Thursday, August 29, 2013

ಪ್ರೀತಿ-ಅಗಲಿಕೆ

ಗೆಳತಿ 
ನೀನು ನನ್ನನ್ನು 
ಇಷ್ಟ ಪಡುವುದಿಲ್ಲವೆಂದು 
ಗೊತ್ತಿದ್ದರೂ 
ಅದೇಕೆ 
ನಾನು ಪ್ರತಿದಿನ 
ನಿನ್ನ 
ದರ್ಶನಕ್ಕಾಗಿ 
ಹಂಬಲಿಸುತ್ತಿರುವೆ ?
by ಹರೀಶ್ ಶೆಟಿ,ಶಿರ್ವ

***********
ಗೆಳತಿ 
ದುಃಖಿಸಬೇಡ 
ಇಷ್ಟು ವರುಷದ 
ನಂತರ
ನನ್ನನ್ನು ಕಂಡು 
ಶರೀರ ಕೃಶವಾಗಿದೆ ಅಷ್ಟೇ 
ಆದರೆ ನಿನ್ನ ವಿನಃ 
ಜೀವಿಸುವೆ ಎಂದು 
ನಿನಗೆ ಕೊಟ್ಟ ಮಾತನ್ನು ಉಳಿಸಿದೆ ಅಲ್ಲವೇ
by ಹರೀಶ್ ಶೆಟ್ಟಿ, ಶಿರ್ವ
************
ಗೆಳತಿ 
ಕಲ್ಲಲ್ಲ 
ಈ ಹೃದಯ 
ಇದಕ್ಕೂ 
ನೋವಾಗುತ್ತದೆ ಕೆಲವೊಮ್ಮೆ 
ಈ ಬರಡು ಕಣ್ಣಲ್ಲಿ ಸಹ
ಕಣ್ಣೀರು 
ತುಂಬಿ ಬರುತ್ತದೆ ಕೆಲವೊಮ್ಮೆ 
by ಹರೀಶ್ ಶೆಟ್ಟಿ, ಶಿರ್ವ

ಕೆಲವು ಚುಟುಕುಗಳು

ವಾದ ವಿವಾದ 
__________
ಯಾರೋ ಆ ಮರಕ್ಕೆ 
ಕಲ್ಲು ಎಸೆದರು 
ಮರದಲ್ಲಿ ಕುಳಿತ 
ಅನೇಕ ಪಕ್ಷಿಗಳು
ಒಮ್ಮೆಲೇ 
ಕರ್ಕಶವಾಗಿ ಕೂಗಲಾರಂಭಿಸಿದವು.
by ಹರೀಶ್ ಶೆಟ್ಟಿ,ಶಿರ್ವ
*********

ಮನೆಯಲ್ಲಿ ಪತ್ನಿಗೆ 
ಹೊಡೆದು ಹೊರಟವ 
ಆ ಮಂಚದಲಿ 
ನಾರಿ ಶಕ್ತಿಯ 
ಕುರಿತು 
ಭಾಷಣ ಕೊಡುತ್ತಿದ್ದ. 
by ಹರೀಶ್ ಶೆಟ್ಟಿ,ಶಿರ್ವ
**********

ಕೃಷ್ಣ 
ನಿನ್ನ ಕೊಳಲು 
ನೀಡುವ
ನಾದದಲಿ
ಒಂದೇ ನಾದ 
ಉತ್ಕೃಷ್ಟ 
"ರಾಧೆ" ಎನ್ನುವ ನಾದ 
by ಹರೀಶ್ ಶೆಟ್ಟಿ,ಶಿರ್ವ

**********

ಮಾನವ ಸ್ವಭಾವ 
___________
ಎಷ್ಟು
ವಿಚಿತ್ರ ಅಲ್ಲವೆ 
ಮಾನವ ಸ್ವಭಾವ 
ನನ್ನ ಅರ್ಧ ಲೋಟೆ ತುಂಬಿದೆ 
ನಿನ್ನ ಅರ್ಧ ಲೋಟೆ ಖಾಲಿ 
by ಹರೀಶ್ ಶೆಟ್ಟಿ ,ಶಿರ್ವ

**********


Wednesday, August 28, 2013

ತುಂಬಾ ತಡವಾಯಿತು ನಂದಲಾಲ

!!ತುಂಬಾ ತಡವಾಯಿತು ನಂದಲಾಲ
ನಿನ್ನನ್ನು ಕಾಯುತ್ತಿದ್ದರೆ ಗೋಪಿಯರು
ಗ್ವಾಲರು ಬಾಲಕರು ಪ್ರತಿಯೊಬ್ಬರಿಂದ ಕೇಳುವರು
ಎಲ್ಲಿದ್ದಾನೆ ನಮ್ಮ ಮುರಳಿ ಮನೋಹರ !!

!!ಯಾರೂ ಹೋಗುವುದಿಲ್ಲ
ಗೋಕುಲದ ಗಲ್ಲಿಯಲಿ
ನಿನ್ನ ವಿನಾಃ ಹೂವನ್ನು ಹೆಕ್ಕಲು
ಹಂಬಲಿಸುತ್ತಿದ್ದಾರೆ ಯಮುನೆ ತಟದಲಿ
ನಿನ್ನ ಮುರಳಿ ವಾದನ ಕೇಳಲು
ಈಗಂತೂ ಮುಖ ತೋರಿಸು ತುಂಟನೇ
ಯಾಕೆ ನಿರ್ಮಿಸುವೆ ಗೊಂದಲ!!
ತುಂಬಾ ತಡವಾಯಿತು ನಂದಲಾಲ....

!!ಸಂಕಟದಲ್ಲಿದೆ ಆ ಧರತಿ
ನೀನು ಜನಿಸಿದ ಭೂಮಿಯಲಿ
ಪೂರ್ಣಗೊಳಿಸು ಇಂದು ಆ ವಚನ
ನೀ ಕೊಟ್ಟಿದ್ದು ಗೀತೆಯಲಿ
ನಿನ್ನ ವಿನಾಃ ಯಾರಿಲ್ಲ ಮೋಹನ
ಈ ಭಾರತದ ರಕ್ಷಕ !!
ತುಂಬಾ ತಡವಾಯಿತು ನಂದಲಾಲ....

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಖಾನ್ ದಾನ್

बड़ी देर भई नंदलाला
तेरी रह तके बृजबाला
ग्वाल-बाल इक-इक से पूछे
कहाँ है मुरली वाला रे
बड़ी देर भई नंदलाला

कोई ना जाए कुञ्ज गलिन में, तुझ बिन कलियाँ चुनने को
तरस रहे हैं जमुना के तट, धुन मुरली की सुनने को
अब तो दरस दिखा दे नटखट, क्यों दुविधा मे डाला रे
बड़ी देर भई नंदलाला...

संकट में है आज वो धरती, जिस पर तूने जनम लिया
पूरा कर दे आज वचन वो, जो गीता में जो तूने दिया
तुम बिन कोई नहीं है मोहन, भारत का रखवाला रे
बड़ी देर भई नंदलाला...
www.youtube.com/watch?v=cLwLvOb6OMU

Tuesday, August 27, 2013

ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ

ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ
ಬಾರಿಸುತ್ತಿದ್ದಾನೆ ಗಿರಿಧರ ಮೋಹನ ಮುರಳಿ
ನರ್ತಿಸುತ್ತಿದ್ದಾಳೆ...

ಕಾಲಲ್ಲಿ ಗೆಜ್ಜೆಯ ಕಟ್ಟಿ
ಸೆರಗಲ್ಲಿ ಮುಖ ಅಡಗಿಸಿ
ಹಚ್ಚಿ ಕಾಡಿಗೆ ಕಣ್ಣಲಿ... ಹೊ
ನರ್ತಿಸುತ್ತಿದ್ದಾಳೆ...

ನಯನ ಮನೋಹರ ನಲಿಯುತ್ತಿದೆ
ನಕ್ಷತ್ರದಂತೆ ಹೊಳಪು ಬೀರುತ್ತಿದೆ
ಚಂಚಲ ಮೋಹಕ ಮತ್ಸ್ಯಕನ್ಯೆ ಕೋಮಲಿ .. ಹೊ
ನರ್ತಿಸುತ್ತಿದ್ದಾಳೆ...

ಮೃದಂಗದ ವಾದನ ತಿರಿಕಿಟ್ ಧುಂ ತಿರಿಕಿಟ್ ಧುಂ ತಾ ತಾ
ನೃತ್ಯ ಚುಂ ಚುಂ ತಾತೈ ತಾತೈ ತಾ ತಾ
ಚುಂ ಚುಂ ಚನನನ ಚನನನ
ಕ್ರಾಂಧ ಕ್ರಾಂಧ ಕ್ರಾಂಧ ಧ ಧ ಧ
ನರ್ತಿಸುತ್ತಿದ್ದಾಳೆ...

ರಾಧಿಕೆ ಮಧುಬನದಲಿ
ನಿ ಸ ರೆ ಸ, ಗ ರೆ ಮ ಗ , ಪ ಮ ಧ ಪ, ನಿ ದ ಸ ನಿ
ರೆ ಸ ರೆ ಸ ನಿ ಧ ಪ ಮ ಪ ಧ ನಿ ಸ ರೆ ಸ ನಿ ಧ  ಪ ಮ
ಗ ಮ ಧ ಪ ಗ ಮ ರೆ ಸ

ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ
ಸ ಸ, ಸ ನಿ ಧ ಪ ಮ ಪ ಧ ಪ ಗ ಮ ರೆ ಸ ನಿ ರೆ ಸ
ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ
ನರ್ತಿಸುತ್ತಿದ್ದಾಳೆ...

ಓದೇ ನಾದಿರ್ ದಿರ್ಧ ನಿತಾ ಧಾರೆ  ಧಿಂ ಧಿಂ ತನನನ
ನಾದಿರ್ ದಿರ್ಧ ನಿತಾ ಧಾರೆ  ಧಿಂ ಧಿಂ ತನನನ
ನಾ ದಿರ್ ಧಿರ್ ದಿ ರ್ಧ ನಿ ತಾ ಧಾ ರೆ  ಧಿಂ ಧಿಂ ತ ನ ನ ನ
ನಾ ದಿರ್ ಧಿರ್ ಧಾನಿ ತಾ ಧಾ ರೆ
ಓ ದೇ ತಾನ ಧಿರ್  ಧಿರ್  ತಾನ , ಧಿರ್  ಧಿರ್  ಧಿರ್  ಧಿರ್ ಧುಂ  ಧಿರ್  ಧಿರ್  ಧಿರ್
ಧಾ ತಿರಿಕಟ್ ತಕ್ ಧುಂ ತಿರಿಕಟ್ ತಕ್
ತಿರಿಕಟ್ ತಿರಿಕಟ್ ತಾ ತಾ ಧಾ ನಿ
ನಾ ಧಿರ್ ಧಿರ್  ಧಣಿ ತಾ ಧಾ ರೆ

ಮೂಲ : ಶಕೀಲ್ ಬದಯೂನ್ವಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಮೊಹಮ್ಮದ್ ರಫಿ
ಸಂಗೀತ : ನೌಶಾದ್ ಅಲಿ
ಚಿತ್ರ : ಕೊಹಿನೂರ್
मधुबन में राधिका नाचे रे
गिरधर की मुरलिया बाजे रे
मधुबन में राधिका...

पग में घुँघर बाँध के
घुँघटा मुख पर डाल के
नैनन में कजरा लगा के रे
मधुबन में राधिका...

डोलत छम-छम कामिनी
चमकत जैसे दामिनी
चंचल प्यारी छब लागे रे
मधुबन में राधिका...

म्रिदंग बाजे तिरकिट धूम तिरकिट धूम ता ता
नाचत छूम छूम ताथई ताथई ता ता
छूम छूम छा ना ना ना, छूम छूम छा ना ना ना
क्रांध क्रांध क्रांध धा, धा धा धा
मधुबन में राधिका नाचे रे

मधुबन में राधिका
नी सा रे सा, गा रे मा गा, पा मा धा पा, नी धा सां नी
रें सां रे सा नी धा पा मा पा धा नी सां रें सां नी धा पा मा
गा मा धा पा गा मा रे सा

मधुबन में राधिका नाचे रे
सां सां, सां नी धा पा मा पा धा पा गा मा रे सा ऩी रे सा
सा सा गा मा धा धा नी धा सां
मधुबन में राधिका नाचे रे
मधुबन में राधिका

ओदे नादिर दिरधा नीता धारे दीम दीम तानाना
नादिर दिरधा नता धारे दीमदीम तानाना
ना दिर दिर धा नी ता धा रे दीम दीम ता ना ना
ना दिर दिर धा नी ता धा रे
ओ दे ताना दिर दिर ताना, दिर दिर दिर दिर दूम दिर दिर दिर
धा तिरकिट तक दूम तिरकिट तक
तिरकिट तिरकिट ता धा नी
ना दिर दिर धा नी ता धा रे

Monday, August 26, 2013

ಯಾವುದೇ ಉತ್ಸಾಹ ಇಲ್ಲದಾಗಿದೆ

!!ಯಾವುದೇ ಉತ್ಸಾಹ ಇಲ್ಲದಾಗಿದೆ
ಯಾವುದೇ ಉಲ್ಲಾಸ ಇಲ್ಲದಾಗಿದೆ
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ!!

!!ಆಕಾಶದಿಂದ ಬಿದ್ದೆ ನಾನು
ಒಂದು ಸಲ ಹೀಗೆ ಕಡಿದು
ಜಗ ಮತ್ತೆ ಕೇಳಬೇಡಿ
ಕೊಂಡೋದರು ಎಲ್ಲವೂ ನನ್ನ ಕಸಿದು
ಯಾರದ್ದು ಜೊತೆ ಇಲ್ಲದಾಗಿದೆ
ಯಾರದ್ದು ಜತೆ ಇಲ್ಲದಾಗಿದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

!!ಅಪ್ಪಿಕೊಂಡು ನನ್ನ ತಾಯಂದಿರನ್ನು
ಅಳಲಾಗಲಿಲ್ಲ ನನಗೆ -೨
ಪಾಲಕಿ ಸಾಗಿತು ಹೀಗೆ
ಯಾರದ್ದೋ ಶವ ಸಾಗಿದ ಹಾಗೆ
ಇದೇ ದುಃಖ ಈಗಲೂ
ನನ್ನ ದೇಹದ ಜತೆ ಇದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

!!ಕನಸಿನ ದೇವತೆ
ಏನನ್ನು ನಾನು ನಿನಗೆ ಮಾಡಲಿ ಅರ್ಪಣೆ
ಶರತ್ಕಾಲದ ನಾನು ಛಾಯೆ
ಕಣ್ಣೀರ ನಾನು ದರ್ಪಣೆ
ಇದೇ ನನ್ನ ರೂಪವಾಗಿದೆ
ಇದೆ ನನ್ನ ವರ್ಣವಾಗಿದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್
ಚಿತ್ರ : ಕಟಿ ಪತಂಗ್
Naa Koee Umang Hai, Naa Koee Tarang Hai
meree Jindagee Hain Kyaa, Yek Katee Patang Hai

aakaash Se Giree Main Yek Baar Kat Ke Ayese
duniyaa Ne Fir Naa Poochho, Lootaa Hain Muz Ko Kaise
naa Kisee Kaa Saath Hai, Naa Kisee Kaa Sang Hai

lag Ke Gale Se Apane, Baabool Ke Main Naa Royee
dolee Uthhee Yoo Jaise, Atrhee Uthhee Ho Koee
yahee Dukh To Aaj Bhee Mere Ang Sang Hai

sapanon Ke Dewataa Kyaa, Tuz Ko Karu Main Arpan
patazad Kee Main Hoo Chhaayaa, Main Aasooon Kaa Darpan
yahee Meraa Rup Hai, Yahee Meraa Rang Hai                                                                       

Sunday, August 25, 2013

ಹೌದು ನಾನು ಹೆಣ್ಣು

ನನ್ನ ಬಲಾತ್ಕಾರ ಆಯಿತೆಂದು
ಜೀವನ ನಿಲ್ಲುವುದಿಲ್ಲ ಗೆಳೆಯ
ಇನ್ನೆಷ್ಟೋ ಪರೀಕ್ಷೆ ಇದೆ ಬಾಕಿ !

ಹೆತ್ತವರ ಸ್ವಪ್ನಗಳ
ಅರಿವಿದೆ ನನಗೆ ಗೆಳೆಯ
ಅವರ ಕನಸು ನನಸಾಗುವುದು ಇದೆ ಬಾಕಿ !

ಹೌದು, ನಡೆದ ದಾರಿಯಲ್ಲಿ
ಈಗ ಕರಿ ಕತ್ತಲೆಯೆಂದು ಗೊತ್ತು ಗೆಳೆಯ  
ಆದರೆ ಹೊಸ ದಾರಿ ಹುಡುಕುವುದು ಇದೆ ಬಾಕಿ!

ಶರೀರ ಗಾಯಗೊಂಡಿದೆ ಆದರೆ
ನನ್ನ ಧೈರ್ಯ ಈಗಲೂ ಪ್ರಭಲವಾಗಿದೆ ಗೆಳೆಯ
ಬಿಡುವೆ ಹಳೆ ನೆನಪುಗಳನ್ನು ಬಿಸಾಕಿ !

ನೋಡು ನೋಡು ಅಲ್ಲಿ ದಾರಿ ಕಾಣುತ್ತಿದೆ
ಹೊಸ ದಾರಿಯಲಿ ದೀಪ ಬೆಳಗುವುದು ಗೆಳೆಯ
ನನ್ನ ಒಂದು ಹೆಜ್ಜೆ ಇಡುವುದೇ ಇದೆ ಬಾಕಿ !

ಹೌದು ನಾನು ಹೆಣ್ಣು
ಆದರೆ ಶಕ್ತಿ ಕುಸಿಯಲಿಲ್ಲ ಗೆಳೆಯ
ಈಗಲೂ ನನ್ನಲ್ಲಿ ಬದುಕನ್ನು ಎದುರಿಸುವ ಬಲ ಇದೆ ಬಾಕಿ !

by ಹರೀಶ್ ಶೆಟ್ಟಿ,ಶಿರ್ವ

ನಾನು ಕವಿಯೇನಲ್ಲ

!!ನಾನು ಕವಿಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಕವಿತೆ ಮೂಡಿತು!!
ನಾನು ಕವಿಯೇನಲ್ಲ ….

!!ನಾನು ಪ್ರೇಮಿಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಪ್ರೀತಿ ಆಯಿತು !!
ನಾನು ಕವಿಯೇನಲ್ಲ ….

!!ಪ್ರೀತಿಯ ಹೆಸರು
ನಾನು ಕೇಳಿದೆ ಆದರೆ
ಪ್ರೀತಿ ಏನೆಂದು
ನನಗೆ ತಿಳಿದಿರಲಿಲ್ಲ
ನಾನು ಸಿಕ್ಕಿಕೊಂಡೆ
ಈ ಗೊಂದಲದಲ್ಲಿಯೇ
ವೈರಿಯಂತೆ ಇರುತ್ತಿದ್ದೆ
ಗೆಳೆಯರಲ್ಲಿಯೇ
ನಾನು ವೈರಿಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಗೆಳೆತನ ಆಯಿತು!!
ನಾನು ಕವಿಯೇನಲ್ಲ ….

!!ಯೋಚಿಸುತ್ತೇನೆ ಒಂದು ವೇಳೆ
ಪ್ರಾರ್ಥಿಸುತ್ತಿದ್ದರೆ ನಾನು
ಕೈಯ ಮುಗಿದು
ಅದೇನನ್ನು ಬೇಡುತ್ತಿದ್ದೆ ನಾನು
ಅದೆಂದಿನಿಂದ ನಾನು
ನಿನ್ನನ್ನು ಪ್ರೀತಿಸಲಾರಂಭಿಸಿದೆ
ಅಂದಿನಿಂದ ನಾನೀಗೆ ಪ್ರಾರ್ಥಿಸಲಾರಂಭಿಸಿದೆ
ನಾನು ನಾಸ್ತಿಕಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಭಕ್ತಿ ಭಾವ ಮೂಡಿದೆ!!
ನಾನು ಕವಿಯೇನಲ್ಲ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಶೈಲೇಂದ್ರ ಸಿಂಗ್
ಸಂಗೀತ : ಲಕ್ಷ್ಮಿ ಕಾಂತ್  ಪ್ಯಾರೆ ಲಾಲ್
ಚಿತ್ರ : ಬೋಬೀ

Main Shaayar To Nahin
(Main Shaayar To Nahin, Magar Ae Haseen
Jab Se Dekha Maine Tujhko
Mujhko Shaayari Aa Gayi) - 2
Main Aashiq To Nahin, Magar Ae Haseen
Jab Se Dekha Maine Tujhko
Mujhko Aashiqui Aa Gayi
Main Shaayar To Nahin
(Pyaar Ka Naam Maine Suna Tha Magar
Pyaar Kya Hai, Yeh Mujhko Nahin Thi Khabar) - 2
Main To Uljha Raha Uljhanon Ki Tarha
Doston Mein Raha Dushmanon Ki Tarha
Main Dushman To Nahin
Main Dushman To Nahin, Magar Ae Haseen
Jab Se Dekha Maine Tujhko
Mujhko Dosti Aa Gayi
Main Shaayar To Nahin
(Sochta Hoon Agar Main Dua Maangta
Haath Apne Uthaakar Main Kya Maangta) - 2
Jab Se Tujhse Mohabbat Main Karne Laga
Tab Se Jaise Ibaadat Main Karne Laga
Main Kaafir To Nahin
Main Kaafir To Nahin, Magar Ae Haseen
Jab Se Dekha Maine Tujhko
Mujhko Bandagi Aa Gayi
Main Shaayar To Nahin, Magar Ae Haseen
Jab Se Dekha Maine Tujhko
Mujhko Shaayari Aa Gayi
Main Shaayar To Nahin
www.youtube.com/watch?v=jmeMg-gm1Us

ಸಿದ್ಧಿದಾತ್ರಿ