Sunday, August 17, 2014

ಕೈ ಬಿಟ್ಟೋದರೂ

ಕೈ ಬಿಟ್ಟೋದರೂ
ಸಂಬಂಧವನ್ನು ಬಿಡಬಾರದು
ಸಮಯದ ಶಾಖೆಯಿಂದ
ಕ್ಷಣಗಳನ್ನು ಕಿತ್ತುಕೊಳ್ಳಬಾರದು
ಕೈ ಬಿಟ್ಟೋದರೂ...

ಯಾರ ಸ್ವರದಲಿ ಬಿರುಕು
ದೃಷ್ಟಿಯಲಿ ಸುಕ್ಕಿದೆಯೋ
ಅಂತಹ ಚಿತ್ರಗಳ
ತುಂಡನ್ನು ಜೋಡಿಸಬಾರದು

ಜೇನು ಬದುಕಿನ ಸಿಗುತ್ತದೆ
ಸ್ವಲ್ಪ ಸ್ವಲ್ಪವೇ
ತೆರಳುವವರ ಗೋಸ್ಕರ
ಹೃದಯ ಮುರಿದುಕೊಳ್ಳಬಾರದು

ತೀರದಲ್ಲಿದ್ದು ಹರಿಯುತ್ತದೆ ಎಂದಾದರೆ
ಅದನ್ನು ಹರಿಯ ಬಿಡು
ಅಂತಹ ಸಾಗರದ ಎಂದೂ
ದಿಕ್ಕನ್ನು ತಿರುಗಿಸಬಾರದು

ಕೈ ಬಿಟ್ಟೋದರೂ
ಸಂಬಂಧವನ್ನು ಬಿಡಬಾರದು
ಸಮಯದ ಶಾಖೆಯಿಂದ
ಕ್ಷಣಗಳನ್ನು ಕಿತ್ತುಕೊಳ್ಳಬಾರದು

ಮೂಲ ರಚನೆ : ???
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಜಗಜಿತ್ ಸಿಂಗ್


 Haath chhute bhi toh rishte nahi chhoda karate - (2)
 Waqt ki shaakh se lamhe nahi toda karate
 Haath chhute bhi toh rishte nahi chhoda karate

 Jisaki aawaaz mein silwat ho nigaahon mein shikan - (2)
 Aisi tasweer ke tukade nahi joda karate - (2)

 Shehad jine ka mila karata hai thoda thoda - (2)
 Jaanewaalon ke liye dil nahi thoda karate - (2)

 Lagake saahil se jo behata hai, use behane do - (2)
 Aise dariyaan ka kabhi rukh nahi moda karate - (2)
 Waqt ki shaakh se lamhe nahi toda karate
 Haath chhute bhi toh rishte nahi chhoda karate
http://www.youtube.com/watch?v=8Pozanj_RSU

ಜಗ ಕೃಷ್ಣಮಯ ಇಂದು

ಜಗ ಕೃಷ್ಣಮಯ ಇಂದು
ಜಗದೊಳು ಇಟ್ಟ ಪಾದ ಮುಕುಂದ
ಮೂರು ಲೋಕದಲಿ ಹರುಷವ ತಂದ
ಜಗ ಕೃಷ್ಣಮಯ ಇಂದು

ಕೊಳಲ ಉದುತಾ
ಧರೆಯನು ಒಲಿಸುತ
ನವ ಚೈತನ್ಯ ತಂದ
ಜಗ ಕೃಷ್ಣಮಯ ಇಂದು

ತಾಯಿಯ ಮಮತೆ ಅಳುತ್ತಿತ್ತು
ತಂದೆಯ ವಾತ್ಸಲ್ಯ ಭಯದಲ್ಲಿತ್ತು
ಆದರೆ ನಗುತ್ತಿದ್ದ ವಾಸುದೇವ ದೇವಕಿಯ ಕಂದ
ಜಗ ಕೃಷ್ಣಮಯ ಇಂದು

ಧನ್ಯ ಯಶೋದೆ
ಧನ್ಯ ಧರತಿ
ಧನ್ಯ ಗೋಕುಲ ನಂದ
ಜಗ ಕೃಷ್ಣಮಯ ಇಂದು

ಹಸುಗಳ ಮೂಲೆಗಳಲ್ಲಿ ಹಾಲು ತುಂಬಿತು
ಕರುಗಳ ಮುಖದಲಿ ಹರ್ಷ ಹರಿಯಿತು
ಹಬ್ಬಿತು ಗೋಪ ಗೋಪಿಯರ ಮುಖದಲಿ ಆನಂದ
ಜಗ ಕೃಷ್ಣಮಯ ಇಂದು

ಜಗ ಕೃಷ್ಣಮಯ ಇಂದು
ಜಗ ಕೃಷ್ಣಮಯ ಇಂದು
ಜಗ ಕೃಷ್ಣಮಯ ಇಂದು

by ಹರೀಶ್ ಶೆಟ್ಟಿ, ಶಿರ್ವ

Saturday, August 16, 2014

ಅಮ್ಮ ನನ್ನ ನಾನು ಬೆಣ್ಣೆ ತಿಂದಿಲ್ಲ

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ಮುಂಜಾವ ನಾನು ಮಧುಬನದಲಿ
ಹಸುಗಳನ್ನು ಮೇಯಿಸಿ ಬಂದೆ
ತದನಂತರ ನಾನು ಕೊಳಲನ್ನು
ಊದುತಾ ಹಾಡುತಾ ಅಲ್ಲಿಲ್ಲಿ ಅಲೆದೆ
ಸಂಜೆಯಾದಂತೆ ಮನೆಗೆ ಬಂದೆ

ಅಮ್ಮ
ನಾನ್ಯಾವಾಗ ಬೆಣ್ಣೆ  ತಿಂದೆ?

ನಾನು ಬಾಲಕ
ತುಂಬಾ ಸಣ್ಣವ
ಬೆಣ್ಣೆ ಭರಣಿ
ತುಂಬಾ ಎತ್ತರ
ಹೇಗೆ ತಾನೇ
ತಲುಪುವುದು ನನ್ನ ಕೈಗೆ ಅದೆಲ್ಲ?

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ಯಶೋದೆ :
ಹೀಗೆ ನೀನು ಮಾತನ್ನು ತಿರುಗಿಸಿ
ಒಲಿಸುವೆ ಎನ್ನದಿರು ನನ್ನನ್ನು ವಂಚಿಸಿ
ಕಾಣುತ್ತಿದೆ ಈಗಲೂ ಬೆಣ್ಣೆ
ನಿನ್ನ ತುಟಿಯಲಿ ಹಸಿ ಹಸಿ

ಗೋಪ ಗೋಪಿಯರು
ನನ್ನಿಂದ ಪಗೆ ಇಡುವರು
ಬೆಣ್ಣೆ ತುಪ್ಪ ತಿಂದು
ನನ್ನ ಮುಖಕ್ಕೆ ಹಚ್ಚಿ
ಓಡಿ ಹೋಗುವರು ಅವರೆಲ್ಲ

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ನೀನು ಜನನಿ
ತುಂಬಾ ಮುಗ್ದೆ
ಇತರರ ಮಾತು ಕೇಳಿ
ನನ್ನನ್ನು ತಪ್ಪಿತಸ್ತನೆಂದು ತಿಳಿದೇ
ತೆಗೋ ನಿನ್ನ ಬೆತ್ತ ಕಂಬಳಿ
ತುಂಬಾ ನನ್ನನ್ನು ನೀನು ನಲಿಸಿದೆ
ನಿನ್ನ ಹೃದಯದಲಿ ಭೇದ ಉದ್ಭವಿಸಿದೆ
ಸಾಕು ಮಗ ನಾನು
ನಿನಗೆ ಪ್ರೀತಿ ನನ್ನಲ್ಲಿಲ್ಲ
ನೀನು ಮಲತಾಯಿ
ನನ್ನಮ್ಮ ನೀನಲ್ಲ

ಯಶೋದೆ ನಕ್ಕು
ಮುದ್ದು ಕೃಷ್ಣನನ್ನು ಅಪ್ಪಿಕೊಂಡು
"ಹೌದು ಪುಟ್ಟ ನೀನು ಬೆಣ್ಣೆ ತಿಂದಿಲ್ಲ"

ಅಮ್ಮ ನನ್ನ
ನಾನು ಬೆಣ್ಣೆ ತಿನ್ನಲಿಲ್ಲ

ರಚನೆ : ಸೂರದಾಸ್

ಕನ್ನಡದಲ್ಲಿ : ಹರೀಶ್ ಶೆಟ್ಟಿ,ಶಿರ್ವ



मैया मोरी, मैं नही माखन खायो



भोर भयो गैयन के पाछे, मधुवन मोहि पठायो ।

चार पहर वंशीवट भटक्यो, सांझ परे घर आयो ॥

॥ मैया मोरी ………. १ ॥



मैं बालक बहियन को छोटो, छींको किहि विधि पायो .

ग्वाल-बाल सब बैर परे हैं, बरबस मुख लपटायो ..



॥ मैया मोरी ………. २ ॥



तू जननी मन की अति भोली, इनके कहे पतियायो .

यह ले अपनी लकुटि कम्बलिया, तुने बहुतहि नाच नचायो .

जिय तेते कछु भेद उपजिहै , जानि परायो जायो ..

“सूरदास” तब हँसी यशोदा, लै उर-कंठ लगायो ..

॥ मैया मोरी ……….
http://www.youtube.com/watch?v=5IBbP9CGZu8

Thursday, August 14, 2014

ತನ್ನ ಕೈಯ ಗೆರೆಗಳಲ್ಲಿ

!!ತನ್ನ ಕೈಯ ಗೆರೆಗಳಲ್ಲಿ
ನೆಲೆಸು ನನ್ನನ್ನು
ನಾನು ನಿನ್ನವೆಂದಾದರೆ
ಭಾಗ್ಯ ನಿನ್ನ ಮಾಡು ನನ್ನನ್ನು!!

!!ನನ್ನಲ್ಲಿ ನೀನು ಕೇಳಲು
ಬಂದಿರುವೆ ನಿಷ್ಠೆಯ ಅರ್ಥ
ನಿನ್ನ ಈ ಸರಳತೆ
ಎಲ್ಲೊ ಕೊಲ್ಲದಿರಲಿ ನನ್ನನ್ನು!!

!!ಸ್ವತಃ ನನ್ನನ್ನು ನಾನೆಲ್ಲೋ
ಹಂಚಿ ಬಿಡುವೆ ಅಲ್ಲಿಲ್ಲಿ
ಒಂದು ವೇಳೆ ನೀನು
ನನಗೆ ಒಪ್ಪಿಸಿ ಬಿಟ್ಟರೆ ನಿನ್ನನ್ನು!!

!!ಶರಾಬು ಏನಾದರೂ ಶರಾಬೆ
ನಾನು ವಿಷ ಕುಡಿಯಲು ಸಿದ್ಧ
ಯಾರಾದರೂ ತನ್ನ ಬಾಹುಗಳಲ್ಲಿ
ಬಂಧಿಸಿದರೆ ನನ್ನನ್ನು!!

ಮೂಲ : ಕತೀಲ್ ಶಿಫೈ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಜಗಜಿತ್ ಸಿಂಗ್

अपने हाथों की लकीरों में बसा ले मुझको
मैं हूँ तेरा तो नसीब अपना बना ले मुझको।

मुझसे तू पूछने आया है वफ़ा के माने
ये तेरी सादा-दिली मार ना डाले मुझको।

ख़ुद को मैं बाँट ना डालूँ कहीं दामन-दामन
कर दिया तूने अगर मेरे हवाले मुझको।

बादाह फिर बादाह है मैं ज़हर भी पी जाऊँ ‘क़तील’
शर्त ये है कोई बाहों में सम्भाले मुझको।
http://www.youtube.com/watch?v=6yc7pb1TCpQ

Tuesday, August 12, 2014

ಬದುಕಿರುವೆ ನಾನೀಗೆ ಅಂದರೆ

ಬದುಕಿರುವೆ ನಾನೀಗೆ ಅಂದರೆ 
ದುಃಖ ಜೀವನವೇ ನನ್ನಲ್ಲಿಲ್ಲ
ಉರಿಯುವ ದೀಪಕ ನಾನು
ಆದರೆ ಅದರಲ್ಲಿ ಬೆಳಕೇ ಇಲ್ಲ 
ಬದುಕಿರುವೆ...

ಯಾರಿಂದಲೂ ಅಗಲಿ
ಅದೆಷ್ಟೋ ಸಮಯ ಕಳೆಯಿತು
ಆದರೆ ಹೃದಯದ ಅಗ್ನಿ
ಈ ತನಕ ಆರಲಿಲ್ಲ
ಬದುಕಿರುವೆ...

ಬರಲಿಕ್ಕೆ ಬಂದಿತ್ತು
ಕಿನಾರೆ ಸಹ ಎದುರಿಗೆ
ಆದರೆ ಅದರ ಸನಿಹ
ನನ್ನ ನಾವೆ ಹೋಗಲಿಲ್ಲ
ಬದುಕಿರುವೆ...

ತುಟಿಯಲಿ ಬರಲಿ ನಗು
ಅಷ್ಟು ಧೈರ್ಯ ಎಲ್ಲಿ
ಇದು ವಿಷಯ ಹೃದಯದ
ಯಾವುದೇ ಹಾಸ್ಯವೇನಲ್ಲ
ಬದುಕಿರುವೆ...

ಈ ಚಂದ್ರ ಈ ಗಾಳಿ ಈ ಪರಿಸರ
ಎಲ್ಲವೂ  ಚೆಲುವಾಗಿದೆ
ನೀನಿಲ್ಲವೆಂದರೆ ಇವುಗಳಲ್ಲಿ
ಯಾವುದೇ ಆಕರ್ಷಣೆ ಇಲ್ಲ
ಬದುಕಿರುವೆ...

ಮೂಲ :ಬೆಹಜದ್ ಲಕ್ನವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ರಾಮ್ ಗಾಂಗೂಲಿ
ಚಿತ್ರ :ಆಗ್


zindaa hun is tarah ki gam-e-zindagi nahi
jalataa huaa diyaa hun magar roshani nahi
zindaa hun

do muddate hui hai kisise judaa hue
lekin ye dil ki aag abhi tak bujhi nahi
zindaa hun

aane ko aa chukaa thaa kinaaraa bhi samane
khud usake paas meri hi nayyaa gai nahi
zindaa hun

hotho ke paas aae hansi, kyaa mazaal hai
dil kaa muaamalaa hai koi dillagi nahi
zindaa hun

ye chaand ye havaa ye fizaa, sab hai madmast
jo tu nahi to inase bhi koi dilakashi nahi
zindaa hun
http://www.youtube.com/watch?v=LHnSr82qQ34

Monday, August 11, 2014

ವೀರ ಬರ್ಬರಿಕ


ವೀರ ಬರ್ಬರಿಕ
-------------------
ಭೀಮನ ಮೊಮ್ಮಗ ಹಾಗು ಘಟೋತ್ಕಚನ ಮಗ ಬರ್ಬರಿಕನ ತಾಯಿಯ ಹೆಸರು  ಕಾಮಕಟಂಕಟಿ ಎಂದಿತ್ತು. ಅವರನ್ನು ಮೊರ್ವಿ ಎಂದು ಕರೆಯಲಾಗುತ್ತಿತ್ತು.  ಬರ್ಬರಿಕನನ್ನು ಮೊರ್ವಿನಂದನ್ ಎಂದೂ ಕರೆಯಲಾಗುತ್ತಿತ್ತು. ಅವನು ಯುದ್ಧ ಕಲೆ ತನ್ನ ತಾಯಿಯಿಂದ ಕಲಿತುಕೊಂಡಿದ್ದ. ಕಠಿನ ತಪಸ್ಸು ಮಾಡಿ ಬರ್ಬರಿಕ ದೇವ ಶಿವನನ್ನು ಒಲಿಸಿ ಅವರಿಂದ ಮೂರು ಅಮೋಘ ಬಾಣ ಪಡೆದಿದ್ದ, ಈ ಕಾರಣ ಅವನನ್ನು ಮೂರು ಬಾಣಧಾರಿ ಎಂದೂ ಕರೆಯಲಾಗುತ್ತಿತ್ತು. ಅಗ್ನಿ ದೇವರು ಪ್ರಸನ್ನವಾಗಿ ಅವನಿಗೆ ಬಿಲ್ಲು ನೀಡಿದ್ದರು. ಬರ್ಬರಿಕನಲ್ಲಿ ಮೂರು ಲೋಕ ಗೆಲ್ಲುವ ಸಾಮರ್ಥ್ಯ ಇತ್ತು.

ಕೌರವ ಮತ್ತು ಪಾಂಡವರ ಮಧ್ಯೆ ಯುದ್ಧದ ತಯಾರಿ ಜೋರಲ್ಲಿ ನಡೆದಿತ್ತು. ಎಲ್ಲ ಕಡೆ ಯುದ್ಧದ ಚರ್ಚೆ ನಡೆದಿತ್ತು. ಈ ಸುದ್ಧಿ ಬರ್ಬರಿಕನಿಗೆ ಸಿಕ್ಕಿದಾಗ ಅವನಿಗೂ ಯುದ್ಧದಲ್ಲಿ ಪಾಲ್ಗೊಳ್ಳುವ ಮನಸ್ಸಾಯಿತು. ಅವರು ತಾಯಿಯಿಂದ ಯುದ್ಧದಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆಯಲು ಹೋದ. ಅವನು ತಾಯಿಯಿಂದ ಆಶೀರ್ವಾದ ಪಡೆದ ಹಾಗು ಕೇವಲ ದುರ್ಬಲ ಪಕ್ಷದವರ ಕಡೆಯಿಂದಲೇ ಯುದ್ಧ ಮಾಡುವೆಯೆಂದು ಅವರಿಗೆ ವಚನ ನೀಡಿದ.

ಬರ್ಬರಿಕ ತನ್ನ ನೀಲವರ್ಣ ಕುದುರೆಯ ಮೇಲೆ ಕುಳಿತು ಮೂರು ಬಾಣ ಹಾಗು ಬಿಲ್ಲು ಒಟ್ಟಿಗೆ ಇಟ್ಟು ಹೊರಟ. ಮಾರ್ಗದಲ್ಲಿ ಅವನನ್ನು ಒಬ್ಬ ಬ್ರಾಹ್ಮಣ ತಡೆದು ಅವರ ಪರಿಚಯ ಕೇಳಿದ. ಈ ಬ್ರಾಹ್ಮಣ ಬೇರೆ ಯಾರೂ ಅಲ್ಲ, ನಮ್ಮ ಲೀಲಾಧರ ಶ್ರೀಕೃಷ್ಣನೆ ಆಗಿದ್ದ. ಕೇವಲ ಮೂರು ಬಾಣ ಜೊತೆಯಲ್ಲಿಟ್ಟು ಯುದ್ಧ ಮಾಡಲು ಹೊರಟೆಯಲ್ಲವೇ ಎಂದು ಶ್ರೀಕೃಷ್ಣ ಅವನಿಂದ ವ್ಯಂಗದಿಂದ ಕೇಳಿದ. ಇದನ್ನು ಕೇಳಿ ಬರ್ಬರಿಕ "ಶತ್ರು ಸೇನವನ್ನು ನೆಲಸಮಗೊಳಿಸಲು ನನಗೆ ನನ್ನ ಈ ಮೂರು ಬಾಣವೇ ಸಾಕು" ಎಂದು ಉತ್ತರಿಸಿದ ಹಾಗು "ಒಂದು ವೇಳೆ ನಾನು ಈ ಮೂರು ಬಾಣಗಳ ಪ್ರಯೋಗ ಮಾಡಿದ್ದರೆ ತ್ರಿಲೋಕದಲ್ಲಿ ಹಾಹಕಾರ ಉಂಟಾಗಬಹುದು" ಎಂದು ಹೇಳಿದ.

ಇದನ್ನು ಕೇಳಿ ಕೃಷ್ಣ ತನ್ನ ಮೋಹಕ ನಗು ಬೀರಿ ಎದುರಿದ್ದ ಅರಳೀ ಮರದ ಕಡೆ ಸಂಕೇತ ಮಾಡಿ ಅವನಿಗೆ  "ಹೌದೆ, ಹಾಗಾದರೆ ಈ ಮರದ ಎಲ್ಲಾ ಎಳೆಗಳ ಮೇಲೆ ತೂತು ಮಾಡಿ ತೋರಿಸಿದರೆ ನಾನು ನಂಬುವೆ ಇಲ್ಲಾದರೆ ಹೇಗೆ ನಂಬುವುದು" ಎಂದು ಸವಾಲೆಸೆದ. ಬರ್ಬರಿಕ ಸವಾಲನ್ನು ಸ್ವೀಕರಿಸಿ ತನ್ನ ಬತ್ತಳಿಕೆಯಿಂದ ಒಂದು ಬಾಣ ತೆಗೆದು ಎಳೆಗಳ ಮೇಲೆ ಬಿಟ್ಟ. ಒಂದೇ ಕ್ಷಣದಲ್ಲಿ ಬಿಟ್ಟ ಬಾಣ ಎಲ್ಲಾ ಎಳೆಗಳ ಮೇಲೆ ರಂಧ್ರ ಮಾಡಿ ಕೃಷ್ಣನ ಹಿಂದೆ ಮುಂದೆ ಸುಳಿಯಲಾರಂಭಿಸಿತು. ಯಾಕೆಂದರೆ ಲೀಲಾಧರ ಶ್ರೀಕೃಷ್ಣ ಒಂದು ಎಳೆಯನ್ನು ತನ್ನ ಪಾದದ ಅಡಿಯಲ್ಲಿ ಅಡಗಿಸಿಟ್ಟಿದ್ದ.

ಬರ್ಬರಿಕ ಶ್ರೀಕ್ರಷ್ಣನಿಗೆ "ನಿಮ್ಮ ಕಾಲು ತೆಗೆಯಿರಿ ಇಲ್ಲಾದರೆ ಈ ಬಾಣ ನಿಮಗೂ ಗಾಯಗೊಳಿಸಬಹುದು" ಎಂದು ಹೇಳಿದ. ಎಲ್ಲ ಸ್ಥಿತಿ ಪರೀಕ್ಷಿಸಿ ಶ್ರೀಕೃಷ್ಣ ತನ್ನ ವಾಣಿಯ ಬಾಣ ಬಿಟ್ಟು ಬರ್ಬರಿಕನಿಗೆ ಕೇಳಿದ "ನೀನು ಯಾರ ಪಕ್ಷದಿಂದ ಯುದ್ಧ ಮಾಡುವೆ". ಬರ್ಬರಿಕ ತನ್ನ ತಾಯಿಗೆ ನೀಡಿದ ವಚನದ ಬಗ್ಗೆ ತಿಳಿಸಿ "ಯಾರು ಈ ಯುದ್ಧದಲ್ಲಿ ದುರ್ಬಲವಾಗಿರುವರೋ ನಾನು ಅವರ ಪರವಾಗಿ ಯುದ್ಧ ಮಾಡುವೆ" ಎಂದು ಹೇಳಿದ.
ಕೃಷ್ಣನಿಗೆ ತಿಳಿದಿತ್ತು ಒಂದು ವೇಳೆ ಬರ್ಬರಿಕ ಕೌರವರ ಪರವಾಗಿ ಯುದ್ಧ ಮಾಡಿದರೆ ಗೆದ್ದ ಬಾಜಿ ಸಹ ಅವನ ಕೈಯಿಂದ ಕಸಿಯಬಹುದು. ಬ್ರಾಹ್ಮಣ ವೇಷದಲ್ಲಿದ್ದ ಶ್ರೀಕೃಷ್ಣ ಬರ್ಬರಿಕನಿಂದ ವಚನ ಕೇಳಿ ಪಡೆದ ಹಾಗು ದಾನದಲ್ಲಿ ಅವನ ಶಿರ ಬೇಕೆಂದು ಕೇಳಿಕೊಂಡ. ಕ್ಷಣಕ್ಕಾಗಿ ಬರ್ಬರಿಕನಿಗೆ ಆಘಾತವಾಯಿತು, ಆದರೆ ಅವನು ವಚನ ಕೊಟ್ಟು ಬಿಟ್ಟಿದ್ದ. ವಚನದಿಂದ ನಿರಾಕರಿಸಲು ಅವನಿಗೆ ಇಷ್ಟವಿರಲಿಲ್ಲ. ಬರ್ಬರಿಕ ಯೋಚಿಸಿದ ಇವರು ಸಾಧಾರಣ ಬ್ರಾಹ್ಮಣ ಅಲ್ಲ, ಅದಕ್ಕೆ ಅವನು ಬ್ರಾಹ್ಮಣನಿಂದ ತನ್ನ ವಾಸ್ತವ ರೂಪಕ್ಕೆ ಬರಲು ವಿನಂತಿಸಿದ. ಶ್ರೀಕೃಷ್ಣ ಕೇವಲ ತನ್ನ ವಾಸ್ತವ ರೂಪವನ್ನೇ ಅಲ್ಲ ತನ್ನ ವಿರಾಟ ರೂಪದ ದರ್ಶನವನ್ನು ಬರ್ಬರಿಕನಿಗೆ ನೀಡಿದ.

ಬರ್ಬರಿಕ ಕೃಷ್ಣನಿಂದ ಅವನಿಗೆ ಕೊನೆ ತನಕ ಯುದ್ಧ ನೋಡಲ್ಲಿಕ್ಕೆ ಇದೆ ಎಂದು ಮನವಿ ಮಾಡಿದ. ಕೃಷ್ಣ ಅವನ ಈ ಮಾತನ್ನು ಸ್ವೀಕರಿಸಿದ. ಫಾಲ್ಗುಣ ಮಾಸದ ದ್ವಾದಶಿಯಂದು ಅವನು ತನ್ನ ಶಿರ ದಾನ ಮಾಡಿದ. ಶ್ರೀಕೃಷ್ಣ ಅವನ ಶಿರವನ್ನು ಅಮೃತದಿಂದ ತೊಯ್ದು ಯುದ್ಧದ ಸಮೀಪ ಒಂದು ಪರ್ವತದಲ್ಲಿ ಸ್ಥಾಪಿಸಿದ. ಅಲ್ಲಿಂದ ಬರ್ಬರಿಕ ಸಂಪೂರ್ಣ ಯುದ್ಧವನ್ನು ನೋಡಬಹುದಿತ್ತು.

ಯುದ್ಧ ಮುಗಿದಿತ್ತು. ಪಾಂಡವರಲ್ಲಿ ಯುದ್ಧದ ಗೆಲುವಿನ ಶ್ರೇಯ ಯಾರಿಗೆ ಸಲ್ಲಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಶ್ರೀಕೃಷ್ಣ "ಬರ್ಬರಿಕನ ಶಿರ ಸಂಪೂರ್ಣ ಯುದ್ಧದ ಸಾಕ್ಷಿ, ಅದಕ್ಕೆ ಅವನಿಂದ ಒಳ್ಳೆ ನಿರ್ಣಯಕ ಬೇರೆ ಯಾರೂ ಇಲ್ಲ" ಎಂದ. ಇದಕ್ಕೆ ಬರ್ಬರಿಕ ಶಿರ  "ನನಗೆ ಮಹಾಭಾರತದ ಯುದ್ಧದಲ್ಲಿ ಎಲ್ಲ ಕಡೆ ಕೇವಲ ಶ್ರೀಕೃಷ್ಣ ಕಂಡು ಬಂದರು, ಕೇವಲ ಅವರ ಸುದರ್ಶನ ಚಕ್ರ ತಿರುಗುವುದು ಕಂಡು ಬಂತು ಹಾಗು ಅವರ ಆದೇಶಕ್ಕೆ ದೇವಿ ಮಹಾಕಾಳಿ ಶತ್ರು ಸೇನೆಯ ರಕ್ತ ಸೇವನೆ ಮಾಡುವುದು ಕಂಡು ಬಂತು" ಎಂದು ಉತ್ತರಿಸಿತು.

ಶ್ರೀಕೃಷ್ಣ ಬರ್ಬರಿಕನ ಬಲಿದಾನದಿಂದ ತುಂಬಾ ಪ್ರಸನ್ನವಾಗಿದ್ದ ಹಾಗು ಅವನಿಗೆ "ಕಲಿಯುಗದಲ್ಲಿ ನಿನ್ನನ್ನು ಶ್ಯಾಮ ಎಂಬ ಹೆಸರಿನಿಂದ ಕರೆಯುವರು ಹಾಗು ಖಾಟು ಎಂಬ ನಗರದಲ್ಲಿ ನಿನ್ನ ಧಾಮ ನಿರ್ಮಾಣವಾಗುವುದು " ಎಂದು ವರದಾನ ನೀಡಿದ. ಅವನ ಶಿರ ಅಲ್ಲಿಯೇ ಧಫನ ಮಾಡಲಾಯಿತು.

ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಖಾಟು ಎಂಬ ಊರಲ್ಲಿ  "ಖಾಟು ಶ್ಯಾಮ" ನವರ ಮುಖ್ಯ ದೇವಾಲಯ ಇದೆ.

ಆಧಾರ : ಮಹಾಭಾರತದಿಂದ


by ಹರೀಶ್ ಶೆಟ್ಟಿ ,ಶಿರ್ವ

Sunday, August 10, 2014

ಸನಿಹ ಇಲ್ಲ ಯಾರೂ

ಸನಿಹ ಇಲ್ಲ ಯಾರೂ
ಒಡಹುಟ್ಟಿದವರು
ಏಕಾಂತ
ಆದರೆ ಬಳಿ ಇದೆ
ಸ್ಮೃತಿ ಸಾಗರ
ನೆನಪ ಅಲೆಗಳು ತೇಲುತ್ತಿವೆ

ಬಾಲ್ಯ ಯೌವನ
ಪ್ರತ್ಯೇಕ ಸಂಸಾರ
ನಂತರ ಜಗಳ
ಕೆಲವಕ್ಕೆ ಕಾರಣ
ಕೆಲವು ವಿನಃ ಕಾರಣ

ಕೋಪ ದ್ವೇಷ
ಅಹಂ ಜನಿತ
ಸಂಬಂಧ ಕಹಿ
ಮಾತುಕತೆ ಅಂತ್ಯ
ಅಂತರ ವ್ಯಾಪಕ

ಅಗಲಿದ ಜನನಿ
ಸೀಮಿತ ಸಮಯದ
ಪುನರ್ಮಿಲನ
ಕೆಲವು ದಿನದ ಶಾಂತತೆ
ಅದರ ನಂತರ
ಪುನಃ ಉದ್ಭವಿಸಿದ ಗರ್ವ

ವಿಧಿಯ ಆಟ
ಪುನಃ ಅದೇ ಅಂತರ
ಅಲ್ಲೂ ಸುಖ
ಇಲ್ಲೂ ಆರಾಮ
ಆದರೆ ಹೃದಯದಲಿ ವೇದನೆ
ಅಲ್ಲೂ ಇಲ್ಲೂ

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ