Wednesday, August 28, 2013

ತುಂಬಾ ತಡವಾಯಿತು ನಂದಲಾಲ

!!ತುಂಬಾ ತಡವಾಯಿತು ನಂದಲಾಲ
ನಿನ್ನನ್ನು ಕಾಯುತ್ತಿದ್ದರೆ ಗೋಪಿಯರು
ಗ್ವಾಲರು ಬಾಲಕರು ಪ್ರತಿಯೊಬ್ಬರಿಂದ ಕೇಳುವರು
ಎಲ್ಲಿದ್ದಾನೆ ನಮ್ಮ ಮುರಳಿ ಮನೋಹರ !!

!!ಯಾರೂ ಹೋಗುವುದಿಲ್ಲ
ಗೋಕುಲದ ಗಲ್ಲಿಯಲಿ
ನಿನ್ನ ವಿನಾಃ ಹೂವನ್ನು ಹೆಕ್ಕಲು
ಹಂಬಲಿಸುತ್ತಿದ್ದಾರೆ ಯಮುನೆ ತಟದಲಿ
ನಿನ್ನ ಮುರಳಿ ವಾದನ ಕೇಳಲು
ಈಗಂತೂ ಮುಖ ತೋರಿಸು ತುಂಟನೇ
ಯಾಕೆ ನಿರ್ಮಿಸುವೆ ಗೊಂದಲ!!
ತುಂಬಾ ತಡವಾಯಿತು ನಂದಲಾಲ....

!!ಸಂಕಟದಲ್ಲಿದೆ ಆ ಧರತಿ
ನೀನು ಜನಿಸಿದ ಭೂಮಿಯಲಿ
ಪೂರ್ಣಗೊಳಿಸು ಇಂದು ಆ ವಚನ
ನೀ ಕೊಟ್ಟಿದ್ದು ಗೀತೆಯಲಿ
ನಿನ್ನ ವಿನಾಃ ಯಾರಿಲ್ಲ ಮೋಹನ
ಈ ಭಾರತದ ರಕ್ಷಕ !!
ತುಂಬಾ ತಡವಾಯಿತು ನಂದಲಾಲ....

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಖಾನ್ ದಾನ್

बड़ी देर भई नंदलाला
तेरी रह तके बृजबाला
ग्वाल-बाल इक-इक से पूछे
कहाँ है मुरली वाला रे
बड़ी देर भई नंदलाला

कोई ना जाए कुञ्ज गलिन में, तुझ बिन कलियाँ चुनने को
तरस रहे हैं जमुना के तट, धुन मुरली की सुनने को
अब तो दरस दिखा दे नटखट, क्यों दुविधा मे डाला रे
बड़ी देर भई नंदलाला...

संकट में है आज वो धरती, जिस पर तूने जनम लिया
पूरा कर दे आज वचन वो, जो गीता में जो तूने दिया
तुम बिन कोई नहीं है मोहन, भारत का रखवाला रे
बड़ी देर भई नंदलाला...
www.youtube.com/watch?v=cLwLvOb6OMU

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...