Monday, April 30, 2012

ಕಾವ್ಯ ಕುಂಚ

ನನ್ನ
ಕಾವ್ಯ
ಕುಂಚದಿಂದ
ಸೃಷ್ಟಿ
ಆದ
ಕಲಾಕೃತಿ
ಕೇವಲ
ಅವಳದೇ
by ಹರೀಶ್ ಶೆಟ್ಟಿ, ಶಿರ್ವ

ನರಕ ಬಾದೆ

ಅಂದು
ವಿನಃ ಕಾರಣ ನಿನ್ನ ಅವಮಾನ ಮಾಡಿ
ನಿನ್ನನ್ನು ನನ್ನಿಂದ ದೂರ ಮಾಡಿದೆ
ಇಂದು
ಅದೇ ಕಾರಣ ನಾನು ಅನುಭವಿಸುತ್ತಿದ್ದೇನೆ
ಸಹಿಸಲಾಗದ ನರಕ ಬಾದೆ
by ಹರೀಶ್ ಶೆಟ್ಟಿ, ಶಿರ್ವ

ಗಾಳಿ..

ಗಾಳಿ.. ನೀ ಕೊಂಚ ತಾಳು 
ಸ್ವಲ್ಪ ತಡೆದು ಬೀಸು
ನನ್ನವಳು ಈ ಹಾದಿಯಲಿ ಬರುತ್ತಿದ್ದಾಳೆ
ಲಯವಾಗಿ ಚಲಿಸು
ಸ್ವಲ್ಪ ನಿಧಾನವಾಗಿ ಬೀಸು !

ನಿನ್ನ ಮಂದ ಗತಿಯಿಂದ 
ಮರಗಳ ಎಲೆಗಳು ಬೀಳಲಿ
ಅವಳು ಬರುವ ಹಾದಿಯಲಿ
ಮೆತ್ತನೆಯ ಎಲೆ ಹಾಸಿಗೆ ಹಾಸು
ಸ್ವಲ್ಪ ನಯವಾಗಿ ಬೀಸು !

ಅವಳ ಸುಂದರ ಕೋಮಲ ಶರೀರ
ಚಂಚಲ ಮೃದು ಹೆಜ್ಜೆ
ನಿನ್ನ ವೇಗ ಸಹಿಸಲಾರದು
ಅವಸರ ಮಾಡ ಬೇಡ
ಸ್ವಲ್ಪ ಸಾವಕಾಶವಾಗಿ ಬೀಸು !

ಅವಳ ಜಡೆಯಲ್ಲಿ ಮುಡಿದ
ಮಲ್ಲಿಗೆ ಸುಗಂಧದ ಕಂಪು 
ನನ್ನ ಹೃದಯ ಮನಸ್ಸನ್ನು
ಪೂರ್ಣವಾಗಿ ವಶ ಪಡಿಸಲಿ
ಸ್ವಲ್ಪ ಮೆಲ್ಲ ಮೆಲ್ಲನೆ ಬೀಸು !
by ಹರೀಶ್ ಶೆಟ್ಟಿ, ಶಿರ್ವ

Sunday, April 29, 2012

ರಜೆಯ ದಿವಸ

ಅಂದು
ರಜೆಯ ದಿವಸ
ಮನೆಯಲ್ಲಿ
ನಿನ್ನೊಂದಿಗೆ ಹಬ್ಬದ ವಾತಾವರಣ
ಇಂದು
ನೀನಿಲ್ಲದೆ ರಜೆಯಲ್ಲಿ ನಾನು
ಕೇವಲ ಹಳೆ ನೆನಪು
ಬೇಸರ ದುಃಖಗಳ ಶರಣ
by ಹರೀಶ್ ಶೆಟ್ಟಿ, ಶಿರ್ವ

Saturday, April 28, 2012

ಬರಡು ಗೋರಿ

ಅಂದು
ನನ್ನ ಹೃದಯ ಮಂದಿರದಲ್ಲಿ
ದಿನ ರಾತ್ರಿ
ನಿನ್ನದೆ ಹಾಜರಿ
ಇಂದು
ನೀನಿಲ್ಲದೆ
ನನ್ನ ತುಂಡಾದ ಹೃದಯ
ಬರಡು ಗೋರಿ
by ಹರೀಶ್ ಶೆಟ್ಟಿ, ಶಿರ್ವ

ಹನಿಗವನ

ಬೀಜ ಮೊಳಕೆ ಒಡೆದು 
ಜೀವನಾನಂದ ಪಡೆಯುವಂತೆ
ನನ್ನ ಭಾವಗಳು
ಹನಿಗವನಗಳಾಗಿ ಹೊರ ಬಂದು
ನನ್ನ ಮನ ಹೃದಯ
ಆತ್ಮ ಸಂತೋಷ ಪಡೆಯುತ್ತಿದೆ !
by ಹರೀಶ್ ಶೆಟ್ಟಿ, ಶಿರ್ವ

ಮನದ ಹೂದೋಟದಲಿ

ಮನದ ಹೂದೋಟದಲಿ
ಭಾವಗಳ ಮೊಗ್ಗು
ಪುಷ್ಪಗಳಾಗಿ ಅರಳಿ
ಕವನಗಳ ಸೌಂದರ್ಯ
ಪಡೆದು ಅನೇಕ
ಹೃದಯಗಳ ಮಾತನ್ನು
ಬಹಿರಂಗ ಪಡಿಸಿತು
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ