Tuesday, August 30, 2011

ಗುಲಾಬಿ ಹೂವಿನ ಮುಳ್ಳು

ಕೇಳಿದೆ ನಾ ಗುಲಾಬಿ ಹೂವಿನ ಮುಳ್ಳಿಗೆ
"ಎಷ್ಟು ಸುಂದರ ಈ ಸುಹಾಸಿತ ಗುಲಾಬಿ ಹೂವು
ಆದರೆ ನೀ ಕೊಡುವಿ ಎಲ್ಲರಿಗೆ ನೋವು   
ಏನು ಗುಲಾಬಿ ಹೂವು ಹಾಗು ನಿನ್ನ ಸಂಬಂದ
ಏಕೆ ನಿನಗಿಲ್ಲ ಗುಲಾಬಿ ಹೂವಿನ ಅಂದ ಚೆಂದ
ಏನು ನಿನ್ನ ಈ ಆಟ
ಯಾಕೆ ನಿನ್ನ ಈ ಕಾಟ
ನಿನ್ನಿಂದ ಕಷ್ಟ ಮಾತ್ರ  
ಇಲ್ಲಿ ಏನು ನಿನ್ನ ಪಾತ್ರ"
  
ಗುಲಾಬಿ ಹೂವಿನ ಮುಳ್ಳು ಹೇಳಿತು ನಕ್ಕು
"ನನಗೆ ಬೇಡ ಅಂದ ಚೆಂದ
ಆದರೆ ನಿಮಗೆ ಒಂದು ಜ್ಞಾನ ನನ್ನಿಂದ
ನನ್ನ ಇಲ್ಲಿ ಮುಖ್ಯ ಪಾತ್ರ
ಹಲವು ಪ್ರಮಾಣ  ನನ್ನತ್ರ
ಗುಲಾಬಿ ಹೂವು ಇಲ್ಲದೆ ನಾನಿಲ್ಲ
ನಾನಿಲ್ಲದೆ ಗುಲಾಬಿ ಹೂವು ಇಲ್ಲ 
ಜೀವನ ಸುಖ ದುಃಖದ ಸಂಗಮ
ಕೂಡಿ ಬಾಳುವುದೇ ಉತ್ತಮ
ಜೀವನದಲ್ಲಿ ಬೇಕು ನೋವಿನ ಅನುಭವ
ಆಗಲೇ ಜೀವನವನ್ನು ಗೆಲ್ಲಲು ಸಂಭವ" 
by ಹರೀಶ್ ಶೆಟ್ಟಿ, ಶಿರ್ವ

Monday, August 29, 2011

ನಾನು ಕವಿ ಅಲ್ಲ

ನಾನು ಕವಿ ಅಲ್ಲ 
ಕೇವಲ...
ನನ್ನ ಪೆನ್ನಿನ
ಶಾಯಿಯಿಂದ  
ನನ್ನ
ಭಾವನೆಗಳನ್ನು 
ಕಾಗದದಲ್ಲಿ ಚೆಲ್ಲಿದು.......
by  ಹರೀಶ್ ಶೆಟ್ಟಿ, ಶಿರ್ವ  

ಬಂದೆ ನಾ ಪರದೇಶ

ಬಂದೆ ನಾ ಪರದೇಶ
ಬೇರೆ ಬೇರೆ ವೇಷ
ಎಲ್ಲವೂ ನವೀನ, ನವೀನ
ಜನರು ಭಿನ್ನ ಭಿನ್ನ

ದೊಡ್ಡ ದೊಡ್ಡ ಕಟ್ಟಡಗಳು    
ಬಣ್ಣ ಬಣ್ಣದ ಇಮಾರತ,ಬಂಗಲೆಗಳು  
ಸುಂದರ ಸುಂದರ ರಸ್ತೆಗಳು
ಆಶ್ಚರ್ಯದಿಂದ ನೋಡುತ್ತಿತ್ತು ನನ್ನ ಕಂಗಳು

ವೀಸಾ ಕೊಟ್ಟಿದ್ದ ಜನ ಬಂದಿದ
ದೊಡ್ಡ ದೊಡ್ಡ ಮಾತಾನಾಡಿದ
ಕಾರಲ್ಲಿ ಅಲ್ಲಿ ಇಲ್ಲಿ ತಿರುಗಿಸಿದ
ಪರದೇಶವನ್ನು ಕೊಂಡಾಡಿದ

ಕರೆದು ಕೊಂಡು ಬಂದ ಚಿಕ್ಕ ಕೋಣೆಯಲಿ
ಬೇರೆ ಮೂರು ಜನ ಇದ್ದರು ಆ ಕೋಣೆಯಲಿ
ಇಟ್ಟ ನನ್ನ ಸಾಮಾನು ಚಿಕ್ಕ ಹಾಸಿಗೆಯಲಿ
ಕೊಟ್ಟ ಒಟ್ಟಿಗೆ ಒಂದು ಚದ್ದರ್ ಜೊತೆಯಲಿ

ಹೇಳಿದ ,ಇದೇ ನಿನ್ನ ಕೋಣೆ
ನಿನ್ನ ಸಾಮಾನಿನ ನೀನೇ ಹೊಣೆ
ಇವತ್ತು ವಿಶ್ರಾಂತಿ ನೀ ಮಾಡೆಂದ
ಬರಬೇಕು ಕೆಲಸಕ್ಕೆ ನೀ ನಾಳೆಯಿಂದ 

ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು
ಸ್ವದೇಶ ಹಾಗು ಮನೆಯವರ ನೆನಪಾಯಿತು
ಸ್ವರ್ಗವನ್ನು ಹುಡುಕುತ್ತ ಜೀವನ ನರಕಕ್ಕೆ ಶರಣಾಯಿತು 
ನನ್ನ ದೇಶದ ದುಃಖವೇ ತುಂಬಾ ಚೆನ್ನಾಗಿತು ಎಂದೆನಿಸಿತು
ಬಿಕ್ಕಿ ಬಿಕ್ಕಿ ಅತ್ತೆ ನಾನು, ಮೆಲ್ಲನೇ ನಿದ್ರೆ ಅವರಿಸಿತು
by  ಹರೀಶ್ ಶೆಟ್ಟಿ, ಶಿರ್ವ



Sunday, August 28, 2011

ವೀಸಾ ಬಂದಿತು

ವೀಸಾ ಬಂದಿತು
ಕನಸು ವಾಸ್ತವ ಹಂತಕ್ಕೆ ಸೇರಿತು
ಮನದಲಿ ಒಂದು ಭಯ ಮೂಡಿತು
ದೂರ ಹೋಗುವೆ ಇನ್ನೂ ಎಂದು ಜೀವ ನಡುಗಿತು 

ಎಲ್ಲರಿಂದ ಬೇಟಿ ಮಾಡಿ ಆಯಿತು
ಔತಣ ,ಉಪಚಾರ ಆಯಿತು
ಬ್ಯಾಗ್ ಎಲ್ಲ ತುಂಬಿಸಿ ಆಯಿತು
ಹೋಗುವ ಸಮಯ ಹತ್ತಿರವಾಯಿತು

ಅವಳ ಮುಖ ಬಾಡಿತು
ಹತಾಶೆಯಿಂದ ಕೂಡಿತು
ಹೃದಯ ಅವಳ ಅಳುತ್ತಿತ್ತು
ಕಣ್ಣಲಿ ನೀರು ತುಂಬಿತು 
ಮಗ ಅಲ್ಲೇ ಕೂತಿದ್ದ
ಆಟ ಓಟಗಳ ಮರೆತಿದ್ದ
ಕಣ್ಣಿರನ್ನು ಅವಿತಿದ್ದ
ನನ್ನನ್ನೇ ನೋಡುತ್ತಿದ್ದ

ಆ ಕಡೆ ಕನಸಿನ ಸಾಗರ
ಈ ಕಡೆ ಬಿಟ್ಟು ಹೋಗುತ್ತಿದ್ದೆ ಸಂಸಾರ
ಕಾಣುವೆನೇ ಇನ್ನು ಮನೆಯ ದ್ವಾರ ?
ಹೆಚ್ಚಾಯಿತು ಕನಸಿಗಿಂತ ಕಣ್ಣಿರ ಭಾರ
by ಹರೀಶ್ ಶೆಟ್ಟಿ, ಶಿರ್ವ

Saturday, August 27, 2011

ಬರಬೇಡ

ಬರಬೇಡ ಪುನಃ ನನ್ನ ಜೀವನವ ಮರಳಿ
ನನ್ನ ಜೀವನ ಈಗ ಸ್ವರ ಇಲ್ಲದ ಮುರಳಿ
ಬತ್ತಿ ಹೋಗಿದೆ ಜೀವನ ನಿರಾಸೆಯ ಪಥದಲಿ
ಹೃದಯ ತೇಲಿ ಹೋಗಿದೆ ದುಃಖದ ಸಾಗರದಲಿ
by ಹರೀಶ್ ಶೆಟ್ಟಿ, ಶಿರ್ವ

Friday, August 26, 2011

ಹೊಸ ಬೆಳಕು

ನಡೆಯುತ್ತಿದ್ದೆ ಹೀಗೆಯೇ ಹಾದಿಯಲಿ  
ತನ್ನದೇ ದೀರ್ಘ ಯೋಚನೆಯಲಿ
ಹಲವು ವಿಚಾರಗಳು ಮನದಲಿ

ಸುಪ್ತವಾದ ಕಾರ್ಯಗಳು
ಕೆಲಸದ ಸಮಸ್ಯೆಗಳು
ಮನೆಯ ಕಲಹಗಳು
ತುಂಡಾದ ಸಂಬಂದಗಳು

ಹಣದ ಅಭಾವಗಳು
ಜೂಜಿನ ಸೋಲುಗಳು
ತೀರಿಸುವ ಸಾಲಗಳು
ಸಿಕ್ಕುವ ಬೆದರಿಕೆಗಳು 

ಜೀವನದ ಸವಾಲುಗಳು
ಅನೇಕ ಕಷ್ಟಗಳು
ನಿರಾಸೆಯ ಅಲೆಗಳು
ಕಾಣದ ತಾಣಗಳು

ನಡೆಯುತ್ತಲೇ ಹೋಗುತ್ತಿದ್ದೆ
ವಿಚಾರಗಳ ಮಂಥನದಲ್ಲಿ
ಕಂಡೆ ಚಿಕ್ಕದೊಂದು ಕಲ್ಲು ಹಾದಿಯಲ್ಲಿ
ಎತ್ತಿ ಕೊಂಡೆ ಕೈಯಲ್ಲಿ
ಕಲ್ಲು ಇತ್ತು ದೇವ ಗಣೇಶನ ಆಕಾರದಲ್ಲಿ

ಕಲ್ಲಲ್ಲಿ ಅದೃಷ್ಟ ಕಂಡಿತು  
ಆಸೆ ಒಂದು ಚಿಗುರಿತು
ಮನದ ಹೂವು ಅರಳಿತು
ಜೀವನದಲ್ಲಿ ಹೊಸ ಬೆಳಕಾಯಿತು
by  ಹರೀಶ್ ಶೆಟ್ಟಿ, ಶಿರ್ವ

Thursday, August 25, 2011

ಹುಣಸೆ ಮರ ಮತ್ತು ನದಿ

ದಟ್ಟ ಕಾಡಿನಲ್ಲಿ
ಪುಟ್ಟ ಹರಿಯುವ ನದಿ
ನದಿಯ ತಟದಲ್ಲಿ
ಒಂದು ಹುಣಸೆ  ಮರ

ಹುಣಸೆ ಮರದಲ್ಲಿ ತುಂಬಾ ಹಣ್ಣು
ಅದರ ಹಣ್ಣು ಬಹಳ ಹುಳಿ
ನದಿಯ ನೀರು ಯಾವಾಗಲು ಸಿಹಿ ಸಿಹಿ

ಹುಣಸೆ ಮರಕ್ಕೆ ಬಂತು ದುಷ್ಟ ವಿಚಾರ 
ಬೀಳಿಸುವೆ  ನನ್ನ ಹಣ್ಣನ್ನು
ನದಿಯ ಸಿಹಿ ನೀರನ್ನು ಮಾಡುವೆ ಹುಳಿ

ಹರಿಯುವ ನದಿಗೆ
ಇದರ ಇರಲಿಲ್ಲ ಜ್ಞಾತ
ಇಷ್ಟ ಅದಕ್ಕೆ ತನ್ನದೇ ಪ್ರವಾಸ

ಹುಣಸೆ ಮರ ಹಣ್ಣನ್ನು ಬೀಳಿಸುತ್ತಲೇ ಇತ್ತು
ನೀರು ಹುಳಿ ಆಗುವುದೆಂದು ಕಾಯುತ್ತಲೇ ಇತ್ತು
ನದಿ ಶಾಂತತೆಯಿಂದ ಹರಿಯುತ್ತಲೇ ಇತ್ತು
ನದಿಯ ನೀರು ಸದಾ ಸಿಹಿಯೇ ಆಗಿತ್ತು
by  ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ