Sunday, August 10, 2014

ಅಣ್ಣ ನನ್ನ ನಿಭಾಯಿಸು

ಅಣ್ಣ ನನ್ನ
ನಿಭಾಯಿಸು ರಾಖಿಯ ಬಂಧವನ್ನ
ಅಣ್ಣ ನನ್ನ
ಮರೆಯದಿರು ಈ ಪುಟ್ಟ ತಂಗಿಯನ್ನ
ನೋಡು ನಿಭಾಯಿಸು ಈ ಸಂಬಂಧವನ್ನ
ಸಂಬಂಧವನ್ನ
ಅಣ್ಣ ನನ್ನ....

ಈ ದಿನ ಈ ಉತ್ಸವ ಖುಷಿಯ
ನದಿಯ ನೀರಿನಂತೆ ಪಾವನ
ಅಣ್ಣನ ತೇಜಸ್ಸು ಹಣೆಗೆ
ಸೋದರಿ ಹಚ್ಚುವಳು ತಿಲಕವನ್ನ
ನೋಡಿ ಈ ಮಳೆಯ ಸೊಗಸನ್ನ
ಅಣ್ಣ ನನ್ನ....

ಕಟ್ಟಿ ಈ ರೇಶಮಿ ದಾರವನ್ನ
ಇಟ್ಟಿದ್ದೇನೆ ನಿನ್ನಿಂದ ಭರವಸೆಯನ್ನ
ನಾಜೂಕು ಇದು ಉಸಿರಿನಂತೆ
ಆದರೆ ಜೀವನ ಪರ್ಯಂತ
ಮುರಿಯಲಾಗದು ಇದನ್ನ
ಅರಿತ್ತಿದ್ದಾರೆ ಜಗವೆಲ್ಲ ಇದನ್ನ
ಅಣ್ಣ ನನ್ನ....

ಬಹುಶಃ ಅಂತಹ
ವರ್ಷ ಋತು ಸಹ ಬರಬಹುದು
ಮೊದಲಂತಹ ವರ್ಣಮಯ ಇರಲಾರದು
ಸೋದರಿ ಪರದೇಶದಲಿ ನೆಲೆಸಿರಬಹುದು
ಒಂದು ವೇಳೆ ಅವಳು ನಿನ್ನಲ್ಲಿಗೆ ಬರದಿದ್ದರೆ
ದೀಪಕ ಬೆಳಗಿಸು ನೆನಪಿನ
ಅಣ್ಣ ನನ್ನ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ :ಶರ್ನ್ಕರ್ ಜೈ ಕಿಶನ್
ಚಿತ್ರ : ಚೋಟಿ ಬಹನ್

भैया मेरे, राखी के बंधन को निभाना
भैया मेरे, छोटी बहन को ना भुलाना
देखो ये नाता निभाना
भैया मेरे राखी...

ये दिन ये त्यौहार खुशी का, पावन जैसे नीर नदी का
भाई के उजले माथे पे, बहन लगाए मंगल टीका
झूमे ये सावन सुहाना
भैया मेरे राखी के बंधन...

बाँध के हमने रेशम डोरी, तुमसे वो उम्मीद है जोड़ी
नाज़ुक है जो सांस के जैसे, पर जीवन भर जाए न तोड़ी
जाने ये सारा ज़माना
भैया मेरे राखी के बंधन...

शायद वो सावन भी आए, जो पहला सा रंग न लाए
बहन पराए देश बसी हो, अगर वो तुम तक पहुँच न पाए
याद का दीपक जलाना
भैया मेरे राखी के बंधन.
http://www.youtube.com/watch?v=ItCxB6tRXJM

Saturday, August 9, 2014

ಬಣ್ಣ ಬಣ್ಣದ ರಾಖಿ

ಬಣ್ಣ ಬಣ್ಣದ ರಾಖಿ
ತಂದಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ

ಬೆಳ್ಳಿ ಬಂಗಾರದ ಹಾರ
ಕೇಳುವುದಿಲ್ಲ ನಾನು
ನನ್ನಣ್ಣನ ಸ್ವಲ್ಪ ಪ್ರೀತಿ
ಕೇಳುವೆ ನಾನು
ಸ್ವಲ್ಪ ಪ್ರೀತಿ ಕೇಳುವೆ ನಾನು
ಈ ರಾಖಿಯಲಿ ಪ್ರೀತಿ ತುಂಬಿಸಿ
ತಂದಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ನೀಲ ಆಕಾಶದಿಂದ
ತಾರೆ ತರಬೇಕೆ
ಅಥವಾ ಚಂದ್ರನ ಕಿರಣದ
ಹಾರ ತರಬೇಕೆ
ಕಿರಣದ ಹಾರ ತರಬೇಕೆ
ಪ್ರೀತಿಯ ಪಡೆದು
ನಲಿ ನಲಿಯುತ್ತಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ಎಂದಾದರೂ ಅಣ್ಣ
ಈ ಸೋದರಿ ಇರಲಿಕ್ಕಿಲ್ಲ ಬಳಿ
ಎಲ್ಲೊ ಪರದೇಶದಲಿ
ಕುಳಿತಿರುವಳು ಬೇಸರದಲಿ
ಸೋದರಿ ಕುಳಿತಿರುವಳು ಬೇಸರದಲಿ
ಯಾರಿಗೊತ್ತು ಯಾವಾಗ
ಅಗಲುವರು ಈ ಸೋದರ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಅನ್ ಪಡ್

Lata:
Rang-Birangi Raakhi Leke Aai Bahena
O Raakhi Bandhavaa Le Mere Veer \-2

Chorus: Rang-Birangi Raakhi Leke Aai Bahena
O Raakhi Bandhava Le Mere Veer

Lata:
Main Na Chaandi, Na Sone Ke Haar Maangun
Chorus: Main Na Chaandi, Na Bhaiya Sone Ke Haar Maagun

Lata:
Apane Bhaiya Ka Thoda Sa Pyaar Maangn
Thoda Sa Pyaar Maangun
Is Raakhi Men Pyaar Chhupa Le Ke Aai Bahena

Chorus: O Raakhi Bandhava Le Mere Veer

Lata:
Neele Ambar Se Taare Utaar Laaun

Chorus: Neele Ambar Se Bhaiya Taare Utaar Laaun

Lata:
Yaa Main Chanda Ki Kiranon Ke Haar Laaun
Kiranon Ke Haar Laaun
Pyaar Ke Badale Ban Le Laharaai Bahena

Chorus: Raakhi Bandhavaale Mere Veer

Lata:kabhi Bhaiya Ye Bahana Na Paas Hogi

Chorus: Kabhi Bhaiya Ye Teri Bahena Na Paas Hogi

Lata:kahin Pardes Baithi Udaas Hogi, Bahena Udaas Hogi

Chorus: Milane Ki Aas Hogi

Lata:jaane Kab Bichhad Jaayen Bhaai-Bahena

Chorus: Raakhi Bandhavaale Mere Veer
http://www.youtube.com/watch?v=JMrx3RLxunY

Thursday, August 7, 2014

ಪತ್ರವಿಲ್ಲ

ಪತ್ರವಿಲ್ಲ
ಇಲ್ಲ ಯಾವುದೇ ಸಂದೇಶವೂ
ಯಾರಿಗೊತ್ತು ಅದ್ಯಾವುದು ದೇಶವೋ
ನೀನ್ಯಾಕೆ ಹೋದೆ ಅಲ್ಲಿಗೆ
ಈ ಹೃದಯಕ್ಕೆ ನೀಡಿ ನೋವು
ಯಾರಿಗೊತ್ತು ಅದ್ಯಾವುದು ದೇಶವೋ
ನೀನ್ಯಾಕೆ ಹೋದೆ ಅಲ್ಲಿಗೆ

ವೇದನೆಯಲಿ
ನಿಟ್ಟುಸಿರು ಬಿಟ್ಟಿರಬೇಕು ನೀನು
ಅದನ್ನು ಕೇಳಲಿಲ್ಲವೇನೋ ನಾನು
ತೆರಳುವಾಗ
ಅದೆಷ್ಟು ನನ್ನನ್ನು ಕರೆದಿಯೋ ನೀನು
ಎಲ್ಲ ಸಮಯ ಇದೇ ದುಃಖ
ಯಾಕೆ ನಾನಿರಲಿಲ್ಲ ನಿನ್ನ ಸಮ್ಮುಖ
ಹೋದೆ ನೀನೆಲ್ಲಿಗೆ

ಪ್ರತಿ ವಸ್ತುವಿನಲಿ
ಕಣ್ಣೀರಿನಿಂದ ನಿನ್ನ ಹೆಸರು ಬರೆದಿದೆ
ನಿನಗೆ ವಿದಾಯ ನೀಡಲಿಲ್ಲ
ಎಂಬ ವ್ಯಥೆ
ಈ ರಸ್ತೆ ಮನೆ ಈ ಗಲ್ಲಿಗಳಲಿ ತುಂಬಿದೆ
ಮನಸ್ಸಲ್ಲಿ ಉಳಿಯಿತು ಮಾತೆಲ್ಲ
ಬೇಗನೆ ಬಿಟ್ಟು ಕೈಗಳ
ಹೋದೆ ನೀನೆಲ್ಲಿಗೆ

ಈಗ ನೆನಪ ಮುಳ್ಳುಗಳು
ಈ ಹೃದಯಕ್ಕೆ ಚುಚ್ಚುತ್ತಿವೆ
ವೇದನೆ ನಿಲ್ಲುವುದಿಲ್ಲ
ಅಶ್ರು ನಿಲ್ಲುವುದಿಲ್ಲ
ನಿನ್ನನ್ನು ಹುಡುಕುತ್ತಿದೆ ಪ್ರೀತಿ ಇಲ್ಲಿ
ನಾನೇಗೆ ಒಪ್ಪಲ್ಲಿ
ಅದೆಲ್ಲಿಗೆ ಹೋದೆ ನೀನೆಂದು

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಜಗಜಿತ್ ಸಿಂಗ್ /ಲತಾ ಮಂಗೇಶ್ಕರ್
ಸಂಗೀತ :ಉತ್ತಮ್ ಸಿಂಗ್
ಚಿತ್ರ : ದುಶ್ಮನ್

chitti na koi sandhesh jane vo kon sa desh
jaha tum chale gaye
chitti na koi sandhesh jane vo kon sa desh
jaha tum chale gaye
chitti na koi sandhesh jane vo kon sa desh
jaha tum chale gaye, jaha tum chale gaye
is dil pe laga ke tesh jane vo kon sa desh
jaha tum chale gaye, jaha tum chale gaye

ab yado ke kante is dil me chubate hai
na dard thahrta hai na aanshu rukhte hai
tumhe dund raha hai pyar
hum kaise kare ikrar kaha tum chale gaye

ek aah bari hogi humne na suni hogi
jate jate tumne aawaj to di hogi
har vaqt yahi hai gham us vaqt kaha the hum
kaha tum chale gaye
chitti na koi sandhesh jane vo kon sa desh
jaha tum chale gaye, jaha tum chale gaye
is dil pe laga ke tesh jane vo kon sa desh
jaha tum chale gaye
http://www.youtube.com/watch?v=GNRZ87FBT1g
http://www.youtube.com/watch?v=m41jtoWIl7A

Wednesday, August 6, 2014

ನನ್ನ ತೇವಗೊಂಡ

ನನ್ನ ತೇವಗೊಂಡ
ಕಣ್ರೆಪ್ಪೆಯಲಿ ಉಳಿಯಿತು
ನನ್ನ ಕನಸೆಲ್ಲ ಚೂರುಪಾರಾಗಿ ಹೀಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ನಿನ್ನ ಪರಿಚಯವಿಲ್ಲದೆ
ನಿನ್ನ ಗುರುತಿಲ್ಲದೆ
ನಿನ್ನನ್ನು ನಾನು ಹೃದಯದಲ್ಲಿಟ್ಟೆ
ಆದರೆ ನನ್ನ ಪ್ರೀತಿಯ ಬದಲು
ನೀನು ನನಗೆ ಈ ದಿನ ತೋರಿಸಿದೆ
ವಿರಹದ ದಿನ ನಾನು ಕಳೆದಂತೆ ವ್ಯಥೆಯಲಿ
ದುಃಖ ವೇದನೆಯಲಿ ಹೇಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ಬೆಂಕಿಯಿಂದ ನಂಟು
ನಾರಿ ಜೊತೆ ಸಂಬಂಧ
ಯಾಕೆ ಮನಸ್ಸಿಗೆ ತಿಳಿಯಲಾಗಲಿಲ್ಲ
ನನಗೇನಾಗಿತ್ತು
ಒಂದು ನಿಷ್ಠೆ ಇಲ್ಲದವಳ ಜೊತೆ
ನನಗ್ಯಾಕೆ ಪ್ರೀತಿ ಉಕ್ಕಿ ಬಂತು
ನಿನ್ನ ನಿಷ್ಠೆ ದ್ರೋಹಕ್ಕೆ ಜಗವೆಲ್ಲ ನಗುವರು
ಹೋದಾಗ ನೀನ್ಯಾವುದೇ ಗಲ್ಲಿ ಹಾದಿಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ :ಆರ್ . ಡಿ. ಬರ್ಮನ್
ಚಿತ್ರ : ಅನಾಮಿಕ

 Meri bheegi bheegi si palkon pe reh gaye
 Jaise mere sapne bikhar ke
 Jale man tera bhi kisike milanko
 Anamika tu bhi tarse

 Tujhe bin jaane bin pehchane
 Maine hrudayse lagaya
 Par mere pyar ke badle mein toone
 Mujhko yeh din dikhlaya
 Jaise birha ki rut maine kaati tadapke
 Aahen bhar bharke
 Jale man tera bhi...

 Aag se naata naari se rishta
 Kaahe man samajh na paaya
 Mujhe kya hua tha ek bewafaa pe
 Hai mujhe kyon pyaar aaya
 Teri bewafaai pe hanse jag saara
 Gali gali guzre jidharse
 Jale man tera bhi...
http://www.youtube.com/watch?v=K0THyu8oNlw

Tuesday, August 5, 2014

ಲೋಕೆಟ್ ಚೈನ್

ಲೋಕೆಟ್ ಚೈನ್
------------------

ಕಣ್ಣು ತುಂಬಿ ಬಂತು ಪುನಃ ಅಲ್ಲಿಗೆ ಬಂದು, ಸ್ಮೃತಿಯಲ್ಲಿ ಬಾಲ್ಯದ ಕೆಲವು ಘಟನೆಗಳು ಚಲಚಿತ್ರದ ಹಾಗೆ   ಓಡಲಾರಂಭಿಸಿತು.

ಮೂರು ಮಹಡಿಯ ನಮ್ಮ ಆ ಬಿಲ್ಡಿಂಗ್ ಈಗ ಒಂದು ವಿಶಾಲ ಮಾಲಿನ ರೂಪದಲ್ಲಿ ನನ್ನ ಕಣ್ಣ ಮುಂದೆ ಇತ್ತು. ಯಾಕೋ ಹೃದಯ ವೇದನೆಯಿಂದ ಅಳಲಾರಂಭಿಸಿತು, ಎಷ್ಟೋ ಸುಂದರ ನೆನಪುಗಳು ಸುಟ್ಟು ಹೋದಂತೆ ಬಾಸವಾಯಿತು, ಆದರೆ ನೆನಪುಗಳು ಅಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುವುದಿಲ್ಲ.

ಅಲ್ಲಿ ಈಗ ರಹಿಮ್ ಚಾಚನ ಜೀನಸ ಅಂಗಡಿ ಇರಲಿಲ್ಲ, ಬ್ರೆಡ್ ಬಿಸ್ಕೆಟ್ ಮಾರುತ್ತಿದ್ದ  ಶರ್ಮ ಅಂಕಲ್ ಅವರ ಅಂಗಡಿಯೂ ಇರಲಿಲ್ಲ, ಕಾಯಿ ಪಲ್ಯ, ತರಕಾರಿ ಮಾರುವ ಕುಶಾಬಾಯಿ ಸಹ ಇರಲಿಲ್ಲ.

ಕಣ್ಣಿಂದ ಕಣ್ಣೀರ ಧಾರೆ ಹರಿಯಿತು, ರಹಿಮ್ ಚಾಚನ ನೆನಪಾಗಿ ನನಗೆ ನೆನಪಾಯಿತು ಸಂತೆಯಿಂದ 
ಖರೀದಿಸಿದ ಆ ಲೋಕೆಟ್ ಚೈನ್, ಆಗ ಮಕ್ಕಳಲ್ಲಿ ಕುತ್ತಿಗೆಗೆ ದೊಡ್ಡ ದೊಡ್ಡ ಚೈನ್ ಧರಿಸುವ ಫ್ಯಾಷನ್ ಇತ್ತು, ನನಗೂ ಅಂತಹದೊಂದು ಚೈನ್ ಧರಿಸ ಬೇಕೆಂದು ಆಸೆಯಾಗಿತ್ತು, ಹೇಗೋ ಅಮ್ಮನಿಂದ ಹಣ ಪಡೆದು ಸಂತೆಯಿಂದ ಒಂದು ಲೋಕೆಟ್ ಚೈನ್ ಖರೀದಿ ಮಾಡಿ ತಂದೆ, ಲೋಕೆಟ್ ಮೇಲೆ ಒಂದು ಮಸೀದಿಯ ಚಿತ್ರವಿತ್ತು,  ಆ ಸಮಯ ನನಗೆ ದೇವಾಲಯ, ಮಸಿದಿ, ಚರ್ಚ್ ಇದರ ವ್ಯತ್ಯಾಸ ತಿಳಿದಿರಲಿಲ್ಲ, ನಮ್ಮ ಚಾಲ್ ಟೈಪ್ ಬಿಲ್ಡಿಂಗ'ಲ್ಲಿ ಎಲ್ಲ ಧರ್ಮದವರು ಇರುತ್ತಿದ್ದರು, ಆ ಸಮಯ ನನಗೆ ಅವರು ಇವರು ಹಿಂದೂ, ಇವರು ಮುಸ್ಲಿಂ, ಇವರು ಸಿಖ್ ಎಂಬ ಪಾಠ ಯಾರು ಕಲಿಸಿರಲಿಲ್ಲ, ಮನೆಯವರು ಆಗಲಿ, ನೆರೆಯವರು ಆಗಲಿ, ಯಾವಾಗಲೂ ಅವರಿಗೆ ಈ ಭೇದ ನಮಗೆ ತಿಳಿಸುವ ಸಂದರ್ಭವೇ ಬರಲಿಲ್ಲ, ಬಾಲ್ಯದಿಂದ ಅಲ್ಲೇ ಇದ್ದ ಕಾರಣ ನೆರೆಹೊರೆಯವರು ಎಲ್ಲ ನಮ್ಮವರೇ ಎಂಬ ಭಾವನೆ ಮನಸ್ಸಲ್ಲಿ ಗಟ್ಟಿಯಾಗಿತ್ತು. ಧರ್ಮ ಜಾತಿ ಇದರ ವ್ಯತ್ಯಾಸ ನನಗೆ ಹಾಗು ನನ್ನ ಪ್ರಾಯದ ಮಕ್ಕಳಿಗೆ ತಿಳಿದಿರಲಿಲ್ಲ, ಎಲ್ಲರೂ ಒಟ್ಟಿಗೆ ಸಂತೋಷದಿಂದ ಇರುತ್ತಿದ್ದರು.

ತುಂಬಾ ಖುಷಿಯಿಂದ ಆ ಲೋಕೆಟ್ ಚೈನ್ ಧರಿಸಿ ನಾನು ಮನೆಯಲ್ಲಿ ತೋರಿಸಿದೆ, ಮನೆಯಲ್ಲಿ ಅಮ್ಮ "ಉಂದು ವೋಲ್ತು ಈ ಬ್ಯಾರ್ಲೆನ ಲೋಕೆಟ್ ಕಂತಿನಿ, ಲಾಯಕ್ ಉಂಡು "(ಇದು ಎಲ್ಲಿಂದ ನೀನು ಮುಸ್ಲಿಮರ ಲೋಕೆಟ್ ತಂದೆ, ಚೆನ್ನಾಗಿದೆ) ಎಂದು ನಕ್ಕಿದರು.

ನಾನು ಅದನ್ನು ಧರಿಸಿ ಶರ್ಮ ಅಂಕಲ್ ಅವರ ಅಂಗಡಿಗೆ ಬಂದೆ " ಶರ್ಮ ಅಂಕಲ್  "ದೇಖೋ ಮೇರ ಚೈನ್" (ಶರ್ಮ ಅಂಕಲ್ "ನೋಡು ನನ್ನ ಚೈನ್").

ಶರ್ಮ ಅಂಕಲ್ " ಅರೆ , ಕಿದರ್ ಸೆ ಲಾಯ ಯೇ, ಯೇ ಮುಸ್ಲಿಂ ಲೋಗೋ ಕ ಹಯ್"(ಎಲ್ಲಿಂದ ತಂದೆ ಇದನ್ನು, ಇದು ಮುಸ್ಲಿಮರ).

ನಾನು "ಮತ್ಲಬ್"(ಇದರ ಅರ್ಥ).

ಶರ್ಮ ಅಂಕಲ್ "ಕುಚ್ ನಹಿನ್ ಅಚ್ಚಾ ಹಯ್" (ಏನಿಲ್ಲ, ಚೆನ್ನಾಗಿದೆ) ಎಂದು ಹೇಳಿ ಸುಮ್ಮನಾದರು.

ನಾನು ಸಂತೋಷ ಪಟ್ಟೆ.

ನಾನು ರಹಿಮ್ ಚಾಚನ ಅಂಗಡಿಗೆ ಬಂದು ಅವರಿಗೆ ನನ್ನ ಹೊಸ ಚೈನ್ ತೋರಿಸಿದೆ. 

ರಹಿಮ್ ಚಾಚ " ಬೇಟಾ ಕಾಹ ಸೆ ಲಾಯ ಯೇ" (ಮಗ, ಎಲ್ಲಿಂದ ತಂದೆ ಇದನ್ನು).

"ವೋ ಮಾರ್ಕೆಟ್ ಸೆ, ಅಚ್ಚಾ ಹಾಯ್ ನಾ" (ಆ ಮಾರ್ಕೆಟಿಂದ, ಒಳ್ಳೆಯದಿದೆ ಅಲ್ಲ).

ರಹಿಮ್ ಚಾಚ ನನ್ನನ್ನು ನೋಡಿ " ಅಚ್ಚಾ ತೋ ಹಾಯ್ ಬೇಟಾ, ಇಸ್ಮೆ ಖುದಾ ಕಿ ರೆಹಮತ್ ಹಯ್, ಪರ್ ಬೇಟಾ, ಯೇ ಹುಮಾರೆ ಮಜ್ಹಬ್ ಕ ಹಯ್" (ಚೆನ್ನಾಗಿದೆ, ಇದರಲ್ಲಿ ದೇವರ ಆಶೀರ್ವಾದ ಇದೆ, ಆದರೆ ಮಗ ಇದು ನಮ್ಮ ಧರ್ಮದವರ".

ನಾನು " ಇಸ್ಕ ಕ್ಯಾ ಮತ್ಲಬ್ ಚಾಚ" (ಇದರ ಏನು ಅರ್ಥ ಚಾಚ).

ಚಾಚ ನನ್ನನ್ನು ನೋಡಿ "ಕುಚ್ ನಹಿ ಬೇಟಾ , ಬಹುತ್ ಅಚ್ಚಾ ಹಯ್"( ಏನಿಲ್ಲ ಬೇಟಾ, ತುಂಬಾ ಚೆನ್ನಾಗಿದೆ) ಎಂದು ಹೇಳಿ ನನ್ನನ್ನು ಮುದ್ದಿಸಿದರು.

ಆ ಸಮಯ ನನಗೆ ಅಮ್ಮ ಆಗಲಿ , ಶರ್ಮಅಂಕಲ್ ಆಗಲಿ, ರಹಿಮ್ ಚಾಚ ಆಗಲಿ ಯಾರೂ ನನಗೆ ಹಿಂದೂ ಮುಸ್ಲಿಂ ಎಂಬ ಭೇದ ತಿಳಿಸಲು ಪ್ರಯತ್ನಿಸಲಿಲ್ಲ. ಇಂದು ಇದನ್ನು ಯೋಚಿಸುವಾಗ ನನಗೆ ಧರ್ಮ ಜಾತಿಯ ಭೇದ ತಿಳಿಸದೆ ಅವರು ನನ್ನ ಮೇಲೆ ಎಷ್ಟೊಂದು ದೊಡ್ಡ ಉಪಾಕಾರ ಮಾಡಿದ್ದರು, ಆವಾಗ ಅವರು ಈ ಜಾತಿ ಧರ್ಮದ ವ್ಯತ್ಯಾಸದ ವಿಷ ಬೀಜ ನನ್ನಲ್ಲಿ ಬಿತ್ತುತ್ತಿದ್ದರೆ  ಇಂದು ನಾನು ನಾನಾಗಿ ಉಳಿಯುತ್ತಿರಲಿಲ್ಲ, ಬಹುಶ ಒಂದು ಬೇರೇನೆ ಮನುಷ್ಯನಾಗಿ ಬೆಳೆಯುತ್ತಿದ್ದೆ, ಕೇವಲ ನನ್ನದೇ ಧರ್ಮ ಉಪಸಕನಾಗಿ ಉಳಿಯುತ್ತಿದ್ದೆ, ಆದರೆ ಅವರ ಬಹು ದೊಡ್ಡ ಉಪಕಾರ ನನ್ನ ಮೇಲೆ, ಇಂದು ನನಗೆ ಎಲ್ಲ ಧರ್ಮದ ಬಗ್ಗೆ ಗೌರವ, ಮರ್ಯಾದೆ ಇದೆ, ಇದು ಅವರು ನನಗೆ ನೀಡಿದ ಅತಿ ಬಹುಮೂಲ್ಯ ಸಂಪತ್ತು.

by ಹರೀಶ್ ಶೆಟ್ಟಿ, ಶಿರ್ವ 

Monday, August 4, 2014

ಮಿತಿ ಮೀರಿ ಹೋಯಿತು

ಮಿತಿ ಮೀರಿ ಹೋಯಿತು
ಕಾಯುವಿಕೆಯ
ಯಾವುದೇ ಸುದ್ದಿ ಬರಲಿಲ್ಲ ನನ್ನವಳ
ಇದು ನನಗೆ ಖಂಡಿತ ತಿಳಿದಿದೆ
ನಿಷ್ಠೆ ದ್ರೋಹಿ ಅವಳಲ್ಲ
ಮತ್ತೆ ಕಾರಣ ಏನು
ಕಾಯುವಿಕೆಯ

ಅವಳಲ್ಲಿರುವ ಮಾತು
ಅದು ಇಲ್ಲಿ ಇಲ್ಲ ಯಾರಲ್ಲೂ
ಅವಳು ನನ್ನವಳು ಕೇವಲ ನನ್ನವಳು
ಇದೇ ಸುದ್ದಿ ಎಲ್ಲ ಗಲ್ಲಿ ಗಲ್ಲಿಯಲ್ಲೂ
ಜೊತೆ ಇರುವಳವಳು ನನ್ನ ದುಃಖದಲಿ
ನನ್ನೆಲ್ಲ ಸುಖದಲಿ
ಅವಳಿಲ್ಲದಿದ್ದರೆ ಜೀವನದಲಿ
ಬೇರೇನೂ ಇಲ್ಲ ನನ್ನ ಜೀವನದಲಿ

ನಂದದಿರಲಿ ಈ ದೀಪ ನಂಬಿಕೆಯ

ಮಿತಿ ಮೀರಿ ಹೋಯಿತು ಕಾಯುವಿಕೆಯ

ಮೂಲ : ಅಂಜಾನ್ /ಪ್ರಕಾಶ್ ಮೆಹರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಶರಾಬಿ

Intaha ho gai, intazaar ki
Aai na kuchh khabar, mere yaar ki
Ye hamen hai yaqeen, bevafa vo nahin
Phir vajah kya hui, intazaar ki, intaha ho...

Baat jo hai us men, baat vo
Yahaan kahin nahin kisi men
Vo hai meri, bas hai meri
Shor hai yahi gali gali men
Saath saath vo hai mere gham
Men mere dil ki har khushi men
Zindagi men vo nahin to kuchh
Nahin hai meri zindagi men
Bujh na jaaye ye shama, aitabaar ki
Intaha ho...

Saturday, August 2, 2014

ಅದೇಕೆ ಜನರು ಪ್ರೀತಿ ಮಾಡುತ್ತಿರುತ್ತಾರೆ

ಈ ಜಗದಲಿ ಈ ಪ್ರೀತಿಯಲಿ
ಎಷ್ಟೋ ಹೃದಯ ಮುರಿಯಿತು
ಎಷ್ಟೋ ಮನೆ ಹಾಳಾಯಿತು

ಅದೇಕೆ ಜನರು ಪ್ರೀತಿ ಮಾಡುತ್ತಿರುತ್ತಾರೆ
ಹೃದಯದ ಬದಲು ನೋವನ್ನು ವರಿಸುತ್ತಾರೆ
ಅದೇಕೆ ಜನರು...

ಏಕಾಂತ ಸಿಗುತ್ತದೆ
ಸಭೆ ಸಮಾರಂಭ ಸಿಗುವುದಿಲ್ಲ
ಪ್ರೀತಿಯ ಹಾದಿಯಲಿ
ಎಂದೂ ಗಮ್ಯ ಸಿಗುವುದಿಲ್ಲ
ಹೃದಯ ಮುರಿಯುತ್ತದೆ
ಸೋಲಾಗುತ್ತದೆ
ಒಲವಲಿ ಜನರ ಇದೇ ಗತಿಯಾಗುತ್ತದೆ
ಯಾರಿಗೇನು ತಿಳಿದಿದೆ
ಈ ಪತಂಗಗಳು
ಯಾಕೆ ಹಂಬಲಿಸುತ್ತವೆ
ಯಾಕೆ ಸುಟ್ಟು ಹೋಗುತ್ತವೆ
ವೇದನೆಯಿಂದ ಬಳಲುತಾ
ಅಸಹಜ ಜೀವಿ ಬದುಕುತ್ತಿರುತ್ತವೆ  
ಅದೇಕೆ ಜನರು...

ವರ್ಷ ಋತುವಿನಲ್ಲಿ ಕಂಗಳಿಂದ
ಕಣ್ಣೀರು ಸುರಿಸುತ್ತದೆ ಅದೆಷ್ಟೋ
ವಿಯೋಗದಲಿ ಹೃದಯಕ್ಕೆ
ನೆನಪಾದಾಗ ಯಾರದ್ದೋ
ಈ ಜೀವನ ಹೀಗೆಯೇ
ಹಾಳಾಗುತ್ತದೆ
ಪ್ರತಿ ಕ್ಷಣ ತುಟಿಯಲಿ
ಯಾವುದೇ ಬೇಡಿಕೆ ಇರುತ್ತದೆ
ಮದ್ದಿನ ಪ್ರಭಾವ ಆಗುವುದಿಲ್ಲ
ಪ್ರಾರ್ಥನೆಯಿಂದಲೂ ಲಾಭ ಆಗುವುದಿಲ್ಲ
ಆದರೂ ಈ ವಿಷವನ್ನು ಎಲ್ಲರೂ
ಯಾಕೆ ಕುಡಿಯುತ್ತಿರುತ್ತಾರೆ
ಅದೇಕೆ ಜನರು...

ಪ್ರೀತಿಯಿಂದ ಎಲ್ಲ ಕಷ್ಟ
ಸಂಬಂಧಿತವಾಗಿರುತ್ತದೆ
ಹಗಲು ರಾತ್ರಿ ಪ್ರೀತಿಯಲಿ
ಅದೆಷ್ಟೋ ಪ್ರಧರ್ಶನೆಯಾಗುತ್ತದೆ
ರಾತ್ರಿಯಿಂದಲೂ ದೊಡ್ಡ
ಈ ಪ್ರೀತಿಯ ಕಥೆಗಳು
ಪ್ರೇಮಿಗಳು ಹೇಳುತ್ತಿರುತ್ತಾರೆ
ತನ್ನ ಪ್ರೀತಿ ದ್ರೋಹದ ಕಥೆಗಳು
ನಿಷ್ಕರುಣಿ
ನಿಷ್ಠೆವಿಲ್ಲದ
ಆ ನಿರ್ದಯಿಯ ತನ್ನ ಒಲವಿನ
ಹೆಸರು ಕರೆದು ಕರೆದು ಕೂಗಾಡುತ್ತಿರುತ್ತಾರೆ
ಅದೇಕೆ ಜನರು...

ಮೂಲ: ಹರೀಶ್ ಶೆಟ್ಟಿ, ಶಿರ್ವ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಮೆಹಬೂಬ್ ಕಿ ಮೆಹಂದಿ

Hmmm...
Is zamaane mein is mohabbat ne
Kitne dil tode kitne ghar phoonke

Jaane kyon log mohabbat kiya karte hain - 2
Dil ke badle dard-e-dil liya karte hain
Jaane kyon log mohabbat kiya karte hain
Hmmm...

Tanhaai milati hai, mehfil nahin milati
Raahen mohabbat mein kabhi manzil nahin milati
Dil tut jata hai, nakaam hota hai
Ulfat mein logon ka yahi anjaam hota hai
Koi kya jaane, kyon yeh paravaane,
Kyon machalate hain, gham mein jalate hain
Aahen bhar bhar ke divaane jiya karte hain - 2
Jaane kyon log mohabbat kiya karte hain

Savan mein aankhon ko, kitna rulaati hai
Furaqat mein jab dil ko kisi ki yaad aati hai
Yeh zindagi yoon hi barbad hoti hai
Har waqt honthon pe koi fariyaad hoti hai
Na davaaon ka naam chalta hai
Na duaaon se kaam chalta hai
Zehar yeh phir bhi sabhi kyon piya karaten hain - 2
Jaane kyon log mohabbat kiya karte hain

Mahaboob se har gham manasoob hota hai
Din raat ulfat mein tamaashaa khoob hota hai
Raaton se bhi lambe yeh pyaar ke kisse
Aashiq sunaate hain jafaa-e-yaar ke qisse
Bemuravvat hai, bewafa hai woh,
Us sitamagar ka apne dilbar ka,
Naam le le ke duhaai diya karte hain - 2
Jaane kyon log mohabbat kiya karte hain

ಸಿದ್ಧಿದಾತ್ರಿ