ತನೆ ನನ್ನನ್ನು ಇನ್ನು ಕೋಪಿಸಿತು ಹಾಗು ನಾನು ನಾಳೆ ಯಾರಿಗೂ ಹೇಳದೆ ಹೋಟೆಲ್ ಹೋಗಿ ಸರಿ ಸಮೋಸ ,ಪರಾಟ ತಿನ್ನಬೇಕೆಂದು ನಿರ್ಧಾರಿಸಿದೆ.

ಅದಕ್ಕೇನೋ ಇಂದು ಕಚೇರಿಯಿಂದ ಹೊರ ಬಂದ ಕೂಡಲೇ ಹಸಿವಾಯಿತು, ಹೋಗುವ ದಾರಿಯಲ್ಲಿಯೇ ಇದ್ದ ಹೋಟೆಲ್ "ಬಾಂಬೆ ಚೌಪಾಟಿ"  ಒಳಗೆ ಹೋದೆ, ಬಿಸಿ ಬಿಸಿ ಸಮೋಸ ಕಂಡು ಬೇಗ ಬೇಗನೆ ಆರ್ಡರ್ ಮಾಡಿದೆ, ಎಲ್ಲಿಲ್ಲದ ತೃಪ್ತಿ , ವಾಹ್, ಇನ್ನೆರಡು ಪ್ಲೇಟ್ ತಿಂದೆ,ಮತ್ತೆ ಪರಾಟ ತರಿಸಿ ಹೊಟ್ಟೆ ತುಂಬಾ ತಿಂದೆ, ಊಟ ಮಾಡದಿದ್ದಾಗ ಅವಳಿಗೂ ತಿಳಿಯಲಿ ಎಂದು ತೃಪ್ತ ಮನಸ್ಸಿಂದ ಮನೆಗೆ ಬಂದು ಮುಟ್ಟಿದೆ.

ಅಂಗಿ ಪ್ಯಾಂಟ್ ತೆಗೆದು ಕೈ ಕಾಲು ತೊಳೆಯಲು ಹೋಗುವವನೇ ಇದ್ದೆ, ಆಗ ಮಗ ಬಂದು "ಪಪ್ಪಾ ನಿಮಗೆ ಇಂದು ಪಾರ್ಟಿ, ಮಮ್ಮಿ ನಿಮಗಾಗಿ ಇಂದು ನಿಮ್ಮ ಮೆಚ್ಚಿನ "ವಡ ಪಾವ್ " ಮಾಡಿದ್ದಾಳೆ", ನಾನು ಅಲ್ಲಿಯೇ ಜಡವಾದೆ, ನಿನ್ನೆ ತುಂಬಾ ಕೋಪಿಸಿದ ಕಾರಣ ಏನೋ ಇಂದು ನನ್ನ ಮೆಚ್ಚಿನ "ವಡ ಪಾವ್" ಮಾಡಿಟ್ಟಿದಳು,ಎಷ್ಟು ಕಾಳಜಿ ಅವಳಿಗೆ ನನ್ನ, ಅವಳು ನನಗಾಗಿ ಅಲ್ಲವೇ ಉಪ್ಪು ಮಸಾಲೆ ಕಡಿಮೆ ಕೊಡುವುದು, ನನ್ನ ಆರೋಗ್ಯಕ್ಕಾಗಿ ಆಲ್ಲವೆ ....ಆದರೆ ನಾನು.... ಛೆ... ....ಇಂದೇ ನನಗೆ ಹೊರಗೆ ತಿನ್ನಬೇಕಿತ್ತೆ .

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ