Saturday, May 18, 2013

ನೆಮ್ಮದಿಯಿಂದ ನನಗೆಂದೂ


!!ನೆಮ್ಮದಿಯಿಂದ ನನಗೆಂದೂ
ನೀನು ಬದುಕಲು ಬಿಡಲಿಲ್ಲ
ವಿಷವೂ ಬಯಸಿದರೂ ಕುಡಿಯಲೆಂದು
ಕುಡಿಯಲು ಬಿಡಲಿಲ್ಲ!!

!!ಚಂದ್ರನ ರಥದಲಿ
ರಾತ್ರಿಯ ಮದುಮಗಳು
ಬರುವಳು ಯಾವಾಗ
ನೆನಪು ನನ್ನ
ನಿನ್ನ ಹೃದಯವನ್ನು
ಹಂಬಲಿಸಿ ಹೋಗುವುದು ಆವಾಗ
ನೀನು ನೀಡಿದನ್ನು
ಅದನ್ಯಾರು ನೀಡಲಿಲ್ಲ!!
ವಿಷವೂ ಬಯಸಿದರೂ ...

!!ನಿನ್ನ ದುಃಖ ಈ ಹೃದಯದಲಿ
ಒಂದು ವೇಳೆ ಇರುತ್ತಿದ್ದರೆ ರಾತ್ರಿ ದಿನ 
ಯೋಚಿಸಿ ಇದನ್ನು ಉಸಿರುಗಟ್ಟುತ್ತದೆ
ಮತ್ತೇಗೆ ಸಾಗುತ್ತಿತ್ತೋ ಈ ಜೀವನ
ಅಯ್ಯೋ ಈ ಅಗಲಿಕೆ
ನಮಗೆ ಬರಬಾರದಿತ್ತು
ಸಾವೇ ಬಂದಿದ್ದರೂ ನಡೆಯುತ್ತಿತ್ತು
ಯಾವುದೇ ವಿಧದಿಂದ ನಮ್ಮ ನೆಮ್ಮದಿ
ತನ್ನ ಆತ್ಮವನ್ನು ಪಡೆಯುತ್ತಿತ್ತು
ಒಂದು ಕ್ಷಣ ನಗುವುದಾದರೂ
ಈ ಹೃದಯದ ವೇದನೆಯೂ ಬಿಡಲಿಲ್ಲ!!
ವಿಷವೂ ಬಯಸಿದರೂ....

ಮೂಲ : ಎಸ್ .ಎಚ್ .ಬಿಹಾರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಸ್ಲೆ
ಸಂಗೀತ : ಓ .ಪಿ .ನಯ್ಯರ್
ಚಿತ್ರ : ಪ್ರಾಣ್ ಜಾಯೆ ಪರ್ ವಚನ್ ನ ಜಾಯೆ

चैन से हम को कभी, आप ने जीने ना दिया
जहर भी चाहा अगर, पीना तो पीने ना दिया

चाँद के रथ में, रात की दुल्हन  जब जब आयेगी
याद हमारी, आप के दिल को, तड़पा जायेगी
आप ने जो हैं दिया, वो तो किसी ने ना दिया

आप का गम जो, इस दिल में दिनरात अगर होगा
सोच के ये दम घुटता है, फिर कैसे गुजर होगा
काश न आती अपनी जुदाई, मौत ही आ जाती
कोइ बहाने चैन हमारी, रूह तो पा जाती
एक पल हसना कभी, दिल की लगी ने ना दिया
http://www.youtube.com/watch?v=Yc1MfFxpYEI

Thursday, May 16, 2013

Kabir Doha (ಕಬೀರ ದೋಹ )


ಕಬೀರ ದೋಹ
ಮಧುರ ನುಡಿ ಔಷದಿ ಸಮಾನ, ಕುಟಿಲ ನುಡಿ ಹರಿತವಾದ ಬಾಣ !
ಶ್ರವಣ ಮಾರ್ಗದಿಂದ ಒಳ ನುಗ್ಗುವುದು, ಯಾತನೆಯಿಂದ ಬಳಲುವುದು ಶರೀರದ ಕಣ ಕಣ !!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मधुर वचन है औषधि, कुटिल वचन है तीर |
श्रवन द्वार है संचरे, साले सकल सरीर ||

Wednesday, May 15, 2013

Kabir Doha (ಕಬೀರ ದೋಹ )


ಕಬೀರ ದೋಹ
ನಿಂದನೆ ಮಾಡುವವರು ಬಳಿಯಲ್ಲಿರಲಿ, ಲೋಪ ತಿಳಿದು ಸುಧಾರಿಸಬಹುದು!
ನೀರಿಲ್ಲದೆ ಸಾಬೂನು ಇಲ್ಲದೆ , ಸ್ವಭಾವ ನಿರ್ಮಲವಾಗುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
निंदक नियरे राखिये, आँगन कुटी छवाय |
बिन पानी बिन साबुन, निर्मल करे सुभाव ||

Monday, May 13, 2013

Kabir Doha (ಕಬೀರ ದೋಹ )


ಕಬೀರ ದೋಹ
ಓದಿದೆ ಕೇಳಿದೆ ಕಲಿತೆ ಎಲ್ಲಾ, ದೂರವಾಗಲಿಲ್ಲ ಸಂಶಯದ ಶೂಲ!
ಹೇಳುವನು ಕಬೀರ ಹೇಗೆ ಹೇಳಲಿ, ಇದೇ ಎಲ್ಲಾ ದುಃಖದ ಮೂಲ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
पढ़ा सुना सीखा सभी, मिटी ना संशय शूल |
कहे कबीर कैसो कहू, यह सब दुःख का मूल ||

Saturday, May 11, 2013

Kabir Doha (ಕಬೀರ ದೋಹ )


ಕಬೀರ ದೋಹ
ಇಂದು ಹೇಳುವೆ ನಾಳೆ ಹರಿ ನಾಮ ಭಜಿಸುವೆಯೆಂದು, ನಾಳೆ ಪುನಃ ನಾಳೆ ಹೇಳುವೆ !
ಇಂದು ನಾಳೆ ಹೇಳುತ್ತಲೇ, ಅವಕಾಶ ವ್ಯರ್ಥ ಗೊಳಿಸುವೆ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
आज कहे हरी कल भजुंगा, काल कहे फिर काल |
आज कालके करत ही, अवसर जासी चाल ||

Thursday, May 9, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾವಲಿಲ್ಲದೆ ಧಾನ್ಯಗಳು, ಹಕ್ಕಿಗಳ ಆಹಾರ ಆಗುವುದು ಹೊಲಗಳು !
ಈಗಲೂ ಸ್ವಲ್ಪ ಉಳಿದಿದೆ,   ಚೇತರಿಸಿಕೊಳ್ಳುವುದಾದರೆ ಚೇತರಿಸಿಕೊಳ್ಳು !!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीरा दोहा
बिन रखवारे बाहिरा, चिड़ियों खाया खेत |
अरधा परधा ऊबरे, चेति सके तो चेत ||


Wednesday, May 8, 2013

Kabir Doha (ಕಬೀರ ದೋಹ )


ಕಬೀರ ದೋಹ
ಕಬೀರ ಹೆಮ್ಮೆಯ ಪಡಬೇಡ, ಯಾರದ್ದು ಮಾಡದಿರು ಗೇಲಿ ಎಂದೂ!
ನಿನ್ನ ಬದುಕು ದೋಣಿ ಸಾಗರದಲ್ಲಿದ್ದ ಹಾಗೆ, ಯಾರಿಗೆ ಗೊತ್ತು ಯಾವಾಗ ಏನಾಗುವುದೆಂದು!!
ಅನುವಾದ : by ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा गर्व न कीजिये, कबहू न हँसिये कोय |
अजहू नाव समुंदर में, न जाने क्या होय ||

ಸಿದ್ಧಿದಾತ್ರಿ