Wednesday, November 30, 2011

ಕಣ್ಣೀರೇ

ಕಣ್ಣೀರೇ ,
ನಿನ್ನನ್ನು ಎಲ್ಲಿ ಅಡಗಿಸಲಿ
ಹೊರ ಚಿಮ್ಮುವ ನಿನ್ನ ಹಠ ಮುಗಿಯದೆ
ಕಣ್ಣೀರು ಉತ್ತರಿಸಿತು..
ನನ್ನನ್ನು ಎಲ್ಲಿ ಅಡಗಿಸುವಿ
ನೋವಾದಾಗ ನನ್ನನ್ನೇ ಹೊರ ದೂಡುವಿ......
by ಹರೀಶ್ ಶೆಟ್ಟಿ, shirva

ಮೌನ

ಅವರ ಉಪೇಕ್ಷೆಯಿಂದ
ನನ್ನ ಕವಿತೆ ಮೌನವಾಯಿತು
ಇಂದೂ ನನ್ನ ಮೌನವೇ
ನನ್ನ ಕವಿತೆ ಆಯಿತು......
_______________
ನಿನ್ನ ಕೋಪದಿಂದ
ನನಗಿಲ್ಲ ಬೇಜಾರ
ಆದರೆ ನಿನ್ನ ಮೌನದಿಂದ
ಮನಸಲ್ಲಿ ತಳಮಳ.....
____________
ಬರಹಗಾರನ ಬರಹವನ್ನು
ಕದ್ದು ಮಾಡಬೇಡಿ
ಅವನ ಕವಿತೆಯನ್ನು ಮೌನ
ಇದೇ ಅವನ ಸೊತ್ತು
ಇದೇ ಸಂಪತ್ತು ಅವನ......
__________
ಏನೂ ಉಳಿಯಲಿಲ್ಲ ನನ್ನ ಬಳಿ
ಅವಳು ಹೋದ ನಂತರ
ಜೀವನದ ಇಲ್ಲ ಗೋಚರ
ಈಗ ಮೌನವೇ ನನಗೆ ಆಧಾರ......
by ಹರೀಶ್ ಶೆಟ್ಟಿ, ಶಿರ್ವ

Tuesday, November 29, 2011

ನೀನಿಲ್ಲದೆ ಜೀವನದಿಂದ


ನೀನಿಲ್ಲದೆ ಜೀವನದಿಂದ
ಯಾವುದೇ ಅತೃಪ್ತಿ ಇಲ್ಲ
ಅತೃಪ್ತಿ ಇಲ್ಲ-೩
ನೀನಿಲ್ಲದೆ ಜೀವನ ಆದರೆ
ಜೀವನವೇ ಅಲ್ಲ-೪
ನೀನಿಲ್ಲದೆ ಜೀವನದಿಂದ...

ನಿನ್ನ ಹೆಜ್ಜೆಯಿಂದಲೇ
ನಾವು ನಮ್ಮ ಗಮ್ಯವನ್ನು ಪಡೆದು
ಎಲ್ಲೋ ದೂರ ಹೋಗಬಹುದಿತ್ತು
ಎಂದು ಬಯಸುತ್ತಿದ್ದೆ
ನೀನೊಂದು ವೇಳೆ
ಜೋತೆಯಲ್ಲಿರುತ್ತಿದ್ದರೆ
ಗಮ್ಯಗಳ ಕೊರತೆ ಏನಿಲ್ಲ
ನೀನಿಲ್ಲದೆ ಜೀವನದಿಂದ...

ಅದೇಕೋ
ನಿನ್ನ ಮಡಿಲಲ್ಲಿ ತಲೆಯನಿಟ್ಟು
ತುಂಬಾ ಅಳಬೇಕೆನ್ನಿಸುತ್ತಿದೆ
ನಿನ್ನದ್ದು ಕಂಗಳಲ್ಲಿ
ಆಶ್ರುಗಳ ಕೊರತೆ ಏನಿಲ್ಲ
ನೀನಿಲ್ಲದೆ ಜೀವನದಿಂದ...

ನೀನೊಂದು ವೇಳೆ ಹೇಳಿದರೆ
ಇಂದಿನ ಈ ರಾತ್ರಿ
ಚಂದ್ರ ತನ್ನ ಪ್ರವಾಸ ಮುಗಿಸುವುದಿಲ್ಲ
ಹೇಳಿ ಬಿಡು
ರಾತ್ರಿಯನ್ನು ನಿಲ್ಲಿಸು
ಕೇವಲ ಈ ರಾತ್ರಿಯಿದೆ ನಮ್ಮ ಜೊತೆ 
ಮತ್ತೆ ಈ ಜೀವನದಲಿ ಏನೂ ಉಳಿದಿಲ್ಲ
ನೀನಿಲ್ಲದೆ ಜೀವನದಿಂದ...

ಮೂಲ : ಗುಲ್ಶಾರ್
ಅನುವಾದ :  by ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್ , ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಆಂಧಿ

Tere bina zindagi se koyi, shikwa, to nahi,
shikwa nahi, shikwa nahi, shikwa nahi
Tere bina zindagi bhi lekin, zindagi, to nahi,
zindagi nahi, zindagi nahi, zindagi nahi
Tere bina zindagi se koyi, shikwa, to nahi

Kaash aisa ho tere qadmo se, chun ke manzil chale aur kahi door kahi - 2
Tum gar saath ho, manzilo ki kami to nahi
Tere bina zindagi se koyi, shikwa, to nahi

Jee mein aata hai, tere daaman mein, sar jhuka ke ham rote rahe, rote rahe - 2
Teri bhi aankho mein, aansuo ki nami to nahi

Tere bina zindagi se koyi, shikwa, to nahi,
shikwa nahi, shikwa nahi, shikwa nahi
Tere bina zindagi bhi lekin, zindagi, to nahi,
zindagi nahi, zindagi nahi, zindagi nahi

Tum jo keh do to aaj ki raat, chaand doobega nahi, raat ko rok lo -2
Raat ki baat hai, aur zindagi baaki to nahi

Tere bina zindagi se koyi, shikwa, to nahi,
shikwa nahi, shikwa nahi, shikwa nahi
Tere bina zindagi bhi lekin, zindagi, to nahi,
zindagi nahi, zindagi nahi, zindagi nahi
http://www.dailymotion.com/video/x93osy_lata-kishore-tere-bina-zindagi-se-m_music 

Monday, November 28, 2011

ಹೃದಯ

ಅವನು ಅವಳ ಹೃದಯ ಕದ್ದು ಪ್ರೀತಿಸಿದ
ಈಗ ತನ್ನ ಹೃದಯವು ಕಳೆದು ಸಜೆ  ಪಡೆಯುತ್ತಿದ್ದಾನೆ ........
______________

ನಿನ್ನ ಹೃದಯ ಗೀತೆ ನಾ ಹಾಡುತ್ತಿದ್ದೆ
ಇಂದು ಅದರ ಸಂಗೀತ ಮೌನವಾಗಿದೆ.......
________________

ನನ್ನ ಹೃದಯ ಮನೆಯಲ್ಲಿ ನಿನ್ನ ವಾಸವಿತ್ತು
ಇಂದು ವಾಸವಿದೆ ಆದರೆ ಹೃದಯ ಮನೆ ತುಂಡಾಗಿದೆ .....
by ಹರೀಶ್ ಶೆಟ್ಟಿ, ಶಿರ್ವ

ನೀರಿನ ಬೆಲೆ

ಶ್ರೀಹರಿ ಎಂಟನೆ ತರಗತಿಯಲ್ಲಿದ್ದಾಗ ನಡೆದ  ಒಂದು ಘಟನೆ .

ಶ್ರೀಹರಿಗೆ ಮನೆಯಲ್ಲಿ ನೀರಿನ ಕೊರತೆ ಇದ್ದದ್ದೇ , ಆ ಸಮಯದಲ್ಲಿ ನೀರು ರಾತ್ರಿಗೆ ಒಂದೇ ಸಮಯ ಬರುತ್ತಿತ್ತು. ಆದರು ಶ್ರೀಹರಿಗೆ ನೀರನ್ನು ತ್ಯಾಜ್ಯ ಮಾಡುವುದು ಹವ್ಯಾಸ ಆಗಿ ಹೋಗಿತ್ತು, ಅವನ ಅಮ್ಮ ಎಷ್ಟು ಸಲ ಹೇಳಿದರು ಅವನು ತನ್ನನ್ನು ಸುಧಾರಿಸುತ್ತಿರಲಿಲ್ಲ.

ಹೀಗೆಯೇ ಶಾಲೆಯಲ್ಲಿ ಕರಾಡ್ಗೆ ಪಿಕ್ನಿಕ್ ಹೋಗಲಿಕ್ಕಿದೆ ಎಂಬ ಸುದ್ದಿ ಬಂತು, ಕರಾಡ್  ಮಹಾರಾಷ್ಟ್ರದ ಸತಾರ ಡಿಸ್ಟ್ರಿಕ್ಟ್ ಲ್ಲಿದ್ದ ಒಂದು ಪಟ್ಟಣ, ಇದು ಕೊಯನ ನದಿ ಮತ್ತು ಕೃಷ್ಣ ನದಿಯ ಸಂಗಮವಾಗುವ ಸ್ಥಾನದಲ್ಲಿ ನೆಲೆಸಿದೆ.

ಶ್ರೀಹರಿ ಹಾಗು ಅವನ ಸಹಪಾಟಿಯವರು ತುಂಬಾ ಉತ್ಸಾಹದಲ್ಲಿದ್ದರು, ಆ ದಿವಸ ಬೆಳ್ಳಿಗೆ ೬ ಗಂಟೆಗೆ ಎಲ್ಲರೂ ಶಾಲೆಗೆ ಮುಟ್ಟಿದರು, ದೊಡ್ಡದೊಂದು ಬಸ್ ಅಲ್ಲಿ ನಿಂತಿತ್ತು,  ಶ್ರೀಹರಿಯ ೩ ಶಿಕ್ಷಕರು ಅಲ್ಲಿಗೆ ಬಂದು ಕೆಲವು ಹಿತ ವಚನ ಕೊಟ್ಟು ಎಲ್ಲರು ಬಸ್ಸಲ್ಲಿ ಹೋಗಲು ಸಿದ್ದರಾಗಿ ಎಂದು ಹೇಳಿದರು, ಎಲ್ಲರು  ಬಸ್ ಹತ್ತಿ ಹೊರಡಲು ಸಿದ್ದರಾದರು.

ಮಧ್ಯಾಹ್ನದ 12 ಗಂಟೆ ಸಮಯ ಆಗುವಾಗ ಬಸ್ ಕರಾಡ್ ಬಂದು ನಿಂತಿತು, ಎಲ್ಲ ಮಕ್ಕಳು ಸೋತು ಹೋಗಿದ್ದರು, ಆದರೂ ಉತ್ಸಾಹದಲ್ಲಿದ್ದರು, ಅಲ್ಲಿ ನೋಡಲು ಏನು ವಿಶೇಷ ಇರಲಿಲ್ಲ, ಮಕ್ಕಳಿಗೆ ಅರ್ಥ ಆಗಲಿಲ್ಲ ಅವರಿಗೆ ಇಲ್ಲಿ ಏನು ತೋರಿಸಲು ಕರೆದು ಕೊಂಡು ಬಂದಿದ್ದಾರೆ ಎಂದು. ಆಗ ಶ್ರೀಹರಿಯ ಗಣಿತ ಟೀಚರ್ ದೇಶಪಾಂಡೆಯವರು ಬಂದು ಎದುರಿನ ಸಣ್ಣ ಬೆಟ್ಟ ತೋರಿಸಿ "ನಾವು ಈಗ ಈ ಬೆಟ್ಟ ಏರಿ ಅಲ್ಲಿ ಇದ್ದ ಒಂದು ಕೋಟೆ ನೋಡಲು ಹೋಗುತ್ತಿದ್ದೇವೆ, ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರವರು ಒಂದು ಸಮಯ ಬಂದು ತಂಗಿದ್ದರು ಎಂದು ಇತಿಹಾಸ ವರ್ಣಿಸಿ  ಎಲ್ಲರು ನಮ್ಮ ಹಿಂದೆ ಸಾಲು ಸಾಲಾಗಿ ಬೆಟ್ಟವನ್ನು ಏರಬೇಕು." ಎಂದು ಹೇಳಿದರು.

ಎಲ್ಲ ಮಕ್ಕಳು ಶಿಕ್ಷಕರ ಹಿಂದೆ ಹಿಂದೆ ಬೆಟ್ಟ ಏರಲು ಪ್ರಾರಂಭಿಸಿದರು, ಮಧ್ಯಾಹ್ನದ ಸಮಯ, ಸೂರ್ಯ ನೆತ್ತಿಯ ಮೇಲೆ ಬಿಸಿಲು ತುಂಬಾ, ಅರ್ಧ ಗಂಟೆ ಬೆಟ್ಟ ಏರಿದ ಮೇಲೆ ಎಲ್ಲರಿಗೂ ಸಾಕು ಸಾಕಾಯಿತು, ಅದರ ಮೇಲೆ ಎಲ್ಲರಿಗೂ ಬಾಯಾರಿಕೆ, ಮಕ್ಕಳಲ್ಲಿದ್ದ ನೀರು ಮುಗಿದಿತ್ತು, ಆದರೂ ಮಕ್ಕಳು ಉತ್ಸಾಹದಿಂದ ಮುಂದೆ ಹೊರಟರು, ಈಗ ಶಿಕ್ಷಕರೆಲ್ಲ ಹಿಂದೆ ಉಳಿದರು, ಅವರ ತ್ರಾಣ ಮುಗಿದಿತ್ತು, ಅವರು ಮೆಲ್ಲ ಮೆಲ್ಲನೆ ಬೆಟ್ಟ ಏರುತ್ತಿದ್ದರು.

ಶ್ರೀಹರಿ ಹಾಗು ಅವನ ಮಿತ್ರ ದಿವಾಕರ್ ಅವರು ತುಂಬಾ ಮುಂದೆ ಇದ್ದರು, ದಿವಾಕರ "ಇನ್ನೂ ನನ್ನಿಂದ ಸಾದ್ಯವಿಲ್ಲ ನಡೆಯಲು" ಎಂದು ಹೇಳಿದ,  ಶ್ರೀಹರಿಯು ಸುಸ್ತಾಗಿದ್ದ, ಅದರ ಮೇಲೆ ಬಾಯಾರಿಕೆ, ಒಣಗಿದ ಕಂಠ, ಏನು ಮಾಡುವುದೆಂದು ಅರ್ಥ ಆಗಲಿಲ್ಲ, ಶಿಕ್ಷಕರ ಮೇಲೆ ಕೋಪವು ಬಂತು "ಏಕೆ ಈ ಸ್ಥಾನದಲ್ಲಿ ಕರೆದು ಕೊಂಡು ಬಂದಿದ್ದಾರೆ ಎಂದು, ಅವರು ಒಂದು ಕಲ್ಲಿನ ಮೇಲೆ ಹೋಗಿ ಕುಳಿತುಕೊಂಡರು, ಸ್ವಲ್ಪ ಸಮಯದ  ನಂತರ ಇನ್ನೂ ಹಲವು ಮಕ್ಕಳು ಬಂದರು, ಎಲ್ಲರೂ ದಣಿದಿದ್ದರು, ಅವರಿಂದ ನಡೆಯಲು ಸಾದ್ಯವಾಗುತ್ತಿರಲಿಲ್ಲ, ಅವರೂ ಅಲ್ಲೇ ಕೆಳಗೆ ಕೂತು ಕೊಂಡರು.

ಆಗ ಒಂದು ಹುಡುಗ ತಾರಾನಾಥ್ ಅಳಲು ಪ್ರಾರಂಭಿಸಿದ, ಎಲ್ಲರೂ ಅವನಿಗೆ "ಏನಾಯಿತು , ಏನಾಯಿತು "ಎಂದು ಕೇಳಿದರು. ಆಗ ಅವನು ಅವನಿಗೆ ಬಾಯಾರಿಕೆ ಆಗುತ್ತಿದೆ ನೀರು ಬೇಕೆಂದು ಹೇಳಿದ, ಯಾರಿಗೂ ಅರ್ಥ ಆಗಲಿಲ್ಲ ಈಗ ಏನೂ ಮಾಡುವುದೆಂದು, ಯಾರ ಹತ್ತಿರ ನೀರು ಇರಲಿಲ್ಲ, ಅವರು ಜೋರಿನಿಂದ ಶಿಕ್ಷಕರನ್ನು ಕರೆದರು ಆದರೆ ಅವರು ಇನ್ನೂ ತುಂಬಾ ದೂರದಲ್ಲಿದ್ದರು.

ಶ್ರೀಹರಿಗೆ ತಾರಾನಾಥನನ್ನು ನೋಡಿ ತುಂಬಾ ಬೇಜಾರವಾಗುತ್ತಿತ್ತು, ಅವನಿಗೂ ಬಾಯಾರಿಕೆ ಆಗುತ್ತಿತ್ತು, ಏನು ಮಾಡುವುದು ಎಂದು ಯೋಚಿಸುತ್ತಲೇ ಅವನಿಗೆ ಅಲ್ಲಿ ಇದ್ದ ಒಂದು ಗುಂಡಿಯಂತ ಸ್ಥಾನ ಕಂಡು ಬಂತು, ಅವನು ಅಲ್ಲಿ ಹೋಗಿ ನೋಡಿದರೆ ಅದರಲ್ಲಿ ನೀರು ಇತ್ತು, ಆದರೆ ಅದು ನಿಂತ ಚರಂಡಿ ನೀರು , ಶ್ರೀಹರಿ "ಇದ್ದನ್ನು ಕುಡಿಯುವುದೇ , ಚಿ ...ಇದನ್ನು ಹೇಗೆ ಕುಡಿಯುವುದು ", ಅವನಿಗೆ ಈಗ ನೀರಿನ ಬೆಲೆ ತಿಳಿದಿತ್ತು, ಅವನು ಎಷ್ಟು ನೀರು ತ್ಯಾಜ್ಯ ಮಾಡುತಿದ್ದ ಎಂದು ನೆನೆದು ಅವನಿಗೆ ಈಗ ಬೇಜಾರಾಯಿತು.

ಶ್ರೀಹರಿ ಜೋರಿನಿಂದ "ಗೆಳೆಯರೇ ಇಲ್ಲಿ ಬನ್ನಿ ಇಲ್ಲಿ ನೋಡಿ " ಎಂದು ಬೊಬ್ಬೆ ಹಾಕಿದ. ಎಲ್ಲರು ಅವನು ಇದ್ದಲ್ಲಿ ಧಾವಿಸಿದರು, ಆ ಚರಂಡಿ ನೀರನ್ನು ನೋಡಿ ಎಲ್ಲರ ಮುಖ ಸಪ್ಪಗಾಯಿತು, ತಾರಾನಾಥ್ "ಶ್ರೀಹರಿ ದಯಮಾಡಿ ಆ ನೀರು ತೆಗೆದು ಕೊಡು, ನನ್ನಿಂದ ಬಾಯಾರಿಕೆ ತಡೆಯಲು ಸಾದ್ಯವಿಲ್ಲ" ಎಂದು ಬೇಡಿದ, ಶ್ರೀಹರಿ ಅವನಲ್ಲಿದ್ದ ಬಾಟಲಿಯಿಂದ ಬಗ್ಗಿ ಆ ಚರಂಡಿ ನೀರನ್ನು ತೆಗೆದ, ಅದರ ಬಣ್ಣ ಕಂದು ಕಪ್ಪಾಗಿತ್ತು, ತಾರಾನಾಥ್ ಏನೂ ಯೋಚನೆ ಮಾಡದೆ ಶ್ರೀಹರಿಯ ಕೈಯಿಂದ ಬಾಟಲಿ ಕಿತ್ತು ಕಣ್ಣು ಮುಚ್ಚಿ ಆ ನೀರನ್ನು ಕುಡಿದ ಹಾಗು "ಅಯಪ್ಪ" ಎಂದು ಸಮಾಧಾನದಿಂದ ಅಲ್ಲೇ ಕೂತು ಕೊಂಡ, ಈಗ ಎಲ್ಲ ಮಕ್ಕಳು ಆ ನೀರು ತೆಗೆದು ತೆಗೆದು ಕಣ್ಣು ಮುಚ್ಚಿ ಆ ನೀರನ್ನು ಕುಡಿದರು, ಶ್ರೀಹರಿಯು ಕುಡಿದ,  ಎಲ್ಲರಿಗೂ ಈಗ ಸಮಾಧಾನವಾಗಿತ್ತು.

ಹೇಗೋ ಸವಾರಿ ಮುಂದೆ ಸಾಗಿತ್ತು, ಕೋಟೆ ನೋಡಿದಾಯಿತು ಹಾಗು ಪಿಕ್ನಿಕ್ ಹೋಗಿ ಬಂದು ಆಯಿತು.

ಆದರೆ ಶ್ರೀಹರಿಯ ಜೀವನದಲ್ಲಿ  ಈ ಪಿಕ್ನಿಕ್  ಒಂದು ಅದ್ಭುತ ಸ್ಮರಣೀಯ ಘಟನೆಯಾಗಿ ಉಳಿಯಿತು .

by ಹರೀಶ್ ಶೆಟ್ಟಿ, ಶಿರ್ವ

Sunday, November 27, 2011

ವ್ಯತ್ಯಾಸ

ಅವನಿಗೆ ಎಲ್ಲರೂ ಸ್ವಾರ್ಥಿ ಎಂದು ಹೇಳುತ್ತಿದ್ದರು
ಆದರೆ ಅವನು ತನ್ನ ಕುಟುಂಬಕ್ಕಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ ನಿಸ್ವಾರ್ಥಿ .....
ಅವನಿಗೆ ಎಲ್ಲರೂ ನಿಸ್ವಾರ್ಥಿ ಎಂದು ಹೇಳುತ್ತಿದ್ದರು
ಆದರೆ  ಅವನು ತನ್ನದೇ ಲೋಕದಲ್ಲಿರಲು ತನ್ನ ಕುಟುಂಬ ತ್ಯಾಗ ಮಾಡಿದ ಸ್ವಾರ್ಥಿ ....
_____________________

ಅವನು ಹಲವು ಬಿದಿರಿಂದ
ಸುಂದರ ಗುಡಿಸಲು ಕಟ್ಟಿದ
ಅದರಲ್ಲಿ ಜೀವನವಿತ್ತು  ಅವನ ವಾಸವಿತ್ತು....
ಅವನು ನಾಲ್ಕು ಗೋಡೆಯಿಂದ ಕೂಡಿದ
ದೊಡ್ಡ ಮನೆಯೊಂದು ಕಟ್ಟಿದ
ಆದರೆ ಅಲ್ಲಿ ಇರುವುದು ಅವನಲ್ಲ ಕೇವಲ ಏಕಾಂತ ......
________________________
ಅವನು ಭಿಕ್ಷುಕ
ಭಿಕ್ಷೆ ಬೇಡಿ ಹೊಟ್ಟೆ ತುಂಬುತ್ತಿದ್ದ
ಆದರೆ ಭಿಕ್ಷೆ ನೀಡಿದವರಲ್ಲಿ ಯಾರೂ ಅವನ ಜ್ಞಾಪಕದಲ್ಲಿರಲಿಲ್ಲ ...
ಅವನು ಜ್ಞಾನಿ
ಅವನಿಗೆ ಕೊಟ್ಟ ಜ್ಞಾನ ಅವನು ಮರೆಯಲಿಲ್ಲ
ಆದರೆ ಜ್ಞಾನ ಕೊಟ್ಟವರನ್ನು  ಮರೆತು ಬಿಟ್ಟ.....

by  ಹರೀಶ್ ಶೆಟ್ಟಿ, ಶಿರ್ವ

ದೇವರ ದರ್ಶನ

ಶ್ರೀಹರಿ ದೇವಸ್ಥಾನ ಹೋಗಿದ್ದ.

ಎಲ್ಲರೂ ದೇವರ ದರ್ಶನಗೋಸ್ಕರ ಸರದಿ ಸಾಲಿನಲ್ಲಿ ಕಾಯುತ್ತಿದ್ದರು, ಶ್ರೀಹರಿಯು ಸಾಲಿನಲ್ಲಿ ನಿಂತಿದ್ದ.

ಒಬ್ಬ ಶ್ರೀಮಂತ ತನ್ನ ಪರಿವಾರದೊಂದಿಗೆ ಬಂದು ಸರದಿ ಸಾಲನ್ನು ಕಡೆಗಣಿಸಿ ಸಾಲಲ್ಲಿ ನಿಲ್ಲದೆ ನೇರವಾಗಿ ದೇವರ ಗುಡಿಯಕಡೆ ಹೋದ.

ಇದನ್ನು ಗಮನಿಸಿದ ಒಬ್ಬ ವಯೋವೃದ್ಧ ಪೂಜಾರಿಯವರು ಶ್ರೀಮಂತರಿಗೆ "ತಾವು ದೇವರ ದರ್ಶನಕ್ಕಾಗಿ ಬಂದಿದ್ದಿರಿ ಅಲ್ಲವೇ " ಎಂದು ಕೇಳಿದರು.

ಶ್ರೀಮಂತರು " ಹೌದು ಪೂಜರಿಯವರೇ, ಬೇಗ ನಮ್ಮ ಪೂಜೆ ಸಲ್ಲಿಸಿ, ನಮಗೆ ಬೇರೆ ಕಡೆಯೂ ಹೋಗಲ್ಲಿಕ್ಕಿದೆ.

ಪೂಜಾರಿಯವರು "ಶ್ರೀಮಂತರೇ , ಬೇಜಾರ ಮಾಡಬೇಡಿ  ,ಆದರೆ ನೀವು ಕೊಡುವ ಪೂಜೆ ಈಗ ದೇವರು ಸ್ವೀಕರಿಸಲಾರ ".

ಶ್ರೀಮಂತರು " ಪೂಜರಿಯವರೇ, ಯಾಕೆ ಹೀಗೆ ಹೇಳುತ್ತಿದ್ದೀರಿ".

ಪೂಜಾರಿಯವರು " ಶ್ರೀಮಂತರೇ, ಈಗ ದೇವರ ಗಮನ ಸರದಿ ಸಾಲಿನಲ್ಲಿ ಭಕ್ತಿ ಶ್ರದ್ಧೆಯಿಂದ ನಿಂತ ಭಕ್ತರ ಮೇಲೆ ಇದೆ, ನೀವು ಅವಸರವಾಗಿ ಕೊಡುವ ಪೂಜೆಯನ್ನು ಅವನು ಗಮನಿಸಲಾರ, ದೇವರಿಗೆ ಬೇಕಾದದ್ದು ಭಕ್ತಿ ಶ್ರದ್ಧೆ, ಅವಸರವಾಗಿ ಕೊಡುವ ಪೂಜೆ ಅಲ್ಲ" .

ಶ್ರೀಮಂತರು ಮರು ಮಾತನಾಡದೆ ತನ್ನ ಪರಿವಾರದೊಂದಿಗೆ ಸರದಿ ಸಾಲಿನಲ್ಲಿ ಹೋಗಿ ನಿಂತರು .

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ