Thursday, August 29, 2013

ಪ್ರೀತಿ-ಅಗಲಿಕೆ

ಗೆಳತಿ 
ನೀನು ನನ್ನನ್ನು 
ಇಷ್ಟ ಪಡುವುದಿಲ್ಲವೆಂದು 
ಗೊತ್ತಿದ್ದರೂ 
ಅದೇಕೆ 
ನಾನು ಪ್ರತಿದಿನ 
ನಿನ್ನ 
ದರ್ಶನಕ್ಕಾಗಿ 
ಹಂಬಲಿಸುತ್ತಿರುವೆ ?
by ಹರೀಶ್ ಶೆಟಿ,ಶಿರ್ವ

***********
ಗೆಳತಿ 
ದುಃಖಿಸಬೇಡ 
ಇಷ್ಟು ವರುಷದ 
ನಂತರ
ನನ್ನನ್ನು ಕಂಡು 
ಶರೀರ ಕೃಶವಾಗಿದೆ ಅಷ್ಟೇ 
ಆದರೆ ನಿನ್ನ ವಿನಃ 
ಜೀವಿಸುವೆ ಎಂದು 
ನಿನಗೆ ಕೊಟ್ಟ ಮಾತನ್ನು ಉಳಿಸಿದೆ ಅಲ್ಲವೇ
by ಹರೀಶ್ ಶೆಟ್ಟಿ, ಶಿರ್ವ
************
ಗೆಳತಿ 
ಕಲ್ಲಲ್ಲ 
ಈ ಹೃದಯ 
ಇದಕ್ಕೂ 
ನೋವಾಗುತ್ತದೆ ಕೆಲವೊಮ್ಮೆ 
ಈ ಬರಡು ಕಣ್ಣಲ್ಲಿ ಸಹ
ಕಣ್ಣೀರು 
ತುಂಬಿ ಬರುತ್ತದೆ ಕೆಲವೊಮ್ಮೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...