ನನ್ನ ಬಲಾತ್ಕಾರ ಆಯಿತೆಂದು
ಜೀವನ ನಿಲ್ಲುವುದಿಲ್ಲ ಗೆಳೆಯ
ಇನ್ನೆಷ್ಟೋ ಪರೀಕ್ಷೆ ಇದೆ ಬಾಕಿ !
ಹೆತ್ತವರ ಸ್ವಪ್ನಗಳ
ಅರಿವಿದೆ ನನಗೆ ಗೆಳೆಯ
ಅವರ ಕನಸು ನನಸಾಗುವುದು ಇದೆ ಬಾಕಿ !
ಹೌದು, ನಡೆದ ದಾರಿಯಲ್ಲಿ
ಈಗ ಕರಿ ಕತ್ತಲೆಯೆಂದು ಗೊತ್ತು ಗೆಳೆಯ
ಆದರೆ ಹೊಸ ದಾರಿ ಹುಡುಕುವುದು ಇದೆ ಬಾಕಿ!
ಶರೀರ ಗಾಯಗೊಂಡಿದೆ ಆದರೆ
ನನ್ನ ಧೈರ್ಯ ಈಗಲೂ ಪ್ರಭಲವಾಗಿದೆ ಗೆಳೆಯ
ಬಿಡುವೆ ಹಳೆ ನೆನಪುಗಳನ್ನು ಬಿಸಾಕಿ !
ನೋಡು ನೋಡು ಅಲ್ಲಿ ದಾರಿ ಕಾಣುತ್ತಿದೆ
ಹೊಸ ದಾರಿಯಲಿ ದೀಪ ಬೆಳಗುವುದು ಗೆಳೆಯ
ನನ್ನ ಒಂದು ಹೆಜ್ಜೆ ಇಡುವುದೇ ಇದೆ ಬಾಕಿ !
ಹೌದು ನಾನು ಹೆಣ್ಣು
ಆದರೆ ಶಕ್ತಿ ಕುಸಿಯಲಿಲ್ಲ ಗೆಳೆಯ
ಈಗಲೂ ನನ್ನಲ್ಲಿ ಬದುಕನ್ನು ಎದುರಿಸುವ ಬಲ ಇದೆ ಬಾಕಿ !
by ಹರೀಶ್ ಶೆಟ್ಟಿ,ಶಿರ್ವ
ಜೀವನ ನಿಲ್ಲುವುದಿಲ್ಲ ಗೆಳೆಯ
ಇನ್ನೆಷ್ಟೋ ಪರೀಕ್ಷೆ ಇದೆ ಬಾಕಿ !
ಹೆತ್ತವರ ಸ್ವಪ್ನಗಳ
ಅರಿವಿದೆ ನನಗೆ ಗೆಳೆಯ
ಅವರ ಕನಸು ನನಸಾಗುವುದು ಇದೆ ಬಾಕಿ !
ಹೌದು, ನಡೆದ ದಾರಿಯಲ್ಲಿ
ಈಗ ಕರಿ ಕತ್ತಲೆಯೆಂದು ಗೊತ್ತು ಗೆಳೆಯ
ಆದರೆ ಹೊಸ ದಾರಿ ಹುಡುಕುವುದು ಇದೆ ಬಾಕಿ!
ಶರೀರ ಗಾಯಗೊಂಡಿದೆ ಆದರೆ
ನನ್ನ ಧೈರ್ಯ ಈಗಲೂ ಪ್ರಭಲವಾಗಿದೆ ಗೆಳೆಯ
ಬಿಡುವೆ ಹಳೆ ನೆನಪುಗಳನ್ನು ಬಿಸಾಕಿ !
ನೋಡು ನೋಡು ಅಲ್ಲಿ ದಾರಿ ಕಾಣುತ್ತಿದೆ
ಹೊಸ ದಾರಿಯಲಿ ದೀಪ ಬೆಳಗುವುದು ಗೆಳೆಯ
ನನ್ನ ಒಂದು ಹೆಜ್ಜೆ ಇಡುವುದೇ ಇದೆ ಬಾಕಿ !
ಹೌದು ನಾನು ಹೆಣ್ಣು
ಆದರೆ ಶಕ್ತಿ ಕುಸಿಯಲಿಲ್ಲ ಗೆಳೆಯ
ಈಗಲೂ ನನ್ನಲ್ಲಿ ಬದುಕನ್ನು ಎದುರಿಸುವ ಬಲ ಇದೆ ಬಾಕಿ !
by ಹರೀಶ್ ಶೆಟ್ಟಿ,ಶಿರ್ವ
ಆಕೆಯ ಮನೋಬಲ ಎಲ್ಲರಿಗೂ ಬರಲಿ ಮತ್ತು ಇಂತಹ ಯುಕ್ತ ಕಾವ್ಯವೂ ನಿಮ್ಮಿಂದ ಹೊರ ಹೊಮ್ಮುತಿರಲಿ.
ReplyDelete